ಸಿಎಂ ಬದಲಾವಣೆ ಖಚಿತ, ಇನ್ನಿಬ್ಬರಿಗೂ ಗೇಟ್​ಪಾಸ್​..! ಕಟೀಲ್​ ಆಡಿಯೋ ವೈರಲ್​

Nalin kumar with Cm Bsy

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಾಕಷ್ಟು ದಿನಗಳಿಂದ ಭಾರೀ ಚರ್ಚೆ ನಡೆಯುತ್ತಲೇ ಇದೆ. ಆದರೆ ಬಿಜೆಪಿ ನಾಯಕರು ಮಾತ್ರ ಬದಲಾವಣೆ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇತ್ತೀಚಿಗೆ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ, ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಆಗಸ್ಟ್​ ಮೊದಲ ವಾರದಲ್ಲಿ ಮತ್ತೆ ದೆಹಲಿಗೆ ಬರುತ್ತೇನೆ. ಮುಂದಿನ ಎರಡು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಆತ್ಮವಿಶ್ವಾಸದಲ್ಲಿ ಹೇಳಿದ್ದರು. ಆದರೂ ನಾಯಕತ್ವ ಬದಲಾವಣೆ ಆಗುತ್ತೆ ಎನ್ನುವ ಮಾತುಗಳೇ ದೆಗಲಿ ಪತ್ರಕರ್ತರ ಪಡಸಾಲೆಯಲ್ಲಿ ಕೇಳಿ ಬಂದ ಮಾತುಗಳು. ಅದನ್ನು ಇದೀಗ ನಳೀನ್​ ಕುಮಾರ್​ ಕಟೀಕ್​ ಖಚಿತ ಮಾಡಿದ್ದಾರೆ.

ತುಳು ಭಾಷೆಯ ಆಡಿಯೋದಲ್ಲಿ ಏನೇನಿದೆ..?

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, ತನ್ನ ಆಪ್ತರ ಬಳಿ ಮಾತನಾಡುತ್ತ, ಜಗದೀಶ್​ ಶೆಟ್ಟರ್​ ಹಾಗೂ ಕೆ.ಎಸ್​ ಈಶ್ವರಪ್ಪ ಇಬ್ಬರೂ ಹೊರಕ್ಕೆ ಹೋಗ್ತಾರೆ. ಸಿಎಂ ಬದಲಾವಣೆ ಮಾಡುವುದು ನಿಶ್ಚಿತ. ಈಗಾಗಲೇ ಮೂವರ ಹೆಸರು ಫೈನಲ್​ ಆಗಿದೆ. ಆ ಮೂವರು ನಮ್ಮವರೇ ಇರಲಿದ್ದಾರೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂದಿದ್ದಾರೆ. ಹೆದರಬೇಡಿ, ಯಾರಾದರೂ ನಮ್ಮವರೇ ಆಗಲಿದ್ದಾರೆ. ಇಲ್ಲಿಂದ ಯಾರನ್ನೂ ಹಾಕುವುದಿಲ್ಲ, ದೆಹಲಿಯಿಂದಲೇ ಹಾಕ್ತಾರೆ. ಸದ್ಯಕ್ಕೆ ಯಾರಿಗೂ ಹೇಳಲು ಹೋಗಬೇಡಿ ಎಂದಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ಉತ್ಕೃಷ್ಟವಾದ ಸಾಕ್ಷಿ ಕೊಟ್ಟಂತೆ ಆಗಿದೆ.

ಆ ಆಡಿಯೋ ನನ್ನದಲ್ಲ ತನಿಖೆ ಮಾಡುಸ್ತೀವಿ..!

ಆಡಿಯೋ ಸಾಕಷ್ಟು ವೈರಲ್​ ಆಗುತ್ತಿದ್ದ ಹಾಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, ಆ ಆಡಿಯೋದಲ್ಲಿ ಮಾತನಾಡಿರುವುದು ನಾನಲ್ಲ. ನನ್ನದೇ ವಾಯ್ಸ್​ ರೀತಿ ಮಾತನಾಡಿ ಯಾರೋ ಗೊಂದಲ ಸೃಷ್ಟಿಗೆ ಯತ್ನಿಸುತ್ತಿದ್ದಾರೆ. ಯಾರು ಎಂಬುದನ್ನು ಮೇಲ್ನೋಟಕ್ಕೆ ಹೇಳಲಾಗದು. ಸೂಕ್ತ ತನಿಖೆ ನಡೆಸಿ ಯಾರೆಂಬುದನ್ನು ಬಹಿರಂಗ ಮಾಡುತ್ತೇವೆ. ಈ ಬಗ್ಗೆ ಈಗಲೇ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸುತ್ತೇನೆ ಎಂದಿದ್ದಾರೆ.

ಸಿಎಂಗೆ ಪತ್ರ ಬರೆದ ನಳೀನ್​ ಕುಮಾರ್​ ಕಟೀಲ್​..!

ಆಡಿಯೋ ಸಾಕಷ್ಟು ಚರ್ಚೆ ಹುಟ್ಟುಹಾಕುತ್ತಿದ್ದ ಹಾಗೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, ಯಾರೋ ಕಿಡಿಗೇಟಿಗಳು ನನ್ನ ವಾಯ್ಸ್​ ನಕಲು ಮಾಡಿ ಮಾತನಾಡಿ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಿದ್ದಾರೆ. ಇದರ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹ ಮಾಡಿದ್ದಾರೆ. ಇದರ ಹಿಂದೆ ಇರುವ ಕಿಡಿಗೇಡಿಗಳು ಯಾರು ಎಂಬುದನ್ನು ಬಯಲು ಮಾಡಬೇಕು ಎಂದು ಮನವಿ ಮಾಡಿದ್ದಾರೆ.

Related Posts

Don't Miss it !