ಬಹುತೇಕ ಮದುವೆಗಳಿಗೆ ಕಾನೂನು ಮಾನ್ಯತೆಯೇ ಇಲ್ವಾ..? ನಿಮ್ಮ ಮದುವೆ ಕಥೆ ಏನು..?

ಹಿಂದೂ ಸಂಪ್ರಯಾದಲ್ಲಿ ಮಾಂಗಲ್ಯಕ್ಕೆ ಮಾನ್ಯತೆ ಇರುತ್ತದೆ. ಗಂಡು ಹೆಣ್ಣು ಮದುವೆಯ ಸಾಕ್ಷಿಯಾಗಿ ದೇವರ ಎದುರೋ..? ತಂಡೆ ತಾಯಿಗಳ ಎದುರಲ್ಲೋ ಮಾಂಗಲ್ಯ ಕಟ್ಟಿಕೊಂಡು, ಅರಿಸಿಣ ಕುಂಕುಮ ಇಟ್ಟು ಸಂಪ್ರದಾಯವಾಗಿ ಮದುವೆ ಆಗಿರುತ್ತಾರೆ. ಮದುವೆಯಾದ ದಂಪತಿ ಸುಖಸಂಸಾರ ಮಾಡಿಕೊಂಡು ಮುಂದಿನ ಜೀವನ ನಡೆಸ್ತಾರೆ. ಸಂತಾನ ಪ್ರಾಪ್ತಿ ಆದ ಬಳಿಕ ಹುಟ್ಟುವ ಮಗುವಿಗೂ ಎಲ್ಲಾ ಕಾನೂನುಗಳು ಅನ್ವಯ ಆಗುತ್ತವೆ. ಆದರೆ ಇದೀಗ ಕೋರ್ಟ್‌ ನೀಡಿರುವ ಆದೇಶ, ನಿಮ್ಮ ಮದುವೆ ಕಾನೂನು ಪ್ರಕಾರ ಇದ್ಯಾ..? ಅಥವಾ ಕಾನೂನು ಉಲ್ಲಂಘನೆ ಆಗಿದ್ಯಾ ಅನ್ನೋ ಅನುಮಾನ ಮೂಡಿಸುತ್ತಿದೆ.

ಸಪ್ತಪದಿ ತುಳಿಯದಿದ್ದರೆ ಮದುವೆ ಎನಿಸಿಕೊಳ್ಳಲ್ಲ..!!

ಹಿಂದೂ ವಿವಾಹ ಕಾಯ್ದೆ 1955ರ ಪ್ರಕಾರ ಹಿಂದೂ ಮದುವೆ ಇದೇ ರೀತಿಯಲ್ಲಿ ಆಗಿರಬೇಕು ಅನ್ನೋ ನಿಯಮವಿದೆ. ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಗಳನ್ನು ಪಾಲಿಸಿಕೊಂಡು ಮದುವೆ ಆಗಿರಬೇಕು ಅನ್ನೋದು ನಿಯಮ. ಆದರೆ ನಿಯಮ ಉಲ್ಲಂಘಿಸಿ ಆಗಿರುವ ಮದುವೆ ಮದುವೆಯೇ ಅಲ್ಲ ಎಂದಿದೆ. ಅದರಲ್ಲೂ ಮಾಂಗಲ್ಯಧಾರಣೆ ಆದ ಬಳಿಕ ಒಂದು ವೇಳೆ ಸಪ್ತಪದಿ ( ಅಗ್ನಿಕುಂಡದ ಸುತ್ತ ಏಳು ಸುತ್ತ ಹಾಕುವುದು) ಯನ್ನು ಪಾಲಿಸದಿದ್ದರೆ ಮದುವೆ ಎನಿಸಿಕೊಳ್ಳುವುದಿಲ್ಲ ಎಂದು ಅಲಹಬಾದ್‌ ಹೈಕೋರ್ಟ್‌ ಹೇಳಿದೆ.

ಹೆಂಡತಿ 2ನೇ ಮದುವೆ ಆಗಿದ್ದಾಳೆ ಎಂದು ಗಂಡನ ಆರೋಪ!

2017ರಲ್ಲಿ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಸ್ಮೃತಿ ಸಿಂಗ್‌ ಎನ್ನುವವರು ಸತ್ಯಂಸಿಂಗ್‌ ಎನ್ನುವರನ್ನು ಮದುವೆ ಆಗಿದ್ದರು. ಆ ಬಳಿಕ ಅತ್ತೆ ಮಾವ ಹಾಗು ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ದಾಖಲು ಮಾಡಿದ್ದ ಸ್ಮೃತಿಸಿಂಗ್‌, ಗಂಡನ ಮನೆಯಿಂದ ದೂರ ಇದ್ದರು. ಹೆಂಡತಿಯ ಜೀವನೋಪಾಯಕ್ಕಾಗಿ ಮಾಸಿಕ 4 ಸಾವಿರ ರೂಪಾಯಿ ಕೊಡುವಂತೆ ಕೋರ್ಟ್‌ ಆದೇಶ ಮಾಡಿತ್ತು. ಆ ಬಳಿಕ ಹೆಂಡತಿ ಸ್ಮೃತಿ ಸಿಂಗ್‌ ವಿರುದ್ಧ ಬೈಗಮಿ (2ನೇ ಮದುವೆ) ಆರೋಪ ಮಾಡಿದ್ದ ಗಂಡ ಪ್ರತಿದೂರು ದಾಖಲು ಮಾಡಿದ್ದನು. ಸ್ಮೃತಿಸಿಂಗ್‌ಗೆ ಕೋರ್ಟ್‌ ನೋಟಿಸ್‌ ಜಾರಿ ಮಾಡಿತ್ತು. ಆದರೆ ಮಿರ್ಜಾಪುರ ಕೋರ್ಟ್‌ ವಿಚಾರಣೆ ರದ್ದು ಕೋರಿ ಸ್ಮೃತಿ ಸಿಂಗ್‌ ಅರ್ಜಿ ಸಲ್ಲಿಕೆ ಮಾಡಿದ್ರಿ. ಅಲಹಾಬಾದ್‌ ಹೈಕೋರ್ಟ್‌ ಗಂಡ ಸಲ್ಲಿಸಿದ್ದ ದೂರನ್ನು ರದ್ದು ಮಾಡಿದೆ.

ಈಗ ಹೇಳಿ ನಿಮ್ಮ ಮದುವೆ ಮಾನ್ಯವೋ ಇಲ್ಲವೋ..?

ಮದುವೆಯಲ್ಲಿ ಮಂತ್ರ ಮಾಂಗಲ್ಯ ಅನ್ನೋದನ್ನು ರಾಷ್ಟ್ರಕವಿ ಕುವೆಂಪು ಚಾಲ್ತಿಗೆ ತಂದಿದ್ದರು. ಆದರೆ ಅಲಹಾಬಾದ್‌ ಹೈಕೋರ್ಟ್‌ ಅಗ್ನಿ ಕುಂಡದ ಸುತ್ತಲು 7 ಸುತ್ತುಗಳನ್ನು ಸುತ್ತದಿದ್ದರೆ ಮದುವೆಯೇ ಅಲ್ಲ ಎಂದು ಆದೇಶ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ನಮ್ಮ ಮದುವೆಯಲ್ಲೂ ಅಗ್ನಿ ಕುಂಡದ ಸುತ್ತ ಸಪ್ತಪದಿ ಹೆಜ್ಜೆ ಹಾಕಿಲ್ಲ ಎಂದರೆ ನಮ್ಮ ಮದುವೆ ಕಾನೂನು ಮಾನ್ಯತೆ ಇಲ್ಲವೇ..? ಅನ್ನೋ ಪ್ರಶ್ನೆ ಎದುರಾಗಿದೆ. ಆದರೆ ಅಲಹಾಬಾದ್‌ ಹೈಕೋರ್ಟ್‌ ಆದೇಶ ಸದ್ಯಕ್ಕೆ ಕರ್ನಾಟಕಕ್ಕೆ ಯಾವುದೇ ರೀತಿಯಲ್ಲೂ ಅನ್ವಯ ಆಗುವುದಿಲ್ಲ. ಆದರೆ ಒಂದು ವೇಳೆ ಇದೇ ಆದೇಶವನ್ನು ಸುಪ್ರೀಂಕೋರ್ಟ್‌ ಕೂಡ ಮಾನ್ಯ ಮಾಡಿದಾಗ ಸಾಕಷ್ಟು ಮದುವೆಗಳಿಗೆ ಸಂಕಷ್ಟ ತೊಂದೊಡ್ಡಲಿದೆ ಎನ್ನುತ್ತಾರೆ ಕಾನೂನು ತಜ್ಞರು.

Related Posts

Don't Miss it !