ಗಿಳಿ ಹುಡುಕಿ ಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ..! ಯಾರಿಗಿದೆ ಅದೃಷ್ಟ..?

ತುಮಕೂರಿನಲ್ಲಿ ಗಿಳಿ ಕಳೆದುಹೋಗಿದ್ದು, ಗಿಳಿ ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ತುಮಕೂರಿನ ಜಯನಗರ ನಿವಾಸಿ ಆಗಿರುವ ಅರ್ಜುನ್​ ಹಾಗು ರಂಜನಾ ದಂಪತಿ ಕಳೆದ 2 ವರ್ಷಗಳಿಂದ ಪ್ರೀತಿಯಿಂದ ಸಾಕಿಕೊಂಡಿದ್ದ ಜೋಡಿ ಗಿಳಿಯಲ್ಲಿ ಗಂಡು ಗಿಳಿಯೊಂದು ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದೆ. ಇದೀಗ ಆಟೋದಲ್ಲಿ ಗಿಳಿ ಕಳೆದು ಹೋಗಿರುವ ಬಗ್ಗೆ ಬೀದಿ ಬೀದಿಗಳಲ್ಲೂ ಪ್ರಚಾರ ಮಾಡಲಾಗ್ತಿದೆ. 10 ಸಾವಿರಕ್ಕೂ ಅಧಿಕ ಭಿತ್ತಿಪತ್ರಗಳನ್ನು ಮಾಡಿ ಜನರ ಮನೆ ಮನೆಗೂ ಹೋಗಿ ಹಂಚಲಾಗ್ತಿದೆ. ಗಿಳಿಯನ್ನು ಹುಡುಕಿಕೊಟ್ಟರೆ, 50 ಸಾವಿರ ರೂಪಾಯಿ ಹಣವನ್ನು ಕೊಡುವುದಾಗಿ ಬಹಿರಂಗ ಘೋಷಣೆಯನ್ನೂ ಮಾಡಿದ್ದಾರೆ.

ಭದ್ರಾವತಿಯಲ್ಲಿ ಸಾಕಿದ್ದ ಗಿಳಿ, ಹಾರಿ ಹೋಗಿದ್ಯಾಕೆ..?

ಶಿವಮೊಗ್ಗ ಜಿಲ್ಲೆ ಭದ್ರಾವತಿ ನಿವಾಸಿಗಳಾದ ಅರ್ಜುನ್​ ಹಾಗು ರಂಜನಾ ಕೆಲವೇ ದಿನಗಳ ಹಿಂದೆ ತುಮಕೂರಿಗೆ ಬಂದಿದ್ದರು. ಹೊಸ ಮನೆಗೆ ಬಂದ ಬಳಿಕ ಸಾಕಷ್ಟು ವಸ್ತುಗಳನ್ನು ತೆಗೆದುಕೊಳ್ಳುವ ಸಲುವಾಗಿ ಮನೆ ಬಾಗಿಲು ತೆರೆದಿದ್ದರು. ಅದೇ ಸಮಯದಲ್ಲಿ ಗಂಡು ಗಿಳಿ ಮನೆಯಿಂದ ಹೊರಕ್ಕೆ ಹೋಗಿದೆ. ಸಮಸ್ಯೆ ಆಗಿರುವುದು ಏನೆಂದರೆ ಆ ಗಿಳಿ ಮನೆಯಲ್ಲಿ ಆಡಿ ಬೆಳೆದಿರುವ ಕಾರಣ, ತನಗೆ ಬೇಕಾದ ಆಹಾರವನ್ನು ಹೊರ ಪ್ರಪಂಚದಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು. ಆಹಾರ ಸಿಗದೆ ಪ್ರೀತಿಯಿಂದ ಸಾಕಿದ್ದ ಗಿಳಿ ‘ರುಸ್ತುಮಾ ’ ಬೀದಿಯಲ್ಲೋ ಮನೆ ಮೇಲೋ ಆಹಾರವಿಲ್ಲದೆ ಸತ್ತು ಬಿಡುತ್ತದೆ. ದಯಮಾಡಿ ನಿಮ್ಮ ಮನೆಯ ಮೇಲೆ ಅಥವಾ ಕಿಟಕಿ ಬಳಿ ಕುಳಿತಿರುತ್ತದೆ. ಒಮ್ಮೆ ನೋಡಿ ಎಂದು ದಂಪತಿ ಮನವಿ ಮಾಡುತ್ತಿದ್ದಾರೆ.

ಬ್ಯಾನರ್​ ಹಾಕಿದ್ದಾರೆ, ಮೂರು ದಿನದಿಂದ ಹುಡುಕುತ್ತಿದ್ದಾರೆ..!

ಮನೆಯ ಮಗನಂತೆ ಸಾಕಿಕೊಂಡಿದ್ದ ಜೋಡಿ ಗಿಳಿಗಳಲ್ಲಿ ಗಂಡು ಗಿಳಿ ಕಳೆದು ಹೋಗಿದೆ. ಮನುಷ್ಉರ ಜೊತೆಯಲ್ಲಿ ಅನ್ಯೋನ್ಯ ಬಾಂಧವ್ಯ ಹೊಂದಿದ್ದ ಗಿಳಿ, ಜನರ ಮಾತಿಗೆ ಉತ್ತರ ಕೊಡುತ್ತಿತ್ತು. ಹಾಡುಗಳನ್ನು ಹಾಕಿದಾಗ ನೃತ್ಯ ಮಾಡ್ತಿತ್ತು. ಪ್ರವಾಸ ಹೋದಾಗಲೂ ನಾವು ಗಿಳಿಗಳನ್ನು ನಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆವು. ಆಗಲೂ ನಾವು ಬಂಧಿಸಿ ಕರೆದೊಯ್ಯುತ್ತಿರಲಿಲ್ಲ ಎನ್ನುತ್ತಾರೆ ದಂಪತಿ. ತುಮಕೂರಿನ ಕೆರೆ ಪ್ರದೇಶ, ಪಾರ್ಕ್​ಗಳು ಹೀಗೆ ಪಕ್ಷಿಗಳು ಕೂರುವ ಕಡೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಹೊರ ಪ್ರಪಂಚದ ಗಿಳಿಗಳ ಜೊತೆಗೆ ಬೆರೆತುಕೊಂಡಿದ್ದರೆ ಗಿಳಿ ಸಿಗುವುದು ಕಷ್ಟ ಎನ್ನಲಾಗ್ತಿದೆ. ಒಂದು ವೇಳೆ ದಂಪತಿ ಊಹೆ ಮಾಡಿರುವಂತೆ ಗಿಳಿ ರುಸ್ತುಮಾನಿಗೆ ಆಹಾರ ತಿನ್ನುವುದು ಗೊತ್ತಾಗದಿದ್ದರೆ ಎಲ್ಲಾದರೂ ಸಿಗಬಹುದು.

ಇದನ್ನು ಓದಿ:  ಬಸ್​ ನಿಲ್ದಾಣ ಉದ್ಘಾಟನೆಗೆ ಎಮ್ಮೆಲ್ಲೆ (MLA) ಬರಲಿಲ್ಲ, ಎಮ್ಮೆ ಕರೆತಂದ ರೈತರು..!

ಅರ್ಜುನ್​ ಮತ್ತು ರಂಜನಾ ದಂಪತಿ ಪ್ರೀತಿಯ ಗಿಳಿ ಮರಿ ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಒಂದು ವೇಳೆ ಈಗಾಗಲೇ 3 ದಿನಗಳು ಕಳೆದು ಹೋಗಿದೆ. ಜುಲೈ 16ರಂದು ಮನೆಯಿಂದ ಹೊರಕ್ಕೆ ಹೋಗಿದ್ದು, ಇಷ್ಟು ಹೊತ್ತಿಗೆ ಬೀದಿ ನಾಯಿಗಳು ಅಥವಾ ಹದ್ದುಗಳಿಗೂ ಆಹಾರ ಆಗಿರುವ ಸಾಧ್ಯತೆ ದಟ್ಟವಾಗಿದೆ. ಆದರೂ ತುಮಕೂರಿನ ಜನ ಅಸಹಾಯಕತೆಯಿಂದ ಬಳಲುತ್ತಾ ನಿಮ್ಮ ಮನೆಗೆ ಏನಾದರೂ ಗಿಳಿ ಬಂದರೆ ನಿಮ್ಮ ಅದೃಷ್ಟವೈ ಖುಲಾಯಿಸುತ್ತದೆ. ಒಮ್ಮೆ ಟೆರೇಸ್​ ಹಾಗು ಕಿಟಕಿ ಕಡೆಗೆ ಹೋಗಿ ನೋಡಿ ಬನ್ನಿ. ನಿಮ್ಮ ಕೈದೋಟದಲ್ಲೂ ತಪ್ಪಿಸಿಕೊಂಡು ಕಂಗಾಲಾದ ಗಿಳಿಮರಿ ಇದ್ದರೂ ಇರಬಹುದು ನೋಡಿ ಈ ದಂಪತಿಯನ್ನು ಸಂಪರ್ಕಿಸಿ.

Related Posts

Don't Miss it !