ಮಗಳು ಗರ್ಭಿಣಿ ಆದರೂ ಕರಗದ ಕೋಪ.. ಆಕ್ಸಿಡೆಂಟ್ ಹೆಸರಲ್ಲಿ ಅಳಿಯನ ಮರ್ಡರ್..!!

ವಿಜಯಪುರ ಅಂದರೆ ಮೊದಲಿಗೆ ನೆನಪಾಗುವುದು ಭೀಮಾ ತೀರದ ಹಂತಕರು. ಆ ಬಳಿಕ ಅಲ್ಲಲ್ಲಿ ಕೇಳಿಸುವ ಬಂದೂಕಿನ ಸದ್ದು. ಇದೀಗ ಭೀಕರ ಅಪಘಾತವೊಂದು ನಡೆದಿದ್ದು, ಮುಸ್ತಕಿನ್ ಎಂಬಾತ ಸಾವನ್ನಪ್ಪಿದ್ದಾನೆ. ಸಾವಿನ ಹಿನ್ನೆಲೆ ಕೆಣಕಿದಾಗ ಕೊಲೆ ಎನ್ನುವುದು ಪತ್ತೆಯಾಗಿದೆ ಎಂದು ವಿಜಯಪುರ ಎಸ್​ಪಿ ಆನಂದ್​ಕುಮಾರ್​ ತಿಳಿಸಿದ್ದಾರೆ. ರಕ್ಷಣೆ ನೀಡುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದರೂ ರಕ್ಷಣೆ ಕೊಡಲಾಗದ ವಿಜಯಪುರ ಪೊಲೀಸರು ಇದೀಗ ಕೊಲೆಗಾರರನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಪಘಾತದ ರೀತಿಯಲ್ಲಿ ಕೊಲೆ ಮಾಡುವುದಕ್ಕೆ ಕಾರಣವಾಗಿದ್ದು, ಆ ಒಂದು ಪ್ರೇಮ ಕಥೆ. ಕೊಲೆ ನಡೆದಿದ್ದು ಕೂಡ ಪ್ರೇಮಿಗಳ ದಿನದ ಸಂಧರ್ಭದಲ್ಲಿ ಎನ್ನುವುದು ವಿಶೇಷ.

ಇದನ್ನೂ ಓದಿ: ಕುಸಿದು ಬೀಳುವುದು, ಮೆದುಳು ನಿಷ್ಕ್ರಿಯ.. ಯುವ ಸಮುದಾಯಕ್ಕೆ ಆತಂಕ..!

ಪೊಲೀಸ್​​ ಮಗನ ರಕ್ಷಣೆ ಮಾಡಲು ಆಗದ ಗೃಹ ಇಲಾಖೆ..!

ವಿಜಯಪುರದಲ್ಲಿ ಕೊಲೆಯಾಗಿರುವ ಓರ್ವ ಪಿಎಸ್​ಐ ಪುತ್ರ ಎನ್ನುವುದು ಅಚ್ಚರಿಯಾದರೂ ಸತ್ಯ. ವಿಜಯಪುರ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಆರ್. ಬಿ ಕೂಡಗಿ ಅವರ ಪುತ್ರ ಮುಸ್ತಕಿನ್, ತನ್ನ ದೂರದ ಸಂಬಂಧಿ ಅತೀಕಾಳ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದ. ಕಳೆದ ಕೆಲವು ತಿಂಗಳ ಹಿಂದೆ ವಿಜಯಪುರದಿಂದ ಬೆಂಗಳೂರಿಗೆ ಓಡಿ ಹೋಗಿದ್ದ ಈ ಜೋಡಿ, ಮದುವೆಯಾಗಿ ವಾಪಸ್​ ಆಗಿತ್ತು. ಆಗಲೇ ಕೊಲೆ ಮಾಡುವ ಆತಂಕ ಇದ್ದ ಕಾರಣಕ್ಕೆ ರಕ್ಷಣೆ ಕೊಡುವಂತೆ ಯುವತಿ ಅತೀಕಾ ಪೊಲೀಸರಲ್ಲಿ ಮನವಿ ಮಾಡಿದ್ದಳು. ನನ್ನನ್ನು ಮುಸ್ತಕಿನ್​​ ಕಿಡ್ನ್ಯಾಪ್​ ಮಾಡಿಲ್ಲ, ನಾನು ಮುಸ್ತಕಿನ್​ ಜೊತೆಗೆ ಸುಖವಾಗಿ ಇದ್ದೇನೆ, ನನ್ನ ತಂದೆ ಹಾಗೂ ಸಹೋದರ ಮುಸ್ತಕಿನ್​ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ದಯಮಾಡಿ ರಕ್ಷಿಸಿ ಎಂದಿದ್ದಳು. ಆದರೂ ಪೊಲೀಸರು ಸತ್ತ ಬಳಿಕ ಕೊಲೆ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿದ್ದಾರೆ. ಓರ್ವ ಪೊಲೀಸ್​ ಅಧಿಕಾರಿ ಪುತ್ರನಿಗೂ ರಕ್ಷಣೆ ಸಿಗಲಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಇದನ್ನೂ ಓದಿಹಿಜಬ್​ ವಿವಾದ, ಕೇಸರಿ ಬಲೆಗೆ ಸಿಲುಕಿದ ಕಾಂಗ್ರೆಸ್​, ಕ್ಷಮೆ ಕೇಳಿದ ಜಮೀರ್..!

ಕೊಲೆಗೆ ಮಾಸ್ಟರ್​ ಪ್ಲ್ಯಾನ್​ ಮಾಡಿದ್ದ ಮಾವ..!!

ವಿಜಯಪುರ ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್​ ಆಗಿರುವ ಯುವತಿಯ ತಂದೆ ರೌಫ್​ ಶೇಖ್​, ಮಗಳ ಪ್ರೇಮ ವಿವಾಹಕ್ಕೆ ಅಡ್ಡಿಪಡಿಸಿದ್ದನು. ಆದರೂ ಪಟ್ಟು ಬಿಡದ ಪ್ರೇಮಿಗಳು, ಬೆಂಗಳೂರಿಗೆ ಪರಾರಿಯಾಗಿ ಮದುವೆ ಆಗಿದ್ದರು. ಆ ಬಳಿಕ ಪೊಲೀಸರ ಬಳಿ ರಕ್ಷಣೆ ಕೇಳಿದ್ದರು. ರಾಜಿ ಸಂಧಾನವೂ ನಡೆದಿತ್ತು. ಮಗಳು ಮುಸ್ತಕಿನ್​ ಮನೆಯಲ್ಲೇ ಉಳಿದುಕೊಂಡಿದ್ದಳು. ಆದರೆ ತನ್ನ ತಂದೆಯಿಂದ ಕೊಲೆ ಬೆದರಿಕೆ ಇದೆ ಎಂದು ಸ್ವತಃ ತನ್ನ ಮಗಳೇ ವಿಡಿಯೋ ಮಾಡಿದ್ದರಿಂದ ಕೊತಕೊತನೆ ಕುದಿಯುತ್ತಿದ್ದ ಮಾಜಿ ಕಾರ್ಪೊರೇಟರ್​ ರೌಫ್​ ಶೇಖ್​​, ಅಳಿಯನನ್ನೇ ಕೊಂದು ತನ್ನ ಸೇಡನ್ನು ತೀರಿಸಿಕೊಳ್ಳುವ ಮನಸ್ಸು ಮಾಡಿದ್ದ. ಅದರಂತೆ ಸಾಕಷ್ಟು ಹಿಂಬಾಲಕರನ್ನು ಬಿಟ್ಟು, ರಸ್ತೆಯಲ್ಲಿ ಹೋಗುವಾಗ ಸ್ಕೂಟಿಗೆ ಬೊಲೆರೋ ವಾಹನದಲ್ಲಿ ಡಿಕ್ಕಿ ಹೊಡೆಸಿ, ಆ ಬಳಿಕ ಕಾರನ್ನು ಹತ್ತಿಸಿ ಕೊಂದು ಬಿಸಾಕಿದ್ದಾರೆ.

ತಂದೆಯ ಕೋಪದಲ್ಲಿ ಮಗಳ ಕಂಗಳು

ತಾತನ ಕೋಪದಲ್ಲಿ ಗರ್ಭದಲ್ಲೇ ತಬ್ಬಲಿಯಾದ ಕಂದ..!

ಅಪ್ಪನ ವಿರೋಧವಿದ್ದರೂ ರೌಫ್​ ಶೇಕ್​ ಪುತ್ರಿ ಅತೀಕಾ, ಮುಸ್ತಕಿನ್ ಜೊತೆಗೆ ವಿವಚಾಹವಾಗಿದ್ದಳು. ಆ ಬಳಿಕ ರಾಜಿ ಸಂಧಾನ ನಡೆದ ನಂತರ ನವ ಜೋಡಿ ಸಂತಸದಲ್ಲೇ ಕಾಲ ಕಳೆದಿತ್ತು. ಸಾಕಷ್ಟು ಬಾರಿ ಹಲ್ಲೆ ಯತ್ನ ನಡೆದಿದ್ದರೂ ತಲೆ ಕೆಡಿಸಿಕೊಳ್ಳದ ಮುಸ್ತಕಿನ್, ಮಾವನ ಎದುರು ತಲೆ ತಗ್ಗಿಸದಂತೆ ಬದುಕಬೇಕು. ಸ್ವಂತ ಮನೆಯಿಲ್ಲ ಎಂದು ಆಡಿಕೊಳ್ಳುವ ಪತ್ನಿ ಸಂಬಂಧಿಕರ ಎದುರು ಸ್ವಂತದೊಂದು ಮನೆ ಕಟ್ಟಿಸಬೇಕು ಎನ್ನುವ ಕಾರಣಕ್ಕೆ ವಿಜಯಪುರದ ರೇಡಿಯೋ ಕೇಂದ್ರದ ಬಳಿ ಮನೆ ಕಾಮಗಾರಿಯನ್ನೂ ಆರಂಭಿಸಿದ್ದರು. ಅತೀಕಾ ಕೂಡ ಗಂಡನ ಬಿಸಿಯಪ್ಪುಗೆಯಲ್ಲಿ ಗರ್ಭಿಣಿಯಾಗಿದ್ದು, ಅಪ್ಪನ ಮನೆಯವರು ಮಗುವಾದ ಬಳಿಕ ಕ್ಷಮಿಸುತ್ತಾರೆ ಎಂದುಕೊಂಡಿದ್ದಳು. ಆದರೆ ಗರ್ಭಿಣಿ ಎನ್ನುವುದು ಗೊತ್ತಿದ್ದರೂ ಅಳಿಯನನ್ನೇ ಕೊಂದು ಹುಟ್ಟುವ ಮುನ್ನವೇ ಕಂದಮ್ಮ ಗರ್ಭದಲ್ಲೇ ಅನಾಥ ಆಗಲಿದೆ ಎನ್ನುವುದನ್ನು ಊಹಿಸಿರಲಿಲ್ಲ. ತಂದೆಯೊಬ್ಬ ಕೋಪದ ಕೈಗೆ ಬುದ್ಧಿಕೊಟ್ಟು ತನ್ನ ಮಗಳ ಬಾಳನ್ನೇ ಸರ್ವನಾಶ ಮಾಡಿದಂತಾಗಿದೆ.

Related Posts

Don't Miss it !