ಬೆಂಗಳೂರಲ್ಲಿ ಗಂಡನನ್ನು ಕೊಂದವಳು ಮಂಡ್ಯದಲ್ಲಿ ಸಿಕ್ಕಿಬಿದ್ದಳು..! ಐನಾತಿ ಲೇಡಿ..

ಸಂಸಾರದಲ್ಲಿ ಗಂಡ ಹೆಂಡತಿ ಕಿತ್ತಾಟ ಉಂಡು ಮಲಗುವ ತನಕ ಇದ್ದರೆ ಮಾತ್ರವೇ ಚೆನ್ನ. ಒಂದು ವೇಳೆ ಅದನ್ನು ಮೀರಿ ಮುನಿಸು ಮುಂದುವರಿದರೆ ಸಂಸಾರದ ದೋಣಿ ಮುಳುಗುವುದು ಖಂಡಿತ. ಮಂಡ್ಯ ಮೂಲದ ಶಿಲ್ಪಾ ಎಂಬಾಕೆ ಕಳೆದ 8 ವರ್ಷಗಳ ಹಿಂದೆ ಮಂಡ್ಯ ಮೂಲದವನೇ ಆದ ಮಹೇಶ್ ಎಂಬಾತನನ್ನು ಮದ್ವೆಯಾಗಿದ್ದರು. ಆ ಬಳಿಕ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ರು. ಆದ್ರೆ ಗಂಡ ಮಹೇಶ್ ಹೇಳಿಕೊಳ್ಳುವಷ್ಟು ಬುದ್ಧಿವಂತನಾಗಿ ಇರಲಿಲ್ಲ. ಕುಡಿತಕ್ಕೆ ದಾಸನಾಗಿದ್ದ ಮಹೇಶ್, ಸಂಸಾರ ನಿರ್ವಹಣೆ ಮಾಡುವಲ್ಲಿಯೂ ವಿಫಲನಾಗಿದ್ದ. ಕೊನೆಗೆ ಹೆಂಡತಿಯನ್ನೇ ಬಿಟ್ಟು ತನ್ನ ಹುಟ್ಟೂರಿನಲ್ಲಿ ಹೋಗಿ ವಾಸ ಮಾಡುತ್ತಿದ್ದ. ಇಷ್ಟೆಲ್ಲದ್ರ ನಡುವೆ ಹಾಗ್ಗಾಗ್ಗೆ ಹೆಂಡತಿ ಮನೆಗೆ ಬರ್ತಿದ್ದ ಮಹೇಶ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸ್ತಿದ್ದ.

ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಮಹೇಶ ಸತ್ತೇ ಹೋಗಿದ್ದ..!

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಪತ್ನಿ ನಿವಾಸಕ್ಕೆ ಬಂದಿದ್ದ ಮಹೇಶ, ಅದೇ ಶೀಲದ ವಿಚಾರಕ್ಕೆ ಹೆಂಡತಿ ಜೊತೆಗೆ ಜಗಳ ಶುರು ಮಾಡಿದ್ದ. ಗಂಡನ ಕಾಟದ ಬಗ್ಗೆ ತನ್ನ ತಾಯಿ ಹಾಗು ತಾಯಿ ಸಂಬಂಧಿಕ ಬಾಲಾಜಿ ಎಂಬಾತನ ಬಳಿ ಎಲ್ಲಾ ಮಾಹಿತಿ ಹಂಚಿಕೊಂಡಿದ್ದ ಶಿಲ್ಪಾ, ಶೀಲದ ವಿಚಾರವಾಗಿ ಜಗಳ ಶುರುವಾಗ್ತಿದ್ದ ಹಾಗೆ ಮುದ್ದೆ ಮಾಡುವ ದೊಣ್ಣೆಯಿಂದ ಗಂಡನಿಗೆ ಗೂಸಾ ಕೊಟ್ಟಿದ್ದಳು. ಸಿಕ್ಕಿದ್ದೇ ಚಾನ್ಸ್ ಎನ್ನುವಂತೆ ಮಹೇಶನ ಅತ್ತೆ ಹಾಗು ಆಕೆಯ ಸಂಬಂಧಿ ಬಾಲಜಿ ಕೂಡ ಮಹೇಶನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ರು. ಕುಡಿತದ ಅಮಲಿನಲ್ಲಿದ್ದ ಮಹೇಶ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ. ಹೆಣ್ಣ ಬಿದ್ದಿದ್ದನ್ನು ಕಂಡು ಕಂಗಾಲಾದ ಶಿಲ್ಪಾ ಮಾಸ್ಟರ್ ಪ್ಲ್ಯಾನ್ ಒಂದನ್ನು ಮಾಡಿ ಅಂತ್ಯಕ್ರಿಯೆಗೂ ವ್ಯವಸ್ಥೆ ಮಾಡಿದ್ದಳು. ಆದರೆ ಕೊನೆಯ ಕ್ಷಣಗಳಲ್ಲಿ ಕೊಲೆ ಹಿಂದಿನ ಸತ್ಯ ಬಹಿರಂಗ ಆಗಿತ್ತು.

ಕೊಲೆಯಾದ ಮಹೇಶ್

ನನ್ನ ಗಂಡನಿಗೆ ಪಿಟ್ಸ್ ಬಂದು ಸತ್ತೇ ಹೋದ ಎಂದು ಗೋಳಾಟ..!

ಕುಡುಕ ಮಹೇಶ ಒದೆ ತಿನ್ನುತ್ತಿದ್ದ ಹಾಗೆ ಕುಸಿದು ಬಿದ್ದು ಸತ್ತೇ ಹೋಗಿದ್ದ. ಹೆಣ ಬೀಳ್ತಿದ್ದ ಹಾಗೆ ಕೊಲೆ ಆರೋಪದಿಂದ ಪಾರಾಗುವ ಬಗ್ಗೆ ಹೆಂಡತಿ ಶಿಲ್ಪಾ ಯೋಚನೆ ಮಾಡಿದ್ದಳು. ಗಂಡನ ಮನೆಗೆ ಕರೆ ಮಾಡಿದ್ದ ಶಿಲ್ಪಾ, ಮಹೇಶ ಕುಡಿದು ಬಂದಿದ್ದಾಗ ಪಿಟ್ಸ್ ಬಂದು ಸತ್ತೇ ಹೋದ ಎಂದು ಕಣ್ಣೀರು ಹಾಕಿದ್ದಳು. ಸೊಸೆಯ ಮಾತನ್ನು ನಂಬಿದ್ದ ಮಹೇಶ್ ಮನೆಯವರು ಶವ ತೆಗೆದುಕೊಂಡು ಊರಿಗೆ ಬನ್ನಿ, ಅಂತ್ಯಸಂಸ್ಕಾರ ಮಾಡೋಣ ಎಂದಿದ್ದರು. ಕೊಲೆ ಆಪಾದನೆಯಿಂದ ಬಚಾವ್ ಆದೆ ಎಂದುಕೊಂಡಿದ್ದ ಶಿಲ್ಪಾ ಗಂಡನ ಹೆಣದೊಂದಿಗೆ ಮಂಡ್ಯಕ್ಕೆ ತಲುಪಿದ್ದಳು. ಇನ್ನಿಬ್ಬರು ಕೊಲೆಪಾತಕರೂ ಕೂಡ ಹೆಣದ ಹೊತೆಗೆ ಮಹೇಶನ ಹುಟ್ಟೂರಿಗೆ ಹೋಗಿದ್ದರು. ಆದರೆ ಇನ್ನೇನು ಮಣ್ಣಿನಲ್ಲಿ ಮಹೇಶನ ಶವ ಮುಚ್ಚಬೇಕು ಅನ್ನೋ ಅಷ್ಟರಲ್ಲಿ ಮಹೇಶನ ಶವದ ಮೇಲಿನ ಗಾಯಗಳು ಕಾಣಿಸಿದ್ದವು. ಕೂಡಲೇ ಪೊಲೀಸರಿಗೆ ಮಾಹಿತಿ ಕೊಡಲಾಯ್ತು. ಕೊಲೆಪಾತಕರು ಕೋಳಕ್ಕೆ ಕೈ ಒಡ್ಡುವಂತಾಯ್ತು.

ಪೊಲೀಸ್ ಭಾಷೆಗೆ ಸತ್ಯವನ್ನೆಲ್ಲಾ ಕಕ್ಕಿದಳು ಕೊಲೆಗಾತಿ ಶಿಲ್ಪಾ..!

ಗಂಡನನ್ನು ಕೊಲೆ ಮಾಡಿದ್ದ ಮಾಟಗಾತಿ ಶಿಲ್ಪಾ ಏನೂ ಅರಿಯದ ಮುಗ್ದೆಯಂತೆ ಕಣ್ಣೀರು ಹಾಕುತ್ತಾ ಅಂತ್ಯಸಂಸ್ಕಾರ ಮಾಡುವುದಕ್ಕೆ ಮುಂದಾಗಿದ್ದಳು. ಕೊನೆಯಲ್ಲಿ ಶವದ ಮೇಲೆ ಇದ್ದ ಬಟ್ಟೆಯನ್ನು ತೆಗೆದು ಹೊಸ  ಬಟ್ಟೆ ಹಾಕುವುದು ಹಳೇ ಮೈಸೂರು ಭಾಗದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ವೇಳೆ ಶವದ ಮೇಲಿನ ಗಾಯದ ಕಲೆಗಳು ಕಾಣಿಸಿದ್ರಿಂದ ಪಿಟ್ಸ್ ಬಂದು ಸಾವನ್ನಪ್ಪಿರುವುದು ಅಲ್ಲ ಎ ನ್ನುವ ತೀರ್ಮಾನಕ್ಕೆ ಸ್ಥಳೀಯರು ಬಂದಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡ್ತಿದ್ದ ಹಾಗೆ ಪೊಲೀಸ್ರು ಪತ್ನಿ ಶಿಲ್ಪಾಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ರು. ಪೊಲೀಸರ ಭಾಷೆ ಬಳಸುವ ಮುನ್ನವೇ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದ ಶಿಲ್ಪಾ, ತನ್ನ ಜೊತೆಗೆ ಸಹಕಾರ ನೀಡಿದ್ದ ತಾಯಿ ಕೆಂಪದೇವಮ್ಮ ಹಾಗೂ ಸಂಬಂಧಿಕ ಬಾಲಾಜಿ ಕಡೆಗೂ ಬೆರಳು ತೋರಿಸಿದ್ದಳು. ಮಂಡ್ಯ ಪೊಲೀಸರು ಕೋಣನಕುಂಟೆ ಪೊಲೀಸರನ್ನು ಸಂಪರ್ಕಿಸಿ ಆರೋಪಿಗಳ ಜೊತೆಗೆ ಕೇಸ್ ಕೂಡ ವರ್ಗಾವಣೆ ಮಾಡಿದ್ದಾರೆ. ಬೆಂಗಳೂರಲ್ಲಿ ಕೊಂದ ಕೊಲೆಪಾತಕಿಗಳು ಮಂಡ್ಯದಲ್ಲಿ ಸಿಕ್ಕಿಬಿದ್ದಂತಾಗಿದೆ

Related Posts

Don't Miss it !