Murder; ‘ಕರಿಯಾ’ ಸಿನಿಮಾ ರೀತಿ ಕೊಂದು ಹೆಗಲ‌ ಮೇಲೆ ಹೆಣ ಹೊತ್ತ ಗೆಳಯ..!!

ಬೆಂಗಳೂರಿನಲ್ಲಿ ಗಲಾಟೆ, ಕೊಲೆ ಎನ್ನುವುದು ಸರ್ವೇ ಸಾಮಾನ್ಯ ಎನ್ನುವ ದಿನಗಳು ಬಂದಾಗಿದೆ. ಈ ಹಿಂದೆ ಮುಂಬೈನಲ್ಲಿ ಅಂಡರ್‌ವರ್ಲ್ಡ್ ದುನಿಯಾ ನಡೆಯುತ್ತೆ, ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತೆ. ಮುಂಬೈನಲ್ಲಿ ಬೆಳೆಯುವ ಮಕ್ಕಳು ಹಾಳಾಗುವ ಸಾಧ್ಯತೆ ಇರುತ್ತೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಅದೇ ಪರಿಸ್ಥಿತಿಯಲ್ಲಿ ಬೆಂಗಳೂರು ಬಂದಯ ನಿಂತಿದೆ. ಸಣ್ಣಪುಟ್ಟ ವಿಚಾರಕ್ಕೂ ಕೊಲೆ ನಡೆಯುತ್ತದೆ. ಕಾನೂನು, ಪೊಲೀಸರ ಬಗ್ಗೆ ಕಿಂಚಿತ್ತು ಭಯವಿಲ್ಲದೆ ಹಾಡಹಗಲಿನಲ್ಲೇ ಕೊಂದು ಬಿಸಾಕುವ ಸಂಸ್ಕೃತಿ ಬೆಂಗಳೂರಿನಲ್ಲಿ ಮೈ ಕೊಡವಿ ನಿಂತಿದೆ. ಇದೀಗ ಹೇಳಲು ಹೊರಟಿರುವ ಸ್ಟೋರಿ ಕೂಡ ಅದರ ಅಂಚಿನಲ್ಲೇ ಇದೆ.‌ ಕನ್ನಡದ ಕರಿಯಾ ಸಿನಿಮಾ ಸ್ಟೈಲ್‌ನಲ್ಲಿ ಕೊಲೆ ನಡೆದಿದ್ದು, ಹೆಣ ಬಿದ್ದ ಬಳಿಕ ಸುಮಾರು ಅರ್ಧ‌ ಕಿಲೋಮೀಟರ್ ಹೆಣ ಹೊತ್ತು ನಡೆದಿದ್ದಾನೆ.

ಕರಿಯಾ ಚಿತ್ರಕ್ಕೂ ಎಲ್ಲಿಯ ಸಂಬಂಧ..!? ಲಿಂಕ್ ಯಾಕೆ?

ಕನ್ನಡದ ಹೆಸರಾಂತ ಚಿತ್ರಗಳಲ್ಲಿ ಒಂದಾಗಿರುವ ಕರಿಯಾ ಸಿನಿಮಾ ರೌಡಿಸಂ ಕಥೆಯನ್ನು ಹೊಂದಿದ್ದು, ಈ ಚಿತ್ರದಲ್ಲಿ ನಿಜ ಜೀವನದ ರೌಡಿಗಳನ್ನೂ ಬಳಸಿಕೊಳ್ಳಲಾಗಿದೆ. ಈ ಸಿನಿಮಾ ಆರಂಭವಾಗಿ ಕೆಲವೇ‌ ನಿಮಿಷಗಳಲ್ಲಿ ಈ ಚಿತ್ರದ ನಾಯಕ ನಟ ದರ್ಶನ್, ಹೆಣವೊಂದನ್ನು ಹೆಗಲ ಮೇಲೆ ಹೊತ್ತು ಸಾಗುವ ದೃಶ್ಯ ಕಾಣಿಸುತ್ತದೆ. ಕೊಲೆ ಮಾಡಿದ ಬಳಿಕ ಹೆಣವನ್ನು ಹೊತ್ತು ಮೂರು ಕಿಲೋಮೀಟರ್ ನಡೆದುಕೊಂಡು ಬಂದಿದ್ದಾರೆ ಎನ್ನುವುದನ್ನು ಚಿತ್ರದಲ್ಲೇ ಹೇಳಲಾಗಿದೆ. ಆದರೆ ಈ ಪ್ರಕರಣದಲ್ಲಿ ಸ್ನೇಹಿತನ್ನೇ ಕೊಂದ ಗೆಳಯ ಹೆಣವನ್ನು ಹೆಗಲ ಮೇಲೆ ಹಾಕಿಕೊಂಡು ಹೊರಟಿದ್ದಾನೆ. ಈ ಘಟನೆ ನಡೆದಿರುವುದು ಪೀಣ್ಯಾ ಎರಡನೇ ಹಂತದ ಹೆಗ್ಗನಹಳ್ಳಿಯಲ್ಲಿ ನಡೆದಿದೆ.

ಕೊಂದ ಮೇಲೆ ಅನಾಹುತದ ಅರಿವು.. ಆಸ್ಪತ್ರೆಗೆ‌ ಸೇರಿಸುವ ಯತ್ನ..!

ಪೀಣ್ಯಾ 2ನೇ ಹಂತದ ಹೆಗ್ಗನಹಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಮುನಿ ಹಾಗೂ ಸೂರಿ ಎಂಬ ಸ್ನೇಹಿತರ ನಡುವೆ ಶುರುವಾಗ ಸಣ್ಣ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮಟ ಮಟ ಮಧ್ಯಾಹ್ನವೇ ಗಾಂಜಾ ಮತ್ತಿನಲ್ಲಿದ್ದ ಇಬ್ಬರು ಸ್ನೇಹಿತರು, ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಸೂರಿ ಚಾಕು ತೋರಿಸಿ ಮುನಿಗೆ ಚುಚ್ಚಲು ಮುಂದಾಗಿದ್ದಾನೆ. ಈ ಸಮಯದಲ್ಲಿ ಚಾಕು ಕಿತ್ತುಕೊಂಡ‌ ಮುನಿ, ಸೂರಿಗೆ ಇರಿದಿದ್ದಾನೆ. ಗೆಳಯ ಸೂರಿ ರಕ್ತದ ಮಡುವಿನಲ್ಲಿ ಬಿದ್ಧಿರುವುದನ್ನು ಕಂಡು ಆಸ್ಪತ್ರೆ ಗೆ ಸೇರಿಸುವ ಮನಸ್ಸು ಮಾಡಿದ್ದಾನೆ. ಅರ್ಧ ಕಿಲೋಮೀಟರ್ ಹಾಡಹಗಲೇ ಹೆಣ ಹೊತ್ತುಕೊಂಡು ಹೋಗುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ.

ಅರ್ಧದಾರಿಗೆ ಬಂದ ಪೊಲೀಸ್, ಹೆಣ ಬಿಟ್ಟು ಓಡಲು ಯತ್ನ..!

ಸ್ನೇಹಿತರ ನಡುವೆ ನಡೆದ ಜಗಳ ಚಾಕು ಇರಿಯುವ ಮಟ್ಟಕ್ಕೆ ಹೋಗಿದೆ. ಆದರೆ ಸೂರಿಯಿಂದ ಚೂರಿ ಕಿತ್ಕೊಂಡು ಮುನಿ ಇರಿದ್ದಾನೆ. ಸ್ನೇಹಿತ ಸೂರಿಗೆ ಇರಿದ ಬಳಿಕ ನಡೆದ ಅನಾಹುತದ ಬಗ್ಗೆ‌ ಅರಿವಾಗಿದೆ. ಕೂಡಲೇ ಹೆಣ ಹೊತ್ತು ಆಸ್ಪತ್ರೆ ಕಡೆಗೆ ಹೆಜ್ಜೆ ಹಾಕಿದ್ದಾನೆ. ಆದರೆ ದಾರಿಯಲ್ಲಿ ಕೊಲಗಾರನ ಅವತಾರ ಕಂಡ ಪೊಲೀಸರು ಪೊಲೀರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯೋನ್ಮುಖರಾದ ರಾಜಗೋಪಾಲನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಏಪ್ರಿಯಲ್ 18 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Related Posts

Don't Miss it !