ಅಮಿತ್​ ಷಾ ಜೊತೆ ಕ್ಯಾಪ್ಟನ್​ ರಹಸ್ಯ ಸಭೆ, ಕಾಂಗ್ರೆಸ್​ ಸೋಲಿಸಲು ಮಾರ್ಜಾಲ ನಡೆ..!

ಪಂಜಾಬ್​ನ ಮಾಜಿ ಸಿಎಂ ಅಮರೀಂದರ್​ ಸಿಂಗ್​ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಷಾ ಬುಧವಾರ ಸಂಜೆ ದೆಹಲಿಯಲ್ಲಿ ಭೇಟಿಯಾಗಿ ಮಹತ್ವದ ಸಭೆ ನಡೆಸಿದ್ದರು. ಗುರುವಾರ ಅಮರೀಂದರ್​ ಸಿಂಗ್​ ಬಿಜೆಪಿಗೆ ಸೇರಲಿದ್ದಾರೆ ಎನ್ನುವ ದೊಡ್ಡ ಸುದ್ದಿಯೂ ಹಬ್ಬಿತ್ತು. ಆದರೆ ಪಂಜಾಬ್​​ ಹಾಗೂ ದೇಶದ ಹಿತದೃಷ್ಟಿಯಿಂದ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ ಎಂದು ಅಮರೀಂದರ್​ ಸಿಂಗ್​ ಹೇಳಿಕೊಂಡಿದ್ದರು. ಗುರುವಾರ ಅಮರೀಂದರ್​ ಸಿಂಗ್​ ಬಿಜೆಪಿ ಸೇರಲಿಲ್ಲ. ಆದರೆ ಕಾಂಗ್ರೆಸ್​ ಪಕ್ಷದಲ್ಲಿ ನಾನು ಇರೋದಿಲ್ಲ ಎನ್ನುವುದನ್ನು ಘೋಷಣೆ ಮಾಡಿದ್ರು. ಆದರೆ ನಾನು ಬಿಜೆಪಿ ಸೇರೋದಿಲ್ಲ ಎನ್ನುವ ಮೂಲಕ ಅಮರೀಂದರ್​ ಸಿಂಗ್​ ಮುಂದಿನ ಚುನಾವಣೆಯಲ್ಲಿ ತಾನು ಮಾಡಬೇಕಾದ ಪಾತ್ರದ ಬಗ್ಗೆ ಅಮಿತ್​ ಷಾ ಜೊತೆ ಚರ್ಚೆಯಾಗಿದೆ ಎನ್ನುವ ಗುಟ್ಟನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್​ ಪಕ್ಷದಲ್ಲಿ ನಾನು ಉಳಿಯುವುದಿಲ್ಲ..!

79 ವರ್ಷದ ಅಮರೀಂದರ್​ ಸಿಂಗ್​ ರಾಜಕೀಯ ಜೀವನದಲ್ಲಿ ಸಾಕಷ್ಟು ಅಧಿಕಾರ ಅನುಭವಿಸಿದ ಬಳಿಕವೂ ಮತ್ತೆ ಕಾಂಗ್ರೆಸ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. ಯಾವ ಪಕ್ಷದಿಂದ ಮುಖ್ಯಮಂತ್ರಿ ಆಗಿ ಪಂಜಾಬ್​​ ಜನರ ಸೇವೆ ಮಾಡಲು ಅವಕಾಶ ಸಿಕ್ಕಿತ್ತೋ ಅದೇ ಪಕ್ಷದ ವಿರುದ್ಧ ತೊಡೆ ತಟ್ಟುವ ಮುನ್ಸೂಚನೆ ಕೊಟ್ಟಿದ್ದಾರೆ. ನಾನು ಕಾಂಗ್ರೆಸ್​​​ನಲ್ಲಿ ಇರಲ್ಲ ಎನ್ನುವ ನೊತೆಗೆ ನವಜೊತ್​ ಸಿಂಗ್​ ಸಿಧು ಪಂಜಾಬ್​​ಗೆ ಸೂಕ್ತ ವ್ಯಕ್ತಿಯಲ್ಲ. ನವಜೋತ್​ ಸಿಂಗ್​ ಸಿಧು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರನ್ನು ಗೆಲ್ಲಲು ಬಿಡೋದಿಲ್ಲ ಎನ್ನುವ ಮೂಲಕ ರಾಜಕೀಯ ಲೆಕ್ಕಚಾರಗಳು ನಡೆದಿದ್ದು, ಕಾಂಗ್ರೆಸ್​ ಅಭ್ಯರ್ಥಿಗಳನ್ನು ಸೋಲಿಸುವುದೇ ಅಜೆಂಡಾ ಎನ್ನುವುದನ್ನು ಬಹಿರಂಗ ಮಾಡಿದ್ದಾರೆ. ಬಿಜೆಪಿ ಸೇರದೆ ಹೊರಗಿಂದಲೇ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಸೋಲುವಂತೆ ಮಾಡಬೇಕಾದ ರಾಜಕೀಯ ಅಸ್ತ್ರ ಹೂಡುವ ಸಂದೇಶ ನೀಡಿದ್ದಾರೆ. ಅಂದರೆ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಸುಳಿವು ಕೊಟ್ಟಂತಾಗಿದೆ.

Read this also:

ಅಮರೀಂದರ್​ ಸಿಂಗ್​ ನೇರವಾಗಿ ಬಿಜೆಪಿ ಸೇರಲ್ಲ ಯಾಕೆ..?

ಪಂಜಾಬ್​ ಮುಖ್ಯಮಂತ್ರಿ ಆಗಿದ್ದ ಅಮರೀಂದರ್​ ಸಿಂಗ್​ ಪ್ರಮುಖವಾಗಿ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಆಡಳಿತವನ್ನು ವಿರೋಧಿಸಿಕೊಂಡು ಬಂದಿದ್ದರು. ಅದೂ ಅಲ್ಲದೆ ನಾನು ರೈತರ ಪರ ಎಂದು ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರೋ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ರಾಜಕೀಯ ಕಾರಣಕ್ಕಾಗಿ ನೇರವಾಗಿ ಬಿಜೆಪಿ ಪಕ್ಷವನ್ನೇ ಸೇರಿಬಿಟ್ಟರೆ ಪಂಜಾಬ್​ನಲ್ಲಿ ಅಮರೀಂದರ್​ ಸಿಂಗ್​ ಮೇಲಿರುವ ಜನರ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಅಷ್ಟೇ ಅಲ್ಲದೆ ಬಿಜೆಪಿ ಸೇರಿದ ಬಳಿಕ ಅಮರೀಂದರ್​ ಸಿಂಗ್​ಗೆ ಯಾವುದೇ ಅಧಿಕಾರವೂ ಸಿಗುವುದಿಲ್ಲ. ಈಗಾಗಲೇ 79 ವರ್ಷ ವಯಸ್ಸಾಗಿರುವ ಅಮರೀಂದರ್​ ಸಿಂಗ್​ ಬಿಜೆಪಿಯನ್ನು ಸೇರದೆ ಹೊರಗಿಂದಲೇ ಕಾಂಗ್ರೆಸ್​ ಸೋಲಿಸುವುದಕ್ಕೆ ಲೆಕ್ಕಾಚಾರದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾಂಗ್ರೆಸ್​ ಪಾಲಾಗುವ ಮತಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೆಳೆದರೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಆಗಲಿದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.

Read this also:

ಕಾಂಗ್ರೆಸ್​ ಪಕ್ಷದಲ್ಲೇ ಉಳಿಸಿಕೊಳ್ಳಲು ಕಸರತ್ತು..!

ದೆಹಲಿಯಲ್ಲೇ ಬೀಡು ಬಿಟ್ಟಿರುವ ಅಮರೀಂದರ್​ ಸಿಂಗ್​ ಕಾಂಗ್ರೆಸ್​ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡುವ ಮನಸ್ಸು ಮಾಡಿಲ್ಲ. ಆದರೆ ಕಾಂಗ್ರೆಸ್​ ಮಾತ್ರ ಅಮರೀಂದರ್​ ಸಿಂಗ್​ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಸರ್ಕಸ್​​ ಮಾಡುತ್ತಿದೆ. ಆದರೆ ಅಮರೀಂದರ್​ ಸಿಂಗ್​ ಅಮಿತ್​ ಷಾ ಭೇಟಿಯಾದ ಬಳಿಕ ಕಾಂಗ್ರೆಸ್​ ಓಲೈಕೆಗೆ ಬಗ್ಗುವುದು ಕಷ್ಟಸಾಧ್ಯ ಎನ್ನಲಾಗ್ತಿದೆ. ರಾಜ್ಯದಲ್ಲಿ ಸಂಪುಟ ಸದಸ್ಯರನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಸಿಎಂ ಆದವರು ಹೇಗೆ ಬಲಿಷ್ಟರಾಗಿ ಇರಬೇಕೋ ಅದೇ ರೀತಿ ಇಡೀ ದೇಶದಲ್ಲಿ ಪಕ್ಷದ ನಾಯಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಲಿಷ್ಟ ಹೈಕಮಾಂಡ್​ ಅಗತ್ಯವಿದೆ. ಪಕ್ಷದ ನಾಯಕರ ನಡುವೆ ವೈಮನಸ್ಸು ಉಂಟಾದಾಗ ಬಗೆಹರಿಸುವುದು ಅಥವಾ ನಾಯಕತ್ವ ಬದಲಾವಣೆ ಮಾಡುವ ಸಂದರ್ಭದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಕಾಂಗ್ರೆಸ್​ ದೇಶದಲ್ಲಿ ನೆಲಕಚ್ಚುತ್ತಿದ್ದರೂ ಗಾಂಧಿ ಕುಟುಂಬದ ಓಲೈಕೆಯಲ್ಲೇ ಮುಳುಗಿರುವ ಕಾರಣಕ್ಕೆ ಪಂಜಾಬ್​​ ಕೂಡ ಕಾಂಗ್ರೆಸ್​ ಕೈ ತಪ್ಪುವ ಎಲ್ಲಾ ಸಾಧ್ಯಗಳು ಇವೆ ಎನ್ನುತ್ತಿವೆ ರಾಜಕೀಯ ಲೆಕ್ಕಾಚಾರಗಳು.

Related Posts

Don't Miss it !