ಮಂಡ್ಯದ ಅಜ್ಜಿ, ತುಮಕೂರಲ್ಲಿ ಕೊಲೆ, ಬಾಗಲಕೋಟೆಯಲ್ಲಿ ತಲೆ..!

ಮಂಡ್ಯ ಜಿಲ್ಲೆ ತೂಬಿನಕೆರೆ ನಿವಾಸಿ ನಿಂಗಮ್ಮ. ಇಬ್ಬರು ಗಂಡು ಮಕ್ಕಳು. ಕಿರಿಯ ಮಗ ಮಂಡ್ಯದಲ್ಲೇ ವಾಸ ಮಾಡಿದ್ರೆ ಹಿರಿಯ ಮಗ ತುಮಕೂರಿನಲ್ಲಿ ವಾಸವಿದ್ದ, ಕೆಲವೇ ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಆದರೂ ತನ್ನ ಸಂಸಾರವನ್ನು ಅಲ್ಲೇ ಬಿಟ್ಟಿದ್ದ. ಅಜ್ಜಿ ನಿಂಗಮ್ಮ ಮಗ ಸತ್ತ ಮೇಲೂ ಆಗಾಗ್ಗೆ ತುಮಕೂರಿಗೆ ಹೋಗಿ ಸೊಸೆ ಬಳಿ ಹಣ ಪಡೆದು ಬರುತ್ತಿದ್ದರು. ಆದರೆ ಈ ಬಾರಿ ಸೊಸೆ ಬಳಿ ಹಣ ಕೇಳಲು ಹೋದವರು ಹೆಣವಾಗಿದ್ದಾರೆ. ಅದೂ ಕೂಡ ತುಮಕೂರಿನಲ್ಲಿ ಕೊಲೆ, ಬಾಗಲಕೋಟೆಯಲ್ಲಿ ಅಜ್ಜಿಯ ತಲೆ. ಪೊಲೀಸರಿಗೆ ಶಾಕ್​ ಮೇಲೆ ಶಾಕ್​.

ಅಜ್ಜಿಯ ಕೊಲೆ ಆಗಿದ್ದು ಹೇಗೆ..?

70 ವರ್ಷದ ಅಜ್ಜಿ ನಿಂಗಮ್ಮ ಸೊಸ ಬಳಿ ಹಣ ಕೇಳಲು ಬಂದಾಗ ಜಗಳವಾಗಿದೆ ಎನ್ನಲಾಗಿದೆ. ಈ ವೇಳೆ ಸೊಸೆ ಲತಾ ಸ್ನೇಹಿತ ಬಿಎಂಟಿಸಿ ಬಸ್​ ಕಂಡೆಕ್ಟರ್​ ಬಾಲಚಂದ್ರ ಹಣ ಕೊಡಿಸುತ್ತೇನೆ ಎಂದು ಭರವಸೆ ನೀಡಿ ತನ್ನ ಮನೆಗೆ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಆದರೆ ಬಾಲಚಂದ್ರ ಲತಾಳಿಗೆ ಯಾವ ರೀತಿಯ ಫ್ರೆಂಡ್​, ಅತ್ತೆ ಸೊಸೆ ಜಗಳದಲ್ಲಿ ಮಧ್ಯ ಬಂದಿದ್ದೇಕೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಹಣ ಕೊಡಿಸುವ ಉಪಾಯ ಮಾಡಿ ಮನೆಗೆ ಕರೆದೊಯ್ದ ಕಂಡೆಕ್ಟರ್​ ಬಾಲಚಂದ್ರ ಅಜ್ಜಿಗೆ ಟಿಕೆಟ್​ ಕೊಟ್ಟಿದ್ದಾನೆ. ಬಾಲಚಂದ್ರ ಮನಸೋ ಇಚ್ಛೆ ಥಳಿಸಿದ ಕೂಡಲೇ ಅಜ್ಜಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಹೀರೆಹಳ್ಳಿ ರೈಲ್ವೇ ಟ್ರಾಕ್​ ಮೇಲೆ ಮಲಗಿಸಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.

ಕೊಲೆಯಾದ ಅಜ್ಜಿ ನಿಂಗಮ್ಮ

ತಲೆ ಬಾಗಲಕೋಟೆ ತಲುಪಿದ್ದು ಹೇಗೆ..?

ಹಿರೇಹಳ್ಳಿ ರೈಲ್ವೆ ಟ್ರಾಕ್​ ಮೇಲೆ ಮಲಗಿಸಿದ ಮೇಲೂ ಕಂಡೆಕ್ಟರ್​ ಬಾಲಚಂದ್ರನಿಗೆ ಭಾರೀ ಅನುಮಾನ. ಅಜ್ಜಿ ಸತ್ತಳೋ ಎದ್ದು ಹೋದಳೋ ಎಂದು. ಹೀಗಿರುವಾಗ ರೈಲು ಹೋದ ಬಳಿಕ ಹಳ ಬಳಿಗೆ ಬಂದು ನೋಡಿದ್ದಾನೆ. ರುಂಡ ಮುಂಡ ಬೇರ್ಪಟ್ಟಿವೆ. ಮುಖದ ಗುರುತು ಸಿಕ್ಕಿದರೆ ಅಜ್ಜಿಯ ಮೂಲ ಪತ್ತೆಯಾಗುತ್ತದೆ, ಆ ಬಳಿಕ ಪೊಲೀಸರ ವಿಚಾರಣೆಯ ಸಂಕಷ್ಟ ಯಾಕೆ ಬೇಕು ಎಂದು ಯೋಚಿಸಿದ ಬಾಲಚಂದ್ರ ಅಜ್ಜಿಯ ತಲೆಯನ್ನು ಪ್ಯಾಕ್​ ಮಾಡಿ ತುಮಕೂರಿನಿಂದ ಉತ್ತರ ಕರ್ನಾಟಕ ಕಡೆಗೆ ತೆರಳುತ್ತಿದ್ದ ಗ್ರಾನೈಟ್​ ಲಾರಿ ಮೇಲಕ್ಕೆ ಎಸೆದಿದ್ದಾನೆ. ಅಜ್ಜಿಯ ತಲೆ ಸೇಫಾಗಿ ಟ್ರಾವೆಲ್​ ಮಾಡಿದೆ.

ಕೊಲೆಗಾರ ಕಂಡೆಕ್ಟರ್​ ಬಾಲಚಂದ್ರ

ಲಾರಿ ಚಾಲಕ ಮೇಲೆ ಕೊಲೆ ಕೇಸ್​ ಬುಕ್​..!

ಪೊಲೀಸರು ಮಾಡುವ ಅನರ್ಥವೇ ಹೀಗೆ. ಲಾರಿಯಲ್ಲಿದ್ದ ಗ್ರಾನೈಟ್​ ಕಲ್ಲು ಇಳಿಸಿದ ಬಳಿಕ ಅಜ್ಜಿಯ ತಲೆ ಸಿಕ್ಕಿದೆ. ಕೂಡಲೇ ಚಾಲಕ ಠಾಣೆಗೆ ಬಂದು ಮಾಹಿತಿ ನೀಡಿದ್ದಾನೆ. ಪೊಲೀಸರು ಕೂಡಲೇ ಲಾರಿ ಚಾಲಕನ ಮೇಲೆ ಕೊಲೆ ಕೇಸ್​ ಬುಕ್​ ಮಾಡಿ, ಲಾರಿ ಸೀಜ್​ ಮಾಡಿದ್ದಾರೆ. ತಲೆಯನ್ನು ಪೊಲೀಸರಿಗೆ ಒಪ್ಪಿಸದೆ ಅಲ್ಲೆ ಎಲ್ಲಾದರೂ ಹಾಳು ಗುಂಡಿಗೆ ಹಾಕಿದ್ದರೆ ಇದ್ಯಾವುದೂ ಗೊತ್ತೇ ಆಗುತ್ತಿರಲಿಲ್ಲ. ಆದರೆ ನಿಯತ್ತಾಗಿ ತಲೆ ಬಗ್ಗೆ ಮಾಹಿತಿ ಇಲ್ಲದ ಲಾರಿ ಡ್ರೈವರ್​ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಕೇಸ್​ ಹಾಕಿದ್ದಾರೆ. ಅಷ್ಟರೊಳಗಾಗಿ ಮಂಡ್ಯದಲ್ಲಿದ್ದ ಕಿರಿಯ ಮಗ ಸತೀಶ್​ ಅವ್ವನನ್ನು ಹುಡುಕಿಕೊಂಡು ತುಮಕೂರಿಗೆ ಬಂದಿದ್ದ. ತಾಯಿ ಕಾಣದೆ ಇದ್ದಾಗ ನೇರವಾಗಿ ಪೊಲೀಸ್​ ಠಾಣೆಗೆ ನಾಪತ್ತೆ ದೂರು ನೀಡಿದ್ದ. ಅಷ್ಟರಲ್ಲಿ ಪೊಲೀಸರಿಗೆ ರುಂಡವಿಲ್ಲದ ಮಹಿಳೆಯ ದೇಹ ಸಿಕ್ಕಿತ್ತು. ಪೊಲೀಸ್​ ಠಾಣೆಗಳಲ್ಲಿ ಮಾಹಿತಿ ವಿನಿಮಯ ಮಾಡಿಕೊಂಡಾಗ ಬಾಗಲಕೋಟೆಯ ಇಳಕಲ್​ನಲ್ಲಿ ರುಂಡ ಸಿಕ್ಕಿತ್ತು. ಎರಡನ್ನು ತಾಳೆ ಮಾಡಿದಾಗ ನಿಂಗಮ್ಮನ ದೇಹ ಪತ್ತೆಯಾಗಿತ್ತು.

ಖತರ್ನಾಕ್​ ಸೊಸೆ ಲತಾ

ಸ್ನೇಹಿತನ ಜೊತೆ ಸೇರಿ ಅತ್ತೆ ಕೊಂದ ಸೊಸೆ..!

ಪೊಲೀಸರು ಅಪಘಾತ ಎನ್ನಲು ರುಂಡ ಮುಂಡ ಬೇರೆಯಾದ ಬಳಿಕ ಇಳಕಲ್​ಗೆ ಹೋಗಿದ್ದು ಹೇಗೆ ಎಂದು ಚಿಂತಿಸತೊಡಗಿದರು. ಆ ಬಳಿಕ ಹಿರೇಹಳ್ಳ ಹಾಗೂ ಸೊಸೆ ಮನೆ ಆಸುಪಾಸಿನ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ರು. ಈ ವೇಳೆ ಕಂಡೆಕ್ಟರ್​ ಬಾಲಚಂದ್ರನ ಮೇಲೆ ಪೊಲೀಸರಿಗೆ ಶಂಕೆ ಮೂಡಿತ್ತು. ಠಾಣೆಗೆ ಕರೆತಂದು ಪೊಲೀಸ್​ ಭಾಷೆಯಲ್ಲಿ ಮಾತನಾಡಿಸಿದಾಗ ಅತ್ತೆ ಸೊಸೆ ಜಗಳ, ತಮ್ಮಿಬ್ಬರ ಸ್ನೇಹ, ಅಜ್ಜಿ ಮೇಲೆ ಹಲ್ಲೆ, ಅಪಘಾತ ಎಂಬಂತೆ ಬಿಂಬಿಸಿದ್ದು, ತಲೆಯನ್ನು ಪ್ಯಾಕ್​ ಮಾಡಿ ಲಾರಿಗೆ ಎಸೆದಿದ್ದು, ಎಲ್ಲವನ್ನೂ ಬಾಯ್ಬಿಟ್ಟಿದ್ದಾನೆ. ಆದರೆ ಅತ್ತೆ ಕೊಲೆಗೆ ಕುಮ್ಮಕ್ಕು ಕೊಟ್ಟ ಲತಾ ಮಾತ್ರ ಎಸ್ಕೇಪ್​ ಆಗಿದ್ದಾಳೆ. ರೈಲ್ವೇ ಪೊಲೀಸ್ರು ಬಾಲಚಂದ್ರನನ್ನು ಬಂಧಿಸಿದ್ದು, ಆಂಟಿ ಲತಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Related Posts

Don't Miss it !