ಮಂಗಳಮುಖಿಯನ್ನು ಮಂಚಕ್ಕೆ ಕರೆದು ಕೊಲೆಗಾರನಾದ ಕಥೆ..!

ಸಿಲಿಕಾನ್​ ಸಿಟಿ ಎಂಬ ಹೆಸರಿನಿಂದ ಬೀಗುವ ಬೆಂಗಳೂರು, ರಾತ್ರಿಯಾದರೆ ಬಣ್ಣ ಬಣ್ಣದ ಲೋಕವೇ ತೆರೆದುಕೊಳ್ಳುತ್ತದೆ. ಪಬ್​, ಡ್ಯಾನ್ಸ್​ ಬಾರ್​ ಜೊತೆಗೆ ಎಗ್ಗಿಲ್ಲದೆ ನಡೆಯುವುದು ವೇಶ್ಯಾವಾಟಿಕೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹೊರಹೊಲಯದಲ್ಲಿ ಸಾಕಷ್ಟು ವೇಶ್ಯಾವಾಟಿಕೆ ಅಡ್ಡೆಗಳು ಹೆಚ್ಚಾಗಿವೆ. ಅದರಲ್ಲೂ ಲಾರಿ, ಟೆಂಪೋ ಟ್ರಾವಲರ್ಸ್​​ ಡ್ರೈವರ್​ಗಳನ್ನು ಟಾರ್ಗೆಟ್​ ಮಾಡಿ ಹೆದ್ದಾರಿಗಳಲ್ಲಿ ಮಂಗಳಮುಖಿಯರು ನಿಲ್ಲುವುದನ್ನು ಕಾಣಬಹುದು. ಬಣ್ಣ ಬಣ್ಣದ ಉಡುಗೆ ತೊಡುಗೆ ತೊಟ್ಟು ಆಕರ್ಷಿಸುವ ದೃಶ್ಯಗಳು ಸರ್ವೇ ಸಾಮಾನ್ಯ. ಇದೇ ರೀತಿ ಮಂಗಳಮುಖಿ ಜೊತೆಗೆ ಮಂಚ ಹಂಚಿಕೊಳ್ಳಲು ಮನಸ್ಸು ಮಾಡಿದ ಯುವಕ, ಜೈಲು ಪಾಲಾಗಿದ್ದಾನೆ. ಸುಖ ಪಡೆಯಲು ಲಾಡ್ಜ್​​ಗೆ ಬಂದವಳನ್ನೇ ಕೊಲೆ ಮಾಡಿ ಕೊಲೆಗಾರನಾಗಿದ್ದಾನೆ.

ಲಾಡ್ಜ್​​ಗೆ ಬಂದವಳಿಂದ ಚುಚ್ಚಿ ಕೊಂದಿದ್ಯಾಕೆ ಕೀಚಕ..!

ಬೆಂಗಳೂರಿನಲ್ಲಿ ಮಂಗಳಮುಖಿ ಜೊತೆಗೆ ಸುಖ ಅನುಭವಿಸುವ ಉದ್ದೇಶದಿಂದ ಕಾಟನ್​ಪೇಟೆಯ ಶಿವಾಸ್ ಲಾಡ್ಜ್​ಗೆ ಹೋದವನು ಹಿಂದಿರುಗಿ ಬರುವ ವೇಳೆಗೆ ಕೊಲೆಗಾರನಾಗಿದ್ದ. ಮಂಗಳಮುಖಿ ಜೊತೆಗೆ ಸಂತಸದ ಕ್ಷಣಗಳನ್ನು ಕಳೆದವನ್ನು ಹಲ್ಲೆ ಮಾಡಿದ್ಯಾಕೆ..? ಎನ್ನುವ ಪ್ರಶ್ನೆ ಪೊಲೀಸರನ್ನು ಕಾಡಿತ್ತು. ಅದಕ್ಕೂ ಮೊದಲು ಲಾಡ್ಜ್​ ಸಿಬ್ಬಂದಿಗೂ ಇದೇ ಅನುಮಾನ ಕಾಡಿತ್ತು. ಆದರೆ ಲಾಡ್ಜ್​ಗೆ ಬಂದು ಪಲ್ಲಂಗ ಏರಿದ ಬಳಿಕ ಕೊಲೆ ಮಾಡಿದ ಆಸಾಮಿ ಹೇಳಿದ ಮಾತು ಕೇಳಿ ಎಲ್ಲರೂ ಕ್ಷಣ ಕಾಲ ದಿಗಿಲು ಬಡಿದಂತೆ ನಿಂತು ಬಿಟ್ರು. ಚಾಕುವಿನಿಂದ ಐದಾರು ಕಡೆ ಇರಿದಿದ್ದ ಯುವಕನ್ನು ಕಾಟನ್​ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದರು. ಗಾಯಗೊಂಡ ಇಬ್ಬರು ಮಂಗಳಮುಖಿಯರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.

ಒಬ್ಬಳ ಜೊತೆಗ ಮಂಚ ಏರಿದ ಮೇಲೆ ಇನ್ನೊಬ್ಬಳ ಎಂಟ್ರಿ..!

ಯುವಕ ಹಾಗೂ ಓರ್ವ ಮಂಗಳಮುಖಿ ಒಪ್ಪಂದ ಮಾಡಿಕೊಂಡು ಲಾಡ್ಜ್​ಗೆ ಹೋಗಿದ್ದರು ಎನ್ನಲಾಗಿದೆ. ಎಲ್ಲವೂ ಮುಗಿದ ಬಳಿಕ ಮಾತಿನಂತೆ 3 ಸಾವಿರ ಹಣವನ್ನೂ ಕೊಟ್ಟಿದ್ದಾನೆ. ಆದರೆ ಆ ಮಂಗಳಮುಖಿ ಹೆಚ್ಚು ಹಣ ಕೊಡುವಂತೆ ಒತ್ತಾಯ ಮಾಡಿದ್ದಾಳೆ. ಕೊಡದಿದ್ದರೆ ರೂಮ್​ನಿಂದ ಹೊರಕ್ಕೆ ಹೋಗಲು ಬಿಡೋದಿಲ್ಲ ಎಂದು ಹಠ ಹಿಡಿದಿದ್ದಾಳೆ. ಮತ್ತೋರ್ವ ಮಂಗಳಮುಖಿಯನ್ನೂ ಫೋನ್​ ಮಾಡಿ ಲಾಡ್ಜ್​ಗೆ ಕರೆಸಿಕೊಂಡಿದ್ದಾಳೆ. ಆಗಲೇ ಲಾಡ್ಜ್​ಗೆ ಗಲಾಟೆ ಶುರುವಾಗಿದೆ. ಈ ವೇಳೆ ಚಾಕುವಿನಿಂದ 25 ವರ್ಷದ ಅರ್ಚನಾ ಹಾಗೂ 30 ವರ್ಷದ ಸಂಜನಾ ಎಂಬುವಳಿಗೆ ಚಾಕುವಿನಿಂದ ಇರಿದಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಅರ್ಚನಾ ಸಾವನ್ನಪ್ಪಿದ್ದಾಳೆ.

ಚಾಕು ತಂದಿದ್ದು ಯಾರು..? ಮಂಗಳಮುಖಿಯೇ..?

ಮಂಚದ ವಿಚಾರದಲ್ಲಿ ಗಲಾಟೆ ನಡೆದಿದೆ. ಬಂಧಿತ ಯುವಕನಿಗೇ ಯಾವುದೇ ಅಪರಾಧದ ಹಿನ್ನಲೆಯಿಲ್ಲ ಎಂದು ಪೊಲೀಸ್​ ಮೂಲಗಳು ಖಚಿತಪಡಿಸಿವೆ. ಆದರೆ ಲಾಡ್ಜ್​ ಒಳಕ್ಕೆ ಚಾಕು ಬಂದಿದ್ದು ಹೇಗೆ..? ಯುವಕ ಚಾಕು ಹಿಡಿದು ಪಲ್ಲಂಗ ಏರಲು ಬಂದಿದ್ದನೇ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಮೂಲಗಳ ಪ್ರಕಾರ, ಮಂಗಳಮುಖಿ ತನ್ನ ಇನ್ನೊಬ್ಬ ಗೆಳತಿಯನ್ನು ಲಾಡ್ಜ್​ಗೆ ಕರೆಸಿಕೊಂಡು ಹೆಚ್ಚಿನ ಹಣಕ್ಕೆ ಧಮ್ಕಿ ಹಾಕಿದ್ದಾರೆ. ಆ ವೇಳೆ ಕೊಡದಿದ್ದರೆ ಚಾಕು ಇರಿಯುವುದಾಗಿ ಬೆದರಿಸಿದ್ದಾರೆ. ಈ ವೇಳೆ ಅದೇ ಚಾಕನ್ನು ಕಿತ್ತುಕೊಂಡು ಅವರಿಗೆ ಇರಿದಿದ್ದಾನೆ ಎನ್ನಲಾಗ್ತಿದೆ. ಇಬ್ಬರು ಮಂಗಳಮುಖಿಯರ ಮೇಲೆ ಹಲ್ಲೆ ಮಾಡಿದ್ದ ಯುವಕನನ್ನು ಲಾಡ್ಜ್​ ಸಿಬ್ಬಂದಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ಅರ್ಚನಾ ಸಾವನ್ನಪ್ಪಿದ್ದಾಳೆ. ಇನ್ನೋರ್ವ ಮಂಗಳಮುಖಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಕೆ ಕಂಡ ಬಳಿಕ ಸತ್ಯಾಂಶ ಹೊರ ಬೀಳಬೇಕಿದೆ.

Related Posts

Don't Miss it !