ಸೇನಾ ಹೆಲಿಕಾಪ್ಟರ್​ ದುರಂತ, ಬದುಕುಳಿಯದ ಜೀವಗಳು.. ಕಾರಣ ಬೆನ್ನತ್ತಿದ ವಾಯುಸೇನೆ..

ತಮಿಳುನಾಡಿನಲ್ಲಿ ಬುಧವಾರ ಮಧ್ಯಾಹ್ನ 12.20ಕ್ಕೆ ಭೂ ಸೇನೆ, ವಾಯುಸೇನೆ, ನೌಕಾಸೇನೆ ಸೇರಿದಂತೆ ಮೂರೂ ಸೇನಾಪಡೆ ಸಿಬ್ಬಂದಿಗಳ ಮುಖ್ಯಸ್ಥ (CDS) ಬಿಪಿನ್​ ರಾವತ್​ ಹಾಗೂ ಇತರೆ 13 ಜನರು ಪ್ರಯಾಣ ಮಾಡುತ್ತಿದ್ದ ಸೇನಾ ಹೆಲಿಕಾಪ್ಟರ್​ ಅಪಘಾತಕ್ಕೀಡಾಗಿತ್ತು. 9 ಮಂದಿ ಸೇನಾ ಅಧಿಕಾರಿಗಳು ಹಾಗೂ 5 ಮಂದಿ ಹೆಲಿಕಾಪ್ಟರ್​​ ಸಿಬ್ಬಂದಿ ಪ್ರಯಾಣ ಅಸುನೀಗಿದ್ದರು.​ ಹವಾಮಾನ ವೈಪರಿತ್ಯದಿಂದ​ ವೆಲ್ಲಿಂಗ್ಟನ್​ ಬಳಿ ಹೆಲಿಕಾಪ್ಟರ್ ನೆಲಕಪ್ಪಳಿಸಿದೆ. 14 ಜನರಲ್ಲಿ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂರೂ ಸೇನಾ ಸಿಬ್ಬಂದಿ ಮುಖ್ಯಸ್ಥ (CDS ) ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಕೂಡ ಅಸುನೀಗಿದ್ದಾರೆ. ಓರ್ವ ಅಧಿಕಾರಿ ವರುಣ್ ಸಿಂಗ್ ಗಂಭೀರ ಗಾಯಗಳೊಂದಿಗೆ ಬದುಕಿ ಉಳಿದಿದ್ದಾರೆ. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ದುರಂತಕ್ಕೆ ಕಾರಣ ಹವಾಮಾನ ವೈಪರೀತ್ಯವೇ..? ಎನ್ನುವ ಅನುಮಾನ ಬಹುತೇಕ ಜನರನ್ನು ಕಾಡುತ್ತಿದೆ.

ರಷ್ಯಾ ನಿರ್ಮಿತ ಎಂಐ 17-V5 ವಿಶೇಷತೆ ಏನು..?

ತಮಿಳುನಾಡಿನ ಊಟಿ ಪ್ರಾಂತ್ಯದಲ್ಲಿ ದುರಂತ ಕಂಡಿರುವ Mi-17V5 ವಿಶೇಷತೆ ಎಲ್ಲರನ್ನು ಮಂತ್ರ ಮುಗ್ನನ್ನಾಗಿ ಮಾಡುತ್ತದೆ.  ರಷ್ಯಾ ನಿರ್ಮಿತ ಈ ಹೆಲಿಕಾಪ್ಟರ್ Mi-17V5, 2008ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿತ್ತು. ಭಾರತ ಸೇನೆಯಲ್ಲಿ ಇದುವರೆಗೂ ಒಟ್ಟು 80 ಹೆಲಿಕಾಪ್ಟರ್​ಗಳು ಸೇವೆ ನೀಡುತ್ತಿವೆ ಎನ್ನುವ ಅಂಕಿಅಂಶ ಲಭ್ಯವಾಗಿದೆ. ವಿಶ್ವದ ಶ್ರೇಷ್ಠ ಕಾಪ್ಟರ್​ಗಳಲ್ಲಿ ಇದೂ ಕೂಡ ಒಂದು ಎಂದು ಹೇಳಲಾಗುತ್ತದೆ. ಬರೋಬ್ಬರಿ 13 ಸಾವಿರ ಕೆಜಿ ತೂಕ ಹೊತ್ತು ಸಾಗಬಲ್ಲ ಸಾಮರ್ಥ್ಯವಿದ್ದು, ವಿಶ್ವದಾದ್ಯಂತ ಸುಮಾರು 60 ದೇಶಗಳಲ್ಲಿ  Mi-17V5 ಹೆಲಿಕಾಪ್ಟರ್ ಬಳಸಲಾಗ್ತಿದೆ. ಇನ್ನೂ ಸೇನೆಯಲ್ಲಿ ಶಸ್ತ್ರಾಸ್ತ್ರ ಸಾಗಾಟ ಅಥವಾ ಇಂಧನ ಸಾಗಾಟಕ್ಕೆ ಹೆಚ್ಚಾಗಿ ಈ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತೆ. ಪ್ರತಿಕೂಲ ಹವಾಮಾನದಲ್ಲೂ ಹಾರಾಟ ಮಾಡಬಲ್ಲದು ಎನ್ನುವ ಕಾರಣಕ್ಕೆ ರಕ್ಷಣಾ ಕಾರ್ಯಾಚರಣೆಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ ಎನ್ನುವ ಅಂಶವನ್ನು ಉಲ್ಲೇಖಿಸಲಾಗುತ್ತದೆ.

ಯುದ್ಧದಲ್ಲೂ ಬಳೆಯಾಗುತ್ತದೆ ಶಸ್ತ್ರ ಸಜ್ಜಿತ Mi-17V5..!

Mi-17V5 ಹೆಲಿಕಾಪ್ಟರ್‌ನಲ್ಲಿ 8 ರಾಕೆಟ್, ಮಿಸೈಲ್, ಸಬ್​ಮರೀನ್ ಗನ್ ಇದೆ. PKT, AKM, 23 ಎಂಎಂ ಮಷಿನ್​ ಗನ್ ಕೂಡ ಇದೆ. ಶಸ್ತ್ರಸಜ್ಜಿತ ವಾಹನವನ್ನೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೊತ್ತೊಯ್ಯ ಬಲ್ಲದು . ಒಂದು ಗಂಟೆಗೆ 250 ಕಿ.ಮೀ ವೇಗವಾಗಿ ಸಾಗುವ ಸಾಮರ್ಥ್ಯ ಹೊಂದಿರುವ ಈ Mi-17V5 6 ಸಾವಿರ  ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯವಿದೆ. ಆದರೆ ಭಾರತ ಖರೀದಿ ಮಾಡಿದ ಬಳಿಕ ಸಾಕಷ್ಟು ಬಾರಿ ಅಪಘಾತಕ್ಕ ಒಳಗಾಗಿದೆ ಎನ್ನುವುದೂ ಕೂಡ ಕಟು ಸತ್ಯವಾಗಿದೆ. ಆದರೆ ಈ ಹೆಲಿಕಾಪ್ಟರ್‌ನಲ್ಲಿ ಇರುವ ತಾಂತ್ರಿಕ ಉತ್ಕೃಷ್ಟತೆ ಕಾರಣಕ್ಕೆ ಸೇನೆಯಲ್ಲಿ ಸೇವೆ ಮುಂದುವರಿಸಲಾಗಿದೆ. ಭಾರತೀಯ ವಾಯು ಸೇನೆಯಲ್ಲಿ ಬರೋಬ್ಬರಿ 80 ಹೆಲಿಕಾಪ್ಟರ್ ಲಭ್ಯವಿದ್ದು, ಯುದ್ಧ ಸಮಯದಲ್ಲಿ ಬಹು ಪ್ರಮುಖ ಪಾತ್ರ ವಹಿಸುವ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ.

ಪ್ರತಿಕೂಲ ವಾತಾವರಣಕ್ಕೂ ಸೈ ಎಂದಾದರೆ ಸಮಸ್ಯೆ ಆಗಿದ್ದೇನು..?

ಒಂದೇ ಬಾರಿಗೆ Mi-17V5 ಹೆಲಿಕಾಪ್ಟರ್‌ನಲ್ಲಿ 36 ಜನ ಪ್ರಯಾಣಿಸಬಹುದಾಗಿದ್ದು, ವಿಶ್ವದ ಶ್ರೇಷ್ಠ ಕಾಕ್​ಪಿಟ್  ಕೂಡ ಹೊಂದಿದೆ ಎನ್ನುವ ಮಾಹಿತಿ ನೀಡಲಾಗಿದೆ. ಹವಾಮಾನ ವೈಪರೀತ್ಯಗಳನ್ನು ಬೇಧಿಸಿಕೊಂಡು ಹಾರಬಲ್ಲದು‌ ಎನ್ನುವ ವೈಶಿಷ್ಟ್ಯ Mi-17V5 ಹೆಲಿಕಾಪ್ಟರ್‌ಗೆ ಇದೆ. ಹೀಗಿದ್ದ ಮೇಲೆ ಹೆಲಿಕಾಪ್ಟರ್ ದುರಂತಕ್ಕೆ ನಿಖರ ಕಾರಣವಾದರೂ ಏನು..? ಎನ್ನುವ ಪ್ರಶ್ನೆ ಉದ್ಬವ ಆಗಲಿದೆ. ಇನ್ನೂ ಹವಾಮಾನ ವೈಪರೀತ್ಯ ಎನ್ನುವುದು ಕೇವಲ ಊಹಾಪೋಹಗಳು ಎನ್ನುವುದು ಸೇನಾ ಮೂಲಗಳ ಮಾಹಿತಿ. ಯಾಕೆಂದರೆ Mi-17V5 ರೀತಿಯ ಹೆಲಿಕಾಪ್ಟರ್ ಹಾರಾಟ ನಡೆಸಬೇಕಿದ್ದರೆ, ಅದಲ್ಲೂ ಗಣ್ಯವ್ಯಕ್ತಿಗಳು ಸಂಚರಿಸುವ ವೇಳೆ ಎಲ್ಲಾ ಪರಿಸ್ಥಿತಿಗಳ ಬಗ್ಗೆ ಕೂಲಕಂಷವಾಗಿ ಪರಿಶೀಲನೆ ಮಾಡಿರುತ್ತಾರೆ. ಜೊತೆಗೆ ಹೆಲಿಕಾಪ್ಟರ್ ಪೈಲಟ್‌ಗೆ ಸುಮಾರು ಒಂದು ಕೀಲೋ‌ಮೀಟರ್ ಅಂತರ ಸ್ಪಷ್ಟವಾಗಿ ಕಾಣಿಸದೆ ಇದ್ದರೆ ಹೆಲಿಕಾಪ್ಟರ್ ಹಾರಾಟವನ್ನೇ ಆರಂಭ ಮಾಡುವುದಿಲ್ಲ ಎನ್ನಬಹುದು ಎನ್ನಲಾಗುತ್ತದೆ. ರ‌್ಯಾಡರ್ ( Radar ) ಸಂಪರ್ಕ ತಪ್ಪಿದ್ದು ಯಾವಾಗ..? ಅಪಘಾತಕ್ಕೂ ಮುನ್ನ ಏನು ಸಂಭಾಷಣೆ ನಡೆದಿದೆ ಎನ್ನುವುದನ್ನು ತನಿಖೆ ಬಳಿಕ ಖಚಿತ ಮಾಡಿಕೊಳ್ಳಬೇಕಿದೆ. ದುರಂತದ ಸೀಕ್ರೆಟ್ ಅಡಗಿಸಿಟ್ಟುಕೊಂಡಿರುವ ಬ್ಲಾಕ್ ಬಾಕ್ಸ್ ಈಗಾಗಲೇ ಸೇನೆ ವಶಕ್ಕೆ ಸಿಕ್ಲಿದ್ದು ತನಿಖೆಯಲ್ಲಿ ಸತ್ಯ ಬಯಲಾಗಬೇಕಿದೆ.

Related Posts

Don't Miss it !