ಬಂಗಾಳದಲ್ಲಿ ಮಾನ ಉಳಿಸಿಕೊಂಡ ಕಾಂಗ್ರೆಸ್​​, ದೀದಿಗಿರಿ ತಡೆಯಲಾಗದೆ ಮೋದಿಗೆ ಮುಖಭಂಗ..!!

ಪಶ್ಚಿಮ ಬಂಣಗಾಳದಲ್ಲಿ ನಡೆದ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್​ ಜಯಭೇರಿ ಬಾರಿಸಿದೆ. ಅದರಲ್ಲೂ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿದ್ದ ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ದಾಖಲೆಯ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ತಿಬರೇವಾಲ್​ ಅವರನ್ನು ಬರೋಬ್ಬರಿ 58,389 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. ಮಮತಾ ಬ್ಯಾನರ್ಜಿ ಒಟ್ಟು 84,709 ಮತಗಳನ್ನು ಗಳಿಸಿದ್ರೆ, ಬಿಜೆಪಿ ಅಭ್ಯರ್ಥಿ ಕೇವಲ 26,320 ಮತಗಳನ್ನು ಪಡೆಯಲು ಶಕ್ತರಾಗಿದ್ದಾರೆ. CPIM ಪಕ್ಷದ ಅಭ್ಯರ್ಥಿ 4,201 ಮತಗಳನ್ನು ಮಾತ್ರ ಪಡೆದುಕೊಂಡಿದ್ದಾರೆ. ಸೋಲಿನ ಬಳಿಕ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ಈ ಪಂದ್ಯದಲ್ಲಿ ನನಗೆ ಮ್ಯಾನ್​ ಆಫ್​ ದಿ ಮ್ಯಾಚ್​ ಸಿಕ್ಕಿದೆ. ಮುಖ್ಯಮಂತ್ರಿ ವಿರುದ್ಧ ಸ್ಪರ್ಧೆ ಮಾಡಿ 25 ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದೇನೆ ಎಂದಿದ್ದಾರೆ.

ನಂದಿಗ್ರಾಮದ ಕುತಂತ್ರಕ್ಕೆ ಭವಾನಿಪುರದಲ್ಲಿ ಅವಕಾಶ ಸಿಗಲಿಲ್ಲ..!

ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲುಂಡಿದ್ದ ಮಮತಾ ಬ್ಯಾನರ್ಜಿ, ಭವಾನಿಪುರದಲ್ಲಿ ಗೆಲುವು ಸಾಧಿಸಿ ಎದೆಯುಬ್ಬಿಸಿದ್ದಾರೆ. ಗೆಲುವಿನ ಬೆನ್ನಲ್ಲೇ ಮಾತನಾಡಿದ ಮಮತಾ ಬ್ಯಾನರ್ಜಿ, ನಂದಿಗ್ರಾಮದಲ್ಲಿ 1956 ಮತಗಳ ಅಂತರದಿಂದ ಸುವೇಂದು ಅಧಿಕಾರಿ ವಿರುದ್ಧ ಸೋಲುಂಡಿದ್ದ ಮಮತಾ ಬ್ಯಾನರ್ಜಿ ಭವಾನಿಪುರ ತಕ್ಕ ಪ್ರತ್ಯುತ್ತರ ಕೊಟ್ಟಿದ್ದಾರೆ. ನಂದಿಗ್ರಾಮದಲ್ಲಿ ಬಿಜೆಪಿ ನಾಯಕರ ನಡೆಸಿದ ಷಡ್ಯಂತ್ರ ಭವಾನಿಪುರದಲ್ಲಿ ನಡೆಯಲಿಲ್ಲ ಎಂದಿದ್ದಾರೆ. ಪ್ರತಿಯೊಂದು ವಾರ್ಡ್​ನಲ್ಲೂ ನನ್ನ ನನ್ನ ಗೆಲುವು ದಾಖಲಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಭವಾನಿಪುರದ ಜೊತೆಗೆ ಇನ್ನೆರಡು ಕ್ಷೇತ್ರಗಳಾದ ಜಗ್ನಿಪುರ್ ಹಾಗೂ ಸಂಸರ್​ಗಂಜ್​ನಲ್ಲಿ ಟಿಎಂಸಿ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದು, ಮಮತಾ ಸರ್ಕಾರಕ್ಕೆ ಪಶ್ಚಿಮ ಬಂಗಾಳ ಜನರು ಉಘೇ ಎಂದಿರುವ ಪ್ರತೀಕವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಮಮತಾ ನಾಯಕತ್ವಕ್ಕೆ ಭರ್ಜರಿ ಜಯ ಸಿಕ್ಕಿದ್ದರೂ ಮಮತಾ ಬ್ಯಾನರ್ಜಿ ಮಾತ್ರ ಸೋಲುಂಡಿದ್ದರು. ಗೆದ್ದು ಮುಖ್ಯಮಂತ್ರಿ ಆಗಿದ್ದರೂ ಸೋಲು ಕಹಿ ಉಣಿಸಿತ್ತು. ಆದರೀಗ ಸೇಡು ತೀರಿಸಿಕೊಂಡಿದ್ದಾರೆ.

Read this also;

ದೀದಿ ಎದುರು ಮಾನ ಉಳಿಸಿಕೊಂಡ ಕಾಂಗ್ರೆಸ್​ ಪಕ್ಷ..!

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ 294 ಕ್ಷೇತ್ರಗಳ ಪೈಕಿ ಮಮತಾ ಬ್ಯಾನರ್ಜಿ ಅವರ ಪಕ್ಷ ಟಿಎಂಸಿ 217 ಸ್ಥಾನಗಳನ್ನು ಗಳಿಸಿದ್ರೆ ಬಿಜೆಪಿ 70 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಇಂಡಿಯನ್​ ಸೆಕ್ಯೂಲರ್​ ಫ್ರಂಟ್ 01, ಗೋರ್ಖಾ ಜನಮುಕ್ತಿ ಮೋರ್ಚಾ 01, ಪಕ್ಷೇತರ 01 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ತೃಣಮೂಲ ಕಾಂಗ್ರೆಸ್​ ಆರ್ಭಟದಲ್ಲಿ ಕಳೆದು ಹೋಗಿದ್ದ ಕಾಂಗ್ರೆಸ್​ ಪಕ್ಷ ಈ ಬಾರಿ ಉಪಚುನಾವಣೆಯಲ್ಲಿ ಮಮತಾ ವಿರುದ್ಧ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸದೆ ಮಾನ ಉಳಿಸಿಕೊಂಡಂತೆ ಆಗಿದೆ. ಕಳೆದ ಬಾರಿ ಕೆಲವೇ ನೂರು ಮತಗಳ ಅಂತರದಲ್ಲಿ ಮಮತಾ ಬ್ಯಾನರ್ಜಿಗೆ ಮುಖಭಂಗ ತಂದೊಡ್ಡುವಲ್ಲಿ ಯಶಸ್ವಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಮತ್ತೆ ಭವಾನಿಪುರದಲ್ಲಿ ದೀದಿ ಕಟ್ಟಿಹಾಕುವ ಯತ್ನದಲ್ಲಿ ವಿಫಲರಾಗಿದ್ದಾರೆ. ದೀದಿ ಕೋಟೆ ಸಾಕಷ್ಟು ಭದ್ರವಾಗಿದೆ ಎನ್ನುವುದನ್ನುಈ ಮೂಲಕ ದೇಶಕ್ಕೆ ಸಂದೇಶ ರವಾನಿಸಿದ್ದಾರೆ.

Read this also;

ಬಿಜೆಪಿ ಸ್ಪರ್ಧೆಗೆ ಸಾಕಷ್ಟು ವಿರೋಧ ಕೂಡ ಕೇಳಿಸಿತ್ತು..!

ಬಿಜೆಪಿ ಪಕ್ಷದಿಂದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಯನ್ನು ಕಣಕ್ಕೆ ಇಳಿಸದೆ ಇರುವುದು ಒಳ್ಳೆಯದು ಎನ್ನುವ ಅಭಿಪ್ರಾಯ ಬಿಜೆಪಿ ಪಕ್ಷದಲ್ಲೇ ಕೇಳಿಬಂದಿತ್ತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಉತ್ತಮ ಅಭಿಪ್ರಾಯವಿದ್ದು, ಸಿಎಂ ಮಮತಾ ಬ್ಯಾನರ್ಜಿ ಎದುರು ಕಣಕ್ಕಿಳಿಸದೆ ರಾಜಕೀಯ ಮತ್ಸದ್ದಿತನ ತೋರಬೇಕು ಎನ್ನುವುದು ಬಿಜೆಪಿ ನಾಯಕ ರಾಜೀವ್​ ಬ್ಯಾನರ್ಜಿಅಭಿಮತ ವ್ಯಕ್ತಪಡಿಸಿದ್ದರು. ಆದರೂ ಪಟ್ಟು ಬಿಡದ ಬಿಜೆಪಿ ಮಮತಾ ಬ್ಯಾನರ್ಜಿ ಕಟ್ಟಿ ಹಾಕುವ ಯತ್ನ ಮಾಡಿ ವಿಫಲವಾಗಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೂಡ ಮಮತಾ ಬ್ಯಾನರ್ಜಿ ಎದುರು ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸಿದ್ದು ಸರಿಯಲ್ಲ ಎಂದಿದ್ದರು. ಇದೀಗ ಪಸ್ಚಿಮ ಬಂಗಾಳದ ಭವಾನಿಪುರದ ಜನರು ಅಭೂತಪೂರ್ವ ಗೆಲುವು ನೀಡಿದ ಬಳಿಕ ದೀದಿಗಿರಿಗೆ ಶುಭ ಹಾರೈಸಿದ್ದಾರೆ.

Related Posts

Don't Miss it !