Muskan Khan: ಮಂಡ್ಯದ ಯುವತಿಗೆ ಆಲ್ ಖೈದಾ ಉಗ್ರ ಸಂಘಟನೆ ಬೆಂಬಲ..! ಇದು ಹೇಗೆ ಸಾಧ್ಯ..?

ಉಡುಪಿಯಲ್ಲಿ ಶುರುವಾಗಿದ್ದ ಹಿಜಾಬ್ ವಿವಾದ ಇದೀಗ ಮಂಡ್ಯಕ್ಕೆ ಬಂದು ನಿಂತಿದೆ. ಹೈಕೋರ್ಟ್​ ಮೆಟ್ಟಿಲೇರಿದ ಬಳಿಕ ಸಾಕಷ್ಟು ವಿರೋಧ ಮಾಡಿದ್ದ ಹಿಂದೂ ಪರ ಸಂಘಟನೆಗಳು ಹಿಜಾಬ್​ ಧರಿಸಿ ಕಾಲೇಜುಗಳಿಗೆ ಬರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಸರಿ ಶಾಲು ಹಾಕಿ ಕಾಲೇಜು ಪ್ರವೇಶಕ್ಕೆ ಯತ್ನಿಸಿದ್ದಾಗ ಅವಕಾಶ ನಿರಾಕರಿಸಲಾಗಿತ್ತು. ಈ ವೇಳೆ ಹಿಜಾಬ್​ ಧರಿಸಿ ಬರುವ ಯುವತಿಯ ಎದುರು ಜೈ ಶ್ರೀರಾಮ್​ ಎಂದು ಘೋಷನೆ ಕೂಗಲಾಗಿತ್ತು. ಆ ವೇಳೆ ವಿದ್ಯಾರ್ಥಿನಿ ಮುಸ್ಕಾನ್​, ಅಲ್ಲಾಹು ಅಕ್ಬರ್​ ಎನ್ನುವ ಮೂಲಕ ಆಕ್ರೋಶ ಹೊರ ಹಾಕಿದ್ದಳು. ಆ ಬಳಿಕ ಅನೇಕ ಮುಸ್ಲಿಂ ನಾಯಕರು ಮುಸ್ಕಾನ್​ ನಿವಾಸಕ್ಕೆ ಭೇಟಿ ನೀಡಿ ಶಹಬ್ಬಾಸ್​ಗಿರಿ ನೀಡಿದ್ದರು. ಅನೇಕ ಉಡುಗೊರೆಗಳನ್ನು ನೀಡಿದ್ದರು. ಹೈದ್ರಾಬಾದ್​ನಿಂದಲೂ ಮುಸ್ಲಿಂ ನಾಯಕರು ಬಂದು ಶಹಬ್ಬಾಸ್ ಗಿರಿ ನೀಡಿದ್ದರು. ಆಗಲೇ ಹಿಂದೂ ಸಂಘಟನೆಗಳ ಕಣ್ಣು ಕೆಂಪಾಗುವಂತೆ ಮಾಡಿತ್ತು. ಇದೀಗ ವಿಶ್ವದ ಮೋಸ್ಟ್ ವಾಂಟೆಂಡ್ ಆಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಶಹಬ್ಬಾಸ್ಗಿರಿ ಹೇಳಿರುವುದು ದೇಶದ ಗಮನ ಸೆಳೆಯುವಂತೆ ಮಾಡಿದೆ.

ಮಸ್ಕಾನ್ ಹೊಗಳಿದ್ದು ಯಾರು..? ಹಿನ್ನೆಲೆ ಏನು..!?

ಹಿಜಾಬ್ ವಿಚಾರದಲ್ಲಿ ಸ್ಟಾರ್ ಆಗಿದ್ದ ಮಂಡ್ಯದ ಮಸ್ಕಾನ್ಗೆ ಲಕ್ಷ ಲಕ್ಷ ಹಣ ಹರಿದು ಬಂದಿತ್ತು ಎನ್ನುವ ಆರೋಪ ಇತ್ತು. ಇದರ ಜೊತೆಗೆ ಹಿಜಾಬ್ ವಿರುದ್ಧದ ಗೊಇರಾಟದ ಹಿಂದೆ ಉಗ್ರ ಸಂಘಟನೆಗಳ ಬೆಂಬಲವಿದೆ ಎನ್ನುವುದನ್ನು ಹಿಂದೂ ಸಂಘಟನೆಗಳು ಮೊದಲಿನಿಂದಲೂ ಆರೋಪಿಸಿದ್ದವು. ಇದೀಗ ಮಂಡ್ಯದ ಮುಸ್ಕಾನ್​​ ಬಗ್ಗೆ ಆಲ್ಖೈದ ಉಗ್ರನಿಂದ ಝವಾಹಿರಿ ಹೊಗಳಿಕೆ ಮಾತನಾಡಿದ್ದಾನೆ. ಅಲ್ಲಾಹು ಅಕ್ಬರ್ ಎಂದು ಧೈರ್ಯವಾಗಿ ಹೇಳಿರುವ ಮುಸ್ಕಾನ್ ಖಾನ್ ನನ್ನ ಸಹೋದರಿ, ಮುಸ್ಕಾನ್ ಉದಾತ್ತ ಚಿಂತನೆ ಉಳ್ಳ ಗಟ್ಟಿ ಹೆಣ್ಣು, ಭಾರತದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಈಕೆ ಇಸ್ಲಾಂ ಮೇಲಿನ ಗೌರವ ಹೆಚ್ಚಿಸಿದ್ದಾಳೆ. ತುಳಿಯುವವರ ವಿರುದ್ಧ ಹೋರಾಡಿದ್ದಾಳೆ. ಮುಸ್ಕಾನ್ ನಡೆಯಿಂದ ನಾನು ಪ್ರಭಾವಿತನಾಗಿದ್ದೇನೆ. ಮುಸ್ಕಾನ್​ಗೆ ನಾನು ಒಂದು ಕವಿತೆಯನ್ನೂ ಉಡುಗೊರೆ ಆಗಿ ಕೊಡಲು ಬಯಸುತ್ತೇನೆ. ಈ ಉಡುಗೊರೆಯನ್ನು ಆಕೆ ಸ್ವೀಕರಿಸುತ್ತಾಳೆ ಎಂದು ಆಶಿಸುತ್ತೇನೆ ಎಂದಿದ್ದಾನೆ.

ಈಜಿಪ್ಟ್​​ನಲ್ಲಿ ವಿದ್ಯಾಭ್ಯಾಸ ಮಾಡಿದ ಝುವಾಹಿರಿ, ಪಾಕಿಸ್ತಾನದಲ್ಲಿ ತನ್ನನ್ನು ಗುರ್ತಿಸಿಕೊಳ್ಳುವ ನಿರ್ಧಾರ ಮಾಡಿದ. ಕಟ್ಟರ್ ಮುಸ್ಲಿಂವಾದಿಯಾದ ಈತ, 1974 ರಿಂದ 1977 ರ ತನಕ ಈಜಿಪ್ಟ್​​ ಸೇನೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿದ್ದಾನೆ. ಪಾಕಿಸ್ತಾನದಲ್ಲೂ ವೈದ್ಯನಾಗಿ ಕೆಲಸ ಮಾಡಿದ್ದಾನೆ. ಪಾಕಿಸ್ತಾನದಲ್ಲಿ ಉಗ್ರರ ಜತೆ ನಿಕಟ ಸಂಪರ್ಕ ಹೊಂದಿದ್ದ ಝುವಾಹಿರಿಯನ್ನು 1981ರಲ್ಲಿ ಶಸ್ತ್ರಾಸ್ತ್ರ ಸರಬರಾಜು ಪ್ರಕರಣದಲ್ಲಿ ಬಂಧನ ಮಾಡಲಾಗಿತ್ತು. ಜೈಲಿನಿಂದ ಬಿಡುಗಡೆ ಆದ ಬಳಿಕ ಅಲ್ ಖೈದಾ ಸೇರಿಕೊಂಡ. ಒಸಾಮಾ ಬಿನ್ ಲಾಡೆನ್​​ಗೆ ಪರಮಾಪ್ತನಾಗಿ ಗುರ್ತಿಸಿಕೊಂಡಿದ್ದ. ಲಾಡೆನ್ ಹತ್ಯೆ ಬಳಿಕ ಅಲ್​ಖೈದಾ ಮುಖ್ಯಸ್ಥನ ಸ್ಥಾನಕ್ಕೇರಿದ ಝುವಾಹಿರಿ, ಹಲವು ವರ್ಷಗಳ ಬಳಿಕ ಇದೀಗ ಪ್ರತ್ಯಕ್ಷವಾಗಿದ್ದಾನೆ. ಆದರೆ ಆಲ್ ಖೈದಾ ಉಗ್ರ ಸಂಘಟನೆಗೆ ಮುಸ್ಕಾನ್ ಬಗ್ಗೆ ತಿಳಿಸಿದ್ದು ಯಾರು..? ಯಾಕೆ ಮಾತನಾಡಿದ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತದೆ. ಇದಕ್ಕೆ ಉತ್ತರ ಮಂಡ್ಯದ ಯುವತಿ ಮುಸ್ಕಾನ್ ಬಳಿಯೇ ಇದೆ.

ಪಾಕಿಸ್ತಾನದ ಚಾನೆಲ್‌ಗೆ ಸಂದರ್ಶನ ಕೊಟ್ಟಿದ್ದ ಮುಸ್ಕಾನ್..!

ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಹಿಂದೂ ಯುವಕರ ಪ್ರಚೋದನೆಗೆ ಕೌಂಟರ್ ಮಾಡಿದ್ದು ತಪ್ಪಲ್ಲ. ಆದರೆ ಆ ಬಳಿಕ ಕರ್ನಾಟಕದ ಮಾಧ್ಯಮಗಳು ಸೇರಿದಂತೆ ದೇಶದ ಮಾಧ್ಯಮಗಳ ಜೊತೆಗೆ ಮಾತನಾಡದೆ ಸುಮ್ಮನಾಗಿದ್ದ ಮುಸ್ಕಾನ್, ಪಾಕಿಸ್ತಾನದ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದರು ಎನ್ನಲಾಗಿದೆ. ಆ ಬಳಿಕ ವಿಶ್ವಾದ್ಯಂತ ಪ್ರಚಾರ ಸಿಕ್ಕಿತ್ತು. ಇದೀಗ ಉಗ್ರ ಸಂಘಟನೆ ಮುಖ್ಯಸ್ಥನೇ ಬೆಂಬಲಕ್ಕೆ ನಿಂತಿದ್ದು ಕುಟುಂಬಸ್ಥರನ್ನು ಇರಿಸುಮುರಿಸು ಆಗುವಂತೆ ಮಾಡಿದೆ. ಮುಸ್ಕಾನ್ ತಂದೆ ಸಂಜೆ ತನಕ ಯಾವುದೇ ಪ್ರತಿಕ್ರಿಯೆ ನೀಡದೆ ಸಂಜೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ್ದಾರೆ. ಆದರೆ ಇಡೀ ವಿಶ್ವವೇ ಉಗ್ರನೆಂದು ಘೋಷಣೆ ಮಾಡಿರುವ ಉಗ್ರ ಝುವಾಹಿರಿ ನಮಗೆ ಗೊತ್ತಿಲ್ಲ. ಅವರು ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಆದರೆ ಉಗ್ರನ ಬೆಂಬಲ ನಮಗೆ ಬೇಕಿಲ. ನಾವು ಭಾರತೀಯರು, ಉಗ್ರನ ಬೆಂಬಲದ ಅವಶ್ಯಕತೆ ಇಲ್ಲ ಎನ್ನುವ ಹೇಳಿಕೆ ಮುಸ್ಕಾನ್ ತಂದೆಯ ಬಾಯಿಯಿಂದ ಬಂದಿಲ್ಲ. ಇನ್ನೂ ಮುಸ್ಕಾನ್ ಮಾತ್ರ ಯಾವುದರ ಬಗ್ಗೆಯೂ ಚಕಾರ ಎತ್ತಿಲ್ಲ. ಉಗ್ರ ಸಂಘಟನೆ ಲಿಂಕ್ ಬಗ್ಗೆ ತನಿಖೆಗೆ ಆಗ್ರಹ ಹೆಚ್ಚಾಗ್ತಿದೆ.

Related Posts

Don't Miss it !