ಬೆಂಗಳೂರಲ್ಲಿ ಮಂಡ್ಯದ ಹುಡುಗಿಯನ್ನು ಕೊಂದನಾ..? ನೆಲಮಂಗಲದ ಹುಡುಗ..! ಡೌಟ್​ ..

ಹೆಣ್ಣು ಹೆತ್ತವರ ಪ್ರಮುಖ ಆಸೆಗಳಲ್ಲಿ ಒಂದು ತಮ್ಮ ಮಗಳನ್ನು ಮದುವೆ ಮಾಡಿ ಕೊಟ್ಟ ಮನೆಯಲ್ಲಿ ಸುಖವಾಗಿರಲಿ ಎನ್ನುವುದು. ಆದರೆ ಇಲ್ಲೊಬ್ಬ ವಿದ್ಯಾವಂತ ಯವತಿ (ಗೃಹಿಣಿ) ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಗಂಡನೇ ಕೊಲೆ ಮಾಡಿದ್ನಾ ಅನ್ನೋ ಅನುಮಾನ ಕೂಡ ಪೊಲೀಸರನ್ನು ಕಾಡುತ್ತಿದೆ. ಯಾಕಂದ್ರೆ ನಿಮ್ಮ ಮಗಳು ನೇಣು ಹಾಕಿಕೊಂಡಿದ್ದಾಳೆ ಎಂದು ಅತ್ತೆಗೆ ಫೋನ್​ ಮಾಡಿದ್ದ ಅಳಿಯ, ಆಸ್ಪತ್ರೆಗೂ ಕರೆದುಕೊಂಡು ಹೋಗದೆ ಮನೆಯಲ್ಲೇ ಮಲಗಿಸಿ ಕೊಂಡಿದ್ದ ಎಂದು ಹೆತ್ತಮ್ಮ ದೂರಿದ್ದಾರೆ. ಬೆಂಗಳೂರಿನಲ್ಲಿದ್ದ ಹುಡುಗಿ ಸಂಬಂಧಿಕರೇ ಮನೆಗೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ತನಕ ಮನೆಯಲ್ಲೇ ಮಲಗಿಸಿಕೊಂಡಿದ್ದ ಎನ್ನುವ ವಿಚಾರ ಗಂಡ ವಿನಯ್​ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ಮಂಡ್ಯದ ಹೆಣ್ಣು ಮಗಳಿಗೆ ಸಿಕ್ಕಿದ್ದು ಗಿಡುಗ ಗಂಡ..!!

ತಂದೆ ಇಲ್ಲದ ಮಗಳನ್ನು ತುಂಬಾ ಮುದ್ದಾಗಿ ಸಾಕಿದ್ದ ತಾಯಿ ಭಾರತೀ, ಮಂಡ್ಯದಲ್ಲಿ‌ ಪ್ರಾಥಮಿಕ ಶಿಕ್ಷಣ ಹಾಗೂ ಡಿಪ್ಲೊಮಾ ಓದಿಸಿದ್ದರು. ಆ ಬಳಿಕ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ‌ ಎಂಜಿನಿಯರಿಂಗ್ ಓದಿಸಿದ್ದರು. ಬೆಂಗಳೂರಿನಲ್ಲಿ ಒಳ್ಳೆ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ಆದರೆ ಮದುವೆ ಮಾಡುವ ವಿಚಾರದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುವಲ್ಲಿ ಎಡವಿದ ಅವರು, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಗಂಡು ಹುಡುಕುವ ಪ್ರಯತ್ನ ಮಾಡಿದ್ರು. ಅಂತಿಮವಾಗಿ ನೆಲಮಂಗಲ ಮೂಲದ ವಿನಯ್ ಎಂಬ ಕಟುಕನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರು. ಅದೂ‌ ಕೂಡ ಕೇವಲ ಒಂದು ವರ್ಷ ನಾಲ್ಕು ತಿಂಗಳ ಹಿಂದೆ ಅಷ್ಟೆ.

ಮೃತ ಸಂಗೀತಾ

ವಿದ್ಯಾವಂತ ಯುವಕ, ಸಂಕುಚಿತ ಮನೋಭಾವ..!!

ಸಿವಿಲ್ ಎಂಜಿನಿಯರ್ ಅನ್ನೋ ಕಾರಣಕ್ಕ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟ ಬಳಿಕ ವಿನಯ್ ಹಾಗೂ ಸಂಗೀತಾ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣನ ಪಾಳ್ಯದಲ್ಲಿ ವಾಸವಾಗಿದ್ದರು. ಆದರೆ ಮುದ್ದಾದ ಹೆಂಡತಿ ಮೇಲೆ ಆರಂಭದಿಂದಲೂ ಅನುಮಾನದಿಂದ ನೋಡಲು ಶುರು ಮಾಡಿದ ವಿನಯ್ ಇಂದು ಪೊಲೀಸರ ಅತಿಥಿ ಆಗಿದ್ದಾರೆ. ಕಂಪನಿಯಲ್ಲಿ‌ ಕೆಲಸ ಮಾಡುವ ಸಹೋದ್ಯೋಗಿಗಳು ಅಥವಾ ಸಂಬಂಧಿಕರ ಜೊತೆಗೂ ಮಾತನಾಡುವಂತಿರಲಿಲ್ಲ, ಅಷ್ಟೇ ಯಾಕೆ ಸ್ವತಃ ತಾಯಿ ಜೊತೆಗೆ ಮೊಬೈಲ್ ನಲ್ಲಿ ಮಾತನಾಡಿದರೂ ಮೊಬೈಲ್ ಪರಿಶೀಲನೆ ನಡೆಸುವ ಸಂಕುಚಿತ ಮನೋಭಾವ ಹೊಂದಿದ್ದನು ಎಂದು ಹುಡುಗಿಯ ತಾಯಿ ಭಾರತೀ ಹೇಳಿಕೆ ನೀಡಿದ್ದಾರೆ. ಇನ್ನು ರಾತ್ರಿ ಇಡ್ಲಿ ಬಿಸಿ ಇಲ್ಲ ಎನ್ನುವ ಕಾರಣಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಕೊಂದನೋ..? ಆತ್ಮಹತ್ಯೆಯೋ ಪೊಲೀಸರ ತನಿಖೆಯಲ್ಲಿ ತಿಳಿಯಬೇಕಿದೆ.

ಗಂಡ ವಿನಯ್, ಮೃತ ಸಂಗೀತಾ

ಈ ಸಾವಿನಲ್ಲಿ ತಪ್ಪು ಮಾಡಿದ್ದು ಯಾರು ಯಾರು..?

ಮುದ್ದಾದ ಮಗಳನ್ನು ಸಾಕಿ ಗೊತ್ತು ಗುರಿ ಇಲ್ಲದೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಗಂಡನ್ನು ಹುಡುಕಿದ್ದೇ ಮೊದಲನೇ ತಪ್ಪು. ಇನ್ನು ಹೆಂಡತಿ ಮುದ್ದಾಗಿದ್ದಾಳೆ ಎನ್ನುವ ಕಾರಣಕ್ಕೆ ಸದಾ ಅನುಮಾನದಿಂದ ನೋಡಿದ ಗಂಡನದ್ದು ಎರಡನೇ ತಪ್ಪು. ಇನ್ನು ಜಗಳ ನಡೆದಿದೆ ಎನ್ನುವುದು ಸಂಬಂಧಿಕರಿಗೆ ತಿಳಿದರೆ ಅವಮಾನ ಆಗುತ್ತೆ ಎನ್ನುವ ಕಾರಣಕ್ಕೆ ಎಲ್ಲವನ್ನೂ ಮುಚ್ಚಿಟ್ಟುಕೊಂಡು ನೋವು ಅನುಭವಿಸಿ ಹೆಣವಾದ ಸಂಗೀತಾಳದ್ದು ನಾಲ್ಕನೇ ತಪ್ಪು. ಅನೈತಿಕ ಸಂಬಂಧ ಹೊಂದಿದ್ದಾಳೆ ಅಥವಾ ಹೊಂದುವ ಭೀತಿಯಲ್ಲಿ ಗಂಡ ಜಗಳ ಆಡುತ್ತಿದ್ದ ಎನ್ನುವುದಾದರೇ ಓದಿದ ಹುಡುಗಿ ಗಂಡನನ್ನು ಬಿಟ್ಟು ದೂರ ಆಗಲು ಸಾಕಷ್ಟು ಹಾದಿಗಳಿದ್ದವು. ಅದನ್ನು ತಿಳಿಯದೇ ಗಂಡ ವಿನಯ್ ಅನುಮಾನ ಪಟ್ಟಿದ್ದು ನಾಲ್ಕನೇ ತಪ್ಪು. ಮದುವೆಯಾದ ಬಳಿಕ ಇದೇ ರೀತಿ ಜಗಳ ಆಗ್ತಿತ್ತು ಎನ್ನುವ ತಾಯಿ ಗಂಡನ ಮನೆಯಲ್ಲೇ ಉಳಿಯಲು ಬಿಟ್ಟಿದ್ದು ಐದನೇ ತಪ್ಪು ಹಾಗೂ ಓದಿದ ಹುಡುಗಿ ಕಾನೂನು ಮೂಲಕ ತನ್ನ ವೈವಾಹಿಕ ಜೀವನ ರದ್ದು ಮಾಡಿ ತಾಯಿ ಜಿತೆಯಲ್ಲಿ ವಾಸಿಸುವ ದೃಢ ನಿರ್ಧಾರ ಮಾಡದ ಸಂಗೀತಾಳದ್ದು ಆರನೇ ತಪ್ಪು. ಇದೀಗ ಉಳಿದಿದ್ದು ಕೊಂದಿದ್ದು ವಿನಯ್ ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ವಿನಯ್‌ಗೆ ಯಾವ ಶಿಕ್ಷೆ ಎನ್ನುವುದು ಎಲ್ಲದಕ್ಕೂ ಪರಿಹಾರ.

Related Posts

Don't Miss it !