ಲಿಪ್​ ಲಾಕ್​ ಕಾಲೇಜಲ್ಲಿ ಮತ್ತೆ ಅವಾಂತರ.. ಮಿಡ್​ನೈಟ್​ ಮಸ್ತಿಗೆ ಭಜರಂಗಿ ಅಡ್ಡಿ..

ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಖಾಸಗಿಯಾಗಿ ಲಿಪ್​ಲಾಕ್​ ಮಾಡಿದ್ದನ್ನು ವೀಡಿಯೋ ಮಾಡಿಕೊಂಡು ಸಾಮಾಜಿ ಜಾಲತಾಣದಲ್ಲಿ ಹರಿಯ ಬಿಡುವ ಮೂಲಕ ಸಂಕಷ್ಟಕ್ಕೆ ಒಳಗಾಗಿದ್ದರು. ಲಿಪ್​ಲಾಕ್​ ಅಷ್ಟೇ ಅಲ್ಲದೆ ಲೈಂಗಿಕ ಕ್ರಿಯೆ ದೃಶ್ಯಗಳನ್ನೂ ರೆಕಾರ್ಡ್​ ಮಾಡಿ ಯುವತಿಯರನ್ನು ಬ್ಲ್ಯಾಕ್​ ಮೇಲ್​ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಆ ಬಳಿಕ ವೀಡಿಯೋ ಮಾಡಿದ ಹಾಗು ಸಾಮಾಜಿಕ ಜಾಲತಾಣಕ್ಕೆ ಹಾಕಿದ ವಿದ್ಯಾರ್ಥಿಗಳ ಬಂಧನವೂ ಆಗಿತ್ತು. ಇದೀಗ ಅದೇ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಫೇರ್​ವೆಲ್ ಸೆರಮನಿ ಹೆಸರಿಯಲ್ಲಿ ಪಬ್​ನಲ್ಲಿ ಒಟ್ಟಿಗೆ ಸೇರಿಕೊಂಡು ಮೋಜು ಮಸ್ತಿ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಭಜರಂಗ ದಳದ ಕಾರ್ಯಕರ್ತರು ದಾಳಿ ಮಾಡಿ ಪಬ್​ ಒಳಕ್ಕೆ ಹೋಗಿ ಹುಡುಗ ಹುಡುಗಿಯರು ಕುಡಿದು ಡ್ಯಾನ್ಸ್​ ಮಾಡುವುದನ್ನು ತಡೆದು ಮನೆಗೆ ಕಳುಹಿಸಿದ್ದಾರೆ.

ಭಜರಂಗದಳ ಕಾರ್ಯಕರ್ತರನ್ನು ಕಂಡು ಕಕ್ಕಾಬಿಕ್ಕಿ..! ಎಸ್ಕೇಪ್​..!

ಮಂಗಳೂರಿನ ರಿ-ಸೈಕಲ್ ದಿ ಲಾಂಜ್ ಪಬ್​ನಲ್ಲಿ ನಡೆಯುತ್ತಿದ್ದ ಫೇರ್​ ವೆಲ್​ ಪಾರ್ಟಿಗೆ ಮಧ್ಯದಲ್ಲಿ ಪ್ರವೇಶ ಪಡೆದ ಭಜರಂಗದಳ ಕಾರ್ಯಕರ್ತರು, ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಕಲ್ಲು ಹಾಕಿದ್ದಾರೆ. ಕುಡಿದು ತಮ್ಮದೆ ಲೋಕದಲ್ಲಿ ವಿಹರಿಸುತ್ತಿದ್ದ ಯುವಕ-ಯುವತಿಯರ ಮೋಜು ಮಸ್ತಿಗೆ ತಡೆ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಲಿಪ್ ಲಾಕ್ ವಿಡಿಯೋ ಮೂಲಕ ಸುದ್ದಿಯಾಗಿದ್ದ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟಿದ್ದ ಭಜರಂಗದಳ ಕಾರ್ಯಕರ್ತರು, ಪದವಿ ವಿದ್ಯಾರ್ಥಿಗಳ ಪಬ್ ಪಾರ್ಟಿಗೆ ಅಡ್ಡಿ ಮಾಡಿದ್ದಾರೆ. ಭಜರಂಗ ಕಾರ್ಯಕರ್ತರು ಪಬ್​ ಒಳಕ್ಕೆ ಬಂದು ಬೈಯ್ಯುತ್ತಿದ್ದ ಹಾಗೆ ಯುವಕ ಯುವತಿಯರು ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ್ದಾರೆ. ಪಾರ್ಟಿಯಲ್ಲಿ ತುಂಡುಡುಗೆ ತೊಟ್ಟು ಗೆಳೆಯ ಗೆಳತಿಯರ ಜೊತೆಗೆ ಸಂಗೀತದ ಅಲೆಯಲ್ಲಿ ಹೆಜ್ಜೆ ಹಾಕುತ್ತಿದ್ದವರಿಗೆ ನೈತಿಕ ಪೊಲೀಸ್​ ಗಿರಿ ಸಂಕಷ್ಟ ತಂದೊದಗಿಸಿದೆ.

ಸ್ಥಳದಲ್ಲೇ ಪೊಲೀಸರಿದ್ದರೂ ನೈತಿಕ ಪೊಲೀಸ್​ ಗಿರಿ ತಡೆಯದೆ ಮೌನ..!

ಮಂಗಳೂರಿನ ಪಬ್​ ಮೇಲೆ ಭಜರಂಗದಳ ಕಾರ್ಯಕರ್ತರು ದಾಳಿ ಮಾಡಿದ ವೇಳೆ ಪೊಲೀಸರು ಸ್ಥಳದಲ್ಲೇ ಮೊಕ್ಕಾ ಹೂಡಿದ್ದರು. ಯುವಕ ಯುವತಿಯರು ಭಯದಿಂದ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಗ ಪೊಲೀಸರು ಮೂಕಪ್ರೇಕ್ಷಕರ ರೀತಿಯಲ್ಲಿ ನಿಂತು ನೈತಿಕ ಪೊಲೀಸ್​ ಗಿರಿಗೆ ಪರೋಕ್ಷವಾಗಿ ಸಪೋರ್ಟ್​ ಮಾಡಿದಂತೆ ಕಾಣಿಸಿತು. ಪದವಿ ಕಾಲೇಜು ವಿದ್ಯಾರ್ಥಿಗಳು ವಯಸ್ಕರಾಗಿದ್ದು, ಯಾವುದನ್ನು ಮಾಡಬೇಕು..? ಯಾವುದನ್ನು ಮಾಡಬಾರದು ಅನ್ನೋ ಅರಿವು ಉಳ್ಳವರಾಗಿದ್ದಾರೆ. ಆದರೆ ಈ ರೀತಿ ಭಜರಂಗ ದಳ ಅಥವಾ ಇನ್ಯಾವುದೇ ಕಾರ್ಯಕರ್ತರು ಈ ರೀತಿ ದಾಳಿ ಮಾಡುತ್ತಾ ಸಾಗಿದರೆ ಮುಂದಿನ ದಿನಗಳಲ್ಲಿ ಪೊಲೀಸ್​ ವ್ಯವಸ್ಥೆ ಎಲ್ಲಿಗೆ ಬಂದು ನಿಲ್ಲಲಿದೆ ಎನ್ನುವುದು ಸಾಮಾಜಿಕ ಕಳಕಳಿ ಉಳ್ಳವರ ಅಂಬೋಣ. ಆದರೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇತ್ತೀಚಿನ ದಿನಗಳಲ್ಲಿ ಮಾಡುತ್ತಿರುವ ಕುಕೃತ್ಯಗಳು ಸರಿಯೇ ಎನ್ನುವ ಪ್ರಶ್ನೆ ಅವರಲ್ಲಿ ಸಮರ್ಪಕ ಉತ್ತರವಿಲ್ಲ.

ಮೌಲ್ಯ ಕಳೆದುಕೊಂಡ ಶಿಕ್ಷಣ, ಮನೆಯಲ್ಲೇ ಅಡ್ಡದಾರಿಯ ಅಭ್ಯಾಸ..!

ಮmಂಗಳೂರಿನ ಈ ಪ್ರತಿಷ್ಠಿತ ಕಾಲೇಜಿಗೆ ಸೇರುವುದೇ ಅಗರ್ಭ ಶ್ರೀಮಂತರ ಮಕ್ಕಳು ಮಾತ್ರ. ಅವರು ಈ ರೀತಿಯ ಪಾರ್ಟಿಗಳು ಹಾಗು ಈ ರೀತಿಯ ನಡವಳಿಕೆ ಸಾಮಾನ್ಯ ಎನ್ನುವುದು ಸ್ಥಳೀಯರ ಮಾತು. ಆದರೆ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆ ಕೂಡ ಮಕ್ಕಳಿಗೆ ಮೌಲ್ಯಯುತ ಬದುಕನ್ನು ರೂಪಿಸಿಕೊಳ್ಳುವುದು ಹಾಗು ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಹೇಳಿಕೊಡಬೇಕಿದೆ. ಇಲ್ಲದಿದ್ದರೆ ಮುಂದಿನ ಪೀಳಿಕೆ ಅದೋಗತಿಯನ್ನು ತಲುಪುವ ಎಲ್ಲಾ ಸಾಧ್ಯತೆಗಳೂ ಇವೆ. ಪಾಶ್ಚಿಮಾತ್ಯ ಸಂಸ್ಕೃತಿ ಕಡೆಗೆ ಆಕರ್ಷಿತರಾಗುತ್ತಿರುವ ಯುವಜನತೆಯನ್ನು ಸರಿದಾರಿಗೆ ತರುವುದಕ್ಕೆ ಸರ್ಕಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಹೊರತು, ಈ ರೀತಿ ಪಾರ್ಟಿ ಮಾಡುತ್ತಿರುವಾಗ, ಅಥವಾ ಅನ್ಯಕೋಮಿನ ಯುವಕ ಯುವತಿ ಪಾರ್ಕ್​ನಲ್ಲಿ ಕುಳಿತಿರುವಾಗ ಭಜರಂಗ ದಳ ಕಾರ್ಯಕರ್ತರು ಸೇರಿದಂತೆ ಯಾವುದೇ ಸಂಘಟನೆಗಳು ದಾಳಿ ಮಾಡಿದರೂ ಹಾಗೂ ಪೊಲೀಸ್​ ವ್ಯವಸ್ಥೆ ಕಂಡು ಕಾಣದಂತೆ ಸುಮ್ಮನಿರುವುದು ಸರ್ಕಾರದ ವೈಫಲ್ಯತೆಯ ಪ್ರತೀಕ ಎನ್ನಬಹುದು.

Related Posts

Don't Miss it !