ಮಡಿಕೇರಿ ಟು ಕೋಲಾರ ಡೆಂಟಲ್​ ಡಾಕ್ಟರ್​ ಲವ್​..! 2 ಹೆಣ ಹತ್ತಾರು ಪ್ರಶ್ನೆ..!

ಬೆಂಗಳೂರಿನಲ್ಲಿ ಡೆಂಟಿಸ್ಟ್​ ದುರಂತ ಮುಂದುವರಿದಿದೆ. ಕಳೆದ ವಾರ ಡೆಂಟಿಸ್ಟ್​ ತಾಯಿಯೊಬ್ಬಳು ತನ್ನ 6 ವರ್ಷದ ಮಗುವನ್ನು 4ನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಳು. ಆ ಬಳಿಕ ಇದೀಗ ಮತ್ತೋರ್ವ ಡೆಂಟಿಸ್ಟ್​ ಡಾಕ್ಟರ್​​ ತನ್ನ ಮಗಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆಕೆಯ ಕುಟುಂಬಸ್ಥರು ಮಾತ್ರ ಆತ್ಮಹತ್ಯೆಯಲ್ಲ, ಕೊಲೆ ಎಂದು ದೂರಿದ್ದಾರೆ. ಬನಶಂಕರಿ ಪೊಲೀಸರು ಡೆಂಟಿಸ್ಟ್​ ಆಗಿರುವ ಗಂಡ ನಾರಾಯಣಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೊಲೆಯೋ..? ಆತ್ಮಹತ್ಯೆಯೋ..? ಅನ್ನೋ ಬಗ್ಗೆ ಪೊಲೀಸ್ರು ತನಿಖೆ ಆರಂಭಿಸಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ಮೂಲದ ಡೆಂಟಿಸ್​ ಡಾ ಶೈಮಾ ಮುತ್ತಪ್ಪ ಹಾಗು ಡಾ ನಾರಾಯಣಮೂರ್ತಿ ಕಳೆದ 12 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು ಎನ್ನುವುದು ಗೊತ್ತಾಗಿದೆ.

ಶನಿವಾರ ಮಗಳಿಗೆ ರಜೆ, ಆತ್ಮಹತ್ಯೆಗೆ ನಿರ್ಧಾರ..!

ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅದರ ಬೆಳಗ್ಗೆ ಶನಿವಾರ ಕೂಡ ರಜೆ ಮುಂದುವರಿಸಲಾಗಿತ್ತು. ಎಂದಿನಂತೆ ಹನುಮಂತನಗರದ ಡೆಂಟಲ್​ ಕ್ಲೀನಿಕ್​ಗೆ ಹೋಗಿದ್ದ ನಾರಾಯಣಮೂರ್ತಿ ಮನೆಗೆ ವಾಪಸ್​ ಬಂದಾಗ ಮನೆ ಬಾಗಿಲು ಬಂದ್​ ಆಗಿತ್ತು. ಬೆಲ್​ ಮಾಡಿದಾಗ ಮನೆ ಬಾಗಿಲು ತೆಗಿಯದ ಕಾರಣಕ್ಕೆ ಅಪಾರ್ಟ್​ಮೆಂಟ್​ನ ಸೆಕ್ಯೂರಿಟಿ ಗಾರ್ಡ್​ ಕರೆದುಕೊಂಡು ಬಂದು ಬಾಗಿಲು ಮುರಿದು ನೋಡಲಾಯ್ತು. ಆ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ 39 ವರ್ಷದ ಡಾ ಶೈಮಾ ಮುತ್ತಪ್ಪ ಹಾಗು 10 ವರ್ಷದ ಮಗಳು ಆರಾಧನ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ಕೊಡಲಾಗಿದೆ. ಬನಶಂಕತಿ ಪೊಲೀಸರು ಶೈಮಾ ಮುತ್ತಪ್ಪ ತವರು ಮನೆಯವರ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಗುವನ್ನು ಕೊಂದು ನೇಣು ಹಾಕಿಕೊಂಡರಾ ಶೈಮಾ..?

ಡಾ ನಾರಾಯಣಮೂರ್ತಿ ನೀಡಿರುವ ಮಾಹಿತಿಯಂತೆ ನಾನು ಮನೆಗೆ ವಾಪಸ್​ ಆದಾಗ ಬಾಗಿಲು ಬಂದ್​ ಆಗಿತ್ತು ಎಂದಿದ್ದಾರೆ. ಆದರೆ ಗಂಡನ ಮೇಲೆ ಡಾ ಶೈಮಾ ಮುತ್ತಪ್ಪ ಅವರಿಗೆ ಏನಾದರೂ ಆಕ್ಷೇಪಗಳಿದ್ದರೆ ಡೆತ್​ನೋಟ್​ ಬರೆದು ಇಡಬೇಕಿತ್ತು. ಡೆತ್​ನೋಟ್​ ಬರೆದು ಇಡದೆ ಸಾವನ್ನಪ್ಪಿದ್ದು ಯಾಕೆ ಎನ್ನುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.. ಒಂದು ವೇಳೆ ಗಂಡನೇ ಆಕೆಗೆ ಕಿರುಕುಳ ನೀಡಿದ್ದರೂ, ಗಂಡನ ಬಗ್ಗೆ ಡೆತ್​ನೋಟ್​​ ಬರೆದು ಇಡಬೇಕಿತ್ತು. ಒಂದು ವೇಳೆ ಅನ್ಯ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದರೂ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟು, ಗಂಡನ ಬಗ್ಗೆ ಒಂದೆರಡು ಮಾತಾದರೂ ಬರೆಯುತ್ತಿದ್ದರು. ಆದರೆ ವಿದ್ಯಾವಂತ ಮಹಿಳೆ ಯಾವುದೇ ಡೆತ್​ನೋಟ್​ ಇಲ್ಲದೆ ಸಾವನ್ನಪ್ಪಿದ್ದು ಯಾಕೆ..? ಎನ್ನುವ ಪ್ರಶ್ನೆ ಎದುರಾಗಿದೆ.

ಕೊಲೆ ಎನ್ನುವುದಕ್ಕೆ ಕಾರಣವಾಗಿರುವ ಅನುಮಾನ ಏನು..?

ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಡಾ ಶೈಮಾ ಸಂಬಂಧಿಕರು.ಜಮಾಯಿಸಿ ಗಂಡನೇ ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಮಾಡಿದ್ದಾರೆ. ಆಸ್ಟ್ರೇಲಿಯಾದಿಂದ ಭಾರತಕ್ಕೆ ಆಗಮಿಸಿದ ಡಾ ಶೈಮಾ ಮುತ್ತಪ್ಪ ಸಹೋದರ ನೀಡಿದ ದೂರಿನ ಮೇಲೆ ನಾರಾಯಣಮೂರ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬನಶಂಖರಿಯ ಪ್ರಮುಖ್ ಟೆಂಪಲ್ ಅಪಾರ್ಟ್​ಮೆಂಟ್​ನ ಸಿಸಿಟವಿ ದೃಶ್ಯಾವಚಳಿಗಳನ್ನು ವಶಕ್ಕೆ ಪಡೆದಿರುವ ಬನಶಂಕರಿ ಪೊಲೀಸ್ರು, ಡಾ ನಾರಾಯಣಮೂರ್ತಿ ಮನೆಯಿಂದ ಹೊರಕ್ಕೆ ಹೋಗಿದ್ದು ಯಾವಾಗ..? ಮತ್ತೆ ಮನೆಗೆ ವಾಪಸ್​ ಆಗಿದ್ದು ಯಾವಾಗ..? ಈ ನಡುವೆ ಮನೆಗೆ ಯಾರಾದರೂ ಬಂದು ಹೋಗಿದ್ದಾರೆಯೇ..? ಎನ್ನುವ ಬಗ್ಗೆ ತಪಾಸಣೆ ನಡೆಸುತ್ತಿದ್ದಾರೆ. ಈ ನಡುವೆ ಡಾ. ಶೈಮಾ ಮುತ್ತಪ್ಪ ಹಾಗು ಡಾ ನಾರಾಯಣಮೂರ್ತಿ ಅವರಿಗೆ ಹೆಚ್ಚಾಗಿ ಯಾವ ನಂಬರ್​ನಿಂದ ಕರೆ ಬರುತ್ತಿತ್ತು. ಡಾ ಶೈಮಾ ಅವರಿಗೆ ಆ ರೀತಿ ಯಾರಾದರು ಆತ್ಮೀಯ ಸ್ನೇಹಿತರು ಇದ್ದರಾ..? ಎನ್ನುವ ಬಗ್ಗೆಯೂ ತನಿಖೆ ನಡೆಸ್ತಿದ್ದಾರೆ.

Related Posts

Don't Miss it !