ಐವರು ಕನ್ನಡಿಗರು ಸೇರಿ ದೇಶದ 128 ಗಣ್ಯರಿಗೆ ಪದ್ಮ ಗೌರವ..! ಪ್ರಮುಖರ ಪಟ್ಟಿ..

ಐವರು ಕನ್ನಡಿಗರೂ ಸೇರಿದಂತೆ ದೇಶದ 128 ಜನ ಸಾಧಕರಿಗೆ ದೇಶದ ಉನ್ನತ ಪದ್ಮ ಗೌರವ ಘೋಷಣೆ ಆಗಿದೆ. 73ನೇ ಗಣರಾಜ್ಯೋತ್ಸವದ ಅಂಗವಾಗಿ ಪದ್ಮ ಪುರಸ್ಕಾರ ಲಭಿಸಿದೆ. 4 ಮಂದಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮ ಭೂಷಣ ಹಾಗೂ 107 ಮಂದಿಗೆ ಪದ್ಮಶ್ರೀ ಪುರಸ್ಕಾರ ಗೌರವ ನೀಡಲಾಗಿದೆ. ತಮಿಳುನಾಡಿನಲ್ಲಿ ಘಟಿಸಿದ ಹೆಲಿಕಾಪ್ಟರ್​ ದುರಂತದಲ್ಲಿ ಮರಣ ಹೊಂದಿದೆ ಮಾಜಿ CDS ಜನರಲ್​ ಬಿಪಿನ್ ರಾವತ್​ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಗೌರವ ನೀಡಲಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಕಲ್ಯಾಣ್​ ಸಿಂಗ್​ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ, ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಪದ್ಮ ಭೂಷಣ ಗೌರವ ನೀಡಲಾಗಿದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಕಮ್ಯುನಿಸ್ಟ್​ ಪಕ್ಷದ ಬುದ್ಧದೇವ ಭಟ್ಟಾಚಾರ್ಯ ಅವರಿಗೆ ಪದ್ಮಭೂಷಣ ಗೌರವ ನೀಡಲಾಗಿದೆ.

ಇದನ್ನೂ ಓದಿ : ವಲಸಿಗರಲ್ಲಿ ಯಾರೆಲ್ಲಾ ಮಂತ್ರಿ ಸ್ಥಾನ ಕಳೆದುಕೊಳ್ತಾರೆ!? ಇಲ್ಲಿದೆ ಲಿಸ್ಟ್​..

ಗೂಗಲ್​ ಸಿಇಓ ಸುಂದರ್​ ಪಿಚ್ಚೈಗೆ ಗೌರವ..!

ಸಿನಿಮಾ ಕ್ಷೇತ್ರದಿಂದ ಸಾಹುಕಾರ್ ಜಾನಕಿ ಅವರಿಗೆ ಪದ್ಮಶ್ರೀ, ಸಂಗೀತ ಕ್ಷೇತ್ರದಲ್ಲಿ ಗಾಯಕ ಸೋನು ನಿಗಮ್ ಅವರಿಗೆ ಪದ್ಮಶ್ರೀ ಗೌರವ ನೀಡಲಾಗಿದೆ. ಕ್ರೀಡಾ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್​ನ ಚಿನ್ನದ ಹುಡುಗ ನೀರಜ್​ ಛೋಪ್ರಾಗೆ ಪದ್ಮಶ್ರೀ, ಗೂಗಲ್​ CEO ತಮಿಳುನಾಡಿನ ಸುಂದರ್ ಪಿಚ್ಚೈಗೆ ಪದ್ಮಶ್ರೀ, ಮೈಕ್ರೋಸಾಫ್ಟ್​ CEO ಆಗಿರುವ ಭಾರತೀಯ ಸಂಜಾತ ಸತ್ಯ ನದೆಲ್ಲಾ ಅವರಿಗೆ ಪದ್ಮಶ್ರೀ ಗೌರವ ಲಭಿಸಿದೆ. ಇನ್ನೂ ಕೊರೊನಾ ಸಂಕಷ್ಟ ದೂರ ಮಾಡುವುದಕ್ಕಾಗಿ ಶ್ರಮಿಸಿದ ಕೋವಿಶೀಲ್ಡ್ ಲಸಿಕೆಯ ಉತ್ಪಾದಕ ಸಂಸ್ಥೆ ಸೀರಮ್​ ಇನ್ಸ್​​ಟಿಟ್ಯೂಟ್​ ಮಾಲೀಕ ಪೂನವಾಲ ಅವರಿಗೆ ಪದ್ಮಶ್ರೀ ಹಾಗೂ ಕೊವ್ಯಾಕ್ಸಿನ್​ ತಯಾರಿಕಾ ಸಂಸ್ಥೆ ಭಾರತ್​ ಬಯೋಟೆಕ್​ನ ಕೃಷ್ಣ ಎಲ್ಲಾ ಅವರಿಗೆ ಪದ್ಮಶ್ರೀ ಗೌರವ ಲಭಿಸಿದೆ.

ಇದನ್ನೂ ಓದಿ: ಗೆಲುವಿನ ಕನಸಿನಲ್ಲಿ ಸೋಲುವ ಆತಂಕ..! ಕಾಂಗ್ರೆಸ್​ನಲ್ಲಿ ಗೆದ್ದವರು ಸಿಎಂ..!

ಕರುನಾಡ ಪಂಚ ಕಣ್ಮಣಿಗಳಿಗೆ ಪದ್ಮಶ್ರೀ ಮುಕುಟ..!

128 ಜನ ಸಾಧಕರಲ್ಲಿ ಕರ್ನಾಟದ ಐವರಿಗೆ ಸ್ಥಾನ ಕಲ್ಪಿಸಲಾಗಿದೆ. ಸಾಹಿತ್ಯ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಮರಣೋತ್ತರವಾಗಿ ದಲಿತ ಕವಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರಿಗೆ ಪದ್ಮಶ್ರೀ ಗೌರವ ಲಭಿಸಿದೆ. ಕಲಾ ವಿಭಾಗದಲ್ಲಿ ಗಮಕ ವಿದ್ವಾಂಸ ಶಿವಮೊಗ್ಗದ ಹೆಚ್​ ಆರ್ ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಗೌರವ, ಸಂಶೋಧನಾ ಕ್ಷೇತ್ರದಲ್ಲಿ ಧಾರವಾಡದ ಅಬ್ದುಲ್ ಖಾದರ್ ನಡಕಟ್ಟೀನ್​ ಅವರಿಗೆ ಪದ್ಮಶ್ರೀ ಒಲಿದು ಬಂದಿದೆ. ಮಂಗಳೂರಿನ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಕೃಷಿ ಕ್ಷೇತ್ರದಲ್ಲಿ ಪದ್ಮಶ್ರೀ ಗೌರವ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಇನ್ನೂ ವಿಜ್ಞಾನ ಮತ್ತು ಎಂಜಿನಿಯರಿಂಗ್​ ವಿಭಾಗದಲ್ಲಿ ಸುಬ್ಬಣ್ಣ ಅಯ್ಯಪ್ಪನ್​ ಅವರಿಗೆ ಪದ್ಮಶ್ರೀ ಬಂದಿದೆ. ಆದರೆ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎನ್ನುವ ಕನ್ನಡಿಗರ ಕೂಗಿಗೆ ಕೇಂದ್ರ ಸರ್ಕಾರ ಮನ್ನಣೆ ನೀಡಿಲ್ಲ ಎನ್ನುವುದು ಬೇಸರದ ಸಂಗತಿ

ಕಮೆಂಟ್ ಮಾಡಿ ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರಾದ ನೀವೇ ನಮ್ಮ ಮಾರ್ಗದರ್ಶಕರು

Related Posts

Don't Miss it !