ರೌಡಿಪೊಲೀಸ್‌.. ಕೊಲೆಯತ್ನ ಕೇಸ್‌ ಹಾಕದೆ ಸಪೋರ್ಟ್​

ಬೆಂಗಳೂರಿನಲ್ಲಿ ರೌಡಿಗಳ ಸಂಖ್ಯೆಗೇನು ಕಡಿಮೆ ಇಲ್ಲ. ಪ್ರತಿಯೊಂದು ಏರಿಯಾದಲ್ಲೂ ಮಚ್ಚು ಲಾಂಗ್‌ ಹಿಡಿದು ಹೊಡೆದಾಡುವ ಮತಿಹೀನ ಜನರು ಇದ್ದಾರೆ. ಆದರೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್‌ ಠಾಣೆ ASI ಶ್ರೀನಿವಾಸ್‌ ಕೂಡ ರೌಡಿಗಳ ರೀತಿಯಲ್ಲೇ ಮಚ್ಚು ಹಿಡಿದು ಗೂಂಡಾಗಿರಿ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಿಸಿಟಿವಿ ದೃಶ್ಯಗಳೂ ಇವೆ. ಹಲ್ಲೆಗೆ ಒಳಗಾಗಿರುವ ಜನರೂ ಕೂಡ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಪೊಲೀಸ್ರು ಮಾತ್ರ ಕೊಲೆ ಯತ್ನ ಕೇಸ್‌ ಹಾಕದೆ ಕೇಸ್‌ನಿಂದ ಬಚಾವ್‌ ಆಗುವಂತಹ ಕೇಸ್‌ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ASI ರೌಡಿಸಂ ಪ್ರಕರಣದ ಹಿನ್ನೆಲೆ ಏನು..?

ASI ಶ್ರೀನಿವಾಸ್ ಅಣ್ಣನ ಮಗ ಆಟೋ ಡ್ರೈವರ್‌ ಆನಂದ್, ವಿಜಯನಗರದ ತೇಜಸ್ವಿನಿ ಬಾರ್‌ನಲ್ಲಿ ಎಣ್ಣೆ ಕುಡಿಯಲು ಹೋಗಿದ್ದ. ಈ ವೇಳೆ ಅದೇ ಬಾರ್‌ನಲ್ಲಿ ಎಣ್ಣೆ ಕುಡಿಯಲು ಹೋಗಿದ್ದ ದಯಾನಂದ್ ಮತ್ತು ಶಶಿಧರ್ ಎಂಬುವರ ಜೊತೆಗೆ ಕಿರಿಕ್‌ ಮಾಡಿಕೊಂಡಿದ್ದ. ಈ ವೇಳೆ ನಿಮ್ಮದು ಯಾವ್‌ ಏರಿಯಾ ಎಂದಿದ್ದಕ್ಕೆ ನಾವು ಇಲ್ಲೆ ಕೆಲಸ ಮಾಡಿಕೊಂಡು ತುಂಬಾ ವರ್ಷದಿಂದ ಇದ್ದೇವೆ. ನಿಮ್ಮದು ಯಾವ್ ಏರಿಯಾ ಅಂದಿದ್ದಕ್ಕೆ, ಬಾ ನಮ್ಮ ಮನೆ ತೋರುಸ್ತೀನಿ ಅಂತಾ ಸೀದಾ ಆಟೋದಲ್ಲಿ ಚಿಕ್ಕಪ್ಪ ASI ಶ್ರೀನಿವಾಸ್‌ ಮನೆ ಬಳಿಗೆ ಕರೆತಂದು ಕಳ್ಳ ಕಳ್ಳ ಎಂದು ಕೂಗಿಕೊಂಡಿದ್ದಾನೆ. ಈ ವೇಳೆ ಮಚ್ಚು ಹಾಗು ಲಾಠಿ ಹಿಡಿದು ಹೊರಬಂದ ASI ಶ್ರೀನಿವಾಸ್‌ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಬಳಿಕ ಹೊಯ್ಸಳ ವಾಹನ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಸಾಮಾನ್ಯ ಜನರಿಗೆ ಯಾವ ಸೆಕ್ಷನ್‌ ಹಾಕ್ತಿದ್ರಿ..?

ಒಬ್ಬ ಸಾಮಾನ್ಯ ನಾಗರಿಕ ಮನೆ ಬಳಿ ಮಚ್ಚು ಹಿಡಿದು ಗೂಂಡಾಗಿರಿ ಮಾಡಿದ್ರೆ ಯಾವ ಕೇಸ್‌ ಹಾಕುತ್ತಿದ್ರು ಅನ್ನೋದನ್ನು ಪೊಲೀಸ್ರು ಸ್ಪಷ್ಟಪಡಿಸಬೇಕಿದೆ. ನೇರವಾಗಿ ಕೊಲೆಯತ್ನ ಕೇಸ್‌ ಹಾಕಿ ಅರೆಸ್ಟ್‌ ಮಾಡುತ್ತಿದ್ರು. ಆದರೆ ಇಲ್ಲಿ ಗೂಂಡಾಗಿರಿ ಮಾಡಿರೋದು ಓರ್ವ ಪೊಲೀಸ್‌ ಅಧಿಕಾರಿ ಅನ್ನೋ ಕಾರಣಕ್ಕೆ ಕೊಲೆಯತ್ನ ಕೇಸ್‌ ದಾಖಲು ಮಾಡಿಲ್ಲ. ಇನ್ನು ಹಲ್ಲೆಗೆ ಒಳಗಾದವರು ಕಳ್ಳರೇ ಆಗಿದ್ದರು ಓರ್ವ ಪೊಲೀಸ್ ಅಧಿಕಾರಿ ಮಾಡಬೇಕಾದ ಕರ್ತವ್ಯ ಏನು..? ಹಿಡಿದು ಕಾನೂನು ರೀತಿ ಶಿಕ್ಷೆ ಕೊಡಿಸುವುದೋ..? ಅಥವಾ ಮಚ್ಚು ಹಿಡಿದು ಹಲ್ಲೆ ಮಾಡುವುದೋ..? ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಕಾನೂನು ಹಳ್ಳ ಹಿಡಿದಿದ್ಯಾ..? ಅಥವಾ ಗೃಹ ಸಚಿವ ಡಾ ಜಿ.ಪರಮೇಶ್ವರ್‌‌ಗೆ ಇಲಾಖೆ ಮೇಲೆ ಹಿಡಿತ ಇಲ್ವಾ ಅನ್ನೋ ಪ್ರಶ್ನೆ ಜನರನ್ನು ಕಾಡುವಂತಾಗಿದೆ.

Related Posts

Don't Miss it !