ಮೈಸೂರಲ್ಲಿ ಮತ್ತೆ ನಡೀತಾ ತಲೆ ತಗ್ಗಿಸುವ ಅತ್ಯಾಚಾರ ಘಟನೆ..!?

ಮೈಸೂರಲ್ಲಿ ಸಾಮೂಹಿಕ ಅತ್ಯಾಚಾರ ಘಟನೆ ನಡೆದು ಕೆಲವೇ ದಿನಗಳು ಕಳೆದಿವೆ. ಮೈಸೂರಿನ ಜನರು ಸಾಮೂಹಿಕ ಅತ್ಯಾಚಾರ ಘಟನೆಯ ಶಾಕ್​ನಿಂದ ಈಗಷ್ಟೇ ಹೊರಕ್ಕೆ ಬರುತ್ತಿದ್ದಾರೆ. ಅಷ್ಟರಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದ್ದು, ಮತ್ತೆ ಮೈಸೂರಿನ ಜನರನ್ನು ಆತಂಕ ದೂಡುವಂತೆ ಮಾಡಿದೆ. ಯುವತಿ ಮೇಲೆ ಅತ್ಯಾಚಾರ ಯತ್ನ ನಡೆದಿದ್ದು, ಯುವತಿ ತೀವ್ರ ವಿರೋಧ ತೋರಿಸಿದಾಗ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮೈಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಿಂದರ ಹಿಂದೆ ಈ ರೀತಿಯ ಘಟನೆಗಳು ಜರುಗುತ್ತಿರುವ ಕಾರಣ ಜನರು ತಲೆ ತಗ್ಗಿಸುವಂತಾಗಿದೆ.

7 ಮಂದಿ ಸ್ನೇಹಿತರ ಜೊತೆ ವಿದ್ಯಾರ್ಥಿನಿ ವಾಸ..!

ಮೈಸೂರಿನ ಪುಷ್ಪಾಶ್ರಮ ಚರ್ಚ್ ಸಮೀಪದ ಹೋಲಿ ಕ್ರಾಸ್ ಸ್ಟಡಿ ಹೌಸ್​ನಲ್ಲಿ ಸ್ನೇಹಿತೆಯರ ಜೊತೆಗೂಡಿ ಯುವತಿ ವಾಸವಾಗಿದ್ದಳು ಎನ್ನಲಾಗಿದ್ದು, ಆಂಧ್ರ ಪ್ರದೇಶ ಮೂಲದ 7 ಮಂದಿ ವಿದ್ಯಾರ್ಥಿನಿಯರು ವಾಸವಾಗಿದ್ರು. ಉಳಿದ ವಿದ್ಯಾರ್ಥಿನಿಯರು ತರಗತಿಗೆ ತೆರಳಿದ್ದ ವೇಳೆ ಯುವತಿ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳವೂ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಸುತ್ತಮುತ್ತ ಸಿಸಿಟಿವಿಗಳನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Read this also;

ಪರಿಚಯಸ್ಥನಿಂದಲೇ ನಡೀತಾ ರೇಪ್​ ಅಟೆಮ್ಟ್​..!?

ಎನ್​.ಆರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ನಾಲ್ಕೈದು ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಸಾಕ್ಷ್ಯಾಧಾರ ಸಂಗ್ರಹ ಪ್ರಕ್ರಿಯೆ ನಡೆಸಿದ ಡಿಸಿಪಿ ಪ್ರದೀಪ್ ಗುಂಟಿ, ಬೆರಳಚ್ಚು ತಜ್ಞರು ವಾಪಸ್​ ಆಗುವ ವೇಳೆಗೆ ಆರೋಪಿ ಅಂದರ್​ ಆಗಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿ ಬಗ್ಗೆಯೇ ಅನುಮಾನ ದಟ್ಟವಾಗ್ತಿದೆ. ಮೊದಲಿಗೆ ಅಪರಿಚಿತನಿಂದ ಕೃತ್ಯ ಎಂದಿದ್ದ ಯುವತಿ ಉಲ್ಟಾ ಹೊಡೆದಿದ್ದು, ಯುವಕನನ್ನು ಬಂಧಿಸಿದ ಬಳಿಕ ಆತನ ಪರಿಚಯ ಇದೆ ಎಂದಿದ್ದಾಳೆ ಎನ್ನಲಾಗಿದೆ. ಯುವತಿ ಜೊತೆಗೆ ಯುವಕ ಮೊಬೈಲ್‌ ಮೂಲಕ ನಿರಂತರ ಸಂಪರ್ಕದಲ್ಲಿ ಇದ್ದ ಎನ್ನಲಾಗ್ತಿದೆ. ಘಟನೆ ನಡೆಯುವ ಮುನ್ನವೂ ಯುವಕ ಯುವತಿ ಸಂಪರ್ಕದಲ್ಲಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿದೆ.

Read this also;

ಅನ್ಯ ರಾಜ್ಯದ ವಾಸಿಗಳಿಂದಲೇ ಕೆಟ್ಟ ಹೆಸರು..!

ಸಾಂಸ್ಕೃತಿಕ ನಗರಿ ಮೈಸೂರು ನಿವೃತ್ತರ ಸ್ವರ್ಗ ಎನ್ನುವ ಮಾತಿತ್ತು. ಅನೇಕ ಅಧಿಕಾರಿಗಳು ಸೇರಿದಂತೆ ಸಾಕಷ್ಟು ಜನ ಬೆಂಗಳೂರಿನಲ್ಲಿ ಇದ್ದರೂ ಅಂತಿಮ ಕಾಲ ಕಳೆಯುವ ಉದ್ದೇಶದಿಂದ ಮೈಸೂರಿನಲ್ಲಿ ಮನೆ ಮಾಡಿಕೊಂಡು ಹೋಗುತ್ತಿದ್ದರು. ಮೈಸೂರು ಅಷ್ಟರ ಮಟ್ಟಿಗೆ ಶಾಂತಿಯಿಂದ ಕೂಡಿತ್ತು. ಆದರೆ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಸ್ಥಳೀಯರಿಗೆ ಆತಂಕ ಉಂಟುಮಾಡಿದೆ. ವಿದ್ಯಾಭ್ಯಾಸ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಮೈಸೂರಿಗೆ ಬಂದಿರುವ ವಿದೇಶಿ ಹಾಗೂ ಅನ್ಯ ರಾಜ್ಯದ ಜನರ ಉಪಟಳ ಹೆಚ್ಚಾಗಿದ್ದು, ಅಪರಾಧ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಜೊತೆಗೆ ಪೊಲೀಸರ ಕಾರ್ಯಕ್ಷಮತೆಯೂ ಕಡಿಮೆ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Related Posts

Don't Miss it !