‘ಮುಂದಿನ CM D.V ಸದಾನಂದಗೌಡ’, ಈ ಬಗ್ಗೆ DVS ಹೇಳಿದ್ದೇನು..?

ಯತ್ನಾಳ್​ ದೆಹಲಿಗೆ ಡಿ.ವಿ ಸದಾನಂದಗೌಡ ಬೆಂಗಳೂರಿಗೆ - ಸದಾನಂಗೌಡದ ಮನೆ ಬಳಿ ಮುಂದಿನ ಮುಖ್ಯಮಂತ್ರಿ ಘೋಷಣೆ - ಪಕ್ಷ ಹೇಳಿದ ಕೆಲಸ ಮಾಡೋದು ಅಷ್ಟೇ ನನ್ನ ಜವಾಬ್ದಾರಿ- ಡಿ.ವಿ ಸದಾನಂದಗೌಡ

ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವರಾಗಿದ್ದ ಡಿ.ವಿ ಸದಾನಂದಗೌಡ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿಗೆ ವಾಪಸ್​​ ಆಗಿದ್ದಾರೆ. ಮಾಜಿ ಕೇಂದ್ರ ಸಚಿವ ಸದಾನಂದಗೌಡ ಆಗಮನ ಹಿನ್ನೆಲೆ, ಸದಾನಂದಗೌಡರನ್ನು ನೋಡಿ ಮಾತನಾಡಿಸಲು ಬಿಜೆಪಿ ಕಾರ್ಯಕರ್ತರ ದಂಡು ಆಗಮಿಸಿತ್ತು. ಡಾಲರ್ಸ್ ಕಾಲೋನಿಯ ಸದಾನಂದಗೌಡರ ನಿವಾಸಕ್ಕೆ ಆಗಮಿಸಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರು ಗೌಡರಿಗೆ ಜೈಕಾರ ಹಾಕಿದ್ರು.

ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಡಿ.ವಿ ಸದಾನಂದಗೌಡರು, ನನ್ನ ಮತ್ತು ಪಕ್ಷದ ಕಾರ್ಯಕರ್ತರ ಸಂಬಂಧ ಎಲ್ಲೆ ಇದ್ರು ನಾವೆಲ್ಲರೂ ಒಟ್ಟಾಗಿ ಇದ್ದೇವೆ ಎಂಬ ಸಂದೇಶ ಇದು. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು ಪಕ್ಷದ ಕೆಲಸಕ್ಕೆ ತೊಡಗಿಸಿಕೊಳ್ತೇನೆ ಎಂದಿದ್ರು. ಆ ಕಾರಣಕ್ಕೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯೇ ನನ್ನ ಗುರಿ ಎಂದಿದ್ದಾರೆ. ಇನ್ನೂ ಪಕ್ಷ ಸಂಘಟನೆ ಹುಮ್ಮಸ್ಸಿನಲ್ಲಿರೋ ನಿಮಗೆ ಮುಂದೆ ಅದೃಷ್ಟ ಒಲಿಯುತ್ತಾ ಎಂಬ ಪ್ರಶ್ನೆಗೆ..? ಉತ್ತರಿಸಿದ ಗೌಡರು, ಅದನ್ನು ನಾನು ಹೇಗೆ ಹೇಳಲಿ, ಆದರೆ ಹಿರಿಯರು ಏನ್ ಹೇಳ್ತಾರೆ ಹಾಗೆ ನಡೆಯುತ್ತೇನೆ ಎಂದಿದ್ದಾರೆ.

ಡಿ.ವಿ ಸದಾನಂದಗೌಡರ ಮನೆ ಎದುರು ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸದಾನಂದಗೌಡ ಎಂಬ ಘೋಷಣೆ ಕೂಗಿದ್ರು. ಆ ವೇಳೆ ಇದು ಅಭಿಮಾನಿಗಳ ಅಭಿಪ್ರಾಯ. ಹಾಗಂತ ಇದನ್ನು ನಾನು ಹೇಳಿಸಿದ್ದು ಅಲ್ಲ ಎಂದಿದ್ದಾರೆ. ನನ್ನ ವಿರುದ್ದ ಯಾವುದೇ ಕಳಂಕ ಬಂದರೂ ಅದಕ್ಕೆಲ್ಲಾ ನಾನು ವಿಚಲಿತನಾಗೋದಿಲ್ಲ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ವಾರ್ಡ್​ಗಳಿಗೆ ಬರುತ್ತೇನೆ. ಈ ಲೋಕಸಭಾ ಕ್ಷೇತ್ರದಲ್ಲಿರುವ ಎಲ್ಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲೇಬೇಕು. ಇದು ನನ್ನ ಅಂತರಾಳ ಮಾತು ಎಂದಿದ್ದಾರೆ. ನಾವೆಲ್ಲರೂ ಒಟ್ಟಾಗಿ ಹೋಗೋಣ, ಸಮರ್ಥವಾಗಿ ಪಕ್ಷ ಸಂಘಟಿಸಿ, ಮುಂದೆ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದ್ದಾರೆ.

ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಸುಮಾರು 27 ವರ್ಷಗಳಿಂದ ಪಕ್ಷದ ಜವಬ್ದಾರಿಯಲ್ಲಿದ್ದೇನೆ. ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಎಲ್ಲಾ ಜವಾಬ್ದಾರಿ ನೀಡಿದೆ. ರಾಷ್ಟ್ರೀಯ ಅಧ್ಯಕ್ಷರು ನನಗೆ ಏನು ರಾಜ್ಯ ಸಂಘಟನೆ ಅಂತಾ ಹೇಳಿಲ್ಲ. ಒಟ್ಟು ಪಕ್ಷ ಸಂಘಟನೆ ಅಂತಾ ನನಗೆ ಹೇಳಿದ್ದಾರೆ. ನಾನು ಯಾವುದೇ ಜವಾಬ್ದಾರಿ ನಿರೀಕ್ಷೆ ಮಾಡಿಲ್ಲ, ಮುಂದೆಯೂ ಮಾಡೋದಿಲ್ಲ ಎಂದಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಹೇಳಿದಂತೆ ನಾನು ನಡೆಯುತ್ತೇನೆ ಎಂದಿದ್ದಾರೆ. ರಾಜ್ಯ ರಾಜಕಾರಣಕ್ಕೆ ಮತ್ತೆ ಮರಳುತ್ತೀರಾ ಎಂಬ ಪ್ರಶ್ನೆಗೆ..? ನನಗೆ ಹಿಂದೆ ಸಿಎಂ ಅಗಲು ಆಸಕ್ತಿ ಇರಲಿಲ್ಲ. ನಾನು ಉನ್ನತ ಹುದ್ದೆಗೆ ಹೋದಾಗಲು ಗೆದ್ದು ಬೀಗಿಲ್ಲ, ಅಥವಾ ಕೆಳಗೆ ಹೋದಾಗಲು ಕೊರಗಿದವನಲ್ಲ. ಈ ಹಿಂದೆ ನಾನು ಮಾನ ಅಪಮಾನ ಎಲ್ಲವನ್ನೂ ಕಂಡಿದ್ದವನು. ಪಕ್ಷ ಮಾತ್ರ ನನ್ನನ್ನು ಯಾವತ್ತು ಕೈ ಬಿಟ್ಟಿಲ್ಲ. ಹೀಗಾಗಿ ವರಿಷ್ಠರ ಸೂಚನೆ ಯಂತೆ ನಾನು ಮುಂದೆ ನಡೆಯುತ್ತೇನೆ ಎಂದಿದ್ದಾರೆ.

ಯತ್ನಾಳ್​ ದೆಹಲಿ ಭೇಟಿ ಗುಟ್ಟೇನು..?

ಬಿಜೆಪಿಯಲ್ಲಿ ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ನಾಯಕತ್ವ ಬದಲಾವಣೆಯ ಚರ್ಚೆಯ ರೂವಾರಿ ಬಸವನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ತೆರಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಬಂಡಾಯ ನಾಯಕನಾಗಿ ಸರ್ಕಾರದ ವಿರುದ್ಧವೇ ಭ್ರಷ್ಟಾಚಾರ ಆರೋಪ ಮಾಡಿದ್ದ ಯತ್ನಾಳ್​, ನೂತನ ಸಚಿವರಿಗೆ ಶುಭ ಕೋರುವ ನೆಪದಲ್ಲಿ ದೆಹಲಿಗೆ ತೆರಳಿದ್ದಾರೆ. ಎರಡ್ಮೂರು ದಿನಗಳ ಹಿಂದೆ ಸಚಿವ ಮುರುಗೇಶ್​ ನಿರಾಣೀ ಕೂಡ ದೆಹಲಿಗೆ ತೆರಳಿ, ಅಮಿತ್​ ಷಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದೀಗ ಬಸನಗೌಡ ಪಾಟೀಲ್​ ಯತ್ನಾಳ್​ ಕೂಡ ಆಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

Related Posts

Don't Miss it !