‘ಮೈಸೂರು’ ವಿವಿಯಲ್ಲಿ ‘ಮಲ್ಲಿಗೆ’ ಘಮಲು..! ಗುರು ಶಿಷ್ಯೆ ಕಣ್ಸೆರೆ..

ಮೈಸೂರು ವಿಶ್ವವಿದ್ಯಾಲಯ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಒಂದು. ಈ ವಿಶ್ವವಿದ್ಯಾಲಯದಲ್ಲಿ ಓದಿರುವ ಅದೆಷ್ಟೋ ಮಂದಿ ಪ್ರಖ್ಯಾತಿ ಪಡೆದಿದ್ದಾರೆ. ನಮ್ಮ ರಾಷ್ಟ್ರಕವಿ ಕುವೆಂಪು ಸೇರಿದಂತೆ ಸಾಕಷ್ಟು ಕವಿ, ಲೇಖಕರು ವಿದ್ಯಾರ್ಥಿಗಳಿಗೆ ಪಾಠ ಮಾಡಿರುವ ಜ್ಞಾನ ದೇಗುಲ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ಮೈಸೂರು ವಿಶ್ವವಿದ್ಯಾಲಯ ಅನೇಕ ಕೆಟ್ಟ ಕೃತ್ಯಗಳಿಂದಲೇ ಹೆಸರುವಾಸಿಯಾಗುತ್ತಿದೆ. ಅಂತಹ ಘಟನೆಯೊಂದು ಗುರುವಾರ ನಡೆದಿದೆ. ಅದು ಕೂಡ ಗುರು ಶಿಷ್ಯೆಯ ನಡುವೆ ಅನ್ನೋದು ವಿಶೇಷ.

ಪ್ರಾಧ್ಯಾಪಕರ ವಿರುದ್ಧ ಪ್ರಾಧ್ಯಾಪಕಿ ದೂರು..!

ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಮಚಂದ್ರಪ್ಪ ವಿರುದ್ಧ ಪ್ರಾಧ್ಯಾಪಕಿ ಆಗಿರುವ ಲೋಲಾಕ್ಷಿ ಜಯಲಕ್ಷ್ಮಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದಕ್ಕೆ ಕಾರಣ ಪ್ರಾಧ್ಯಾಪಕ ರಾಮಚಂದ್ರ ಹೆಸರಿಗಷ್ಟೇ ಸೀಮಿತವಾಗಿದ್ದು. ರಾಮಚಂದ್ರ ಎಂದು ಹೆಸರಿಟ್ಟುಕೊಂಡು ಹೆಸರಿಗೆ ವಿರುದ್ಧವಾಗಿದ್ದನ್ನೇ ಹೆಚ್ಚಾಗಿ ಮಾಡುತ್ತಿದ್ದ ಪ್ರಾಧ್ಯಾಪಕ ರಾಮಚಂದ್ರ ಪತ್ನಿ ಲೋಲಾಕ್ಷಿ ಅವರಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕಾಣಬಾರದನ್ನು ಕಣ್ಣಾರ ಕಂಡ ಪತ್ನಿ ಲೋಲಾಕ್ಷಿ ಸ್ವತಃ ಪತಿಯ ವಿರುದ್ಧ ದೂರು ದಾಖಲು ಮಾಡಲು ಗುರು ಶಿಷ್ಯೆಯನ್ನು ಠಾಣೆಗೆ ಕರೆತಂದಿದ್ದರು.

ಪ್ರಾಧ್ಯಾಪಕಿ ಲೋಲಾಕ್ಷಿ

ಮೈಸೂರು ವಿವಿ ಪ್ರಾಧ್ಯಾಪಕರು ಮಾಡಿದ್ದೇನು..?

ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಮಚಂದ್ರ ಪಿಹೆಚ್​ಡಿ ಓದುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕನಾಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ತನ್ನ ಮಾರ್ಗದರ್ಶನದಲ್ಲಿ ಓದಲು ಬರುವ ವಿದ್ಯಾರ್ಥಿನಿಯನ್ನ ತನ್ನ ಚಪಲಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನುವುದು ಪ್ರಾಧ್ಯಾಪಕ ರಾಮಚಂದ್ರ ಪತ್ನಿ ಪ್ರಾಧ್ಯಾಪಕಿ ಲೋಲಾಕ್ಷಿ ಅವರ ಆರೋಪ. ಸಾಕಷ್ಟು ದಿನಗಳಿಂದ ಈ ರೀತಿಯ ವ್ಯವಹಾರ ಕದ್ದುಮುಚ್ಚಿ ನಡೆಯುತ್ತಿತ್ತು. ಆದರೆ ಇಂದು ಶಿಷ್ಯೆ ಜೊತೆಗಿನ ಸಲುಗೆ ನನ್ನ ಕಣ್ಣೆದುರೇ ಕಂಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಲ್ಲಿ ಆಗ್ರಹ ಮಾಡಿದ್ದರು.

ಸಂತ್ರಸ್ತ ಪಿಹೆಚ್​ಡಿ ವಿದ್ಯಾರ್ಥಿನಿ

ಸಂತ್ರಸ್ತ ಯುವತಿ ಪ್ರಾಧ್ಯಾಪಕ ರಾಮಚಂದ್ರ ಬಳಿ ಪಿಎಚ್‌ಡಿ ಮಾರ್ಗದರ್ಶನ ಪಡೆಯುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯನ್ನು ಮನೆಗೆ ಮನೆಗೆ ಕರೆಸಿಕೊಂಡಿದ್ದ ಪ್ರಾಧ್ಯಾಪಕ ರಾಮಚಂದ್ರ. ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಸಂತ್ರಸ್ತೆ ಕೂಗಾಟ ಚೀರಾಟ ನಡೆಸಿದ್ದರು. ಅದೇ ಸಮಯಕ್ಕೆ ನಾನು ಮನೆಗೆ ಬಂದು ಬಾಗಿಲು ತೆಗೆಸಿದೆ. ಸಂತ್ರಸ್ತ ಯುವತಿ ನನ್ನ ಕಾಲು ಹಿಡಿದುಕೊಂಡು, ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದಳು. ಕೂಡಲೇ ಇಬ್ಬರನ್ನು ಠಾಣೆಗೆ ಕರೆದುಕೊಂಡು ಬಂದಿದ್ದೇನೆ. ನನ್ನ ಗಂಡ ಡಿಪಾರ್ಟ್​ಮೆಂಟ್​ನಲ್ಲೇ ಸಾಕಷ್ಟು ಯುವತಿಯರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರು. ಇದರ ಬಗ್ಗೆ ಸಾಕಷ್ಟು ಅನುಮಾನವಿತ್ತು. ಇದೀಗ ಸಾಬೀತಾಗಿದೆ ಎಂದಿದ್ದಾರೆ.

ಪ್ರಾಧ್ಯಾಪಕರು ಹಾಗೂ ಪತ್ನಿ ಜೊತೆಗಿನ ವೈಮನಸ್ಸು..!

ಪ್ರಾಧ್ಯಾಪಕ ರಾಮಚಂದ್ರ ಹಾಗೂ ಪ್ರಾಧ್ಯಾಪಕಿ ಆಗಿರುವ ಲೋಲಾಕ್ಷಿ ಸಂಸಾರ ಹಾಲು ಜೇನಿನ ಹಾಗೆ ಇತ್ತು ಎನ್ನಲು ಸಾಧ್ಯವಿಲ್ಲ. ಈ ಹಿಂದೆ ಇವರಿಬ್ಬರ ನಡುವೆ ಸಾಕಷ್ಟು ಕಲಹಗಳು ನಡೆದಿದ್ದವು ಎನ್ನುವುದನ್ನು ಸ್ವತಃ ಲೋಲಾಕ್ಷಿ ಅವರೇ ಒಪ್ಪಿಕೊಂಡಿದ್ದಾರೆ. ಇನ್ನೂ ಸಂತ್ರಸ್ತ ಯುವತಿ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿದಳು ಎಂದಿದ್ದಾರೆ. ಆದರೆ ಅತ್ಯಾಚಾರ ಆಗಿದೆಯಾ ಎನ್ನುವುದು ವೈದ್ಯಕೀಯ ತಪಾಸಣೆಯಲ್ಲಿ ಸಾಬೀತಾಗಬೇಕು. ಇನ್ನು ಸಂಸಾರದಲ್ಲಿ ನಡೆದಿದ್ದ ಕಲಹದಿಂದ ಜಿದ್ದಿಗೆ ಬಿದ್ದಿದ್ದ ಪ್ರಾಧ್ಯಾಪಕಿ ಲೋಲಾಕ್ಷಿ, ಉದ್ದೇಶಪೂರ್ವಕವಾಗಿ ಪ್ರಾಧ್ಯಾಪಕ ರಾಮಚಂದ್ರ ಅವರನ್ನು ಅತ್ಯಾಚಾರ ಕೇಸ್​ನಲ್ಲಿ ಸಿಲುಕಿಸುತ್ತಿದ್ದಾರೆಯೇ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸಬೇಕಿದೆ. ಅಥವಾ ಒಪ್ಪಿತ ಸೆಕ್ಸ್​ ನಡೆದಿದ್ದು, ಪ್ರಾಧ್ಯಾಪಕಿ ಬಂದ ಕೂಡಲೇ ಕೇಸ್​ ಬೇರೆ ದಿಕ್ಕಿಗೆ ಬದಲಾಯ್ತಾ ಎನ್ನುವ ಬಗ್ಗೆಯೂ ಅನುಮಾನಗಳು ಮೂಡುತ್ತಿದೆ. ಒಂದು ವೇಳೆ ಒತ್ತಾಯ ಪೂರ್ವಕವಾಗಿ ಪ್ರಾಧ್ಯಾಪಕರು ಶಿಷ್ಯೆಯನ್ನು ಬಳಸಿಕೊಂಡಿದ್ದರೆ, ಪ್ರಾಧ್ಯಾಪಕಿ ಲೋಲಾಕ್ಷಿ ಹೇಳಿದಂತೆ ಪ್ರಾಧ್ಯಾಪಕ ರಾಮಚಂದ್ರ ಅವರಿಗೆ ಶಿಕ್ಷೆ ಆಗಲೇಬೇಕಿದೆ.

Related Posts

Don't Miss it !