ನಡುರಸ್ತೆಯಲ್ಲೇ RTI ಕಾರ್ಯಕರ್ತನ ಕೈ, ಕಾಲು ಕಟ್​..!

Venkatesh

ಕರ್ನಾಟಕ ಬೆಚ್ಚಿ ಬೀಳುವ ಪ್ರಕರಣ ನಡೆದಿದೆ. ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಭೀಕರ ದಾಳಿ ನಡೆದಿದ್ದು, ಆರ್​ಟಿಐ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ನಡುರಸ್ತೆಯಲ್ಲೇ ದುಷ್ಕರ್ಮಿಗಳು ಕೈ ಮತ್ತು ಕಾಲು ಕತ್ತರಿಸಿದ್ದಾರೆ. ತಾವರೆಕೆರೆ ಸಮೀಪ ಆರ್​ಟಿಐ ಕಾರ್ಯಕರ್ತ ವೆಂಕಟೇಶ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಮಚ್ಚು ಲಾಂಗ್​ಗಳಿಂದ ದಾಳಿ ಮಾಡಲಾಗಿದೆ. ಸರ್ಕಾರಿ ಕೆಲಸಗಳು ಸೇರಿ ಸಾಕಷ್ಟು ಕಡೆ ಆರ್​ಟಿಐನಡಿ ಅರ್ಜಿ ಹಾಕುತ್ತಿದ್ದ ವೆಂಕಟೇಶ್​ ಮೇಲೆ ಅದೇ ವಿಚಾರಕ್ಕೆ ಅಥವಾ ವೈಯಕ್ತಿಕ ದ್ವೇಷಕ್ಕಾಗಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ವೆಂಕಟೇಶ್, ಆರೋಪಿಗಳ ಪತ್ತೆಗಾಗಿ ರಾಮನಗರ ಎಸ್​ಪಿ ಗಿರೀಶ್ ಮೂರು ತಂಡಗಳ ರಚನೆ ಮಾಡಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಹಾಡಹಗಲೇ ರಸ್ತೆಯಲ್ಲಿ ಹೋಗ್ತಿದ್ದ ವೆಂಕಟೇಶ್​ ಅವರನ್ನು ಅಡ್ಡಗಟ್ಟಿ ಕೈ ಕಾಲುಗಳನ್ನು ಕತ್ತರಿಸಿ ಅಲ್ಲಿಂದ ಎಸ್ಕೇಪ್​ ಆಗಿದ್ದಾರೆ. ಇದು ಪೊಲೀಸ್​ ಇಲಾಖೆ ತಲೆತಗ್ಗಿಸುವ ವಿಚಾರವಾಗಿದ್ದು, ಆರೋಪಿಗಳನ್ನು ಹಿಡಿಯಲೇ ಬೇಕಾದ ಒತ್ತಡದಲ್ಲಿ ಪೊಲೀಸ್​ ಅಧಿಕಾರಿಗಳಿದ್ದಾರೆ.

ರಾಮನಗರ ಎಸ್​ಪಿ ಗಿರೀಶ್ ಹಾಗೂ ಪೊಲೀಸ್​ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ವೆಂಕಟೇಶ್​ ಅವರನ್ನು ಕೂಡಲೇ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೈ ಕಾಲುಗಳನ್ನು ಕತ್ತರಿಸಿರುವುದು ಆರ್​ಟಿಐ ಅರ್ಜಿ ಹಾಕುತ್ತಿದ್ದರು ಎನ್ನುವ ಕಾರಣಕ್ಕೋ ಅಥವಾ ವೈಯಕ್ತಿಕ ದ್ವೇಷದಿಂದ ಕೃತ್ಯ ನಡೆದಿದೆಯೋ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕತ್ತರಿಸಿದ ಕಾಲು

ಶೀಘ್ರವಾಗಿಯೇ ಸಿಕ್ಕಿ ಬೀಳ್ತಾರೆ ದುಷ್ಕರ್ಮಿಗಳು..!

ಕೈ ಕಾಲುಗಳನ್ನು ಕತ್ತರಿಸಿರುವ ಘಟನೆಯನ್ನು ತುಲನಾತ್ಮಕವಾಗಿ ಪರಿಶೀಲಿಸಿದರೆ, ಇದು ಆರ್​ಟಿಐ ವಿಚಾರಕ್ಕಾಗಿಯೇ ನಡೆದಿರುವ ಘಟನೆ ಎನ್ನಬಹುದು. ಇದಕ್ಕೆ ಪ್ರಮುಖ ಕಾರಣ ದುಷ್ಕರ್ಮಿಗಳಿಗೆ ವೆಂಕಟೇಶ್​ ಕೊಲೆ ಮಾಡುವ ಉದ್ದೇಶ ಇದ್ದಂತೆ ಕಾಣುತ್ತಿಲ್ಲ. ಕೇವಲ ಹೆದರಿಸಿ ಬಿಡುವ ಉದ್ದೇಶದಿಂದಲೇ ಕೈ ಕಾಲುಗಳನ್ನು ಕತ್ತರಿಸಿದ್ದಾರೆ. ವೈಯಕ್ತಿಕ ದ್ವೇಷದಲ್ಲಿ ಹಲ್ಲೆ ಮಾಡುವುದು ಸಾಮಾನ್ಯ. ಅಥವಾ ದ್ವೇಷ ವಿಷಮ ಸ್ಥಿತಿಗೆ ಹೋದಾಗ ಕೊಲೆ ಮಾಡುವುದನ್ನು ನೋಡಿದ್ದೇವೆ. ಆದರೆ ಕೈ ಕಾಲು ಕತ್ತರಿಸುವುದು ಸಾಧ್ಯವಿಲ್ಲ ಎಂದೆನಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಯಾವ ಟೆಂಡರ್​ ವಿಚಾರದಲ್ಲಿ ಆರ್​ಟಿಐ ಹಾಕಿದ್ದರು..? ಯಾವ ಅರ್ಜಿ ವಿಚಾರದಲ್ಲಿ ಮೊದಲೇನಾದರೂ ಗಲಾಟೆ ನಡೆದಿತ್ತಾ ಎನ್ನುವ ಅಂಶಗಳನ್ನು ಪೊಲೀಸರು ತನಿಖೆ ನಡೆಸುತ್ತಾರೆ. ಆರ್​ಟಿಐ ಕಾರ್ಯಕರ್ತ ವೆಂಕಟೇಶ್​ಗೆ ಪ್ರಜ್ಞೆ ಬಂದ ಕೂಡಲೇ ಪೊಲೀಸರು ಈ ಎಲ್ಲಾ ಅಂಶಗಳ ಆಧಾರದ ಮೇಲೆ ಆರೋಪಿಘಲ ಕೈಗೆ ಶೀಘ್ರದಲ್ಲೇ ಕೋಳ ಕಾಯಂ. ಓರ್ವ ಆರ್​ಟಿಐ ಕಾರ್ಯಕರ್ತನನ್ನು ನಡುರಸ್ತೆಯಲ್ಲೇ ಹೀಗೆ ಕೈ ಕಾಲು ಕಡಿಯುವ ಪರಿಸ್ಥಿತಿ ಎದುರಾಗಿದೆ ಎಂದರೆ ಕಾನೂನು ಸುವ್ಯವಸ್ಥೆ ಬಗ್ಗೆ ಆಳುವ ವರ್ಗ ಅವಲೋಕನ ಮಾಡಬೇಕಾಗಿದೆ.

Related Posts

Don't Miss it !