ಅಚ್ಚರಿಯಾದರೂ ಸತ್ಯ ಆಂಟಿ ಮೇಲೆ ಬಲತ್ಕಾರ ಯತ್ನ..! ಪ್ರೇಮಿಗಳು ಆತ್ಮಹತ್ಯೆ..! ಆಂಟಿ ಕೊಂದ ಪ್ರೇಮಿ..

ಬೀದರ್​ನಲ್ಲಿ ಪೋಷಕರ ಪ್ರೀತಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೀದರ್ ನಗರದ ಲಾಡಗೇರಿ ಬಡಾವಣೆಯ 28 ವರ್ಷದ ಶರತ್ ಹಾಗು 26 ವರ್ಷದ ಸಂಗೀತಾ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಇತ್ತೀಚೆಗೆ ಪ್ರಿಯತಮೆ ಸಂಗೀತಾಗೆ ಬೇರೊಂದು ಹುಡುಗನ ಜೊತೆ ನಿಶ್ಚಿತಾರ್ಥವಾಗಿತ್ತು. ವಿಷಯ ತಿಳಿದ ಪ್ರಿಯಕರ ಶರತ್‌, ಮೊದಲು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಿಯಕರ ಶರತ್‌ ಸಾವಿನ ಸುದ್ದಿ ಕೇಳಿದ ಸಂಗೀತಾ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೀದರ್​ನ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ನವ ವಿವಾಹಿತೆಯ ಕತ್ತು ಕೊಯ್ದ ಹಳೇ ಲವ್ವರ್​..!

ಕೋಲಾರದಲ್ಲಿ ಸ್ನೇಹಿತನೇ ವಿವಾಹಿತ ಮಹಿಳೆ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ನಡೆದಿದೆ. ಕೋಲಾರ ನಗರದ ಮಹಾಲಕ್ಷ್ಮಿ ಲೇಔಟ್​ನಲ್ಲಿ 28 ವರ್ಷದ ಅಸ್ಮೀಯ ಭಾನು ಎಂಬಾಕೆಯನ್ನು ಕೊಲೆ ಮಾಡಲಾಗಿದೆ. ವಿಸ್ಟ್ರಾನ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮೃತ ಅಸ್ಮೀಯ ಭಾನುವನ್ನು ಮಜ್ಜು ಪ್ರೀತಿಸುತ್ತಿದ್ದ. ಆದರೂ ಆಕೆ ಈತನನ್ನು ಬಿಟ್ಟು ಬೇರೊಬ್ಬನ ಜೊತೆಗೆ ವಿವಾಹ ಆಗಿದ್ದಳು. ಇಂದು ಮಾತನಾಡುವ ನೆಪದಲ್ಲಿ ಆಕೆಯನ್ನು ಅಂತರಗಂಗೆ ಬೆಟ್ಟಕ್ಕೆ ಬೈಕ್​ನಲ್ಲಿ ಕರೆದುಕೊಂಡು ಹೋಗಿದ್ದ ಆರೋಪಿ ಮುಜ್ಜು, ಮಾತಿಗೆ ಮಾತು ಬೆಳೆದು ಕೊಲೆ ಯತ್ನ ಮಾಡಿದ್ದನು. ಆ ಬಳಿಕ ತಾನೇ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಆಸ್ಪತ್ರೆಗೂ ದಾಖಲಿಸಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸ್ಮೀಯ ಭಾನು ಸಾವನ್ನಪ್ಪಿದ್ದಾಳೆ. ಆರೋಪಿ ಮುಜ್ಜುವನ್ನು ಕೋಲಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ವಂತ ಚಿಕ್ಕಮ್ಮಳನ್ನೇ ಹಾಸಿಗೆಗೆ ಕರೆದ ಕಿರಾತಕ..!

ಸ್ವಂತ ಚಿಕ್ಕಮ್ಮಳನ್ನೇ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗಿಣಿಕಲ್ ತೋಟದ ಬೈಲ್ ಗ್ರಾಮದಲ್ಲಿ ನಡೆದಿದೆ. ತನ್ನ ಸ್ವಂತ ಚಿಕ್ಕಮ್ಮ ಎನ್ನುವುದನ್ನೂ ಕಾಣದೆ ಲೈಂಗಿಕ ಕ್ರಿಯೆಗೆ ಆಹ್ವಾನ ಕೊಟ್ಟ ಅರುಣ್​ ಎಂಬಾತ ಚಿಕ್ಕಮ್ಮನಿಂದಲೇ ಬೇಲಿಗೂಟದಲ್ಲಿ ಒದೆ ತಿಂದು ಪೊಲೀಸರ ಅತಿಥಿಯಾಗಿದ್ದಾನೆ. ಲೈಂಗಿಕ ಕ್ರಿಯೆ ನಿರಾಕರಿಸಿದ್ದಕ್ಕೆ ಚಿಕ್ಕಮ್ಮನ ಮೇಲೆ ಬಲತ್ಕಾರಕ್ಕೆ ಮುಂದಾಗಿದ್ದನು ಎನ್ನಲಾಗಿದೆ. ಭಲತ್ಕಾರ ಯತ್ನ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 6 ತಿಂಗಳಿನಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡದೇ ಸುಮ್ಮನಿದ್ದ ಸಂತ್ರಸ್ಥೆ, ಪದೇ ಪದೇ ಕಿರುಕುಳ ನೀಡಿದ್ದರಿಂದ ಮನನೊಂದು ಪೊಲೀಸರಿಗೆ ದೂರು ಸಲ್ಲಿದ್ದಾರೆ ಎನ್ನಲಾಗಿದೆ.

ನಿಮ್ಮದೇ ಸುದ್ದಿ: ಇದು ನಿಮ್ಮದೇ ವೇದಿಕೆ.. ಒಳ್ಳೇದು ಕೆಟ್ಟದ್ದಕ್ಕೆ ನೀವೆ ಸಾಕ್ಷಿ ಅಷ್ಟೆ..

ಹುಟ್ಟು ಹಬ್ಬದ ದಿನವೇ ಉಪನ್ಯಾಸಕಿ ಆತ್ಮಹತ್ಯೆ..!

ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಹಾಸ್ಟೆಲ್‌ನಲ್ಲಿ ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ದಿನವೇ 26 ವರ್ಷದ ಉಪನ್ಯಾಸಕಿ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪನ್ಯಾಸಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ಡೆತ್​ನೋಟ್​ ಬರೆದಿಟ್ಟಿದ್ದು, ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್‌ನೋಟ್ ಬರೆದಿದ್ದಾರೆ. ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ, ಜೆಎಸ್‌ಎಸ್‌ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಪ್ರೇಮ ವೈಫಲ್ಯದಿಂದ ಹುಟ್ಟುಹಬ್ಬದ ದಿನ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗ್ತಿದೆ.

Related Posts

Don't Miss it !