ಬ್ಯಾಂಕ್​ ಉದ್ಯೋಗಿ ಕೊಂದಿದ್ದುಯಾಕೆ ? ಅಪಾರ್ಟ್​ಮೆಂಟ್​ ಸೆಕ್ಯುರಿಟಿ ಗಾರ್ಡ್ಸ್..?

ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್​ಗಳೇ ಕಳ್ಳತನ ಮಾಡುತ್ತಿರುವ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗ್ತಿರೋ ಪ್ರಕರಣಗಳು ಹೆಚ್ಚಾಗುತ್ತಿವೆ ಅನ್ನೋದು ಬೆಂಗಳೂರು ಪೊಲೀಸ್​ ಮೂಲಗಳ ಮಾಹಿತಿ. ಉತ್ತರ ಭಾರತ, ನೇಪಾಳ, ಬಾಂಗ್ಲಾ ಕಡೆಗಳಿಂದ ಉದ್ಯೋಗ ಹರಸಿ ಬರುವ ಅದೆಷ್ಟೋ ಕುಟುಂಬಗಳಿಗೆ ಬೆಂಗಳೂರು ಅನ್ನ ನೀರು ಕೊಡುವ ತಾಯಿ ಎನ್ನಬಹುದು. ಆದರೆ ಕೆಲಸ ಮಾಡುವ ಜೊತೆಗೆ ಕೊಲೆ ಸುಲಿಗೆ ಪ್ರಕರಣಗಳಲ್ಲಿ ಭಾಗಿ ಆಗುತ್ತಿರುವ ಪ್ರಕರಣಗಳು ದಿನದಿಂದ ಹೆಚ್ಚಾಗುತ್ತಲೇ ಇವೆ. ಜುಲೈ 5ರಂದು ಬೆಂಗಳೂರಿನಲ್ಲಿ ಬ್ಯಾಂಕ್​ ಉದ್ಯೋಗಿಯೊಬ್ಬರುನ್ನು ಕಬ್ಬಿಣದ ರಾಡ್​ನಿಂದ ಹೊಡೆದು ಕೊಲೆ ಮಾಡಲಾಗಿದೆ. ಇದಕ್ಕೆ ಸೆಕ್ಯುರಿಟಿ ಗಾರ್ಡ್ಸ್ ಕೊಟ್ಟಿರುವ ಕಾರಣ ಕಳ್ಳನೆಂದು ಕೊಂದೆವು ಎನ್ನುವುದಾಗಿದೆ. ಆದರೆ ಅದಕ್ಕೆ ಪೂರಕ ಸಾಕ್ಷಿಗಳು ಲಭ್ಯ ಆಗದ ಕಾರಣಕ್ಕೆ ಬಂಧಿಸಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ ಪೊಲೀಸರು.

ಓಡಿಶಾ ಮೂಲದ ಎಂಬಿಎ ಪದವೀಧರನ ಭೀಕರ ಹತ್ಯೆ..!

ಉತ್ತರ ಭಾರತದ ಓಡಿಶಾ ಮೂಲದ ಅಭಿಷೇಕ್​, ಬೆಂಗಳೂರಿನ ಬ್ಯಾಂಕ್​ ಒಂದರಲ್ಲಿ ಇಂಟರ್ನ್​ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಜುಲೈ 5ರಂದು ಸ್ನೇಹಿತರ ಜೊತೆಗೆ ಗುಂಡು ಪಾರ್ಟಿ ಮಾಡಿದ್ದ ಅಭಿಷೇಕ್​, ಸ್ನೇಹಿತರು ಹೊರಟ ಬಳಿಕ ಮನೆ ಹಾರಿ ಹಿಡಿದಿದ್ದರು. ಆದರೆ ದಾರಿ ಮಧ್ಯೆ ಬೆಂಗಳೂರಿನ ರಸ್ತೆಯಲ್ಲಿ ಕಳೆದು ಹೋಗಿದ್ದರು. ಆ ಕೂಡಲೇ ಸ್ನೇಹಿತರಿಗೆ ಕರೆ ಮಾಡಿದ್ದ ಅಭಿಷೇಕ್​, ಮಾರ್ಗ ಗೊತ್ತಾಗ್ತಿಲ್ಲ ತಪ್ಪಿಸಿಕೊಂಡಿದ್ದೇನೆ ಎಂದಿದ್ದಾರೆ. ಆದರೆ ಸ್ನೇಹಿತರೂ ಕೂಡ ಮದ್ಯ (ಎಣ್ಣೆ)ಅಮಲಿನಲ್ಲಿದ್ದದ್ದರಿಂದ ರೂಟ್​ ಮ್ಯಾಪ್​ ಕೂಡ ಕಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಜೊತೆಗೆ ಅಷ್ಟರಲ್ಲಿ ಅಭಿಷೇಕ್​ ಮೊಬೈಲ್​ ಕೂಡ ಸ್ವಿಚ್​ ಆಫ್​ ಆಗಿದ್ದು, ಅಭಿಷೇಕ್​ ಕೊಲೆಯಾಗುವಂತೆ ಮಾಡಿದೆ. ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯನ್ನು ಹಿಂದೆ ಮುಂದೆ ನೋಡದೆ ಹೆಣವಾಗಿಸಿದ್ದಾರೆ. ಆದರೆ ಹಣಕ್ಕಾಗಿ ಕೊಲೆ ಮಾಡಿದರೋ..? ಅಥವಾ ಕುಚೇಷ್ಟೆಗಾಗಿ ಪ್ಯಾಂಟ್​ ಬಿಚ್ಚಿಸಿ ಆ ಬಳಿಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆಯೋ ಅನ್ನೋ ಅನುಮಾನ ಮೂಡಿಸಿದೆ.

HAL ಬಳಿಯ ಅಪಾರ್ಟ್​ಮೆಂಟ್​, ಕೊಲೆ ಹಿಂದೆ ಸೀಕ್ರೆಟ್​..!

ಬೆಂಗಳೂರಿನ HAL ಬಳಿಯ ಅಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡ್ತಿದ್ದ ಸೆಕ್ಯುರಿಟಿ ಶ್ಯಾಮನಾಥ್ ಹಾಗು ಆತನ ಸ್ನೇಹಿತ ಅಜಿತ್​ ಕಬ್ಬಿಣದ ರಾಡ್​ನಿಂದ ಹೊಡೆದು ಕೊಂದು ಬಿಸಾಕಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಕಾರಣ ಎಂದರೆ ಕಣ್ಣನೆಂದು ಭಾವಿಸಿ ಹೊಡೆದುಬಿಟ್ಟೆವು ಎನ್ನುವುದು. ಆದರೆ ಕಾಲ್ನಡಿಗೆಯಲ್ಲಿ ರಸ್ತೆಯಲ್ಲಿ ಬರುವ ದೃಶ್ಯ ಎಲ್ಲಾ ಹರಿದಾಡಿದ್ದು, ಅದರಲ್ಲಿ ಇದೇ ಅಭಿಷೇಕ್​ ಪ್ಯಾಂಟ್​ ಇಲ್ಲದೆ ಒಳುಡುಪಿನಲ್ಲೇ ಬರುತ್ತಿರುವುದು ಕಾಣಿಸುತ್ತದೆ. ಅಪಾರ್ಟ್​ಮೆಂಟ್​ ಒಳಕ್ಕೆ ನುಗ್ಗಲು ಯತ್ನಿಸಿದ್ದಾನೆ ಎನ್ನುವುದಾದರು ಗೇಟ್​ನಲ್ಲಿ ಒಳಕ್ಕೆ ಬಿಟ್ಟಿದ್ದು ಯಾಕೆ..? ಎನ್ನುವ ಪ್ರಶ್ನೆ ಸೃಷ್ಟಿಯಾಗುತ್ತದ. ಒಂದು ವೇಳೆ ಗೇಟ್​ನಿಂದಲೇ ದಬ್ಬಾಳಿಕೆ ಮಾಡಿಕೊಂಡು ಒಳಕ್ಕೆ ಬಂದ ಎನ್ನುವುದಾಗಿದ್ದರೆ, ನೇರವಾಗಿ ಪೊಲೀಸ್​ ಠಾಣೆಗೆ ಫೋನ್​ ಮಾಡಬೇಕಿತ್ತು. ಒಂದು ವೇಳೆ ಕಳ್ಳನ ರೀತಿ ಕಾಂಪೌಂಡ್​ ಹಾರಿ ಒಳಕ್ಕೆ ಹೋಗಲು ಯತ್ನಿಸಿದ ಎನ್ನುವುದಾದರೂ ಸೂಕ್ತ ಸಾಕ್ಷಿಗಳನ್ನು ಕೊಡಬೇಕಿದೆ. ಅಪಾರ್ಟ್​ಮೆಂಟ್​ ಎಂದಾದ ಮೇಲೆ ಸಿಸಿಟಿವಿಗಳು ಇದ್ದೇ ಇರುತ್ತವೆ. ಆದರೆ ಈಗ ಬಿಡುಗಡೆ ಆಗಿರುವ ದೃಶ್ಯ ರಸ್ತೆಯಲ್ಲಿ ತನ್ನಷ್ಟಕ್ಕೆ ತಾನು ನಡೆದು ಬರುವುದು.

ಕಳ್ಳರನ್ನು ಕೊಲೆ ಮಾಡಿದರೆ ಕಾನೂನು ರಕ್ಷಣೆ ಎಂದು ಸುಳ್ಳು..!

ಅಭಿಷೇಕ್​ ಹಾಗೂ ರಾತ್ರಿ ಕುಡಿದ ಮತ್ತಿನಲ್ಲಿ ಏನೂ ಗೊತ್ತಾಗಿಲ್ಲ. ಆದರೆ ಬೆಳಗ್ಗೆ ಎಣ್ಣೆ ನಶೆ ಇಳಿದ ಬಳಿಕ ಮಾರತಹಳ್ಳಿ ಪೊಲೀಸ್​ ಠಾಣೆಗೆ ಅಭಿಷೇಕ್​ ಸ್ನೇಹಿತರು ನಾಪತ್ತೆ ದೂರು ಕೊಡುವುದಕ್ಕೆ ಬಂದಿದ್ದಾರೆ. ಅಷ್ಟರಲ್ಲಿ HAL ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಯಾಗಿರುವ ಸಂಗತಿ ಪೊಲೀಸರಿಗೆ ಗೊತ್ತಾಗಿತ್ತು. ನೇರವಾಗಿ ಹೋಗಿ ಪರಿಶೀಲಿಸಿದ ಬಳಿಕ ಅಪಾರ್ಟ್​ಮೆಂಟ್​ ಸೆಕ್ಯುರಿಟಿಗಳಿಂದ ಕೊಲೆಯಾದ ವ್ಯಕ್ತಿಯೇ ಅಭಿಷೇಕ್, ಬ್ಯಾಂಕ್​ ಉದ್ಯೋಗಿ ಎನ್ನುವುದು ಗೊತ್ತಾಗಿದೆ. ಪೊಲೀಸರಿಗೆ ಸೆಕ್ಯುರಿಟಿ ಗಾರ್ಡ್​ಗಳ ಮೇಲೆ ಅನುಮಾನ ದಟ್ಟವಾಗಿದ್ದು, ಕಳ್ಳನೆಂದು ಭಾವಿಸಿ ಕೊಂದೆವು ಎನ್ನುವುದನ್ನು ಪೊಲೀಸರು ಒಪ್ಪುವುದ್ದಕ್ಕೆ ತಯಾರಿಲ್ಲ. ಒಂದು ವೇಳೆ ಯಾವುದೇ ವ್ಯಕ್ತಿ ಕಳ್ಳತನಕ್ಕೆ ಬಂದಾಗ ಕೊಲೆ ಮಾಡಿದರೆ ಅಥವಾ ಕಳ್ಳನೆಂದು ಭಾವಿಸಿ ಕೊಲೆ ಮಾಡಿದರೂ ಕಾನೂನು ಪ್ರಕಾರ ಶಿಕ್ಷೆ ಆಗುವುದಿಲ್ಲ. ಅದನ್ನು ಅರಿತುಕೊಂಡೇ ಸೆಕ್ಯುರಿಟಿ ಗಾರ್ಡ್​ಗಳು ಸುಳ್ಳು ಹೇಳುತ್ತಿದ್ದಾರಾ..? ಗೊತ್ತಿಲ್ಲ. ಆದರೆ ಬ್ಯಾಂಕ್​ ಉದ್ಯೋಗಿಯನ್ನು ಸೆಕ್ಯುರಿಟಿ ಗಾರ್ಡ್ಸ್ ಮಾನವೀಯತೆ ಇಲ್ಲದೆ ಕೊಂದಿದ್ದು ಮಾತ್ರ ದುರಂತ.

Related Posts

Don't Miss it !