ಯಡಿಯೂರಪ್ಪ ಬಿಜೆಪಿಗೆ ಬೆದರಿಕೆ ಹಾಕಿದ್ಯಾಕೆ..? ಹೀಗೆ ಸೇಡು ತೀರಿಸಿಕೊಂಡ್ರಾ..?

ದಾವಣೆಗೆರೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಮಾತನಾಡಿರುವ ಮಾತುಗಳು ಬಿಜೆಪಿಗೆ ಬೆದರಿಕೆ ಒಡ್ಡುತ್ತಿದೆ ಎನ್ನುವುದು ಸಾಮಾನ್ಯರಿಗೂ ಅರ್ಥವಾಗುವ ಮಾತುಗಳು. ಇದಕ್ಕೆ ಪ್ರಮುಖ ಕಾರಣ ರಾಜ್ಯ ಪ್ರವಾಸ ಮಾಡಲು ಸಜ್ಜಾಗಿ ನಿಂತಿದ್ದ ಬಿ.ಎಸ್​ ಯಡಿಯೂರಪ್ಪ ಅವರನ್ನು ತಡೆದು ನಿಲ್ಲಿಸಿದ್ದ ಹೈಕಮಾಂಡ್​ ನಾಯಕರ ನಡೆ. ಇದೀಗ ಹೈಕಮಾಂಡ್​ ನಾಯಕರು ಒಪ್ಪಿಗೆ ಕೊಟ್ಟಿದ್ದಾರೆ. ಆದರೆ ಅದರಲ್ಲೂ ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕುವ ಕೆಲಸ ಮಾಡಿದರೆ. ಇಷ್ಟೆಲ್ಲಾ ರಗಳೆ ಮಾಡುತ್ತಿರುವ ಹೈಕಮಾಂಡ್​ ವಿರುದ್ಧ ನೇರವಾಗಿಯೇ ಯಡಿಯೂರಪ್ಪ ಸವಾಲು ಎಸೆದಿದ್ದಾರೆ. ಅದೂ ಕೂಡ ನಯವಾಗಿಯೇ ಎನ್ನುವುದು ಗಮನಿಸಲೇ ಬೇಕಾದ ಅಂಶ.

ರಾಜ್ಯ ಪ್ರವಾಸಕ್ಕೆ ಗ್ರೀನ್​ ಸಿಗ್ನಲ್​ ಹೇಗಿದೆ..?

ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​, ರಾಜ್ಯ ಪ್ರವಾಸ ಆರಂಭಿಸಲು ಗ್ರೀನ್ ಸಿಗ್ನಲ್ ನೀಡುವ ಪ್ರಶ್ನೆಯೇ ಇಲ್ಲ, ಯಡಿಯೂರಪ್ಪ ಹಿರಿಯ ನಾಯಕ ಅವರು ಪ್ರವಾಸ ಮಾಡಬಹುದು ಎಂದಿದ್ದಾರೆ. ಆದರ ಜೊತೆಯಲ್ಲಿ ಬಸವರಾಜ ಬೊಮ್ಮಾಯಿ ನೇತ್ರತ್ವದಲ್ಲೇ ಚುನಾವಣೆ ಎಂದು ಈಗಾಗಲೇ ಹೇಳಲಾಗಿದೆ ಎನ್ನುವ ಮೂಲಕ ಮತ್ತೆ ಚುಚ್ಚಿದ್ದಾರೆ. ಇನ್ನೂ ರಾಜ್ಯ ಪ್ರವಾಸವನ್ನು ಯಡಿಯೂರಪ್ಪ ಮಾತ್ರ ಮಾಡುವಂತಿಲ್ಲ. ಯಡಿಯೂರಪ್ಪ ಅವರ ಜೊತೆಗೆ ನಾಲ್ಕು ತಂಡಗಳನ್ನು ರಚನೆ ಮಾಡಲಿದ್ದು, ಆ ತಂಡಗಳೂ ಪ್ರವಾಸ ಮಾಡಲಿವೆ. ಈ ವಿಚಾರಕ್ಕೂ ಗರಂ ಆಗಿರುವ ಯಡಿಯೂರಪ್ಪ, ರಾಜ್ಯ ಪ್ರವಾಸ ಎಂದರೆ ನಾನೇನು ಒಬ್ಬನೇ ಹೋಗ್ತೀನಾ..? ನಾನು ಹೋದರೆ ಎಲ್ಲಾ ಶಾಸಕರು, ಸಂಸದರ ಜೊತೆ‌ ಹೋಗುತ್ತೇನೆ ಎಂದಿದ್ದಾರೆ.

Read this also;

ಮೋದಿ ಹೆಸರು ಹೇಳಿಕೊಂಡು ಗೆಲ್ಲಲು ಸಾಧ್ಯವಿಲ್ಲ..!

ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿಕೊಂಡು ಗೆಲ್ಲಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ. ಕೇಂದ್ರದಲ್ಲಿ ಮೋದಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಮುಂದಿನ ಬಾರಿಯೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಎದ್ದು ಕೂತಿದೆ. ವಿಪಕ್ಷಗಳು ಕೂಡ ತಮ್ಮ ತಂತ್ರ ಮಾಡುತ್ತಿವೆ. ಹೀಗಾಗಿ ನಾವು ಇನ್ನಷ್ಟು ಹೆಚ್ಚು ಕೆಲಸ ಮಾಡಬೇಕು. ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟನೆ ಮಾಡಬೇಕು ಎಂದಿದ್ದಾರೆ ಬಿ.ಎಸ್​ ಯಡಿಯೂರಪ್ಪ. ಜೊತೆಗೆ ಹಾನಗಲ್‌ ಮತ್ತು ಸಿಂದಗಿ ಉಪಚುನಾವಣೆ ಸುಲಭದ ಚುನಾವಣೆ ಅಲ್ಲ. ನಾವು ವಿಶೇಷ ಪ್ರಯತ್ನ ಮಾಡಿ ಗೆಲುವು ಕಾಣಬೇಕು. ಹಾಗಾದಾಗ ಮಾತ್ರ ಕಾಂಗ್ರೆಸ್‌ಗೆ ಪಾಠ ಕಲಿಸದಂತಾಗುತ್ತದೆ. ಈ ಎರಡು ಕ್ಷೇತ್ರದ ಚುನಾವಣೆಗಳು ಅಗ್ನಿಪರೀಕ್ಷೆ, ಮೋದಿ‌ ಹೆಸರಿನಿಂದ ಲೋಕಸಭೆ ಚುನಾವಣೆ ಗೆಲ್ಲಬಹುದು. ಆದರೆ ವಿಧಾನಸಭೆ ಚುನಾವಣೆ ಕೆಲಸದ ಮೇಲೆಯೇ ಗೆಲ್ಲಬೇಕು ಎನ್ನುವ ಮೂಲಕ ಬಿಜೆಪಿಗೆ ಠಕ್ಕರ್ ಕೊಟ್ಟಿದ್ದಾರೆ.

Read this also;

ವಿಪಕ್ಷ ಕಡೆಗಣಿಸಿದ್ರೆ ಆಪತ್ತು ಕಟ್ಟಿಟ್ಟ ಬುತ್ತಿ..!

ಮೋದಿ ನಾಮ ಜಪಿಸುವ ತಮ್ಮದೇ ಪಕ್ಷಕ್ಕೆ ಕೌಂಟರ್​ ಕೊಟ್ಟಿರುವ ಬಿ.ಎಸ್​ ಯಡಿಯೂರಪ್ಪ, ನಾವೆಲ್ಲಾ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಬೇಕು. ಪ್ರತಿಪಕ್ಷಗಳನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಕಾಂಗ್ರೆಸ್ ಮುಖಂಡರು ಈಗಾಗಲೇ ಬಿಜೆಪಿ ಪಕ್ಷದ ನಾಯಕರಯನ್ನು ಸಂಪರ್ಕ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲುವುದು ಪ್ರಮುಖ ಗುರಿ ಆಗಬೇಕು. ಪ್ರತಿ ಬೂತ್‌ನಲ್ಲಿ 25 ಮಹಿಳೆಯರು ಹಾಗೂ ಯುವಕರ ತಂಡ ನಮ್ಮ ಜೊತೆಗಿರಬೇಕು ಎಂದಿದ್ದಾರೆ. ಹಿಂದುಳಿದ, ಪರಿಶಿಷ್ಟ ಸಮುದಾಯದ ಬೆಂಬಲ ಪಡೆಯಬೇಕು ಎಂದಿದ್ದಾರೆ. ಇನ್ನೂ ಡಿ.ಕೆ ಶಿವಕುಮಾರ್ ವಿಶೇಷ ಪ್ರಯತ್ನ ಫಲ ಕೊಡುವುದಿಲ್ಲ. ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related Posts

Don't Miss it !