GAS​ ಸಿಲಿಂಡರ್​ಗೆ ಹೆಚ್ಚುವರಿ 50 ರೂಪಾಯಿ ಕೊಡಬೇಕಿಲ್ಲ..!! ಇಲ್ಲಿದೆ ಉಪಾಯ

ಅಚ್ಚೇ ದಿನ ಬರುವ ಕನಸು ಕಾಣುತ್ತಿದ್ದ ಬಡ ಹಾಗೂ ಮಧ್ಯಮ ವರ್ಗಕ್ಕೆ ಬಲವಾದ ಪೆಟ್ಟುಕೊಟ್ಟಿದ್ದು ಬೆಲೆಯೇರಿಕೆ. ಅದರಲ್ಲೂ ಪ್ರಮುಖವಾಗಿ ದಿನಬಳಕೆಯ ವಸ್ತುಗಳು. ಅದರಲ್ಲಿ ಗ್ಯಾಸ್ ದರ. ಬಹಿರಂಗವಾಗಿ ಹೇಳದೆ ಏಕಾಏಕಿ ಗ್ಯಾಸ್​ ಮೇಲಿನ ಸಬ್ಸಿಡಿ ರದ್ದು ಮಾಡುವ ನಿರ್ಧಾರಕ್ಕೆ ಬಂದ ಕೇಂದ್ರ ಸರ್ಕಾರ, ದುಪ್ಪಟ್ಟು ದರ ವಸೂಲಿಗೆ ಮುಂದಾಯ್ತು. ಈ ಹಿಂದೆಯೂ ಅಡುಗೆ ಅನಿಲ ದರ ಇಷ್ಟೇ ಇತ್ತು. ಈಗಿನ ಸರ್ಕಾರ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದರ ಪರಿಣಾಮ ಬಡ ಹಾಗೂ ಮಧ್ಯಮ ವರ್ಗಕ್ಕೆ ಬರೆ ಎಳೆದ ಅನುಭವ ಆಗ್ತಿದೆ ಅಷ್ಟೆ. ಆದರೆ ಸದ್ಯ ಮನೆ ಬಳಕೆಯ 14.2 KG ಸಿಲಿಂಡರ್​ ದರ ಬೆಂಗಳೂರಿನಲ್ಲಿ ₹862 ಮಾತ್ರ. ಆದರೆ ಸಿಲಿಂಡರ್​ ಕೊಡಲು ಬರುವ ಹುಡುಗರು ₹40 ರಿಂದ ₹50 ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಪಡೆದುಕೊಳ್ತಾರೆ. ಇದನ್ನು ತಡೆಯುವ ಮಾರ್ಗ ಇಲ್ಲಿದೆ ನೋಡಿ.

ಗ್ಯಾಸ್​ ವಿತರಣೆಗೆ ಚಾರ್ಜ್​ ಮಾಡುವಂತಿಲ್ಲ..!

ಗ್ಯಾಸ್​ ಏಜೆನ್ಸಿ ಪಡೆದ ವ್ಯಕ್ತಿಗೆ ಸಿಲಿಂಡರ್​ ವಿತರಣೆ ಆಧಾರದಲ್ಲಿ ಗ್ಯಾಸ್​ ಕಂಪನಿಗಳು ಕಮಿಷನ್​​ ನೀಡುತ್ತವೆ. ಕಮಿಷನ್​ ಹಣದಿಂದಲೇ ಎಜೆನ್ಸಿ ಅವರು ಕಚೇರಿ ನಿರ್ವಹಣೆ ಹಾಗೂ ಗ್ಯಾಸ್​ ವಿತರಣೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ ಗ್ಯಾಸ್​ ವಿತರಣಾ ಏಜೆನ್ಸಿ ಅವರು ಸಿಲಿಂಡರ್​ ವಿತರಣೆ ಮಾಡುವ ಹುಡುಗರಿಗೆ vಏತನ ನೀಡದೆ ನೀಡದೆ ಸಿಲಿಂಡರ್​ ಮೇಲೆ ಹೆಚ್ಚುವರಿ ಪಡೆಯುವಂತೆ ಸೂಚಿಸುತ್ತಾರೆ. ಇದೇ ಕಾರಣಕ್ಕೆ ಗ್ಯಾಸ್​ ಹೊತ್ತು ಬರುವ ಹುಡುಗರು ಹೆಚ್ಚುವರಿ ಮೊತ್ತಕ್ಕೆ ಡಿಮ್ಯಾಂಡ್​ ಮಾಡುತ್ತಾರೆ. ಆದರೆ ಇದನ್ನು ಈಗ ಸುಲಭವಾಗಿದೆ. ಗ್ಯಾಸ್ ಸಿಲಿಂಡರ್​ಗೆ ಹೆಚ್ಚುವರಿ ಹಣ ನೀಡುವುದಿಲ್ಲ ಎಂದು ನೇರವಾಗಿಯೇ ಹೇಳಬಹುದು. ಸಿಲಿಂಡರ್​ ನೀಡದೆ ವಾಪಸ್​ ಹೋಗುವುದು ಸಾಧ್ಯವೆ ಇಲ್ಲ.

ಇದನ್ನೂ ಓದಿ;

ಆನ್​ಲೈನ್​ನಲ್ಲಿ​ ಬುಕ್ಕಿಂಗ್​ ಮಾಡಿ, ಅಲ್ಲೇ ಪೇಮೆಂಟ್​ ಮಾಡಿ..!

ಗ್ಯಾಸ್​ ಸಿಲಿಂಡರ್​ ಬುಕ್​ ಮಾಡಿದ ಒಂದು ವಾರದೊಳಗೆ ಸಿಲಿಂಡರ್​ ವಿತರಣೆ ಆಗಬೇಕು ಎನ್ನುವುದು ನಿಯಮ. ಹಾಗಾಗಿ ಆನ್​ನೈಲ್​ನಲ್ಲಿ ಬುಕ್​ ಮಾಡಿ, ಪೇಮೆಂಟ್​ ಕೂಡ ಮಾಡಿ ಒಂದು ವಾರ ಕಾಯುವುದು ಕಷ್ಟವೇನು ಅಲ್ಲ. ಡಬಲ್​ ಸಿಲಿಂಡರ್​ ಹೊಂದಿದ್ದರೆ ಯಾವುದೇ ಸಮಸ್ಯೆ ಕೂಡ ಆಗುವುದಿಲ್ಲ. ಹುಡುಗ ಸಿಲಿಂಡರ್​ ಹೊತ್ತು ಬಂದಾಗ ಈಗಾಗಲೇ ಹಣ ಪಾವತಿಯಾಗಿದೆ ಎಂದು ಉತ್ತರ ಕೊಡಿ. ಆತ ಹೊತ್ತು ಬಂದು ನಿಮ್ಮ ಮನೆಗೆ ನೀಡುವುದಕ್ಕೆ ಕಂಪನಿಯವರು ಹೆಚ್ಚುವರಿ ಹಣವನ್ನು ಗ್ರಾಹಕರಿಂದಲೇ ಪಡೆದುಕೊಂಡಿರುತ್ತಾರೆ. ಆತನಿಗೆ ಹೆಚ್ಚುವರಿಯಾಗಿ ಹಣವನ್ನೇನು ಕೊಡುವಂತಿಲ್ಲ. ಹುಡುಗ ಕೋಪಿಸಿಕೊಂಡರೆ ಮುಂದಿನ ಬಾರಿ ಸಿಲಿಂಡರ್​ ಮನೆ ಬಾಗಿಲಲ್ಲಿ ಇಟ್ಟು ಹೋಗಬಹುದು ಅಷ್ಟೆ. ಸಿಲಿಂಡರ್​ ಕೊಡದೆ ಇರಲು ಸಾಧ್ಯವಿಲ್ಲ. 7 ದಿನದಲ್ಲಿ ಸಿಲಿಂಡರ್​ ಕೊಡಲೇಬೇಕು.

ಪ್ಲೇ ಸ್ಟೋರ್​ನಲ್ಲಿ ಎಲ್ಲಾ ಕಂಪನಿಯ ಆ್ಯಪ್​​ಗಳಿವೆ.!

ಕಂಪ್ಯೂಟರ್​ನಲ್ಲಿ ನೀವು ಬಳಸುತ್ತಿರುವ ಕಂಪನಿಯ ವೆಬ್​ಸೈಟ್​ಗೆ ಹೋಗಿ ಲಾಗಿನ್​ ಆಗಬೇಕು. (ಲಾಗಿನ್​ ಲಿಂಕ್​ ಕೆಳಗೆ ಕೊಡಲಾಗಿದೆ ಬಳಸಬಹುದು) ಗ್ಯಾಸ್​ ನಂಬರ್​ ಹಾಗೂ ಆಧಾರ್​ ಸೇರಿದಂತೆ ಕೆಲವೊಂದು ಮಾಹಿತಿಯನ್ನು ಹಾಕಿದ ಬಳಿಕ ಬುಕ್ಕಿಂಗ್​ ಆಪ್ಷನ್​ ಒತ್ತಬೇಕು. ಆ ಬಳಿಕ ಪೇಮೆಂಟ್​ ಆಪ್ಷನ್​ ಕೂಡ ತೆರೆದುಕೊಳ್ಳುತ್ತದೆ. ನೀವು ಎಟಿಎಂ ಕಾರ್ಡ್​, ಫೋನ್​ ಪೇ, ಗೂಗಲ್​ ಪೇ, ಪೇಟಿಎಂ ಮೂಲಕವೂ ಹಣ ಪಾವತಿ ಮಾಡಬಹುದು. ಪ್ಲೇಸ್ಟೋರ್​ನಲ್ಲೂ ಈ ಕಂಪನಿಯ ಆಪ್​ಗಳು ಲಭ್ಯವಿದೆ. ಒಂದು ವೇಳೆ ನಿಮಗೆ ಎಮೆರ್ಜೆನ್ಸಿ ಗ್ಯಾಸ್ ಸಿಲಿಂಡರ್​ ಬೇಕಿದ್ದರೆ ಮಾತ್ರ ಪ್ರಿಫರ್​ ಡೆಲಿವರಿ ಎಂದು ಕ್ಲಿಕ್​ ಮಾಡಿ. ಆಗ ನೀವು ಕೇಳಿದ ಸಮಯಕ್ಕೆ, ಕೇಳಿದ ದಿನದಂದು ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಇದಕ್ಕೆ ಹೆಚ್ಚುವರಿ 25 ರೂಪಾಯಿ ಪಾವತಿ ಮಾಡಬೇಕು ಅಷ್ಟೆ. ನಾರ್ಮಲ್​ ಡೆಲಿವರಿ ಒಂದು ಕ್ಲಿಕ್​ ಮಾಡಿದರೆ ಒಂದು ವಾರದ ಒಳಗಾಗಿ ನಿಮ್ಮ ಮನೆ ಬಾಗಿಲಿಗೆ ಸಿಲಿಂಡರ್​ ಬರಲೇ ಬೇಕು. ಅದಕ್ಕೆ ಹೆಚ್ಚುವರಿ ಹಣ ಪಾವತಿ ಮಾಡಬೇಕಿಲ್ಲ.

ಇದನ್ನೂ ಓದಿ;

ಸಿಲಿಂಡರ್​ ಕೊಡದಿದ್ದರೆ ಮಾಡುವುದು ಏನು..?

ಗ್ಯಾಸ್​ ಸಿಲಿಂಡರ್​ ತಂದಾಗ ಹೆಚ್ಚುವರಿ ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸಿಲಿಂಡರ್​ ಕೊಡದಿದ್ದರೆ ಏನು ಮಾಡುವುದು ಎನ್ನುವುದು ನಿಮ್ಮ ಪ್ರಶ್ನೆಯಾಗಿರುತ್ತದೆ. ಅದಕ್ಕೂ ಒಂದು ಪರಿಹಾರವಿದೆ. ನೀವು ಆನ್​ಲೈನ್​ ಮೂಲಕ ಪೇಮೆಂಟ್​ ಮಾಡಿರುವುದಕ್ಕೆ ಮೊಬೈಲ್​ನಲ್ಲೇ ಚಲನ್​ ಸೃಷ್ಟಿಯಾಗಿತ್ತದೆ. ಅದನ್ನು ಪ್ರಿಂಟ್​ ತೆಗೆದುಕೊಂಡು ನೇರವಾಗಿ ಗ್ಯಾಸ್​ ಏಜೆನ್ಸಿಗೆ ಹೋಗಿ ದೂರು ಕೊಡಬೇಕು. ದೂರು ಕೊಟ್ಟಿದ್ದಕ್ಕೆ ಒಂದು ಫೋಟೋ ಕಾಪಿಗೆ ಸೀಲು ಸಹಿ ಪಡೆಯಿರಿ. ಆಗಲೂ ಗ್ಯಾಸ್​ ಕೊಡಲಿಲ್ಲ ಎಂದರೆ ಎರಡನ್ನೂ ಸೇರಿಸಿ ಗ್ರಾಹಕರ ನ್ಯಾಯಾಲಯದ ಮೆಟ್ಟಿಲು ಹತ್ತಬಹುದು. ಇಲ್ಲಿ ವಕೀಲರಿಗೆ ದುಡ್ಡು ಕೊಟ್ಟು ಕೇಸ್​ ನಡೆಸಬೇಕಿಲ್ಲ. 100 ರೂಪಾಯಿ ಪಾವತಿಸಿ ಅರ್ಜಿ ಹಾಕಿದ್ರೆ ಮುಗೀತು. ನಿಮ್ಮ ಪರವಾಗಿ ನ್ಯಾಯ ಬರುವುದು ಖಚಿತ. ಅದೂ ಅಲ್ಲದೆ ಇಷ್ಟು ದಿನಗಳ ಕಾಲ ಕಾಯಿಸಿದ್ದಕ್ಕೆ, ಕೋರ್ಟ್​ ಮೆಟ್ಟಿಲು ಹತ್ತಿಸಿದ್ದಕ್ಕೆ, ಕೋರ್ಟ್​ ಖರ್ಚು, ಮಾನಸಿಕ ಹಿಂಸೆ, ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಕೋರ್ಟ್​ ಏಜೆನ್ಸಿ ಅವರಿಗೆ ದಂಡ ವಿಧಿಸುತ್ತದೆ. ಹಣವಿಲ್ಲದೆ ಪರಿತಪಿಸುವ ಬದಲು ಗ್ರಾಹಕ ಜಾಗೃತನಾಗಬೇಕಿದೆ.

ಇಂಡೇನ್ ಗ್ಯಾಸ್​​:
https://cx.indianoil.in/webcenter/portal/LPG/pages_bookyourcylinder
ಭಾರತ್​ ಗ್ಯಾಸ್:
https://my.ebharatgas.com/bharatgas/QuickBook/BookAndPay?source=MB
HP ಗ್ಯಾಸ್​:
https://myhpgas.in/myhpgas/hpgas/bookrefill.aspx

ಗ್ರಾಹಕನನ್ನು ಎಚ್ಚರಿಸುವುದು the public spot ಆದ್ಯ ಕರ್ತವ್ಯ.

Related Posts

Don't Miss it !