ಮೇಲುಕೋಟೆ ಶಾಸಕ ಸಿ.ಎಸ್​ ಪುಟ್ಟರಾಜು ಕಾಂಗ್ರೆಸ್​ ಕದ ತಟ್ಟಿರೋದು ಸತ್ಯ..! ಸಾಕ್ಷಿ ಇದೆ..

ಮಂಡ್ಯ ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಶಾಸಕ ಸಿ.ಎಸ್​ ಪುಟ್ಟರಾಜು ಕಾಂಗ್ರೆಸ್​ ಸೇರುವುದು ಖಚಿತವಾಗಿದೆ. ಗುರುವಾರ ಸಂಜೆ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ್ದ ಸಿ.ಎಸ್ ಪುಟ್ಟರಾಜು, ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸಿದ್ದರು. ಆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಸಿ.ಎಸ್ ಪುಟ್ಟರಾಜು, ಚಿಕ್ಕಮಲ್ಲಿಗೆರೆ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನದ ಉದ್ಘಾಟನೆಗೆ ಆಹ್ವಾನಿಸಲು ತೆರಳಿದ್ದೆ, ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಲಿಲ್ಲ. ಜೆಡಿಎಸ್ ಕಚೇರಿಯಲ್ಲಿ ಬೆಳಗ್ಗೆಯಿಂದ ಕುಮಾರಸ್ವಾಮಿ ಅವರ ಜೊತೆಗೆ ಸರಣಿ ಸಭೆಯಲ್ಲಿ ಭಾಗಿಯಾಗಿ, ಸಿದ್ದರಾಮಯ್ಯ ಅವರ ಮನೆಗೆ ಹೋಗುವ ಬಗ್ಗೆ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿಯೇ ತೆರಳಿದ್ದೆ ಎಂದಿದ್ದರು.‌ ಆದರೆ ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವುದಿಲ್ಲ ಎಂದು ಸಮಜಾಯಿಷಿ ನೀಡಿದ ಶಾಸಕರ ಹೇಳಿಕೆಗಳೇ ಪಕ್ಷ ಬಿಡುವ ಬಗ್ಗೆ ಮುನ್ಸೂಚನೆ ಸಿಗುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊಚರವಾಗಿದೆ.

ಇದನ್ನೂ ಓದಿ; ಆತನಿಗೆ ಮೂವರು.. ಈಕೆಗೆ ನಾಲ್ವರು.. ಗಂಡ ಹೆಂಡ್ತಿ ಕಾಮದಾಹ.. ಜಮೀನಿಗಾಗಿ ಮರ್ಡರ್​..!!

ಮಂಡ್ಯದಲ್ಲಿ ಕುಮಾರಸ್ವಾಮಿ ಜೊತೆಗಿನ ವೈಮನಸ್ಸು ಬಹಿರಂಗ..!

ಶುಕ್ರವಾರ ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಎಸ್​ ಪುಟ್ಟರಾಜು, ನಾನು ಸಿದ್ದರಾಮಯ್ಯ ಮನೆಗೆ ತೆರಳಿದಾಗ ಅಲ್ಲಿ ಜಮೀರ್ ಅಹ್ಮದ್​ ಖಾನ್​, ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಸೇರಿದಂತೆ ಕಾಂಗ್ರೆಸ್​ನ ನಾಯಕರು ಅಲ್ಲಿಗೆ ಆಗಮಿಸಿದ್ದರು. ಆದರೆ ನಮ್ಮ ಪಕ್ಷದ ಸಣ್ಣ ಕಾರ್ಯಕರ್ತ ಕೂಡ ಪಕ್ಷ ಬಿಡುವ ಪ್ರಮೇಯವೇ ಇಲ್ಲ. ದೇವೇಗೌಡರ ಗಮನಕ್ಕೆ ತಂದು ನಂತರ ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದೆ. ಸಮ್ಮಿಶ್ರ ಸರ್ಕಾರದ ಸಂದರ್ಭ ಎರಡು ಪಕ್ಷಗಳ ನಡುವೆ ಕೊಂಡಿಯ ರೀತಿ ನಾನು ಕೆಲಸ ಮಾಡಿದ್ದೇನೆ. ಹೀಗಾಗಿ ಕಾಂಗ್ರೆಸ್​ನ ಡಿ.ಕೆ ಶಿವಕುಮಾರ್​ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಜೊತೆಗೆ ಆತ್ಮೀಯರಾಗಿ ಇದ್ದಾರೆ. ನಾನು ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರ ಹೆಜ್ಜೆ ತುಳಿದು ರಾಜಕಾರಣ ಮಾಡುತ್ತಿದ್ದೇನೆ. ಹೆಚ್​.ಡಿ ದೇವೇಗೌಡರು ಎಲ್ಲಿವರೆಗೆ ಸಕ್ರಿಯವಾಗಿ ರಾಜಕಾರಣ ಮಾಡುತ್ತಾರೆ ಅಲ್ಲೀವರೆಗೂ ಪಕ್ಷ ಬಿಡುವ ಮಾತಿಲ್ಲ ಎಂದಿದ್ದಾರೆ.

ಇದನ್ನೂ ಓದಿ; B.S ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ, ಅಬ್ಬಿಗೆರೆಯಲ್ಲಿ ಅಂತ್ಯಸಂಸ್ಕಾರ..! ಕಾರಣ..

ಕುಮಾರಸ್ವಾಮಿ ಕೊಟ್ಟ ಹೇಳಿಕೆ, ಪುಟ್ಟರಾಜು ಪಲಾಯನ ಸ್ಪಷ್ಟ..!

ನಾನು ಸಿದ್ದರಾಮಯ್ಯ ಅವರ ಮನೆಗೆ ಹೋಗುವುದನ್ನು ಕುಮಾರಸ್ವಾಮಿ ಅವರಿಗೆ ಹೇಳಿಯೇ ಹೋಗಿದ್ದೆ ಎಂದು ಮಾಧ್ಯಮಗಳಿಗೆ ಹೇಳಿದ್ದ ಮೇಲುಕೋಟೆ ಶಾಸಕ ಸಿ.ಎಸ್​ ಪುಟ್ಟರಾಜು, ಶುಕ್ರವಾರ ಮಂಡ್ಯದಲ್ಲಿ ಮಾತನಾಡಿ ನಾನು ಹೆಚ್​.ಡಿ ದೇವೇಗೌಡರಿಗೆ ಹೇಳಿ ಹೋಗಿದ್ದೆ ಎಂದಿದ್ದಾರೆ. ಇದರಲ್ಲಿ ಯಾವುದು ಸತ್ಯ ಎನ್ನುವುದು ಆಲೋಚಿಸುವ ವಿಚಾರ. ಇನ್ನೂ ಪುಟ್ಟರಾಜು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ವಿಚಾರಕ್ಕೆ ಕುಮಾರಸ್ವಾಮಿ, ಇದು ನನಗೆ ಗೊತ್ತಿಲ್ಲ, ಯಾರು ಯಾರನ್ನು ಬೇಕಾದರೂ ಭೇಟಿ ಮಾಡಬಹುದು ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ಜೊತೆಗೆ ನನಗೆ ಪಕ್ಷ ಹಾಗೂ ಕಾರ್ಯಕರ್ತರು ಮಾತ್ರ ಮುಖ್ಯ, ಕಾರ್ಯಕರ್ತರಿಂದ ನಾಯಕನೇ ಹೊರತು, ಮುಖಂಡರಿಂದ ಕಾರ್ಯಕರ್ತರಲ್ಲ. ಬಹಳಷ್ಟು ಜನರು ಜೆಡಿಎಸ್​ನಲ್ಲಿ ಬೆಳೆದಿದ್ದಾರೆ. ಜೆಡಿಎಸ್​ ಕಾರ್ಯಕರ್ತರಿಗೆ ನಾಯಕರನ್ನು ಬೆಳೆಸುವುದು ಗೊತ್ತಿದೆ. 2023ಕ್ಕೆ ಜೆಡಿಎಸ್​ ಶಕ್ತಿ ತಿಳಿಯಲಿದೆ ಎನ್ನುವ ಮೂಲಕ ಪಕ್ಷ ಬಿಡುವ ನಾಯಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಪುಟ್ಟರಾಜು ಹೇಳಿಕೆ ಸುಳ್ಳು ಎಂದು ಸಾಬೀತು.. ಸಾಕ್ಷಿ ಇಲ್ಲಿದೆ..!

ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಹೇಳಿಯೇ ಹೋಗಿದ್ದೆ ಎಂದಿದ್ದರು. ಆದರೆ ಕುಮಾರಸ್ವಾಮಿ ಮಾತ್ರ ನನಗೆ ಗೊತ್ತಿಲ್ಲ ಎಂದಿದ್ದಾರೆ. ಮಾಧ್ಯಮಗಳಿಗೆ ಸಿದ್ದರಾಮಯ್ಯ ಜೊತೆಗೆ ಇರುವ ಫೋಟೋವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರಲಿಲ್ಲ. ಆದರೆ ಮಂಡ್ಯದ ಪತ್ರಕರ್ತರಿಗೆ ಸಿದ್ದರಾಮಯ್ಯ ಜೊತೆಗೆ ಇರುವ ಫೋಟೋ ಕೊಟ್ಟಿದ್ದೇ ಪುಟ್ಟರಾಜು ಆಪ್ತರು ಎನ್ನುವ ಮಾಹಿತಿ ಇದೆ. ಕುಮಾರಸ್ವಾಮಿ ಜೊತೆಗೆ ಓಡಾಡುತ್ತಿದ್ದ ಸಿ.ಎಸ್​ ಪುಟ್ಟರಾಜು ಇತ್ತೀಚಿನ ದಿನಗಳಲ್ಲಿ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಮಂಡ್ಯದಲ್ಲಿ ಶಾಸಕ ಪುಟ್ಟರಾಜು ಮಾತನಾಡುವಾಗ ದೇವೇಗೌಡರ ಹೆಜ್ಜೆಯಲ್ಲಿ ರಾಜಕಾರಣ ಮಾಡುತ್ತಿದ್ದೇನೆ. ದೇವೇಗೌಡರು ಸಕ್ರಿಯ ರಾಜಕಾರಣದಲ್ಲಿ ಇರುವ ತನಕ ನಾನು ಪಕ್ಷ ಬಿಡುವುದಿಲ್ಲ ಎಂದಿದ್ದಾರೆ. ಅಂದರೆ ಕುಮಾರಸ್ವಾಮಿ ಪಕ್ಷದಲ್ಲಿ ಇರುವ ತನಕ ಪಕ್ಷದಲ್ಲಿ ಇರ್ತೇನೆ ಎಂದು ಹೇಳಿಲ್ಲ. ಇನ್ನು ಮುಂದಿನ ದಿನಗಳ ನಮ್ಮ ಕ್ಷೇತ್ರದ ಜನರು ಹೇಳಿದಂತೆ ಕೇಳ್ತೇನೆ ಎಂದಿದ್ದಾರೆ.

Related Posts

Don't Miss it !