ಎರಡು ಡೋಸ್​ ಲಸಿಕೆ ಆಗಿದ್ರೂ ಬರ್ತಿದೆ ಕೊರೊನಾ..! ರೆಡಿಯಾಗ್ತಿದೆ ಬೂಸ್ಟರ್​ ಡೋಸ್​

ಕೊರೊನಾ ಬಿಸಿ 2ನೇ ಅಲೆ ಬಳಿಕ ಇದೀಗ ಕೊಂಚ ಶಮನವಾದ ಮನಸ್ಥಿತಿ ಬರುತ್ತಿದೆ. ಜನಸಂಚಾರ ಯಥಾಸ್ಥಿಗೆ ಮರಳುತ್ತಿದೆ. ಮೂರನೇ ಅಲೆ ಬರುತ್ತೆ ಎನ್ನುವ ಎಚ್ಚರಿಕೆಯೊಂದಿಗೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದೆ. ಈ ನಡುವೆ ವೈದ್ಯಲೋಕ ಕೊಟ್ಟಿರುವ ಮಾಹಿತಿ ಇಡೀ ಜನರನ್ನು ಬೆಚ್ಚಿ ಬೀಳಿಸುವಂತಿದೆ. ಈಗಾಗಲೇ ಎರಡು ಡೋಸ್​ ಲಸಿಕೆ ಹಾಕಿಸಿಕೊಂಡವರಲ್ಲೂ ಮತ್ತೆ ಕೊರೊನಾ ಸೋಂಕು ಹರಡುತ್ತಿದೆ ಎನ್ನುವ ಮಾಹಿತಿ ಸಾರ್ವಜನಿಕ ವಲಯವನ್ನು ಬೆಚ್ಚಿ ಬೀಳುವಂತೆ ಮಾಡಿದೆ. 2 ಡೋಸ್​ಲಸಿಕೆ ಹಾಕಿಸಿಕೊಂಡ ಬಳಿಕವೂ ಕೊರೊನಾ ಹರಡುತ್ತಿದೆ ಎಂದರೆ ಮುಂದೇನು ಎನ್ನುವ ಚಿಂತೆ ವಿಜ್ಞಾನಿಗಳನ್ನು ಕಾಡಿತ್ತು. ಇದೀಗ ಅದಕ್ಕೆ ಉತ್ತರವಾಗಿ ರೆಡಿಯಾಗ್ತಿದೆ ಬೂಸ್ಟರ್​ ಡೋಸ್​.

2 ಡೋಸ್ ಲಸಿಕೆ ಎಫೆಕ್ಟ್​ ಗೊತ್ತಾಗಿದ್ದು ಹೇಗೆ..?

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾದಿಂದ ಮುಕ್ತರಾಗಲು ಮಾಸ್ಕ್​, ಸ್ಯಾನಿಟೈಸರ್​, ಲಸಿಕೆ, ಸಾಮಾಜಿಕ ಅಂತರ ಮಾತ್ರ ಪರಿಹಾರ ಎಂದು ಘೋಷಣೆ ಮಾಡಿದವು. ಲಸಿಕೆ ಮಾರುಕಟ್ಟೆಗೆ ಬಂದ ಬಳಿಕ ಕೇಂದ್ರ ಸರ್ಕಾರದ ಕೂಡ ಎಲ್ಲರಿಗೂ ಉಚಿತ ಲಸಿಕೆಯ ಭರವಸೆ ನೀಡುತ್ತು. ತೆರೆದ ಮಾರುಕಟ್ಟೆಯಲ್ಲೂ ಲಸಿಕೆ ಸಿಗುವಂತೆ ವ್ಯವಸ್ಥೆ ಮಾಡಿತ್ತು. ಎಲ್ಲರೂ ಲಸಿಕೆ ಪಡೆಯಿರಿ ಎಂದು ಮನವಿಯನ್ನೂ ಮಾಡಿತ್ತು. ಆದರೆ ಈಗಾಗಲೇ 2 ಡೋಸ್​ ಕೊರೊನಾ ವ್ಯಾಕ್ಸಿನ್​ ಪಡೆದಿರಿವ ಫ್ರಂಟ್​ ಲೈನ್​ ವಾರಿಯರ್ಸ್​​​ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲೂ ಹೈ ರಿಸ್ಕ್​ನಲ್ಲಿ ಕೆಲಸ ಮಾಡುವ ನರ್ಸ್​, ವೈದ್ಯರು ಸೇರಿದಂತೆ ಬಹುತೇಕರಲ್ಲಿ ಮತ್ತೆ ಕೊರೊನಾ ವೈರಸ್​ ಕಾಣಿಸಿಕೊಂಡಿದೆ. ಹೀಗಾಗಿ ಬೂಸ್ಟರ್ ಡೋಸ್ ಕೊಡಲು ಸರ್ಕಾರ ಚಿಂತನೆ ನಡೆಸಿದೆ.

ಮ್ಯೂಟೇಟ್​ ವೈರಸ್​ ಪರಿಣಾಮ ಬೂಸ್ಟರ್​ ಡೋಸ್​..!

ಕಳೆದ ಫೆಬ್ರವರಿ ತಿಂಗಳನಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಮೊದಲ ಡೋಸ್​ ಲಸಿಕೆ ಕೊಡಲಾಯ್ತು. ಕಳೆದ ಏಪ್ರಿಲ್​ ತಿಂಗಳಿನಲ್ಲಿ ಎರಡನೇ ಡೋಸ್​ ಲಸಿಕೆ ನೀಡಲಾಗಿದೆ. 2 ಡೋಸ್ ಲಸಿಕೆ ನೀಡಿ ಈಗಾಗಲೇ ಆರೇಳು ತಿಂಗಳು ಮುಕ್ತಾಯವಾಗಿದೆ. ಆದರೂ ಆರೋಗ್ಯ ಸಿಬ್ಬಂದಿಗಳಲ್ಲಿ ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಳವಾಗಿದೆ. ಲಸಿಕೆ‌ ಹಾಕಿಸಿಕೊಂಡ ಆರೋಗ್ಯ ಸಿಬ್ಬಂದಿಗಳಿಗೆ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಳ್ತಿದೆ. ಇದು ವೈರಸ್ ಮ್ಯೂಟೆಷನ್ ವೈರಸ್​​ನಿಂದ ಕೊರೊನಾ ವ್ಯಾಕ್ಸಿನ್ ಸಾಮರ್ಥ್ಯ ಕ್ಷೀಣಿಸಿದೆ ಎನ್ನಲಾಗಿದ್ದು, ಆರೋಗ್ಯ ಸಿಬ್ಬಂದಿಗಳಿಗೆ ಮತ್ತೊದು ಬೂಸ್ಟರ್ ಡೋಸ್ ಕೊಡಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಹಲವಾರು ದೇಶಗಳು ಈ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ. ಸಂಶೋಧನೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗುತ್ತಿದ್ದು ಬೂಸ್ಟರ್​ ಡೋಸ್​ ಅನಿವಾರ್ಯ ಎನ್ನುವ ನಿರ್ಧಾರಕ್ಕೆ ಬರಲಾಗ್ತಿದೆ.

ಬೆಂಗಳೂರಲ್ಲೂ ನಡೀತಿದೆ ಬೂಸ್ಟರ್​ ಡೋಸ್​ ಅಧ್ಯಯನ..!

ಅಮೆರಿಕ, ಇಂಗ್ಲೆಂಡ್​ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಬೂಸ್ಟರ್ ಡೋಸ್ ಅನಿವಾರ್ಯತೆ ಬಗ್ಗೆ ಅಧ್ಯಯನಗಳು ಶುರುವಾಗಿವೆ. ಭಾರತದಲ್ಲೂ ಬೂಸ್ಟರ್ ಡೋಸ್ ನೀಡುವ ಬಗ್ಗೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸಂಶೋಧನೆ ಶರಂಭವಾಗಿದೆ. ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿರುವ 200 ಮಂದಿ ಕೊರೊನಾ ವಾರಿಯರ್ಸ್ ಮೇಲೆ ಅಧ್ಯಯನ ಶುರುವಾಗಿದೆ. ವರದಿ ಬಂದ ಬಳಿಕ ಬೂಸ್ಟರ್​ ಡೋಸ್ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳಲಾಗುತ್ತದೆ ಎನ್ನಲಾಗಿದೆ. ಬೂಸ್ಟರ್ ಡೋಸ್ ಅವಶ್ಯಕತೆ ಇದೆ ಎನ್ನುತ್ತಿದ್ದಾರೆ ಹಲವಾರು ಖ್ಯಾತ ತಜ್ಞರ.

ಬೂಸ್ಟರ್​ ಡೋಸ್​ ಬಗ್ಗೆ WHO ಇಲ್ಲೀವರೆಗೂ ಯಾವುದೇ ಖಚಿತ ಮಾಹಿತಿಗಳನ್ನು ಹೊರಹಾಕಿಲ್ಲ. ಸಂಪೂರ್ಣ ಅಧ್ಯಯನ ವರದಿ ಕೈ ಸೇರದೆ ಬೂಸ್ಟರ್​ ಡೋಸ್​ ಬಗ್ಗೆ ಶಿಫಾರಸು ಮಾಡಲು ವಿಶ್ವ ಆರೋಗ್ಯ ಸಂಸ್ಥೆ ನಿರಾಕರಿಸಿದೆ. ಇತ್ತ ಭಾರತದಲ್ಲಿ ಡ್ರಗ್​​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ (DCGI) ಈಗಾಗಲೇ ಭಾರತ್​ ಬಯೋಟೆಕ್​ ಸಂಸ್ಥೆಗೆ ಕ್ಲಿನಿಕಲ್​ ಟ್ರಯಲ್​ ಮಾಡಲು ಅನುಮತಿ ನೀಡಿದ್ದು, ಕಳೆದ ಮೇ ತಿಂಗಳಿನಲ್ಲೇ ಪ್ರಯೋಗ ಆರಂಭವಾಗಿದೆ. ಆಗಸ್ಟ್​ ತಿಂಗಳಿನಲ್ಲಿ ಮೊದಲ ವರದಿ ಬರಲಿದ್ದು, ಎರಡನೇ ವರದಿ ನವೆಂಬರ್​ನಲ್ಲಿ ಕೈ ಸೇರಲಿದೆ. ಈ ವರ್ಷಾಂತ್ಯಕ್ಕೆ ಬೂಸ್ಟರ್​ ಡೋಸ್​ ಜನರಿಗೆ ಸಿಗಲಿದೆ. ಆದರೆ ಪ್ರತಿಯೊಬ್ಬರಿಗೂ ಮೊದಲ ಎರಡು ಡೋಸ್​​ ಆದ ಬಳಿಕ ಬೂಸ್ಟರ್​ ಡೋಸ್​ ಕೊಡಬೇಕು ಎನ್ನುವ ಬಗ್ಗೆಯೂ ಚರ್ಚೆಗಳು ಆರಂಭವಾಗಿದೆ.

Related Posts

Don't Miss it !