ವಾಹನದಲ್ಲಿ ದಾಖಲೆ ಇಲ್ಲದಿದ್ರೂ ಓಡಾಡೋದು ಹೇಗೆ..?

2019 ಆದೇಶ ಪಾಲಿಸಲು ಖಾಕಿಪಡೆ ಸಿದ್ಧತೆ..! - ಡಿಜಿಟಲ್​ ರೂಪದ ದಾಖಲೆ ಸಂಗ್ರಹ ಹೇಗೆ..? - ಬೆಂಗಳೂರು ನಿಯಮ ಇಡೀ ರಾಜ್ಯಕ್ಕೆ ಅನ್ವಯವೋ..?

ವಾಹನದಲ್ಲಿ ಚಲಿಸುವಾಗ ಪೊಲೀಸರ ತಪಾಸಣೆ ವೇಳೆ ವಾಹನದ ದಾಖಲೆಗಳನ್ನು ತೋರಿಸಬೇಕು ಎನ್ನುವುದು ನಿಯಮ. ಪೊಲೀಸರ ಬಳಿ ದಾಖಲೆ ತೋರಿಸಲು ವಿಫಲವಾದರೆ ಸರ್ಕಾರ ನಿಗದಿ ಮಾಡಿರುವ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಇದರಲ್ಲಿ ಸಾಕಷ್ಟು ದಾಖಲೆಗಳು ಇರಬೇಕಾಗುತ್ತದೆ. ಚಾಲನ ಪರವಾನಗಿ (DL) ವಾಹನ ನೋಂದಣಿ (RC) ಇನ್ಯೂರೆನ್ಸ್​, ವೇಹಿಕಲ್​ ಫಿಟ್​ನೆಸ್​, ಎಮಿಷನ್​ ಟೆಸ್ಟ್​ ಎಲ್ಲವೂ ಇರಬೇಕು. ಇದರಲ್ಲಿ ಯಾವುದಾದರೂ ಒಂದು ದಾಖಲೆ ಇಲ್ಲದಿದ್ದರೂ ಪೊಲೀಸರು ದಂಡ ಹಾಕಲು ಕಾಯುತ್ತಿರುತ್ತಾರೆ. ಆದರೆ ಇನ್ಮುಂದೆ ನೀವು ದಾಖಲೆಗಳನ್ನು ಜೊತೆಯಲ್ಲಿ ಇಟ್ಟುಕೊಂಡಿಲ್ಲ ಎಂದರೂ ಫೈನ್​ ಕಟ್ಟದೆ ಬರಬಹುದಾಗಿದೆ.

2019 ಆದೇಶ ಪಾಲಿಸಲು ಖಾಕಿಪಡೆ ಸಿದ್ಧತೆ..!

ಕೇಂದ್ರ ರಸ್ತೆ ಸಾರಿಗೆ ಇಲಾಖೆ 2019ರಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ವಾಹನ ಚಾಲಕರು ಎಲ್ಲಾ ದಾಖಲೆಗಳನ್ನು ತಮ್ಮ ಜೊತೆಯಲ್ಲೇ ಕೊಂಡೊಯ್ಯಬೇಕು ಅನ್ನೋ ನಿಯಮವನ್ನು ರದ್ದುಮಾಡಿತ್ತು. ಡಿಜಿಟಲ್​ ರೂಪದಲ್ಲಿ ದಾಖಲೆಗಳನ್ನು ಕೊಂಡೊಯ್ಯುವುದನ್ನೂ ಅಧಿಕೃತ ಮಾಡಲಾಗಿತ್ತು. ಆದರೆ ಕರ್ನಾಟಕ ಪೊಲೀಸ್​ ಇಲಾಖೆ ಇದೀಗ ಡಿಜಿಟಲ್​ ರೂಪದ ದಾಖಲೆಯನ್ನು ಪರಿಗಣಿಸುವಂತೆ ಸಂಚಾರಿ ವಿಭಾಗದ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಸೂಚನೆ ಕೊಟ್ಟಿದ್ದಾರೆ. ಡಿಜಿಟಲ್​ ರೂಪದಲ್ಲಿ ವಾಹನ ದಾಖಲೆಯನ್ನು ತೋರಿಸಿದರೆ ಭೌತಿಕವಾಗಿ ದಾಖಲೆ ತೋರಿಸುವಂತೆ ಒತ್ತಾಯ ಮಾಡಬಾರದು ಎಂದು ಸೂಚಿಸಿದ್ದಾರೆ.

ಡಿಜಿಟಲ್​ ರೂಪದ ದಾಖಲೆ ಸಂಗ್ರಹ ಹೇಗೆ..?

ಆ್ಯಂಡ್ರಾಯ್ಡ್ ಮೊಬೈಲ್​ ಬಳಕೆದಾರರು ಪ್ಲೇ ಸ್ಟೋರ್​ನಲ್ಲಿ ಡಿಜಿ ಲಾಕರ್​ ಹಾಗೂ ಎಂ ಪರಿವಾಹನ್ ಎರಡರಲ್ಲಿ ಒಂದನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕು. ಬಳಿಕ ಆಧಾರ್​ ನಂಬರ್​ ಹಾಕಿ ಲಾಗಿನ್​ ಆಗಬೇಕು. ಬಳಿಕ ಕರ್ನಾಟಕ ರಾಜ್ಯ ಸೆಲೆಕ್ಟ್​ ಮಾಡಿದರೆ, ರಾಜ್ಯ ಸರ್ಕಾರದ ಇಲಾಖೆಗಳು ಕಾಣಿಸುತ್ತದೆ. ರಾಜ್ಯ ರಸ್ತೆ ಸಾರಿಗೆ ವಿಭಾಗ ಆಯ್ಕೆ ಮಾಡಿ ಚಾಲನ ಪರವಾನಗಿ ನಂಬರ್​ ಹಾಕಿದರೆ ನಿಮ್ಮ ಚಾಲನ ಪರವಾನಗಿ ತೋರಿಸುತ್ತದೆ. ಒಮ್ಮೆ ಡೌನ್​ಲೋಡ್​ ಮಾಡಿದ ದಾಖಲೆ ಹಾಗೆ ಇರುವುದರಿಂದ ಬೇಕಾದಾಗ ತೆಗೆದು ನೋಡಬಹುದು. ಇದೇ ರೀತಿ ಸಾಕಷ್ಟು ದಾಖಲೆಗಳನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು. ಅಂಕಪಟ್ಟಿ, ಗ್ಯಾಸ್​ ದಾಖಲೆ ಸೇರಿದಂತೆ ಸಾಕಷ್ಟು ಆಯ್ಕೆಗಳು ಸಿಗುತ್ತವೆ. ಆದರೆ ಆ್ಯಂಡ್ರಾಯ್ಡ್​ ಮೊಬೈಲ್​ ಬಳಕೆದಾರ ಆಗಿರಬೇಕು. ತಂತ್ರಜ್ಞಾನ ಬಳಕೆ ಗೊತ್ತಿರಬೇಕು.

ಬೆಂಗಳೂರು ನಿಯಮ ಇಡೀ ರಾಜ್ಯಕ್ಕೆ ಅನ್ವಯವೋ..?

ಬೆಂಗಳೂರು ಟ್ರಾಫಿಕ್​ ಕಮಿಷನರ್​ ಡಾ ರವಿಕಾಂತೇಗೌಡ ಈ ಸೂಚನೆ ಕೊಟ್ಟಿದ್ದಾರೆ. ಆದರೆ ಇದನ್ನು ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ 2019ರಲ್ಲೇ ಅಧಿಸೂಚನೆ ಹೊರಡಿಸಿರುವ ಕಾರಣ ಇಡೀ ದೇಶದಲ್ಲೇ ಈ ವ್ಯವಸ್ಥೆ ಜಾರಿಗೆ ಬಂದಂತೆ ಆಗಿದೆ. ಆದರೆ ಬೆಂಗಳೂರು ಪೊಲೀಸರು ಡಿಜಿಟಲ್​ ರೂಪದ ದಾಖಲೆಗಳನ್ನು ತೋರಿಸಿದರೂ ಕಿರಕಿರಿ ಮಾಡುತ್ತಿದ್ದ ಕಾರಣ ಸಂಚಾರಿ ವಿಭಾಗದ ಆಯುಕ್ತರು ಖಡಕ್​ ಸೂಚನೆ ಕೊಟ್ಟಿದ್ದಾರೆ ಅಷ್ಟೆ. ಇದು ಈಗ ಬಂದಿರುವ ಕಾನೂನು ಅಲ್ಲ. ಮೊದಲೇ ಇದ್ದ ಕಾನುನು ಕಠಿಣ ಜಾರಿಗೆ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಹಳ್ಳಿಯಿಂದ ದಿಲ್ಲಿಯ ತನಕ ಡಿಜಿಟಲ್​ ರೂಪದ ದಾಖಲೆಗಳನ್ನು ಪರಿಗಣಿಸಬೇಕು. ಪ್ರಧಾನಿ ನರೇಂದ್ರ ಮೋದಿ ಕೂಡ ಡಿಜಿಟಲ್​ ದಾಖಲೆ ಬಳಸುವಂತೆ ಹೇಳಿದ್ದರು ಎನ್ನುವುದನ್ನು ಶ್ಲಾಘಿಸಬಹುದಾಗಿದೆ.

Related Posts

Don't Miss it !