ಭಾರೀ ಮಳೆ: ಸೌಥ್​ ಇಂಡಿಯಾಗೆ ಯೆಲ್ಲೋ ಅಲರ್ಟ್​, ದೆಹಲಿಗೆ ಆರೇಂಜ್​ ಅಲರ್ಟ್​

ಭಾರತದಲ್ಲಿ ಮಾನ್ಸೂನ್​ ಅಬ್ಬರ ಕಡಿಮೆ ಆಗಿತ್ತು. ಇದೀಗ ಮತ್ತೆ ಮಳೆ ಅಬ್ಬರ ಜೋರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಸೌತ್​ ಇಂಡಿಯನ್​ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಆಗಸ್ಟ್​ 20 ರಿಂದ ಆರಂಭವಾಗಿ ಆಗಸ್ಟ್​ 25ರ ತನಕ ವರುಣನ ಆರರ್ಭ ಜೋರಾಗಿ ಇರಲಿದ್ದು, ಜನರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಂತೆ ಸೂಚನೆ ಕೊಡಲಾಗಿದೆ.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯ, ತಮಿಳುನಾಡಿನ ಉತ್ತರ ಕರಾವಳಿ, ದಕ್ಷಿಣ ಕರಾವಳಿ, ಕಾರೈಕಲ್​, ಪುದುಚೇರಿ, ತೆಲಂಗಾಣ, ಆಂಧ್ರದ ಕರಾವಳಿ ಭಾಗ, ಯನಮ್​ನಲ್ಲಿ ಭಾರೀ ಮಳೆಯಾಗುತ್ತಿದೆ. ನಾಳೆ ಕೇರಳದ ಮಾಹೆ ಹಾಗೂ ಭಾನುವಾರ ರಾಯಲಸೀಮೆ ಭಾಗದಲ್ಲಿ ಮಳೆ ಅಬ್ಬರಿಸಲಿದೆ. ವಯನಾಡು, ಮಲ್ಲಪುರಂ, ಇಡುಕ್ಕಿ, ಪತನಂತಿಟ್ಟು, ಕೊಲ್ಲಂನಲ್ಲೂ ಮಳೆ ಜೋರಾಗಲಿದೆ. ನಿವಾಸಿಗಳು ಎಚ್ಚರ ವಹಿಸಬೇಕು ಎಂದು ಸ್ಥಳೀಯ ಆಡಳಿತಗಳು ಎಚ್ಚರಿಕೆ ನೀಡಿವೆ. ಈಗಾಗಲೇ ಮಳೆಯ ತೀವ್ರತೆ ಹೆಚ್ಚಾಗಿದ್ದು, ಮಹಾರಾಷ್ಟ್ರದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.

ಇದನ್ನೂ ಓದಿ;

ಉತ್ತರ ಭಾರತದಲ್ಲೂ ಅಬ್ಬರಿಸುತ್ತಿದೆ ಮಹಾ ಮಳೆ..!

ಉತ್ತರ ಭಾರತದ ದೆಹಲಿ, ಉತ್ತರಾಖಂಡ್​, ಈಶಾನ್ಯ ರಾಜ್ಯಗಳು ಹಾಗೂ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ದೆಹಲಿಯಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು ಆರೇಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಭಾನುವಾರ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಇಂದು ದೆಹಲಿಯಲ್ಲಿ ಸುರಿದಿರುವ ಮಹಾಮಳೆ ದಾಖಲೆ ಸೃಷ್ಟಿಸಿದೆ. 2009ರಿಂದ ಇದುವರೆಗೂ ಆಗಸ್ಟ್​ ತಿಂಗಳ 21ನೇ ತಾರೀಖು ಸುರಿದಿರುವ ದಾಖಲೆ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಉತ್ತರ ಪ್ರದೇಶ, ದೆಹಲಿ, ಚಂಡೀಗಢ, ಹರ್ಯಾಣ, ಗುಜರಾತ್​, ಮಹಾರಾಷ್ಟ್ರ, ಛತ್ತೀಸ್​ಗಢದಲ್ಲಿ ಮಳೆಯಾಗಲಿದ್ದು, ಬಿಹಾರ, ಹಿಮಾಚಲ ಪ್ರದೇಶ, ಉತ್ತರಾಖಂಡ್​ನಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ;

ಕರ್ನಾಟಕದಲ್ಲೂ ಮಳೆ ಅಬ್ಬರಿಸುತ್ತಾ..?

ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಯಾವುದೇ ಮುನ್ನೆಚ್ಚರಿಕೆ ನೀಡಿಲ್ಲ. ಆದರೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಪರಿಣಾಮ ಕರ್ನಾಟಕದಲ್ಲೂ ಮಳೆಯ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಪ್ರದೇಶದಲ್ಲಿ ಈಗಾಗಲೇ ಸಾಧಾರಣ ಮಳೆಯಾಗಿದೆ. ಮುಂದಿನ 5 ದಿನಗಳ ಕಾಲ ಭಾರತದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಹಿನ್ನೆಲೆಯಲ್ಲಿ ಕರ್ನಾಟಕದ ಅಲ್ಲಲ್ಲಿ ಮಳೆ ಸುರಿಯಲಿದ್ದು, ಬಿತ್ತನೆ ಮಾಡಿರುವ ರೈತರ ಮೊಗದಲ್ಲಿ ಮಂದಹಾಸ ಬೀರುವಂತಾಗಲಿದೆ.

Related Posts

Don't Miss it !