ಚಿತ್ರದುರ್ಗ ಅಭಿವೃದ್ಧಿ ಆಗಿಲ್ಲ- ಶ್ರೀಗಳು, ಅಭಿವೃದ್ಧಿ ಹರಿಕಾರ ಯಡಿಯೂರಪ್ಪ – ಸಿಎಂ

ಸೋಮವಾರ ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ ನಡೀತು. ಡಾ.ಶಿವಮೂರ್ತಿ ಮುರುಘಾ ಶರಣರು ಪೀಠಾರೋಹಣದ ನೆನಪಿಗಾಗಿ ನಡೆದ ಉತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಸೇರಿದಂತೆ ಸಾಕಷ್ಟು ನಾಯಕರು ಭಾಗಿಯಾಗಿದ್ದರು. ಈ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಸವಭೂಷಣ ಪ್ರಶಸ್ತಿ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಶರಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಮುರುಘಾ ಶ್ರೀಗಳು ಪ್ರಶಸ್ತಿ ಪ್ರದಾನ ಮಾಡಿದ್ರು. ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುರುಘಾ ಶರಣರ ಮಾತಿಗೆ ಮುಖ್ಯಮಂತ್ರಿ ಉಲ್ಟಾ ಹೊಡೆದಿದ್ದಾರೆ.

ಕೋಟೆನಾಡು ಚಿತ್ರದುರ್ಗಕ್ಕೆ ಅಭಿವೃದ್ಧಿ ಮರಿಚಿಕೆ..!

ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಚಿತ್ರದುರ್ಗ ಜಿಲ್ಲೆಗೆ ಯಾವುದೇ ಯೋಜನೆ ಸಿಕ್ಕಿಲ್ಲ, ಯಾವ ಅಭಿವೃದ್ಧಿ ಕೆಲಸವೂ ಆಗುತ್ತಿಲ್ಲ. ಯಾವುದೇ ಒಂದು ಕಾರಿಡಾರ್ ಕೂಡ ಆಗಿಲ್ಲ. ಬೆಂಗಳೂರಿಗೆ ಹೋಗಿ ಪ್ರಯತ್ನಿಸಿ ಎಂದು ಶಾಸಕ ತಿಪ್ಪಾರೆಡ್ಡಿ, ಚಂದ್ರಪ್ಪ ಅವರಿಗೆ ಸೂಚಿಸಿದ ಸ್ವಾಮೀಜಿ. ಇಲ್ಲಿನ ಜನರ ನೋವನ್ನು ನೋಡಿ ನನಗೆ ಕಣ್ಣೀರು ಬರುತ್ತದೆ. ನಮ್ಮ ಜನಪ್ರತಿನಿಧಿಗಳು ಜಾಗೃತರಾಗಬೇಕು. ಎಷ್ಟು ವರ್ಷ ಎಂದು ಈ ನೋವನ್ನು ಅನುಭವಿಸಿಕೊಂಡು ಇರುವುದು ಎಂದು ಪ್ರಶ್ನಿಸಿದ ಸ್ವಾಮೀಜಿ, ಸರ್ಕಾರ ಈ ಕಡೆ ಗಮನ ಹರಿಸಬೇಕು ಎಂದು ಸೂಚಿಸಿದ್ರು. ಜನ ಸಾಮಾನ್ಯರ ಜೀವನ ತುಂಬಾ ದುಸ್ತರವಾಗಿದೆ. ಚಿತ್ರದುರ್ಗದ ಯಾವ ಯೋಜನೆಯೂ ಬಜೆಟ್​ನಲ್ಲಿ ಸೇರಿಲ್ಲ. ಸ್ಮಾರ್ಟ್ ಸಿಟಿ ಇಲ್ಲ, ಏನೇನೂ ಇಲ್ಲ ಇದು ನೋವಿನ ಸಂಗತಿ ಎಂದಿದ್ದಾರೆ. ಇಲ್ಲಿನ ರಾಜಕಾರಣಿಗಳಿಗೆ ಕೆಲಸ ಮಾಡಬೇಕು ಎನ್ನುವ ಇಚ್ಛಾಶಕ್ತಿ ಇಲ್ಲ ಎಂದು ನೇರವಾಗಿಯೇ ಚಾಟಿ ಬೀಸಿದ್ದಾರೆ. ಸಚಿವ ರಾಮುಲು ಈ ಮಠದ ಅನನ್ಯ ಭಕ್ತ. ಆದರೆ ಯಾವುದೇ ವಿಚಾರದ ಬಗ್ಗೆ ಸಿಎಂ ಬಳಿ ಹೋಗಿ ಮಾತನಾಡುವ ದಿಟ್ಟತನ ತೋರಿಸಬೇಕು. ಜಿಲ್ಲೆಯಲ್ಲಿ ಐದು ಜನ ಶಾಸಕರನ್ನ ಗೆಲ್ಲಿಸಿದ್ದಾರೆ. ದಿನದಿಂದ ದಿನಕ್ಕೆ ನಮ್ಮ ಜಿಲ್ಲೆ ಅದೋಗತಿ ಹೋಗುತ್ತಿದೆ. ಇನ್ನಾದರೂ ಅಭಿವೃದ್ಧಿ ಆಗಲಿ ಎಂದು ಎದೆಗೆ ಒದ್ದಂತೆ ಸರ್ಕಾರಕ್ಕೆ ಮುಟ್ಟಿಸಿದ್ದಾರೆ.

Read this;

ಯಡಿಯೂರಪ್ಪ ಹೊಗಳಿಯಲ್ಲಿ ಸ್ವಾಮೀಜಿಗೆ ಸಿಎಂ ಟಾಂಗ್..!

ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪರನ್ನು ಹಾಡಿ ಹೊಗಳಿದ್ದಾರೆ. ಹೋರಾಟಕ್ಕೆ ಇನ್ನೊಂದು ಹೆಸರು ಬಿ.ಎಸ್​ ಯಡಿಯೂರಪ್ಪ, ಅಧಿಕಾರಕ್ಕೆ ಬಂದ ಬಳಿಕ 24 ಗಂಟೆ ಕೆಲಸ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಎಸ್.ನಿಜಲಿಂಗಪ್ಪ ಕಾಲದಿಂದ ಇತ್ತು. ಯಡಿಯೂರಪ್ಪ ಸಿಎಂ ಆದ ಬಳಿಕ ಈ ಬರದ ನಾಡಿಗೆ ಭಗೀರಥನಾಗಿ ಬಂದರು. ಈ ಯೋಜನೆಯ ಕೆಲಸ ಆರಂಭವಾಗಿದ್ದು ಯಡಿಯೂರಪ್ಪ ಕಾಲದಲ್ಲಿ. ಆ ಯೋಜನೆಗೆ ಅಡಿಗಲ್ಲು ಹಾಕಿದ್ದು ಯಡಿಯೂರಪ್ಪ. ಒಂದೂವರೆ ವರ್ಷದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣವಾಗುತ್ತದೆ. ರಾಷ್ಟ್ರೀಯ ಯೋಜನೆಯಾಗುವ ಕೊನೆ ಹಂತದಲ್ಲಿ ಇದೆ. ಮುಂದಿನ ದಿನಗಳಲ್ಲಿ ಇಂಡಸ್ಟ್ರಿಯಲ್ ಟೌನ್​​ಶಿಪ್​ಗೆ ಚಿತ್ರದುರ್ಗವನ್ನು ಸೇರಿಸುವೆ. ಕೂಡಲೇ 1 ಸಾವಿರ ಎಕರೆ ಗುರುತಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸಿಎಂ ಡಿಸಿಗೆ ಸೂಚಿಸಿದ್ದಾರೆ. ಮುರುಘಾ ಶ್ರೀಗಳ ಜನ್ಮ ದಿನವನ್ನ ಸಮಾನತೆಯ ದಿನವಾಗಿ ಆಚರಿಸಲು ಅಧಿಕಾರಿಗಳ ಜೊತೆ‌ ಚರ್ಚಿಸುವೆ ಎಂದಿದ್ದಾರೆ.

ಐತಿಹಾಸಿಕ ನಗರಿ ಚಿತ್ರದುರ್ಗ ಅಭಿವೃದ್ಧಿ ಆಗಿದ್ಯಾ..?

ಮುರುಘಾ ಶ್ರೀಗಳು ಸರ್ಕಾರಕ್ಕೆ ಹೇಳಬೇಕಿದ್ದ ವಿಚಾರವನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಇದಕ್ಕೆ ಕಾರಣ ಎಂದರೆ ಚಿತ್ರದುರ್ಗ ನಗರ ಸೇರಿದಂತೆ ಉಳಿತ ತಾಲೂಕುಗಳೂ ಕೂಡ ಇನ್ನೂ ಹಿಂದುಳಿದ ಪಟ್ಟಣಗಳಾಗಿವೆ. ಚಿತ್ರದುರ್ಗಕ್ಕೆ ಇತಿಹಾಸದಲ್ಲಿ ಮೈಸೂರಿನಂತೆಯೇ ತನ್ನದೇ ಆದ ವಿಶೇಷಗಳನ್ನು ಹೊಂದಿದೆ. ಆದರೆ ಮೈಸೂರಿಗೆ ಸಿಕ್ಕಿರುವ ಆದ್ಯತೆ ಚಿತ್ರದುರ್ಗಕ್ಕೆ ಸಿಕ್ಕಿಲ್ಲ. ಅಷ್ಟೇ ಅಲ್ಲದೆ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕಿರುವ ಕಾರಣದಿಂದ ಹೆದ್ದಾರಿ ಮಾತ್ರವೇ ಇದ. ಇನ್ನುಳಿದಂತೆ ಚಿತ್ರದುರ್ಗದ ಒಳಗೆ ರಸ್ತೆಗಳೇ ಅವ್ಯವಸ್ಥೆಯಿಂದ ಕೂಡಿವೆ. ಕೋಟೆಗೆ ಸಾವಿರಾರು ಜನರು ಪ್ರವಾಸಿಗರೂ ಬಂದರೂ ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಹಾಗೇ ಇದೆ. ಇಲ್ಲಿನ ಜನರು ಅಭಿವೃದ್ಧಿಯನ್ನು ಮರೆತು ಪಕ್ಷಗಳನ್ನು ನೋಡಿ, ಜಾತಿ ಆಧಾರಿತವಾಗಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವುದೇ ಅಭಿವೃದ್ಧಿ ಕುಂಠಿತಕ್ಕೆ ಕಾರಣ ಎನ್ನುವ ಆರೋಪಗಳೂ ಇವೆ. ಇನ್ನು ಮುಂದಾದರೂ ಅಭಿವೃದ್ಧಿಗಾಗಿಯೇ ಆಯ್ಕೆ ನಡೆಯುವಂತಾಗಲಿ ಎಂದು ಬಯಸಬೇಕಿದೆ.

Related Posts

Don't Miss it !