‘ತಾಯಂದಿರು ಹೊಗೆ ಕುಡಿಯಬೇಡಿ’ ಹೊಸ ಒಲೆ ಕಟ್ಟಿಸಿ ಗ್ಯಾಸ್ ಎತ್ತಿಡಿ..!

ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದ ಬಳಿಕ ಭಾವನಾತ್ಕವಾಗಿ ಮಾತನಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸಾಕಷ್ಟು ತಾಯಂದಿರುವ ಇನ್ನೂ ಹೊಗೆ ಕುಡಿಯುತ್ತಾ ಕಣ್ಣೀರು ಹಾಕುತ್ತಿದ್ದಾರೆ. ಸಾಕಷ್ಟು ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಆ ತಾಯಂದಿರ ಸಮಸ್ಯೆ ಹೋಗಲಾಡಿಸಲು ಉಜ್ವಲ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಆದರೆ ಇದೀಗ ಅದೇ ತಾಯಂದಿರು ಕಣ್ಣೀರು ಹಾಕುತ್ತಿದ್ದಾರೆ. ಕಾರಣ ಅಡುಗೆ ಅನಿಲದ ದರ ನೋಡಿ.

ಅಡುಗೆ ಅನಿಲ ( LPG ) ದರ ಮತ್ತೆ ₹25 ಏರಿಕೆ..!

ಪೆಟ್ರೋಲ್​, ಡೀಸೆಲ್ ಸೇರಿದಂತೆ ಅಡುಗೆ ಅನಿಲದ ಬೆಲೆ ಗಗನದತ್ತ ಮುಖ ಮಾಡುತ್ತಿದೆ. ಬುಧವಾರ ಗ್ಯಾಸ್​ ಸಿಲಿಂಡರ್​​ ಬೆಲೆ 25 ರೂಪಾಯಿ ಬೆಲೆ ಏರಿಕೆ ಕಂಡಿದೆ. ಬೆಂಗಳೂರಲ್ಲಿ 14.2 ಕೆಜಿಯ ಅಡುಗೆ ಅನಿಲ ಸಿಲಿಂಡರ್​ ಬೆಲೆ 887 ರೂಪಾಯಿ ಆಗಿದೆ. ಸಿಲಿಂಡರ್​ ತಂದು ಏಜೆನ್ಸಿ ಅವರು ಕಲೆಕ್ಟ್​ ಮಾಡುವ ಹೆಚ್ಚುವರಿ ದರ ಸೇರಿದ್ರೆ 900 ರೂಪಾಯಿ ಮೀರುವುದು ಖಚಿತ. ಉಜ್ವಲ ಯೋಜನೆ ಜಾರಿಯಾದಾಗ 450 ರ ಆಸುಪಾಸಿನಲ್ಲಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕುಟುಂಬಗಳಿಗೆ ಗ್ಯಾಸ್​ ಕನೆಕ್ಷನ್​ ಕೊಟ್ಟಿದ್ದಾರೆ. ಆದರೆ ಅಷ್ಟೂ ಸಿಲಿಂಡರ್​ ಸೇರಿದಂತೆ ಸ್ಟೌವ್​ ಕೂಡ ಅಟ್ಟ ಸೇರುವುದು ಖಚಿತವಾಗಿದೆ.

ಈ ವರ್ಷ ಅಡುಗೆ ಅನಿಲ ದರ ಏರಿಕೆ ಹೇಗಿತ್ತು..?

ಜನವರಿಯಲ್ಲಿ 697 ರೂಪಾಯಿ ಇತ್ತು. ಫೆಬ್ರವರಿಯಲ್ಲಿ 721ಕ್ಕೆ ಏರಿಕೆ ಆಯ್ತು. ಬಳಿಕ ಮಾರ್ಚ್​ನಲ್ಲಿ 771ಕ್ಕೆ ಏರಿಕೆಯಾದ ಬಳಿಕ ಏಪ್ರಿಲ್​ನಲ್ಲಿ 796 ರೂಪಾಯಿ ಆಯ್ತು. ಮೇ ನಲ್ಲಿ 822, ಜುಲೈನಲ್ಲಿ 837 ರೂಪಾಯಿ, ಆಗಸ್ಟ್​ನಲ್ಲಿ 862, ಸೆಪ್ಟೆಂಬರ್​ನಲ್ಲಿ 887 ರೂಪಾಯಿ ಆಗಿದೆ. ಉಜ್ವಲ್ ಯೋಜನೆಯಲ್ಲಿ ಗ್ಯಾಸ್​ ಸಿಲಿಂಡರ್​ ಕೊಟ್ಟಿದ್ದೇವೆ ಕೊಟ್ಟಿದ್ದೇವೆ ಎನ್ನುತ್ತಾ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕರು ಭಾಷಣ ಮಾಡುತ್ತಾರೆ. ಆದರೆ ಗ್ಯಾಸ್​ ಸಿಲಿಂಡರ್​ ಹಾಗೂ ಸ್ಟೌ ಕೊಟ್ಟ ಬಳಿಕ ಪ್ರತಿ ತಿಂಗಳು 500 ರೂಪಾಯಿ ಕೊಟ್ಟು ಖರೀದಿ ಮಾಡ್ತಿದ್ದ ಅಮ್ಮಂದಿರು ಈಗ 900ಕ್ಕೂ ಹೆಚ್ಚು ಹಣ ಕೊಟ್ಟು ಖರೀದಿ ಮಾಡುವ ಬದಲು ಮತ್ತೆ ಸೌಧೆ ಒಲೆಗಳ ಕಡೆಗೆ ಮುಖ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ದೇಶದ ಮೆಟ್ರೋನಗರಗಳ ದರ ಪಟ್ಟಿ ನೋಡೋದಾದ್ರೆ, ದೆಹಲಿಯಲ್ಲಿ 884.50, ಮುಂಬೈನಲ್ಲಿ884.50, ಚೆನ್ನೈನಲ್ಲಿ 900.50 ಹಾಗೂ ಕೊಲ್ಕತ್ತಾದಲ್ಲಿ 911 ರೂಪಾಯಿ ಆಗಿದೆ.

Read this also;

ದರ ಏರಿಕೆಗೆ ಕಾಂಗ್ರೆಸ್​ ನಾಯಕರ ಆಕ್ರೋಶ..!

ಕೇಂದ್ರ ಸರ್ಕಾರ ಜನರಿಗೆ ಟ್ಯಾಕ್ಸ್​ ಮೇಲೆ ಟ್ಯಾಕ್ಸ್​ ಹಾಕುವ ಮೂಲಕ ಬೆಲೆ ಏರಿಕೆ ಮಾಡುತ್ತಲೇ ಇದೆ. ಈ ಮೂಲಕ ಜನರನ್ನು ಕೇಂದ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರನ್ನು ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಒತ್ತಾಯಿಸುವವರು ಸ್ನೇಹಿತರ ನೆರಳಿನ ಅಡಿಯಲ್ಲಿ ಮಲಗುತ್ತಿದ್ದಾರೆ. ಆದರೆ ದೇಶವು ಅನ್ಯಾಯದ ವಿರುದ್ಧ ಒಂದಾಗುತ್ತಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ದೇಶದ ಜನರನ್ನ ಡಬಲ್​ ಎಂಜಿನ್​ ಸರ್ಕಾರ ದಿವಾಳಿ ಮಾಡುತ್ತಿದೆ ಎಂದು ದಿನೇಶ್​ ಗುಂಡೂರಾವ್​ ಟ್ವೀಟ್​ ಮಾಡಿದ್ದಾರೆ.

Read this also:

ಬಿಜೆಪಿ ನಾಯಕರಿಗೆ ದರ ಏರಿಕೆ ಕೋಪ ಇದ್ಯಾ..?

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಚ್ಚು ಮೆಚ್ಚು ನಾಯಕ ಎಂದು ಹೇಳುತ್ತಿದ್ದ ಬೆಂಬಲಿಗೂ ಕೂಡ ಇದೀಗ ದರ ಏರಿಕೆ ಬಿಸಿ ಅನುಭವಿಸುತ್ತಿದ್ದಾರೆ. ಆದರೆ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಕೆಲವೊಂದಿಷ್ಟು ಜನ ಸಾಕಷ್ಟು ಬೇರೆ ಬೇರೆ ಮಾರ್ಗಗಳನ್ನು ಹುಡುಕಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇನ್ನಷ್ಟು ಜನರು ಬಿಜೆಪಿ ಸರ್ಕಾರದ dರ ಏರಿಕೆಯನ್ನು ಮನಸ್ಸಿನಲ್ಲಿ ವಿರೋಧಿಸುತ್ತಿದ್ದರೂ ಬಹಿರಂಗವಾಗಿ ಹೇಳಿಬಿಟ್ಟರೆ ಇಷ್ಟು ದಿನ ಪರವಹಿಸಿದ್ದ ವ್ಯಕ್ತಿಯನ್ನು ದೂರಬೇಕಾಗುತ್ತದೆ ಎನ್ನುವ ಕಾರಣಕ್ಕೆ ಅನಿವಾರ್ಯವಾಗಿ ಮೌನಕ್ಕೆ ಶರಣಾಗುವ ಪರಿಸ್ಥಿತಿ ಬಂದಿದೆ ಎನ್ನುವುದು ಸತ್ಯ.

Related Posts

Don't Miss it !