ನಾಗಮಂಗಲ ರಕ್ತಚರಿತ್ರೆ..! ಮಂಡ್ಯದಲ್ಲಿ ಅಕ್ರಮ ಪ್ರಶ್ನಿಸಿದ್ರೆ ಕೊಲ್ಲುವುದೇ ಅಸ್ತ್ರ..!?

ಮಂಡ್ಯ ಜಿಲ್ಲೆ ಎಲ್ಲಾ ವಿಚಾರಗಳಲ್ಲೂ ಗಮನ ಸೆಳೆಯುವ ಜಿಲ್ಲೆ ಎಂದರೆ ತಪ್ಪಲ್ಲ. ಇಲ್ಲಿನ ರಾಜಕೀಯ, ಬಾಷೆ, ಮುಗ್ದತೆ ಜೊತೆಗೆ ಕ್ರೂರತೆಯೂ ಮಂಡ್ಯ ಜನರಲ್ಲಿ ಹಾಸು ಹೊಕ್ಕಾಗಿದೆ ಎನ್ನುವುದನ್ನು ಈ ಸುದ್ದಿಯೇ ನಿಮ್ಮ ಮುಂದಿಡುತ್ತಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ 31 ವರ್ಷದ ಮೋಹನ್​ ಎಂಬಾತನನ್ನು ಕಿಡ್ನ್ಯಾಪ್​ ಮಾಡಿ ಹಾಸನ ಜಿಲ್ಲೆ ಹೊಳೆ ನರಸೀಪುರದ ಬಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಅಲ್ಲೇ ಗುಡ್ಡಗಾಡು ಪ್ರದೇಶದಲ್ಲಿ ಶವವನ್ನು ಹೂತು ಹಾಕಿದ್ದ ಪ್ರಕರಣ, ಕುಟುಂಬಸ್ಥರ ಜಾಣ್ಮೆಯಿಂದ ಬಯಲಿಗೆ ಬಂದಿದೆ. ಮೊದಲಿಗೆ ಕೇಸ್​​ ತೆಗೆದುಕೊಳ್ಳಲು ನಿರಾಕರಿಸಿದ್ದ ಬಿಂಡಿಗನವಿಲೆ ಪೊಲೀಸರು ಪೆಚ್ಚು ಮೋರೆ ಹಾಕಿಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ತೋಟಕ್ಕೆ ಹೋದ ಮೋಹನ ನಾಪತ್ತೆ ಆಗಿದ್ದ..!

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಮೋಹನ್​, ಕಳೆದ ಭಾನುವಾರ ತೋಟದ ಬಳಿಗೆ ಹೋಗಿ ಬರುವುದಾಗಿ ಹೆಂಡತಿಗೆ ತಿಳಿಸಿ ಹೋಗಿದ್ದ. ಆದರೆ ಮನೆಗೆ ವಾಪಸ್​ ಆಗಿರಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು, ಬಿಂಡಿಗನವಿಲೆ ಠಾಣೆಗೆ ದೂರು ದಾಖಲು ಮಾಡುವ ಪ್ರಯತ್ನ ನಡೆಸಿದ್ರು. ಆದರೆ ಪೊಲೀಸರು ದೂರು ತೆಗೆದುಕೊಳ್ಳಲಿಲ್ಲ. ಪೊಲೀಸರು ನಿರ್ಲಕ್ಷ್ಯ ಮಾಡದೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರೆ ಆರೋಪಿಗಳು ಕೊಲೆ ಮಾಡುವ ಮುನ್ನವೇ ಅರೆಸ್ಟ್​ ಮಾಡಬಹುದಿತ್ತು. ಆದರೆ ಬಿಂಡಿಗನವಿಲೆ ಪೊಲೀಸ್​ ಠಾಣೆಯಲ್ಲಿ ಹಣಕ್ಕಾಗಿ ಬಾಯಿ ಬಿಡುವ ಖಾಕಿಪಡೆ ದೂರು ಕೊಡಲು ಬಂದವರಿಗೆ ಸಬೂಬು ಹೇಳಿ ಕಳುಹಿಸಿತ್ತು. ಆದರೆ ಪಟ್ಟು ಬಿಡದೆ ಮತ್ತೆ ಪೊಲೀಸ್​ ಠಾಣೆಗೆ ಹೋದಾಗ ಪೊಲೀಸರು ಮಿಸ್ಸಿಂಗ್​ ದೂರು ದಾಖಲಿಸಿಕೊಂಡು ಸುಮ್ಮನಾಗಿದ್ದರು.

ಓದಿ: ಕಟ್ಟಡದಿಂದ ಹಾರಿದ ಯುವತಿ ಸಾವು, ಯುವಕ ಸೇಫ್​..! ಇವರು ಪ್ರೇಮಿಗಳಾ..?

ಮೋಹನ್​ಗಾಗಿ ಕುಟುಂಬಸ್ಥರೇ ತಲಾಷ್​ ಮಾಡಿದ್ದು..!

ಬಿಂಡಿಗನವಿಲೆ ಪೊಲೀಸರು ನಿಷ್ಕಾಜಿಯಿಂದ ಬೇಸತ್ತ ಕುಟುಂಬಸ್ಥರು ಮನೆಗೆ ವಾಪಸ್​ ಆಗಿ ಮೋಹನ್​ಗಾಗಿ ಹುಡುಕಾಟ ನಡೆಸಿದ್ರು. ಮೋಹನ್​ ದೊಡ್ಡಪ್ಪನ ಮಗ ಕುಮಾರ್​ ಹಗೆ ಸಾಧಿಸುತ್ತಿದ್ದ ಬಗ್ಗೆಯೂ ಪೊಲೀಸರಿಗೆ ಹೇಳಿಕೆ ಕೊಡಲಾಗಿತ್ತು. ಆತನೇ ನಮ್ಮ ಮಗನನ್ನು ಏನಾದರೂ ಮಾಡಿರಬಹುದು ಎಂದು ಮೋಹನ್​ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟಾದರೂ ಎಚ್ಚೆತ್ತುಕೊಳ್ಳದ ಗಟ್ಟಿ ಚರ್ಮದ ಬಿಂಡಿಗನವಿಲೆ ಪೊಲೀಸರರಿಗೆ, ಕುಟುಂಬಸ್ಥರು ನೀಡಿದ ಸಿಟಿಸಿವಿ ದೃಶ್ಯ ಕಂಡ ಬಳಿಕ ಜ್ಞಾನೋದಯ ಆಗಿತ್ತು. ಅದರಲ್ಲಿ ಮೋಹನ್​ ಬಳಸುತ್ತಿದ್ದ ಬೈಕ್​ ಅನ್ನು ಕುಮಾರ್​ ಪುತ್ರ ತೇಜಸ್​ ಎಂಬಾತ ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಅದೇ ಸಮಯದಲ್ಲಿ ಕುಮಾರ್​ ಕಾರು ಅಲ್ಲಿ ಸುತ್ತಾಡಿತ್ತು. ಈ ದೃಶ್ಯ ಕಂಡ ಬಳಿಕ ಅಖಾಡಕ್ಕೆ ಇಳಿದ ಪೊಲೀಸರು ಮೊಬೈಲ್​ ಟವರ್​ ಟ್ರೇಸ್​ ಮಾಡಿದ್ದರು. ಅದು ಹಾಸನ ಜಿಲ್ಲೆ ಹೊಳೆನರಸೀಪುರಕ್ಕೆ ಭಂಟರ ತಳಾಲು ಗ್ರಾಮದ ಸಮೀಪಕ್ಕೆ ತಂದು ನಿಲ್ಲಿಸಿತ್ತು.

ಮೃತನ ತಾಯಿ & ಪತ್ನಿ

ಕೊಂದವನು ಮಾಜಿ ಸಚಿವ ಚಲುವರಾಯಸ್ವಾಮಿ ಆಪ್ತ..!

ಕುಮಾರ್​ ಮಾಜಿ ಸಚಿವ ಎನ್​ ಚಲುವರಾಯಸ್ವಾಮಿ ಆಪ್ತ ಎನ್ನುವ ವಿಚಾರ ಎಲ್ಲಾ ಕಡೆಗೂ ಹರಡುತ್ತಿದೆ. ಅದು ಸತ್ಯ ಕೂಡ ಹೌದು. ಆದರೆ ಈ ಕೊಲೆಗೂ ಚಲುವರಾಯಸ್ವಾಮಿ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಕೊಲೆಗೆ ಎರಡು ಪ್ರಮುಖ ಕಾರಣಗಳು ಇವೆ. ಅದರಲ್ಲಿ ಮೊದಲನೆಯದು ಕಳೆದ ಒಂದೂವರೆ ವರ್ಷಗಳ ಹಿಂದೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸೋಲು ಕಂಡಿದ್ದು. ಎರಡನೆಯದು ಕುಮಾರ್​ ಜಮೀನಿನಲ್ಲಿ ನಡೆಸುತ್ತಿದ್ದ ಅಕ್ರಮ ಕ್ರಷರ್​ ಮೇಲೆ ಕಳೆದ ಕೆಲವು ದಿನಗಳ ಹಿಂದೆ ಅಧಿಕಾರಿಗಳು ರೇಡ್​ ಮಾಡಿದ್ದು. ಈ ಎರಡರಲ್ಲೂ ಮೋಹನ್​ ಕೈವಾಡ ಇದೆ ಎನ್ನುವ ನಿರ್ಧಾರಕ್ಕೆ ಬಂದಿದ್ದ ಕುಮಾರ್​, ತನ್ನ ಜಮೀನಿನಲ್ಲಿ ಕ್ರಷರ್​ ನಡೆಸುತ್ತಿದ್ದ ರಾಜು ಜೊತೆಗೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಕುಣಿಗಲ್​ ಮೂಲದ ರೌಡಿಶೀಟರ್​ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದರು. ಇದೀಗ ಸಿಕ್ಕಿ ಬಿದ್ದಿದ್ದಾರೆ.

ಈಗಲಾದ್ರೂ ಕಠಿಣ ಶಿಕ್ಷೆ ಕೊಡಿಸ್ತಾರಾ ಪೊಲೀಸ್ರು..?

ನಾಗಮಂಗಲದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಅಕ್ಕಪಕ್ಕದ ಊರಿನ ಗ್ರಾಮಸ್ಥರು ಮನೆಗಳು ನಡುಗುತ್ತಿವೆ ಎಂದು ಸಾಕಷ್ಟು ಬಾರಿ ದೂರು ಕೊಟ್ಟರೂ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇದಕ್ಕೆ ಪ್ರಮುಖ ಕಾರಣ ಕ್ರಷರ್​ ನಡೆಸುತ್ತಿರುವವರು ರಾಜಕೀಯ ನಾಯಕರ ಹಿಂಬಾಲಕರು. ಈ ರೀತಿಯ ಘಟನೆಗಳ ನಡೆದಾಗ ಅಧಿಕಾರಿಗಳ ಮೌಕಿಕ ಸೂಚನೆ ಮೇರೆಗೆ ಕ್ರಷರ್​ಗಳ ಶಬ್ದ ಕೊಂಚ ಇಳಿಮುಖ ಆಗುತ್ತದೆ. ಆದರೆ ಕೆಲವೇ ದಿನಗಳಲ್ಲಿ ಮತ್ತ ಅಬ್ಬರಿಸಲು ಶುರು ಮಾಡುತ್ತದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳ ಬೆಂಬಲದಿಂದ ಮೆರೆಯುವ ಪುಂಡರಿಗೆ ಕಠಿಣ ಶಿಕ್ಷೆ ಆಗಬೇಕಿದೆ. ಚಿಕ್ಕ ಬಯಸ್ಸಿನಲ್ಲೇ ಮಗನನ್ನು ಕಳೆದುಕೊಂಡ ಮೋಹನ್​ ಪೋಷಕರು ಹಾಗೂ ಮೋಹನ್​ ಪತ್ನಿಗೆ ಬೃಹತ್​ ಪರಿಹಾರ ಒದಗಿಸಿಕೊಡಬೇಕಿದೆ.

Related Posts

Don't Miss it !