ಚಿತ್ರದುರ್ಗದ ಮುರುಘಾ ಶ್ರೀಗೆ ಬೇಲ್‌ ಸಿಗುತ್ತೆ..!! ಯಾಕೆ ಗೊತ್ತಾ..?

ಚಿತ್ರದುರ್ಗದ ಮುರುಘಾಮಠದ ಪೀಠಾಧಿಪತಿ ಆಗಿದ್ದ ಮುರುಘಾ ಶರಣರು ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಚಟುವಟಿಕೆಗೆ ಬಳಸಿಕೊಂಡ ಆರೋಪದಲ್ಲಿ ಜೈಲುಪಾಲಾಗಿದ್ದಾರೆ. ಕಳೆದ ಒಂದು ವರ್ಷದಿಂದಲೂ ಜೈಲಿನಲ್ಲಿರುವ ಮುರುಘಾ ಶರಣರಿಗೆ ಇಂದು ಜಾಮೀನು ಸಿಗುತ್ತಾ ಇಲ್ವಾ ಅನ್ನೋ ತೀರ್ಪು ಹೊರಬೀಳಲಿದೆ. ಈಗಾಗಲೇ ವಿಚಾರಣೆ ಮುಗಿಸಿರುವ ಹೈಕೋರ್ಟ್‌ ತೀರ್ಪನ್ನು ಬೆಳಗ್ಗೆ 10.30ಕ್ಕೆ ನಿಗದಿ ಮಾಡಿದೆ.

ಬೆಳಗ್ಗೆ 10.30 ಕ್ಕೆ ಹೈಕೋರ್ಟ್‌ನಿಂದ ಆದೇಶ ಪ್ರಕಟ

ಚಿತ್ರದುರ್ಗದ ಮಠದಲ್ಲಿ ಓದುತ್ತಿದ್ದ ಇಬ್ಬರು ಬಾಲಕಿರನ್ನು ಶಿವಮೂರ್ತಿ ಮುರುಘಾ ಶರಣರು ಕಾಮತೃಷೆಗೆ ಬಳಸಿಕೊಂಡಿದ್ದಾರೆ, ಎಂದು ಆರೋಪಿಸಿ ಮೈಸೂರಿನ ನಜರಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೈಸೂರಿನ ಒಡನಾಡಿ ಸಂಸ್ಥೆ ಆಶ್ರಯದಲ್ಲಿ ದಾಖಲಾದ ದೂರು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಶಿಫ್ಟ್‌ ಆಗಿತ್ತು. ಆ ಬಳಿಕ ಅರೆಸ್ಟ್‌ ಆಗಿದ್ದ ಮುರುಘಾ ಶರಣರು ಇನ್ನೂ ಕೂಡ ಜೈಲಿನಲ್ಲಿದ್ದಾರೆ. ಬೆಳಗ್ಗೆ 10.30ಕ್ಕೆ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಈ ಬಗ್ಗೆ ಆದೇಶ ನೀಡಲಿದ್ದಾರೆ.

ಜಾಮೀನು ಸಿಗುವ ಸಾಧ್ಯತೆ ಹೆಚ್ಚು ಇದ್ಯಾ..!?

14 ತಿಂಗಳ ಕಾಲ ಜೈಲಿನಲ್ಲೇ ಇರುವ ಶಿವಮೂರ್ತಿ ಮುರುಘಾ ಶರಣರು, ಲೈಂಗಿಕವಾಗಿ ಬಳಸಿಕೊಂಡಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಕೋರ್ಟ್‌ ಗಮನ ಸೆಳೆಯಲಾಗಿದೆ. ಬಾಲಕಿಯರೂ ಕೊಟ್ಟಿರುವ ಹೇಳಿಕೆಯ ಆಧಾರದಲ್ಲೇ ಇಷ್ಟು ದಿನಗಳ ಕಾಲ ಜೈಲಿನಲ್ಲಿ ಇಡಲಾಗಿದೆ. ವೈದ್ಯಕೀಯ ಸಾಕ್ಷಿಗಳು ಎಲ್ಲಾ ಆರೋಪವನ್ನು ತಳ್ಳಿ ಹಾಕುವುದಕ್ಕೆ ಪೂರಕವಾಗಿವೆ ಎಂದು ಮುರುಘಾ ಶರಣರ ಪರ ವಕೀಲರು ವಾದಿಸಿದ್ದಾರೆ. ಕಾನೂನು ಯಾವಾಗ ಹೇಳಿಕೆಗಳ ಆಧಾರದ ಮೇಲೆ ನಿಲ್ಲುವುದಿಲ್ಲ, ಸಾಕ್ಷಿಗಳೇ ಅತ್ಯಂತ ಪೂರಕ. ಹೀಗಾಗಿ ಜಾಮೀನು ಸಿಗುವ ನಿರೀಕ್ಷೆ ಇದೆ. ಆದರೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೋರ್ಟ್‌ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಅನ್ನೋದನ್ನು ಹೇಳಲು ಅಸಾಧ್ಯ.

Related Posts

Don't Miss it !