ತಂದೆ ತಾಯಿ ಇಲ್ಲದ ತಬ್ಬಲಿ, ಶ್ರೀಮಂತನಾಗಿದ್ದು ದೇವಸ್ಥಾನದ ಚಪ್ಪಲಿಯಿಂದ..

ಬೆಂಗಳೂರಿನಲ್ಲಿ ಒಂದು ಮನೆ ಇರಬೇಕು ಅನ್ನೋದು ಎಲ್ಲರ ಕನಸು. ಆ ನನಸು ಆಗುವುದು ಕಷ್ಟ ಅಂತಾ ಗೊತ್ತಿದ್ರೂ ಜನರು ಹಗಲು ಇರುಳು ಕೆಲಸ ಮಾಡ್ತಾರೆ. ಆದರೆ ಸಣ್ಣದೊಂದು ಗೂಡು ಕಟ್ಟಿಕೊಳ್ಳುವುದು ಕಷ್ಟ ಆಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತಂದೆ ತಾಯಿಯನ್ನು ಕಳೆದುಕೊಂಡು ಬೀದಿಗೆ ಬಿದ್ದ ಮೇಲೆ ಅಪಾರ್ಟ್​ಮೆಂಟ್​ನಲ್ಲಿ ವಾಸ ಮಾಡುವ ರೀತಿ ಬೆಳೆದಿದ್ದಾನೆ. ಇದಕ್ಕೆ ಕಾರಣವಾಗಿದ್ದು ದೇವಸ್ಥಾನದ ಎದುರು ಭಕ್ತರು ಬಿಡುತ್ತಿದ್ದ ಚಪ್ಪಲಿಗಳು ಎಂದರೆ ನಿಜಕ್ಕೂ ಸತ್ಯ. ಆದರೆ ಈತ ಚಪ್ಪಲಿಗಳನ್ನು ಕಾಯುವ ಕೆಲಸ ಮಾಡುತ್ತಿರಲಿಲ್ಲ. ಚಪ್ಪಲಿಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಎನ್ನುವುದು ಅಸಲಿ ಕಹಾನಿ.

ದೇವಸ್ಥಾನ ಬಳಿಯ ಚಪ್ಪಲಿ ಕಳ್ಳ ಶ್ರೀಮಂತನಾಗಿದ್ದು ಹೇಗೆ..?

ಬೆಂಗಳೂರಿನ ಉತ್ತರಹಳ್ಳಿಯವನಾದ ಪ್ರಕಾಶ್​ ಅಲಿಯಾಸ್​ ಬಾಲಾಜಿ ಚಿಕ್ಕ ವಯಸ್ಸಿನಲ್ಲೇ ತಂದೆ, ತಾಯಿಯನ್ನು ಕಳೆದುಕೊಂಡಿದ್ದ. ಆ ಬಳಿಕ ಬೆಂಗಳೂರಿನ ಕಲಾಸಿಪಾಳ್ಯಕ್ಕೆ ಬಂದು ಅಲೆಯುತ್ತಿದ್ದಾಗ ಜೊತೆಯಾದವನು ಕಾಟಯ್ಯ. ಕಾಟಯ್ಯ ಕೂಡ ಅನಾಥನಾಗಿದ್ದು, ಚಪ್ಪಲಿ ಕಳವು ಮಾಡಿ ಸಿಕ್ಕಷ್ಟು ರೇಟ್​ಗೆ ಚಪ್ಪಲಿಗಳನ್ನು ಮಾರಾಟ ಮಾಡಿ ಜೀವನ ಹೊರೆಯುತ್ತಿದ್ದನು. ಅನಾಥನಾಗಿದ್ದ ಪ್ರಕಾಶ್​ ಅಲಿಯಾಸ್​ ಬಾಲಾಜಿಯನ್ನು ಜೊತೆಗೆ ಸೇರಿಸಿಕೊಂಡಿದ್ದ. ಆ ಬಳಿಕ ಒಮ್ಮೆ ಜೈಲು ಪಾಲಾಗಿದ್ದ ಪ್ರಕಾಶ್​, ಜೈಲಿನಿಂದ ಹೊರಕ್ಕೆ ಬರುವ ಹೊತ್ತಿಗೆ ಮತ್ತೊಂದು ಮಾಸ್ಟರ್​ ಪ್ಲ್ಯಾನ್​ ಮಾಡಿಕೊಂಡೇ ಬಂದಿದ್ದ. ಅದು ಈತನ ಐಶಾರಾಮಿ ಜೀವನಕ್ಕೆ ದಾರಿ ತೋರಿಸಿತು.

ಕಳ್ಳತನ ಮಾಡ್ತಿದ್ದ.. ಆದ್ರೆ ಪಕ್ಕಾ ಪ್ಲ್ಯಾನ್​.. ವರ್ಕೌಟ್​ ಆಗ್ತಿತ್ತು..!

ಚಪ್ಪಲಿ ಕಳ್ಳತನ ಮಾಡ್ತಿದ್ದ ಪ್ರಕಾಶ್​ ಒಮ್ಮೆ ಜೈಲಿಗೆ ಹೋಗಿ ಬಂದ ಬಳಿಕ ಚಪ್ಪಲಿ ಕಳ್ಳತನ ಮಾಡೋದನ್ನು ಬಿಟ್ಟುಬಿಟ್ಟ. ಆದ್ರೆ ಮನೆಗಳ್ಳತನ ಮಾಡೋದಕ್ಕೆ ಸಖತ್​ ಐಡಿಯಾ ಮಾಡಿಕೊಂಡೇ ಬಂದಿದ್ದ. ಅದರಂತೆ ಮನೆಗಳವು ಮಾಡುತ್ತ, ಐಷಾರಾಮಿ ಜೀವನ ಮಾಡೋದಕ್ಕೆ ಶುರು ಮಾಡಿದ್ದ. ಎಷ್ಟೊಂದು ಸಿರಿವಂತನಾಗಿದ್ದ ಅಂದರೆ ಮುರುಗೇಶ್​ ಪಾಳ್ಯದ ಅಪಾರ್ಟ್​ಮೆಂಟ್​ ಒಂದರಲ್ಲಿ ಒಂಬಟ್ಟಿ ಜೀವನ ಮಾಡ್ತಿದ್ದ. ಆದರೂ ಬಾಡಿಗೆ ಮನೆ ಹುಡುಕಾಟ ಮಾತ್ರ ನಿಂತಿರಲಿಲ್ಲ. ಬಾಡಿಗೆ ಮನೆ ಬೇಕು ಅಂತಾ ಒಂದೊಂದು ಏರಿಯಾದಲ್ಲಿ ಸುತ್ತಾಡುತ್ತ, ಬೀಗ ಹಾಕಿದ್ದ ಮನೆಗಳನ್ನು ನೋಡಿಕೊಂಡು ಮೊಬೈಲ್​ನಲ್ಲಿ ಫೋಟೋ ತೆಗೆದುಕೊಂಡು ಬರ್ತಿದ್ದ. ಆ ಬಳಿಕ ಬಾಗಿಲು ಮುರಿಯದೆ ಸಲೀಸಾಗಿ ಕಳ್ಳತನ ಮಾಡ್ತಿದ್ದ.

ಇದನ್ನು ಓದಿ:  ಹೆಚ್ಚು ಲೈಂಗಿಕ ಸಂಗಾತಿಗಳು ಇರುವುದು ಯಾರಿಗೆ..? ಸಮೀಕ್ಷೆಯಲ್ಲಿ ಭಯಾನಕ ಮಾಹಿತಿ..!

ಬೀಗದ ಫೋಟೋ ಇಟ್ಕೊಂಡು ಕಳ್ಳತನದ ಸ್ಕೆಚ್​​..!

ಯೂಟ್ಯೂಬ್​​, ವೆಬ್​ಗಳಲ್ಲಿ ಪ್ರಸಾರವಾಗುವ ಕ್ರೈಂ ಸೀರಿಸ್​ಗಳನ್ನು ಹೆಚ್ಚಾಗಿ ನೋಡ್ತಿದ್ದ ಪ್ರಕಾಶ್​, ಕಳ್ಳತನ ಮಾಡೋದಕ್ಕೆ ಇರುವ ಯೋಜನೆಗಳ ಬಗ್ಗೆ ಹೆಚ್ಚು ಆಸ್ತಿಯಿಂದ ಗಮನಿಸುತ್ತಿದ್ದ. ಆ ಬಳಿಕ ಬೀದಗ ಫೋಟೋ ನೋಡಿಕೊಂಡು ಅದರ ಅಳತೆಗೆ ಸರಿ ಹೊಂದುವ ಹಾಗೆ ಕೀ ತಯಾರು ಮಾಡುತ್ತಿದ್ದ. ಒಂದು ವೇಳೆ ನಕಲಿ ಕೀ ಮಾಡಿಸುವ ಜನರ ಬಳಿಗೆ ಹೋದರೆ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು ಅನ್ನೋ ಕಾರಣಕ್ಕೆ ತಾನೇ ಮನೆಯಲ್ಲೇ ಕೀ ರೆಡಿ ಮಾಡುವ ಎಲ್ಲಾ ವಸ್ತುಗಳನ್ನು ಖರೀದಿ ಮಾಡಿ ಇಟ್ಟುಕೊಂಡಿದ್ದ. ಅಪಾರ್ಟ್​ಮೆಂಟ್​ನಲ್ಲಿ ವರ್ಕ್​ಶಾಪ್​ ರೀತಿ ಬಳಸಿಕೊಳ್ತಿದ್ದ ಪ್ರಕಾಶ್​, ಕಳ್ಳತನ ಮಾಡಿದ ಚಿನ್ನಾಭರಣ ಮಾರಾಟ ಮಾಡಿ ಶಿಸ್ತಾಗಿ ಅಪಾರ್ಟ್​ಮೆಂಟ್​ಗೆ ಹೋಗಿ ಇದ್ದು ಬಿಡ್ತಿದ್ದ. ಇದೇ ರೀತಿ ಕಳ್ಳತನ ಮಾಡ್ತಿದ್ರು ಪೊಲೀಸ್ರಿ ಸಿಕ್ಕಿ ಬಿದ್ದಿರಲಿಲ್ಲ.

ಬಂಧಿತನಿಂದ 750 ಗ್ರಾಂ ಚಿನ್ನಾಭರಣ ವಶ..!

ಬೆಂಗಳೂರಿನಲ್ಲಿ ಮನೆ ಬಾಗಿಲು ಮುರಿಯದೆ ಮನೆಯ ಬೀಗ ತೆಗೆದು ಮನೆಯವರಂತೆಯೇ ಕಳ್ಳತನ ಮಾಡಿರುವ ಅದೆಷ್ಟೋ ಪ್ರಕರಣಗಳು ಇದೀಗ ಬಯಲಾಗಬೇಕಿದೆ. ಇದೀಗ ಪ್ರಕಾಶ್​ ಬಂಧನದಿಂದ 46 ಮನೆಗಳ್ಳತನ ಬೆಳಕಿಗೆ ಬಂದಿವೆ. ಆದರೆ 7 ಮನೆಗಳ ಕಳ್ಳತನದಲ್ಲಿ ಸಿಕ್ಕಿದ್ದ 750 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ, ದುಬಾರಿ ವಾಚ್​​ಗಳೂ ಕೂಡ ಪೊಲೀಸರಿಗೆ ಸಿಕ್ಕಿವೆ. ಉಳಿದ ಆಸ್ತಿ ಪಾಸ್ತಿ ಬಗ್ಗೆ HSR ಠಾಣೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕಳ್ಳತನ ಮಾಡುತ್ತಿದ್ದರೂ ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಸಾಕಷ್ಟು ಜೂಜಾಟದಲ್ಲೂ ಹಣ ಹಾಕಿ ಶೋಕಿ ಮಾಡ್ತಿದ್ದ ಖದೀಮ ಪ್ರಕಾಶ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ತಂದೆ ತಾಯಿ ಇಲ್ಲದ ಬಡಪಾಯಿ ಚಪ್ಪಲಿ ಕದಿಯುತ್ತಲೇ ಶ್ರೀಮಂತನಾದ ಎನ್ನುವುದೋ ಅಥವಾ ಖದೀಮ ಖತರ್ನಾಕ್​ ಕಳ್ಳ ಅನ್ಬೇಕೋ ಅನ್ನೋದು ನಿಮಗೆ ಬಿಟ್ಟಿದ್ದು.

Related Posts

Don't Miss it !