ಅಕ್ಕನ ಜೊತೆ ಪ್ರೀತಿ.. ತಂಗಿ ಜೊತೆಗೆ ಎಸ್ಕೇಪ್​.. ಇದೂ ಪ್ರೀತೀನಾ..?

ಮಂಡ್ಯ ಎಲ್ಲಾ ರೀತಿಯ ವಿಚಾರಗಳಲ್ಲೂ ಸದಾ ಸುದ್ದಿಯಾಗುತ್ತಲೇ ಇರುತ್ತದೆ. ರಾಜಕೀಯ, ಕೊಲೆ, ದರೋಡೆ, ಪ್ರೀತಿ ಪ್ರೇಮ ಹೀಗೆ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆ ಯಾವುದರಲ್ಲೂ ಮಂಡ್ಯವನ್ನು ಮೀರಿಸುವ ಬೇರೊಂದು ಜಿಲ್ಲೆ ಇಲ್ಲ ಎಂದೇ ಹೇಳಬಹುದು. ಯಾಕಂದ್ರೆ ಶ್ರೀರಂಗಪಟ್ಟಣದಲ್ಲಿ ಪ್ರಕರಣವೊಂದು ಬೆಚ್ಚಿ ಬೀಳಿಸುವಂತಿದೆ. ಅಕ್ಕನನ್ನು ಪ್ರೀತಿ ಮಾಡಿದ್ದ ಯುವಕ ಗಿರೀಶ್​ ಎಂಬಾತ ತಂಗಿಯ ಜೊತೆ ಎಸ್ಕೇಪ್​ ಆಗಿದ್ದಾನೆ. ಅದೂ ಕೂಡ ಆಕೆ ಅಪ್ರಾಪ್ತೆ. ಕಿಡ್ನ್ಯಾಪ್​ ಮಾಡಿರುವ ಆರೋಪ ಹೊತ್ತಿರುವ ಯುವಕ ಅದೇ ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದವನು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನಂದೀಶ್ ಹಾಗೂ ಸವಿತಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಇತ್ತೀಚಿಗೆ ತನ್ನ ಸಂಬಂಧಿಕರಾದ ನಂದೀಶ್ ಮೂಲಕ ಹಿರಿಯ ಮಗಳನ್ನ ವಿವಾಹವಾಗಲು ಗಿರೀಶ್ ಎಂಬಾತ ಕೇಳಿಸಿದ್ದನು. ಆದರೆ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಹಿರಿಯ ಮಗಳು ಚಂದನ ಮದುವೆಗೆ ಒಪ್ಪಿರಲಿಲ್ಲ. ಹಿರಿಯ ಮಗಳು ಮದುವೆಗೆ ಒಪ್ಪದ್ದಕ್ಕೆ ಕಿರಿಯ ಮಗಳನ್ನ ಕಿಡ್ನಾಪ್ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಹಿರಿಯ ಮಗಳು ಚಂದನಾ

ಸೇಡಿಗಾಗಿ ಬಾಲಕಿ ಅಪಹರಣ ಆಗಿದ್ಯಾ..?

ತನ್ನನ್ನು ಮದುವೆ ಆಗಲು ಒಪ್ಪದ ಅಕ್ಕ ಚಂದನಾ ವಿರುದ್ಧ ಸೇಡು ತೀರಿಸಿಕೊಳ್ಳಲು ತಂಗಿಯನ್ನು ಕಿಡ್ನ್ಯಾಪ್​ ಮಾಡಿದ್ದಾರೆ ಎನ್ನುವುದು ನಾಪತ್ತೆಯಾದ ಹುಡುಗಿಯ ಪೋಷಕರಿಂದ ಆರೋಪ. ಆಗಸ್ಟ್ 9 ರಂದು ನಾಪತ್ತೆಯಾಗಿರುವ SSLC ಉತ್ತೀರ್ಣಳಾದ ವಿದ್ಯಾರ್ಥಿನಿ ರಕ್ಷಿತಾಳನ್ನು ನಾಗಮಂಗಲ ಮೂಲದ ಯುವಕ ಗಿರೀಶ್ ಎಂಬಾತ ಕಿಡ್ನ್ಯಾಪ್​ ಮಾಡಿರಬಹುದು ಎಂದು ಆರೋಪ ಮಾಡಿದ್ದಾರೆ. ಈ ಹಿಂದೆ ಮೇ 20ರಂದು ಕೂಡ ಮನೆಯಿಂದ ನಾಪತ್ತೆಯಾಗಿದ್ದ ರಕ್ಷಿತಾ ಮತ್ತೆ ವಾಪಸ್ಸಾಗಿದ್ದಳು ಎಂದೂ ಕೂಡ ಪೊಲೀಸರಿಗೆ ತಿಳಿಸಿದ್ದಾರೆ.

ಆರೋಪಿತ ಯುವಕ ಗಿರೀಶ್
FIR

ರಕ್ಷಿತಾ ಕೂಡ ಲವ್​ ಮಾಡ್ತಿದ್ದ ವಿಚಾರ ಬಯಲು..!

ಶ್ರೀರಂಗಪಟ್ಟಣ ಕೂಡಲಕುಪ್ಪೆ ಗ್ರಾಮದ ದಯಾನಂದನ ಜೊತೆ ಫೋನ್​ನಲ್ಲಿ ಮಾತನಾಡುತ್ತಿದ್ದಳು. ಆತ ಕೂಡ ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ರಕ್ಷಿತಾ ಹಾಗೂ ದಯಾನಂದ್​ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವುದು ಕೂಡ ಇತ್ತೀಚಿಗೆ ತಿಳಿಯಿತು. ಎಸ್​ಎಸ್​ಎಲ್​ಸಿ ಪರೀಕ್ಷೆ ಬಳಿಕ ರಕ್ಷಿತಾಳನ್ನ ಮದುವೆಯಾಗುತ್ತೇನೆ ಎಂದು ಕೇಳಿಕೊಂಡಿದ್ದನು. ಆದರೆ ಮಗಳು ಅಪ್ರಾಪ್ತಳು ಎಂಬ ಕಾರಣಕ್ಕೆ ಮದುವೆ ಮಾಡಿಕೊಡಲು ನಿರಾಕರಿಸಿದ್ದೆವು ಎಂದಿದ್ದಾರೆ. ದಯಾನಂದ್​ ಜೊತೆಗೆ ಮದುವೆ ಮಾಡಿಸುತ್ತೇನೆ ಎಂದು ಪುಸಲಾಯಿಸಿ ಕಿರಿಯ ಮಗಳು ರಕ್ಷಿತಾಳನ್ನ ಕರೆದೊಯ್ದಿರುವ ಅನುಮಾನವಿದೆ ಎಂದಿದ್ದಾರೆ. ರಕ್ಷಿತಾಳನ್ನ ದಯಾನಂದ್​ ಜೊತೆ ಮದುವೆ ಮಾಡಿಸಿದ್ದಾನೋ..? ಅಥವಾ ತಾನೇ ಮದುವೆಯಾಗಿದ್ದಾನೋ..? ಗೊತ್ತಿಲ್ಲ ಎಂದಿದ್ದಾರೆ.

Related Posts

Don't Miss it !