ಕೊರೊನಾ ಬಳಿಕ ಓಮೈಕ್ರಾನ್​ ಅಬ್ಬರ ಶುರು..! ಕಠಿಣ ಕ್ರಮಕ್ಕೆ ಕೇಂದ್ರ ಪತ್ರ..!

ಕೊರೊನಾ ಸೋಂಕಿನ ಅಬ್ಬರದಲ್ಲಿ ಲಾಕ್​ಡೌನ್​​ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಜನತೆ ಮತ್ತೆ ಲಾಕ್​ಡೌನ್​ ಅಥವಾ ಸೆಮಿಲಾಕ್​ಡೌನ್​ಗೆ ಒಳಗಾಗುವ ಕಾಲ ಸಮೀಪಿಸುತ್ತಿದೆ. ಯಾಕೆಂದ್ರೆ ಬೆಂಗಳೂರು ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಕೊರೊನಾ ಕೂಪಾಂತರ ವೈರಸ್​ ಆಗಿರುವ ಓಮೈಕ್ರಾನ್​ ದಿನದಿಂದ ದಿನಕ್ಕೆ ಅಬ್ಬರ ಹೆಚ್ಚಿಸುತ್ತಲೇ ಇದೆ. ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಈಗಾಗಲೇ ಲಕ್ಷಾಂತರ ಜನರಲ್ಲಿ ಈ ಸೋಂಕು ಆವರಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲೂ ತನ್ನ ವರಸೆ ತೋರಿಸುವ ಎಲ್ಲಾ ಲಕ್ಷಗಳು ಕಾಣಿಸುತ್ತಿದೆ. ಮುಂದಾಲೋಚನೆಯಿಂದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಇಲಾಕೆ ಮಹತ್ವದ ಮುನಸ್ಊಚನೆ ಕೊಟ್ಟು ಪತ್ರ ರವಾನೆ ಮಾಡಿದೆ. ಈ ಪತ್ರದಲ್ಲಿ ಇರುವ ಅಂಶಗಳನ್ನು ಗಮಿಸಿದಾಗ ಮುಂದಿನ ದಿನಗಳಲ್ಲಿ ಲಾಕ್​ಡೌನ್​ ಅಥವಾ ಸೆಮಿ ಲಾಕ್​ಡೌನ್​ ಮಾಡುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ.

ಕೇಂದ್ರ ಸರ್ಕಾರ ಬರೆದಿರುವ ಪತ್ರದಲ್ಲಿ ಏನಿದೆ..?

ಕೇಂದ್ರ ಆರೋಗ್ಯ ಇಲಾಖೆ ಕೊರೊನಾ ರೂಪಾಂತರಿ ಓಮೈಕ್ರಾನ್ ಸೋಂಕಿನ ಬಗ್ಗೆ ರಾಜ್ಯ ಸರ್ಕಾರಗಳಿಗೆ ಪತ್ರ ರವಾನೆ ಮಾಡಿದ್ದು, ನೈಟ್ ಕರ್ಫ್ಯೂ ಹಾಗೂ ಜನಸಂದಣಿ ಸೇರದಂತೆ ಕ್ರಮವಹಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇನ್ನೂ ಜನಸಂದಣಿ ಸೇರುವ ಸಮಾರಂಭಗಳು, ಮದುವೆ, ಅಂತ್ಯಕ್ರಿಯೆಯಲ್ಲಿ ಇಂತಿಷ್ಟೇ ಜನರು ಭಾಗಿಯಾಗಬೇಕು ಎಂದು ಮಿತಿಯನ್ನು ಹೇರಿಕೆ ಮಾಡಿ ಎಂದೂ ತನ್ನ ಪತ್ರದಲ್ಲಿ ಉಲ್ಲೇಖ ಮಾಡಿದೆ. ಇದರ ಜೊತೆಗೆ ಖಾಸಗಿ ಅಥವಾ ಸರ್ಕಾರಿ ಕಚೇರಿಗಳಲ್ಲೂ ಸಿಬ್ಬಂದಿಗೆ ಮಿತಿ ನಿಗದಿ ಮಾಡಿ. ಸಾರ್ವಜನಿಕ ಸಾರಿಗೆಗಳಲ್ಲೂ ಪ್ರಯಾಣಿಕರಿಗೆ ಮಿತಿ ಇರಲಿ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದೆ. ಅದೂ ಅಲ್ಲದೆ ಡೆಲ್ಟಾ ವೈರಸ್​ಗಿಂತಲೂ ಓಮೈಕ್ರಾನ್​ ಸೋಂಕು ಮೂರು ಪಟ್ಟು ಅಧಿಕ ವೇಗದಲ್ಲಿ ಹರಡುತ್ತಿದೆ ಎಚ್ಚರಿಕೆ ಎನ್ನುವ ಸಂದೇಶ ರವಾನಿಸಿದ್ದಾರೆ.

Read This;

ಆಸ್ಪತ್ರೆಗಳಲ್ಲಿ ಬೆಡ್​ ಹೆಚ್ಚಳ ಮಾಡಲು ಸೂಚನೆ..!

ಕೊರೊನಾ ಕಾಲದಲ್ಲಿ ಆಸ್ಪತ್ರೆಗಳಲ್ಲಿ ಬೆಡ್​ ಸಿಗದೆ ಹಾಗೂ ಬೆಡ್​ ಸಿಕ್ಕರೂ ಆಕ್ಸಿಜನ್​ ವ್ಯವಸ್ಥೆ ಸಿಗದೆ ಸಾವಿರಾರು ಜನರನ್ನು ಕಳೆದುಕೊಂಡಿರುವ ದೃಶ್ಯ ಕಣ್ಣ ಮುಂದಿದೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯಗಳನ್ನು ಈಗಲೇ ಎಚ್ಚರಿಸಿದ್ದು, ಆಸ್ಪತ್ರೆಗಳಲ್ಲಿ ICU ಬೆಡ್ ಹಾಗೂ ಆಕ್ಸಿಜನ್ ಶೇಖರಣ​ ಪ್ರಮಾಣ ಹೆಚ್ಚಿಸಿ ಎಂದು ಸಲಹೆ ನೀಡಿದೆ. ಜೊತೆಗೆ ಮನೆ ಮನೆ ಲಸಿಕೆ ಅಭಿಯಾನ ಮಾಡುವ ಮೂಲಕ ಲಸಿಕೆ ಹೆಚ್ಚು ಮಾಡಲು ತಿಳಿಸಿದ್ದಾರೆ. ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ಪತ್ರ ರವಾನಿಸಿದ್ದು, ಪ್ರತಿ ಜಿಲ್ಲಾ ಮಟ್ಟದ ಕೋವಿಡ್​ ಕೇಸ್ ಹಾಗೂ ಲಸಿಕೆ ದತ್ತಾಂಶ ಪರಿಶೀಲಿಸುವಂತೆ ಹಾಗೂ ಸೋಂಕಿತ ಪ್ರದೇಶಗಳಲ್ಲಿ ಕಂಟೈನ್ಮೆಂಟ್​​ ಕಟ್ಟುನಿಟ್ಟಾಗಿ ಜಾರಿ ಮಾಡಲು ಸೂಚಿಸಿದೆ. ಒಂದು ವೇಳೆ ಸೋಂಕಿತರು ಪತ್ತೆಯಾದ ಕೂಡಲೇ ಟೆಸ್ಟ್​​ ಮಾಡುವುದು ಸಂಪಕಿತರನ್ನು ಟ್ರ್ಯಾಕ್​ ಮಾಡುವುದು ಬಳಿಕ ಟ್ರೀಟ್​ಮೆಂಟ್​ ನೀಡುವ ಬಗ್ಗೆಯೂ ಸರ್ಕಾರಗಳಿಗೆ ಸಲಹೆ ನೀಡಿದೆ.

ರಾಜ್ಯದಲ್ಲಿ ಮತ್ತೆ ಬದಲಾಗುತ್ತಾ ಸರ್ಕಾರದ ನಿಯಮ..!

ಮಂಗಳವಾರ ಅಷ್ಟೇ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಹೊಸ ವರ್ಷಕ್ಕೆ ನೂತನ ನಿಯಮ ಜಾರಿ ಮಾಡುವ ಬಗ್ಗೆ ತಿಳಿಸಿದ್ದರು. ಡಿಸೆಂಬರ್​ 30 ರಿಂದ ಜನವರಿ 2ರ ತನಕ ಈ ನಿಯಮಗಳು ಜಾರಿಯಲ್ಲಿರಲಿದ್ದು, ಪಬ್​, ರೆಸ್ಟೋರೆಂಟ್​​ಗಳಲ್ಲಿ ಶೇಕಡ 50 ರಷ್ಟು ಸೀಟಿಂಗ್​ ಹಾಗೂ ಎಂಜಿ ರಸ್ತೆ, ಬ್ರಿಗೇಡ್​ ರಸ್ತೆ ಸೇರಿದಂತೆ ಎಲ್ಲೂ ಹೊಸ ವರ್ಷ ಆಚರಣೆಗೆ ಅವಕಾಶವಿಲ್ಲ. ಡಿಜೆ ಹಾಕಿಕೊಂಡು ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತ ಮಾಡಲು ಆಸ್ಪದ ಕೊಡಲ್ಲ ಎಂದು ಖಡಕ್​ ಆಗಿ ತಿಳಿಸಿದ್ರು. ಆದರೆ ಕ್ರಿಸ್​ಮಸ್​ ಆಚರಣೆ ಬಗ್ಗೆ ಯಾವುದೇ ಸ್ಪಷ್ಟ ಅಭಿಪ್ರಾಯ ಹೇಳದ ಬಸವರಾಜ ಬೊಮ್ಮಾಯಿ ಅದು ಸಾರ್ವಜನಿಕವಾಗಿ ಸಂಭ್ರಮ ಇರುವುದಿಲ್ಲ, ಚರ್ಚ್​ ಒಳಗೆ ಮಾಡಿಕೊಳ್ಳುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರ ಎಚ್ಚರಿಕೆ ಪತ್ರ ರವಾನಿಸಿರುವ ಬೆನ್ನಲ್ಲೇ ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಆಗುತ್ತಾ..? ಬೆಳಗಾವಿ ಅಧಿವೇಶನದ ಬಳಿಕ ನೈಟ್​ ಕರ್ಫ್ಯೂ ಕೂಡ ಜಾರಿಯಾಗುತ್ತಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.

Related Posts

Don't Miss it !