ಬೆಂಗಳೂರಿನಲ್ಲಿ ನಡೆದಿದೆ ದೇಶವೇ‌ ಬೆಚ್ಚಿ ಬೀಳುವಂತಹ ಗ್ಯಾಂಗ್ ರೇಪ್..!!

ಬೆಂಗಳೂರಿನಲ್ಲಿ ಇಡೀ ದೇಶವೇ ತಲೆ ತಗ್ಗಿಸುವ ಘಟನೆಯೊಂದು ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಯುವತಿ ಮೇಲೆ ನಾಲ್ವರು ಯುವಕರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ದೂರು ದಾಖಲು ಮಾಡಲಾಗಿದೆ. ಸಂಜಯ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ನಾಲ್ವರು ಯುವಕರನ್ನು ಬಂಧಿಸಿ‌ ವಿಚಾರಣೆ ನಡೆಸಿದ್ದಾರೆ. ರಜತ್, ಶಿವ ರಾಣಾ, ದೇವ್ ಸರೋಯಿ ಹಾಗೂ ಯೋಗೇಶ್ ಕುಮಾರ್ ಬಂಧಿತ ಆರೋಪಿಗಳು ಎನ್ನಲಾಗಿದ್ದು, ಈ ನಾಲ್ವರಲ್ಲಿ ಒಬ್ಬನಾದ ರಜತ್ ಯುವತಿಗೆ ಪರಿಚಯದವನು ಎನ್ನಲಾಗಿದೆ.

ಬಂಧಿತ ಆರೋಪಿಗಳು ರಾಷ್ಟ್ರ ಮಟ್ಟದ ಈಜುಪಟುಗಳು..!!

ಬೆಂಗಳೂರು ಹಲವು ವಿಚಾರಗಳಲ್ಲಿ ಖ್ಯಾತಿ ಹೊಂದಿದೆ. ಕ್ರಿಕೆಟ್ ಆಟಗಾರರು ಕೂಡ ಅಭ್ಯಾಸ ನಡೆಸಲು KCA (Karnataka cricket Academy ) ಬರುವುದುಂಟು. ಅದೇ ರೀತಿ‌ ದೆಹಲಿ ಮೂಲದ ಈ ನಾಲ್ವರು ಅತ್ಯಾಚಾರ ಆರೋಪಿಗಳು, ರಾಷ್ಟ್ರ ಮಟ್ಟದ ಈಜುಪಟುಗಳು. ಬೆಂಗಳೂರಿನಲ್ಲಿ ಅಭ್ಯಾಸ ನಡೆಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಈ ನಡುವೆ ಸಂತ್ರಸ್ತ ಯುವತಿ ರಜತ್ ಎಂಬಾತನಿಗೆ ಪರಿಚಯ ಆಗಿದ್ದಳು. ಆಕೆಯ ಪರಿಚಯವನ್ನೇ ತನ್ನ ಹಾಗೂ ಸ್ನೇಹಿತರ ಕಾಮ ತೃಷೆಗೆ ಬಳಸಿಕೊಂಡ ಆರೋಪಿ ರಜತ್, ರೆಸ್ಟೋರೆಂಟ್‌ಗೆ ಕರೆದೊಯ್ದು ಅಲ್ಲಿಂದ ತಾನು ಹಾಗೂ ಸ್ನೇಹಿತರು ವಾಸವಿದ್ದ ಮನೆಗೆ ಕರೆದೊಯ್ದಿದ್ದನು. ಅಲ್ಲಿ ಮಧ್ಯರಾತ್ರಿ‌ ಎಲ್ಲರೂ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ‌ ಕೆಲಸ ಮಾಡ್ತಿದ್ದ ಸಂತ್ರಸ್ತೆ..!

ಬೆಂಗಳೂರು ಎಲ್ಲಾ ರೀತಿಯ ಕೆಲಸಗಾರರಿಗೂ ಕೆಲಸ ಹಾಗೂ ಕೈತುಂಬಾ ಸಂಬಳ ಕೊಡುವ ನಗರ. ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ವಿಶ್ವಮನ್ನಣೆ ಪಡೆದಿದೆ ಇದೇ ಕಾರಣಕ್ಕೆ ಸಂತ್ರಸ್ತ ಯುವತಿ ದೂರದ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ದೆಹಲಿ ಮೂಲದ ರಜತ್ ಎಂಬಾತನ ಜೊತೆಗೆ ಪರಿಚಯ ಆಗಿತ್ತು. ಇಬ್ಬರ ನಡುವೆ ಸ್ನೇಹ ಬೆಳೆದು ಕಳೆದ ಮಾರ್ಚ್ 24 ರಂದು ರೆಸ್ಟೋರೆಂಟ್ ಒಂದಕ್ಕೆ ಕರೆದೊಯ್ದಿದ್ದ. ವಾಪಸ್ ಆಗುವಾಗ ಮಧ್ಯರಾತ್ರಿ ಆಗಿದ್ದರಿಂದ ತನ್ನ ರೂಮ್‌ಗೆ ಹೋಗೋಣ ಎಂದು ಪುಸಲಾಯಿಸಿ ಕರೆದುಕೊಂಡು ಹೋಗಿದ್ದ. ಈ ವೇಳೆ ರೂಮಿನಲ್ಲಿದ್ದ ಇತರೆ ಸ್ನೇಹಿತರ ಜೊತೆಗೂಡಿ ಅತ್ಯಾಚಾರ ಮಾಡಿದ್ದಾರೆ ಎಂಬುದು ಆರೋಪ.‌ ಸಂಜಯ ನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯಾಂಶ ಹೊರಬೀಳಬೇಕಿದೆ.

ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಆಗಿದ್ದ 22 ವರ್ಷದ ಯುವತಿ..!!

ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಮುಂದೊಂದು ದಿನ ದೇಶದ ರಾಷ್ಟ್ರಧ್ವಜವನ್ನು ಹಾರಿಸಬೇಕಿದ್ದ ಯುವಕರು, ಕ್ಷಣಮಾತ್ರದ ಸುಖಕ್ಕಾಗಿ ತಮ್ಮ ಬದುಕನ್ನೇ ಬಲಿ ಕೊಟ್ಟಿದ್ದಾರೆ. ರಾಷ್ಟ್ರದ ಕೀರ್ತಿ ಪತಾಕೆ ಹಾರಿಸಬೇಕಿದ್ದ ಯುವಕರು ರಾಷ್ಟ್ರವೇ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಇನ್ನೂ ಆರೋಪಿ ರಜತ್ ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು, ಆ ಬಳಿಕ ರೂಮಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಮೊದಲಿಗೆ ರಜತ್ ಬಂಧಿಸಿದ ಬಳಿಕ ಉಳಿದ ಆರೋಪಿಗಳಿಗೂ ಕೋಳ ತೊಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Posts

Don't Miss it !