ತಮಿಳುನಾಡಲ್ಲಿ ಹೀಗೂ ಮಾಡ್ತಾರೆ..!! ಕರ್ನಾಟಕದಲ್ಲಿ ಮಾಡ್ತಾರಾ..? ನೋಡಿ..

ತಮಿಳುನಾಡು ಕರ್ನಾಟಕಕ್ಕೆ ದಾಯಾದಿ ರಾಜ್ಯ. ಕಾವೇರಿ ವಿಚಾರ, ಮೇಕೆದಾಟು ಬಡಿದಾಡ, ಭಾಷಾ ಮೇಲಾಟ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ನಮ್ಮಿಬ್ಬರ ನಡುವೆ ಕಿತ್ತಾಟಗಳು ಸಾಗುತ್ತಲೇ ಇರುತ್ತವೆ. ಅಣ್ಣತಮ್ಮಂದಿರ ಹೇಗೆ ಸಾಯುವ ತನಕ ಹೊಡೆದಾಟ ಬಡಿದಾಟದ ಜೀವನ ನಡೆಸುತ್ತಾರೋ ಅದೇ ರೀ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಇರುವ ತನಕವೂ ಎರಡೂ ರಾಜ್ಯಗಳ ನಡುವೆ ಕಿತ್ತಾಟ ತಪ್ಪಿದ್ದಲ್ಲ ಎನ್ನಬಹುದು. ಆದರೆ ತಮಿಳುನಾಡಿನಲ್ಲಿ ಕೆಲವೊಂದು ಅಚ್ಚರಿಗಳೂ ನಡೆಯುತ್ತವೆ. ರಾಜ್ಯ, ಭಾಷೆ ವಿಚಾರ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡ್ತಾರೆ. ರಾಜಕೀಯ ಸೇರಿದಂತೆ ಕರ್ನಾಟಕ ಕಲಿಯ ಬೇಕಾದ ಸಾಕಷ್ಟು ಬೆಳವಣಿಗೆಗಳು ತಮಿಳುನಾಡಿನಲ್ಲಿ ಆಗಾಗ ನಡೆಯುತ್ತವೆ. ಆ ರೀತಿಯ ಘಟನೆಗಳಲ್ಲಿ ಈ ವಿಚಾರವೂ ಒಂದು.

ಟೈಲರ್​ ಮೂರ್ತಿ (ಕೃಪೆ ಬಿಬಿಸಿ ತಮಿಳ್)
Read This;

ಸಾಮಾಜಿಕ ಜಾಲ ತಾಣದ ಮನವಿಗೆ ಸ್ಪಂದಿಸಿದ ಡಿಸಿ..!

‘ನಮ್ಮೂರಿಗೆ ಓಡಾಡುವ ರಸ್ತೆಯಿಲ್ಲ, ನಮಗೆ ರಸ್ತೆ ಬೇಕು, ದಯಮಾಡಿ ಈ ಕಡೆಗೆ ಗಮನ ಹರಿಸಿ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್​ ಮಾಡಲಾಗಿತ್ತು. ಈ ಪೋಸ್ಟ್ ಗಮನಿಸಿದ ಧರ್ಮಪುರಿ ಜಿಲ್ಲಾಧಿಕಾರಿ ದಿವ್ಯದರ್ಶಿನಿ, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರಸ್ತೆ ನಿರ್ಮಾಣ ಮಾಡುವಂತೆ ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸತತ 30 ವರ್ಷಗಳಿಂದ ರಸ್ತೆಯಿಲ್ಲದೆ ಕಂಗೆಟ್ಟಿದ್ದ ಗ್ರಾಮಸ್ಥರು ಜಿಲ್ಲಾಧಿಕಾರಿ ಭರವಸೆಯಿಂದ ನಿರಾಳರಾಗಿದ್ದಾರೆ. ಈ ಕಾರ್ಯಕ್ಕೆ ಛಲ ಬಿಡದೆ ಹೋರಾಟ ನಡೆಸಿದ್ದು ಓರ್ವ ವಿಕಲಚೇತನ ಎನ್ನುವುದು ಗಮನಿಸಬೇಕಾದ ಸಂಗತಿ. ನನ್ನಿಂದ ಏನು ಸಾಧ್ಯ ಎನ್ನುವ ಬದಲು ನನ್ನಿಂದಲೂ ಸಾಧ್ಯ ಎಂದುಕೊಂಡರೆ ಈ ರೀತಿಯ ಅಚ್ಚರಿಗಳು ಆಗುವುದು ಶತಸಿದ್ಧ.

(ಕೃಪೆ: ಬಿಬಿಸಿ ತಮಿಳ್)

ಈ ಅಚ್ಚರಿಯ ಬೆಳವಣಿಗೆ ನಡೆದಿದ್ದು ಹೇಗೆ..? ಕಾರಣ ಯಾರು..?

ಧರ್ಮಪುರಿ ಜಿಲ್ಲೆ ಪೆನ್ನಾಗರಂ ವಿಧಾನಸಭಾ ಕ್ಷೇತ್ರದ ಅರಿಯೂರ್ ಬಳಿಯ ಅಣ್ಣಾನಗರ ಗ್ರಾಮದಲ್ಲಿ ಕಚ್ಚಾ ರಸ್ತೆಯೂ ಇಲ್ಲದೆ ಸಂಕಷ್ಟ ಮನೆ ಮಾಡಿತ್ತು. ರಸ್ತೆಗೆ ಬರಬೇಕು ಎಂದರೆ ಅರ್ಧ ಕಿಲೋ ಮೀಟರ್​ ಕಲ್ಲು ಮಣ್ಣಿನ ಕಾಲು ಹಾದಿಯಲ್ಲಿ ಬರಬೇಕಿತ್ತು. ಅಂಗವಿಕಲ ಮೂರ್ತಿ ಎಂಬುವರು ಈ ಬಗ್ಗೆ ಸಾಕಷ್ಟು ಮನವಿ ಕೊಟ್ಟರೂ ಅಧಿಕಾರಿಗಳು ಗಮನಹರಿಸಿರಲಿಲ್ಲ. ಕೊನೆಗೆ ಜಿಲ್ಲಾಧಿಕಾರಿಗಳೂ ಈ ಮನವಿ ಸಲ್ಲಿಸಲಾಗಿತ್ತು. ಆದರೆ ರಸ್ತೆ ನಿರ್ಮಾಣದ ಭರವಸೆ ಕೊಟ್ಟರೂ ಕಾರ್ಯಗತ ಆಗಿರಲಿಲ್ಲ. ಪ್ರತಿನಿತ್ಯ ತನ್ನ ಮನೆಯಿಂದ ಅರ್ಧ ಕಿಲೋ ಮೀಟರ್​ ತೆವಳುತ್ತಾ ಸಾಗಿ ರಸ್ತೆಗೆ ಬಂದ ಬಳಿಕ ವಾಹನದಲ್ಲಿ ಅರಿಯೂರಿನಲ್ಲಿ ಇರುವ ಬಟ್ಟೆ ಹೊಲಿಗೆ ಅಂಗಡಿಗೆ ಕೆಲಸಕ್ಕೆ ಹೋಗಬೇಕಿತ್ತು. ಸಾಕಷ್ಟು ಹೋರಾಟದ ಜೊತೆಗೆ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಕೆಲಸ ಆಗಿರಲಿಲ್ಲ. ಇದೀಗ ಒಂದೇ ಒಂದು ಟ್ವೀಟ್​ ಕೆಲಸ ಮಾಡಿಸುತ್ತಿದೆ.

ಧರ್ಮಪುರಿ ಜಿಲ್ಲಾಧಿಕಾರಿಗೆ ಟ್ವೀಟ್​ ಮಾಡಿದ ಮೂರ್ತಿ..!

ತನ್ನ ಎರಡೂ ಕಾಲುಗಳು ಪೋಲಿಯೋ ಪೀಡಿತವಾಗಿ ನಡೆಯಲು ಸಾಧ್ಯವಾಗದೆ ಮನೆಯಲ್ಲಿದ್ದಾಗ ಓದುವ ಮನಸ್ಸು ಮಾಡಿದ್ದ ಮೂರ್ತಿ, ತನ್ನ ಸಹೋದರಿ ಬೆನ್ನೇರಿ ಶಾಲೆಗೆ ಹೋಗುತ್ತಿದ್ದರಂತೆ. 5ನೇ ತರಗತಿಯಲ್ಲಿ ಇದ್ದಾಗಲೇ ಅಕ್ಕನ ಮದುವೆ ಆಗಿದ್ದರಿಂದ ತೆವಳಿಕೊಂಡೇ ಶಾಲೆಗೆ ಹೋಗುತ್ತಿದ್ದ ಮೂರ್ತಿ ಕಿವಿಯಲ್ಲಿ ಜೀರುಂಡೆ ಹೋಗಿದ್ದರಿಂದ ಕಿವಿಯಲ್ಲಿ ಕೇಳುವುದೂ ಅಸಾಧ್ಯವಾಗಿದೆ. ಆದರೂ ಛಲ ಬಿಡದ ಮೂರ್ತಿ, ಮನೆಯಲ್ಲಿ ಕೂರದೆ ಬಟ್ಟೆ ಹೊಲಿಗೆಯನ್ನು ಕಲಿತಿತಿದ್ದಾರೆ. ತನ್ನ ಕಾಲಿನ ಮೇಲೆ ನಿಲ್ಲಲು ಸಾಧ್ಯವಾಗದಿದ್ದರೂ ಬದುಕಿನಲ್ಲಿ ಯಶಸ್ಸು ಸಾಧಿಸಿದ್ದಾರೆ. ಎಷ್ಟು ಬಾರಿ ಮನವಿ, ಹೋರಾಟ ಮಾಡಿದರೂ ರಸ್ತೆ ಕಾಮಗಾರಿ ಆಗದೆ ಇದ್ದಾಗ, ಅಂತಿಮವಾಗಿ ಟ್ವಿಟ್ಟರ್​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಮೈ ಧರ್ಮಪುರಿ ಫೇಸ್​ಬುಕ್​ ಪೇಜ್​​ನವರು ಸಾಕಷ್ಟು ಪ್ರಚಾರ ನೀಡಿದ್ದರು. ಇದರಿಂದ ಜಿಲ್ಲಾಡಳಿತ ಗಮನಿಸಿ ರಸ್ತೆ ಕಾಮಗಾರಿ ಶುರು ಮಾಡಿದ್ದಾರೆ. ಕೇವಲ 10 ದಿನಗಳಲ್ಲಿ ರಸ್ತೆ ನಿರ್ಮಿಸುವುದಾಗಿ ತಿಳಿಸಿದ್ದಾರೆ.

Related Posts

Don't Miss it !