ವಿಶ್ವಕಪ್​ ವಿಜೇತ ತಂಡದ ಈ ಆಟಗಾರ ಈಗ ಕೂಲಿ ಕಾರ್ಮಿಕ..!

ಕ್ರೀಕೆಟ್​ ನಮ್ಮ ದೇಶ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಶ್ರೀಮಂತ ಕ್ರೀಡೆಯಾಗಿ ಬೆಳೆದಿದೆ. ಒಮ್ಮೆ ಕ್ರಿಕೆಟ್​ ಆಟಗಾರನಾಗಿ ಗುರುತಿಸಿಕೊಂಡರೆ ಕೋಟಿ ಕೋಟಿ ಹಣ ಮನೆ ಬಾಗಿಲಿಗೆ ಬಂದು ಬೀಳುವುದು ಖಚಿತ. ಒಂದೆರಡು ಪಂದ್ಯಗಳಲ್ಲಿ ಆಟವಾಡಿರುವ ಅದೆಷ್ಟೋ ಆಟಗಾರರು ಇಂದು ಉತ್ತಮ ಜೀವನ ನಡೆಸುತ್ತಿದ್ದಾರೆ. ಆದರೆ ನಮ್ಮ ದೇಶದ ಪ್ರಧಾನ ಮಂತ್ರಿ ತವರು ಗುಜರಾತ್​ನಲ್ಲಿ ವಿಶ್ವಕಪ್​ ಗೆಲುವು ಸಾಧಿಸಿದ ತಂಡದಲ್ಲಿದ್ದ ಕ್ರಿಕೆಟ್​ ಆಟಗಾರ ಕೂಲಿ ಕಾರ್ಮಿಕನಾಗಿ ಇಟ್ಟಿಗೆ ಹೊರುವ ಕೆಲಸ ಮಾಡುತ್ತಿದ್ದಾರೆ. ಈ ಘಟನೆ ಬಗ್ಗೆ ಭಾರತೀಯರಾದ ನಮಗೆ ಅಚ್ಚರಿಯಾದರೂ ಸತ್ಯ.

29 ವರ್ಷದ ಕ್ರಿಕೆಟಿಗನ ಕೂಲಿ ಕೆಲಸ..!

ಗುಜರಾತ್​ನ 29 ವರ್ಷದ ನರೇಶ್​ ತುಮ್ಡಾ ಕೆಲಸ ಇಲ್ಲದ ಕಾರಣಕ್ಕೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಎರಡೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿರುವ ನರೇಶ್​ ತುಮ್ಡಾ, ನಾನು ಪ್ರತಿದಿನ 250 ರೂಪಾಯಿ ಸಂಪಾದನೆ ಮಾಡಲು ಕೆಲಸ ಮಾಡುತ್ತಿದ್ದೇನೆ ಎಂದು ಯಾವುದೇ ಸಂಕೋಚವಿಲ್ಲದೆ ಹೆಮ್ಮೆಯಿಂದ ಹೇಳುತ್ತಾರೆ. 2018ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಅಂಧರ ವಿಶ್ವಕಪ್​ನಲ್ಲಿ ಭಾರತ ಗೆಲುವು ಸಾಧಿಸಿತ್ತು. ಆ ತಂಡದಲ್ಲಿ ನರೇಶ್​ ತುಮ್ಡಾ ಕೂಡ ಆಟವಾಡಿದ್ದರು. ಗುಜರಾತ್​ನ ನವಸಾರಿ ಮೂಲದ ನರೇಶ್​ ತುಮ್ಡಾ, ಸಾಕಷ್ಟು ಬಾರಿ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರು. ಆದರೆ ಯಾವುದೇ ಅಧಿಕಾರಿಗಳು, ರಾಜಕಾರಣಿಗಳು ಸ್ಪಂದಿಸದ ಕಾರಣ, ದಿನಗೂಲಿ ಕೆಲಸವೇ ಖಾಯಂ ಆಗಿದೆ.

ವಯಸ್ಸಾದ ತಂದೆ ತಾಯಿ ಸಾಕುವ ಹೊಣೆ..!

ಸರ್ಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣಕ್ಕೆ ಕಳೆದ ವರ್ಷ ತರಕಾರಿ ಮಾರಾಟ ಮಾಡುವ ಕೆಲಸ ಮಾಡಿದ್ದರು. ಆ ಹಣದಿಂದ ವಯಸ್ಸಾದ ತಂದೆ ತಾಯಿ ಸಾಕುವುದು ಕಷ್ಟವಾಯ್ತು. ನನ್ನ ತಂದೆ ತಾಯಿಗೆ ವಯಸ್ಸಾಗಿದೆ. ಅವರಿಗೆ ಕೆಲಸ ಮಾಡುವುದು ಸಾಧ್ಯವಿಲ್ಲ. ನನ್ನ ಕುಟುಂಬ ಸಾಕುವ ಹೊಣೆಗಾರಿಕೆ ನನ್ನ ಮೇಲಿದೆ. ಸರ್ಕಾರ ಕೆಲಸ ಕೊಡಬಹುದು ಎನ್ನುವ ಆಶಯದಲ್ಲಿ ಕಳೆದೆರಡು ವರ್ಷಗಳಿಂದ ಜೀವನ ಮಾಡುತ್ತಿದ್ದೇನೆ ಎಂದಿದ್ದಾರೆ ನರೇಶ್​ ತುಮ್ಡಾ. ಈ ಮನವಿಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಗಮನಿಸಿ ಕೆಲಸ ಕೊಡಿಸುವ ವಿಶ್ವಾಸ ಸಾಕಷ್ಟು ಓದುಗರಲ್ಲಿದೆ.

ನರೇಶ್​ ತುಮ್ಡಾ, ಕ್ರಿಕೆಟ್​ ಆಟಗಾರ

5ನೇ ವರ್ಷದಿಂದಲೇ ನಾನು ಕ್ರಿಕೆಟ್​ ಆಡಿದ್ದೇನೆ..!

ನಾನು ನನ್ನ ಬಾಲ್ಯದಲ್ಲಿ 5 ವರ್ಷದವನಿದ್ದಾಗಿನಿಂದ ಕ್ರಿಕೆಟ್​ ಆಟವಾಡುತ್ತಿದ್ದೇನೆ. 2014ರಲ್ಲಿ ಗುಜರಾತ್​ ತಂಡಕ್ಕೆ ಆಯ್ಕೆಯಾಗಿದ್ದೆ. ಆ ಬಳಿಕ ವಿಶ್ವಕಪ್​ಗೂ ಆಯ್ಕೆಯಾಗುವ ಮೂಲಕ ರಾಷ್ಟ್ರೀಯ ತಂಡವನ್ನು ಸೇರಿದೆ. ಪಾಕಿಸ್ತಾನ ನೀಡಿದ 308 ರನ್​ಗಳ ಟಾರ್ಗೆಟ್​ ಅನ್ನು ಇನ್ನೂ 2 ವಿಕೆಟ್​ಗಳು ಬಾಕಿ ಇರುವಂತೆಯೇ ತಲುಪಿದ್ದೆವು. ಇದಕ್ಕೂ ಮೊದಲು 2017ರಲ್ಲಿ ಟಿ-20 ವಿಶ್ವಕಪ್​ನಲ್ಲೂ ಪಾಕಿಸ್ತಾನವನ್ನು ಸೋಲಿಸಿದ್ದೆವು ಎಂದು ನೆನಪು ಮಾಡಿಕೊಳ್ತಾರೆ ಅಂಧ ಕ್ರಿಕೆಟ್​ ತಂಡದ ಆಟಗಾರ ನರೇಶ್​ ತುಮ್ಡಾ. ಮನೆಯಲ್ಲಿ 5 ಜನರಿದ್ದು, ತರಕಾರಿ ಮಾರಾಟದಿಂದ ಸೂಕ್ತ ಸಂಪಾದನೆ ಆಗದ ಕಾರಣ ದಿನಗೂಲಿ ಕಾರ್ಮಿಕಬಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುವಾಗ ಕಣ್ಣಾಲಿಗಳು ತುಂಬಿ ಬಂದಿವೆ.

ಉಳ್ಳವರಿಗೆ ಮಾತ್ರವೇ ಸಿಗುತ್ತೆ ಸರ್ಕಾರಿ ಸಹಾಯ..!?

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಕ್ರೀಡಾ ಕೋಟಾದಲ್ಲಿ ಸರ್ಕಾರಿ ಕೆಲಸ ನೀಡುವುದು ಗೊತ್ತಿರುವ ಸಂಗತಿ. ಆದರೆ ಹಣಕಾಸಿನಲ್ಲಿ ಸ್ಥಿತಿವಂತರಾಗಿದ್ದರೆ ಸರ್ಕಾರದ ಎಲ್ಲಾ ಸೌಲಭ್ಯಗಳೂ ದೊರೆಯುತ್ತವೆ ಎನ್ನುವುದನ್ನು ಬಹಿರಂಗವಾಗಿ ಹೇಳಬೇಕಾಗಿಲ್ಲ. ದೊಡ್ಡ ದೊಡ್ಡ ಜಾಹಿರಾತು ಕಂಪನಿಗಳಲ್ಲಿ ಕೋಟಿ ಕೋಟಿ ಹಣ ಪಡೆಯುವ ದೊಡ್ಡ ದೊಡ್ಡ ಆಟಗಾರರಿಗೆ ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರಗಳೇ ಇರಲಿ ಕೆಲಸ ಕೊಟ್ಟು ಗೌರವಿಸುತ್ತಾರೆ. ಅದರಲ್ಲಿ ಪ್ರಚಾರ ಪಡೆಯುವ ಹುನ್ನಾರವೂ ಇರುತ್ತದೆ ಎನ್ನುವುದು ಬಹಿರಂಗ ಸತ್ಯ. ಕೋಟಿ ಕೋಟಿ ಮೀಸಲಿಟ್ಟಿದ್ದೇವೆ. ಕ್ರೀಡಾಳುಗಳನ್ನು ನಮ್ಮ ಸರ್ಕಾರದಲ್ಲಿ ಉತ್ತುಂಗಕ್ಕೆ ಏರಿಸಿಬಿಡುತ್ತೇವೆ ಎನ್ನುವ ಹೊಣ ಜಂಭವನ್ನು ಇನ್ನಾದರೂ ಬಿಟ್ಟು ಇಂತಹ ಅಸಹಾಯಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕಿದೆ.

Related Posts

Don't Miss it !