ಪಂಚಮಸಾಲಿ ಶ್ರೀಗಳಿಗೆ ಹೋರಾಟ ನಿಲ್ಲಿಸುವಂತೆ ಕಿರುಕುಳ..! ಆ ನಾಯಕ ಯಾರು​..?

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಆದರೆ ಹೋರಾಟದ ಮುಂದಾಳತ್ವ ವಹಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಫೋಟಕ ವಿಚಾರ ಬಯಲು ಮಾಡಿದ್ದಾರೆ. ಹೋರಾಟ ನಿಲ್ಲಿಸುವಂತೆ ಕೆಲವರು ಮಾನಸಿಕವಾಗಿ ನೋವು ಕೊಡ್ತಿದ್ದಾರೆ. ನಮ್ಮದೇ ಸಮುದಾಯದವರು ಮಾ‌ನಸಿಕವಾಗಿ ಹಿಂಸೆ ಕೊಡ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ ಮಾನಸಿಕ ಹಿಂಸೆ ಕೊಡ್ತಿರುವ ನಾಯಕರು ಯಾರು ಎನ್ನುವುದನ್ನು ಬಹಿರಂಗ ಮಾಡ್ತೇನೆ ಎಂದಿದ್ದಾರೆ.

ಪೀಠಾಧ್ಯಕ್ಷ ಸ್ಥಾನದಿಂದ ಇಳಿಸುವ ಕುತಂತ್ರ..!

ಕೂಡಲಸಂಗಮ ಮಠದ ಪೀಠಾಧ್ಯಕ್ಷ ಸ್ಥಾನದಲ್ಲಿ ಇರುವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸಲು ಷಡ್ಯಂತ್ರ ಮಾಡಿರುವ ಆರೋಪ‌ ಮಾಡಿದ್ದಾರೆ. ‘ನಾನು ಜನರಿಂದ ಗುರು ಆಗಿರುವವನು, ಜನರ ಪರವಾಗಿದ್ದವನು‌. ಸ್ವಾಮೀಜಿಗಳ ಏಳಿಗೆ ಸಹಿಸದೇ ಅವಕಾಶವಾದಿ ಮನಸ್ಸುಗಳು ಪಿತೂರಿ ಮಾಡುತ್ತ ಇರ್ತಾರೆ. ಮಾನಸಿಕವಾಗಿ ನನಗೆ ನೋವು ಕೊಡ್ತಿದ್ದಾರೆ. ಈ ಹೋರಾಟ ಮಾಡಬೇಡಿ ನಿಲ್ಲಿಸಿ ಅಂತಿದ್ದಾರೆ. ಈ ಹಿಂದೆ ಪಾದಯಾತ್ರೆ ಬೆಂಗಳೂರು ತಲುಪುವ ತನಕ ನನಗೆ ತೊಂದರೆ ಕೊಟ್ಟರು. ರಾಜಕೀಯ ನಾಯಕರ ಒಳಸಂಚಿನಿಂದ ನಮ್ಮ ಸಮಾಜದ ವ್ಯಕ್ತಿಗಳಿಂದಲೇ ಕಿರುಕುಳ ಆಯ್ತು. .ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದೇನೆ. ಭೌತಿಕ ಕಟ್ಟಡ ಕೆಲಸ ಮಾಡಿಲ್ಲ.

Read this also;

ಚಳವಳಿ ನಿಲ್ಲಿಸಲು ಸಾಕಷ್ಟು ಷಡ್ಯಂತ್ರ ನಡೀತು..!

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗಾಗಿ ಚಳವಳಿ ಶುರುವಾದಾಗಲೇ ಚಳವಳಿ ನಿಲ್ಲಸಬೇಕೆಂದು ಬಹಳ ದೊಡ್ಡ ಷಡ್ಯಂತ್ರ ಮಾಡಿದ್ರು ಆದರೆ ನಾನು ಅವರ ಮಾತು ಕೇಳಲಿಲ್ಲ. ಹೇಗಾದರೂ ಮಾಡಿ ಪಾದಯಾತ್ರೆ ನಿಲ್ಲಿಸಬೇಕು ಎಂದು ತುಮಕೂರು ತನಕ ಪ್ರಯತ್ನ ಮಾಡಿದ್ರು. ಪಾದಯಾತ್ರೆ ಬೆಂಗಳೂರು ಮುಟ್ಟುತ್ತಿದ್ದ ಹಾಗೆ ಅವರ ಮುಖವಾಡ ಕಳಚಿತು. ಅವರ ಬಣ್ಣ ಬಯಲಾಗಿ ಇಡೀ ಸಮಾಜದ ಎದುರು ವಿಲನ್ ಆಗಿ ಕಾಣಿಸಿದ್ರು. ಒಬ್ಬ ವ್ಯಕ್ತಿ ಅಧಿಕಾರ ಮತ್ತು ಹಣದ ಆಸೆ ತೋರಿಸಿ ವ್ಯವಸ್ಥಿತವಾದ ಷಡ್ಯಂತ್ರ ಮಾಡುತ್ತಿದ್ದಾರೆ. ಅವರು ಯಾರು eಂದು ಅಕ್ಟೋಬರ್ 1ನೇ ತಾರೀಕು ಬಾಯಿ ಬಿಡುತ್ತೇನೆ ಎಂದಿದ್ದಾರೆ.

ರಾಜಕೀಯ ಸಿಟ್ಟಿದ್ದರೆ ರಾಜಕೀಯವಾಗಿ ಎದುರಿಸಲಿ..!

ನನ್ನನ್ನ ಮಠಾಧಿಪತಿ ಸ್ಥಾನದಿಂದ ಕೆಳಗಿಳಿಸಲು ಯಾರ ಕೈಯಿಂದಲೂ ಸಾಧ್ಯವಿಲ್ಲ. ಷಡ್ಯಂತ್ರ ಮಾಡುತ್ತಿರುವ ವ್ಯಕ್ತಿಗೆ ಬಸನಗೌಡ ಪಾಟೀಲ್ ಯತ್ನಾಳ್​, ವಿಜಯಾನಂದ ಕಾಶಪ್ಪನವರ್ ಹಾಗೂ ವಿನಯ್ ಕುಲಕರ್ಣಿ ಮೇಲೆ ಸಿಟ್ಟಿದ್ದರೆ ಅವರ ವಿರುದ್ಧ ಚುನಾವಣೆಗೆ ನಿಂತು ಸ್ಪರ್ಧೆ ಮಾಡಲಿ. ಆದರೆ ಜನಪರವಾಗಿರುವ ಹೋರಾಟವನ್ನ ಹತ್ತಿಕ್ಕುವ ಕೆಲಸ ಮಾಡಬಾರದು‌. ನನಗೆ ಕಿರುಕುಳ ಕೊಡ್ತಿರುವ ವಿಚಾರ ಯಾರ ಬಳಿಯೂ ಪ್ರಸ್ತಾಪ ಮಾಡಿಲ್ಲ. ಆ ನೋವನ್ನು ನಾನೇ ನುಂಗಿ ವಿಷಕಂಠ ಆಗಿದ್ದೇನೆ. ನಾನು ಹಣದ ಡಿಮ್ಯಾಂಡ್‌ಗೆ ಮರುಳಾಗಿಲ್ಲ. ಹೊಸ ಕಾರು ಕೊಡ್ತೇನೆ, ಹೋರಾಟ ನಿಲ್ಲಿಸಿ ಅಂದರೂ ನಾನು ಬೇಡಾ ಎಂದಿದ್ದೇನೆ. ದುಡ್ಡಿನ ಆಮಿಷಕ್ಕೆ ಒಳಗಾಗುವ ಹಾಗಿದ್ರೆ ನನ್ನ ಹೋರಾಟ ಕುಷ್ಟಗಿ ದಾಟುತ್ತಿರಲಿಲ್ಲ ಎನ್ನುವ ಮೂಲಕ ಆಮೀಷ ಒಡ್ಡಿದ ಮಾಹಿತಿ ಬಹಿರಂಗ ಮಾಡಿದ್ದಾರೆ.

Read this also:

ನನ್ನ ಹೋರಾಟದಲ್ಲಿ ಬೇಳೆ ಬೇಯಿಸಿಕೊಂಡರು..!

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವಂತೆ ಆಗ್ರಹಿಸಿ ಸುವರ್ಣ ಸೌಧದ ಮುಂದೆ ನಾನು ಉಪವಾಸ ಸತ್ಯಾಗ್ರಹ ಕುಳಿತಿದ್ದೆ. ಆದರೆ ನನ್ನನ್ನು ಮಿನಿಸ್ಟರ್ ಮಾಡದಿದ್ದಕ್ಕೆ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ ಎಂದು ಹೈಕಮಾಂಡ್ ಮುಂದೆ ಹೇಳಿದ್ರು. ನಾನು ಪಾದಯಾತ್ರೆ ಆರಂಭಿಸಿದ ಬಳಿಕ ಸಿಎಂ ಕರೆ ಮಾಡಿ ಪಾದಯಾತ್ರೆ ನಿಲ್ಲಿಸಿ, ನಿಮ್ಮ ಒತ್ತಾಯದಂತೆ ಆ ನಾಯಕರನ್ನು ಮಂತ್ರಿ ಮಾಡ್ತೀನಿ‌ ಅಂದ್ರು. ಈ ಮೂಲಕ ನನ್ನ ಹೋರಾಟದಲ್ಲಿ ಬೇಳೆ ಬೇಯಿಸಿಕೊಂಡರು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಇಷ್ಟೆಲ್ಲಾ ಹೇಳುವ ಮೂಲಕ ಸ್ವಾಮೀಜಿ ಆ ವ್ಯಕ್ತಿ ಯಾರು ಎನ್ನುವುದನ್ನೂ ಬಹಿರಂಗ ಮಾಡಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಹೆಸರನ್ನು ಹೇಳದೆ ಎಲ್ಲಾ ಸುಳಿವನ್ನೂ ಬಿಟ್ಟುಕೊಡುವ ಮೂಲಕ ಅಕ್ಟೋಬರ್​ 1ರ ತನಕ ಕಾಯುವುದನ್ನೂ ತಪ್ಪಿಸಿದ್ದಾರೆ.

Related Posts

Don't Miss it !