ಕನ್ನಡ ಭಾಷೆ ಬಗ್ಗೆ ಕೇಂದ್ರ ತಾರತಮ್ಯ, ರಾಜಾಹುಲಿ ವಿರುದ್ಧ ಸಿದ್ದು ಸಿಡಿಮಿಡಿ..!

ಹಲವಾರು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಖಾಲಿ ಇರುವ ಕ್ಲರ್ಕ್​ ಹುದ್ದೆಗಳಿಗೆ IBPS ಅರ್ಜಿ ಆಹ್ವಾನ ಮಾಡಿದ್ದು, ಪರೀಕ್ಷಾ ದಿನಾಂಕ ಕೂಡ ಘೋಷಣೆ ಮಾಡಿದೆ. ಆದರೆ ಕೇವಲ ಹಿಂದಿ ಇಂಗ್ಲಿಷ್​ನಲ್ಲಿ ಮಾತ್ರ ಅವಕಾಶ ಎಂದಿರುವುದು ಸಿದ್ದರಾಮಯ್ಯ ಕಣ್ಣು ಕೆಂಪಾಗುವಂತೆ ಮಾಡಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲದ ಬಗ್ಗೆ ಟ್ವೀಟ್​ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕನ್ನಡಗರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದಿದ್ದಾರೆ.

ಸರಣಿ ಟ್ವೀಟ್​ಗಳ ಮೂಲಕ ವಾಗ್ದಾಳಿ..!

ರಾಷ್ಟ್ರೀಕೃತ ಬ್ಯಾಂಕುಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಆದ್ಯತೆ ಕೊಡದೆ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರದ ತಾರತಮ್ಯ ನೀತಿಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಕನ್ನಡಗರಿಗೆ ಅನ್ಯಾಯ ಆಗುತ್ತಿರುವ ಬಗ್ಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಮಾನವಹಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಯಾವುದೇ ವಿಚಾರದಲ್ಲಿ ಕನ್ನಡಗರಿಗೆ ಅನ್ಯಾಯ ಆಗುವಾಗ ಬಿ.ಎಸ್​ ಯಡಿಯೂರಪ್ಪ ಕೇಂದ್ರದ ವಿರುದ್ಧ ನಿಲ್ಲದೆ ಇಲಿಯಂತೆ ಬೆದರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಆದರೆ ತಮ್ಮ ಮಂದಿ ಮಾಗದರಿಂದ ರಾಜ್ಯದ ಹುಲಿ ಸಿಂಹ ಎಂದು ಕರೆಸಿಕೊಳ್ಳುತ್ತಾರೆ ಎಂದು ರಾಜಾಹುಲಿಗೆ ಕುಟುಕಿದ್ದಾರೆ.

ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದು ಬ್ಯಾಂಕಿಂಗ್​ ಪರೀಕ್ಷಗಳಲ್ಲಿ ಕನ್ನಡಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕಿದೆ. IBPS ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವಂತೆ ಮಾಡಬೇಕಿದೆ ಎಂದು ಆಗ್ರಹ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇದ್ದರೆ ಅನುಕೂಲ ಎಂದು ಕಳೆದ ಚುನಾವಣೆ ವೇಳೆ ಬೊಗಳೆ ಬಿಟ್ಟಿದ್ದರು. ಆದರೆ ಬಿಜೆಪಿಯಿಂದ ಗೆದ್ದಿರುವ 25 ಮಂದಿ ಸಂಸದರು ಪ್ರಧಾನಿ ಸೇವಕರಂತೆ ವರ್ತೆ ಮಾಡುತ್ತಿದ್ದಾರೆ ಎಂದು ಕನ್ನಡದ ಬಗ್ಗೆ ದನಿ ಎತ್ತದ ಸಂಸದರ ಬಗ್ಗೆ ಟೀಕಾಸ್ತ್ರ ಸಿಡಿಸಿದ್ದಾರೆ.

ಹಣಕಾಸು ಸಚಿವೆಗೆ ನಾಚಿಕೆ ಆಗಬೇಕು..!

ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್​ ಕನ್ನಡಿಗರ ಹಿತ ಕಾಯಬೇಕು. ಒಂದು ವೇಳೆ ಕನ್ನಡಿಗರು ಹಾಗೂ ಕರ್ನಾಟಕದ ಹಿತ ಕಾಯಲು ವಿಫಲರಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕನ್ನಡಿಗರ ಹಿತ ಕಾಯದಿದ್ದರೆ ರಾಜ್ಯಸಭಾ ಸ್ಥಾನಕ್ಕೆ ಅನರ್ಹ ಎಂದು ವ್ಯಂಗ್ಯವಾಡಿದ್ದಾರೆ. ಬಹುತೇಕ ಕೇಂದ್ರದ ಯೋಜನೆಗಳು ರಾಷ್ಟ್ರೀಕೃತ ಬ್ಯಾಂಕ್​ಗಳ ಮೂಲಕ ಜಾರಿಯಾಗುತ್ತವೆ. ಕನ್ನಡ ಭಾಷೆ ಬಾರದ ಉದ್ಯೋಗಿಗಳಿಂದ ಗ್ರಾಮೀಣ ಭಾಗದ ಜನರು ಹಿಂಸೆ ಅನುಭವಿಸುವಂತಾಗಿದೆ ಎಂದು ಸಂಕಷ್ಟವನ್ನು ಬಿಚ್ಚಿಟ್ಟಿದ್ದಾರೆ.

2014ರ ಮುಂಚೆ ಕನ್ನಡದಲ್ಲೇ ಇತ್ತು..!

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಸ್ಥಳೀಯ ಭಾಷೆಗಳಲ್ಲೂ ಬ್ಯಾಂಕ್​ ಪರೀಕ್ಷೆ ನಡೆಸಲಾಗ್ತಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದಿ ಇಂಗ್ಲಿಷ್​ ಮಾತ್ರ ಜಾರಿ ಮಾಡಲಾಯ್ತು. ಈ ಬಗ್ಗೆ ನಾನು ವಿರೋಧಿ ಅಂದೇ ನರೇಂದ್ರ ಮೋದಿಗೆ ಪತ್ರ ಬರೆದಿದ್ದೆ ಎಂದಿದ್ದಾರೆ. 3 ಸಾವಿರ ಪೋಸ್ಟ್​ಗೆ ಈ ಅರ್ಜಿ ಆಹ್ವಾನ ಮ,ಆಡಿದ್ದು, ಅದರಲ್ಲಿ 407 ಹುದ್ದೆಗಳು ಕರ್ನಾಟಕದಲ್ಲೇ ಇವೆ. ಆದರೆ ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಕಾರಣ ಕೈತಪ್ಪುವ ಸಾಧ್ಯತೆಗಳಿವೆ ಎಂದಿದ್ದಾರೆ.

ಬದಲಾವಣೆ ಮಾಡುತ್ತಾ ಕೇಂದ್ರ ಸರ್ಕಾರ..!

2014ರಲ್ಲಿ ಬದಲಾವಣೆ ಆದ ಬಳಿಕ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಸ್ಥಳೀಯ ಭಾಷೆಗಳಲ್ಲೂ ಪರೀಕ್ಷೆ ನಡೆಸುವ ಸಂಬಂಧ ಹೇಳಿಕೆ ನೀಡಲಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕೂಡ ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಲು ಸೂಚಿಸಿದ್ದರು. ಆದರೆ ಮತ್ತೆ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿದೆ. ಸಿದ್ದರಾಮಯ್ಯ ದನಿ ಎತ್ತಿದ್ದಾರೆ. ಈಗ ಮುಖ್ಯಮಂತ್ರಿ, ಬಿಜೆಪಿ ಸಂಸದರು, ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯ ನಾಯಕರು ಪ್ರಶ್ನೆ ಮಾಡಬೇಕಿದೆ. ಕನ್ನಡ ಪರ ಸಂಘಟನೆಗಳು ರಸ್ತೆಗಿಳಿಯಬೇಕಿದೆ.

Related Posts

Don't Miss it !