ಪ್ರಾಣಿ, ಪಕ್ಷಿಗಳಿಗೆ ಇರುವ ಬುದ್ಧಿವಂತಿಕೆ ಮಾನವನಿಗೆ ಯಾಕಿಲ್ಲ..? ಪ್ರಾಣಿಗಿಂತಾ ಕಡೆನಾ..?

ಮೈಸೂರಿನ ಪಿರಿಯಾಪಟ್ಟಣದಲ್ಲಿ ಸ್ವತಃ ಹೆತ್ತವರೇ ತಮ್ಮ ಮಗಳನ್ನು ಕೊಲೆ ಮಾಡಿ ತೋಟದಲ್ಲಿ ಹೆಣ ಬಿಸಾಡಿರುವ ಘಟನೆ ನಡೆದಿದೆ. ಅಪ್ರಾಪ್ತರಿಗೆ ಬುದ್ಧಿ ಕಡಿಮೆ ಇರುತ್ತೆ ಎನ್ನುವ ಕಾರಣಕ್ಕೆ ಕಾನೂನು ಕೂಡ ಕೆಲವೊಂದು ವಿನಾಯ್ತಿ ನೀಡುತ್ತದೆ. ಆದರೆ ಮಗಳು ಅನ್ಯ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸಿದಳು ಎನ್ನುವ ಏಕೈಕ ಕಾರಣಕ್ಕೆ ತೋಟದ ಬಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಮಗಳನ್ನು ಕೊಲೆ ಮಾಡುವ ಮುನ್ನ ಭಾರೀ ಹೈಡ್ರಾಮಾ ನಡೆದಿದ್ದು, ನಾವು ಮಗಳನ್ನು ಚೆನ್ನಾಗಿ ನೋಡಿಕೊಳ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟ ಮೇಲೂ ಮಗಳನ್ನು ಕೊಲೆ ಮಾಡಿರುವ ದುರಂತ ಘಟನೆ ನಡೆದಿದೆ.

ತಂದೆ ಜೊತೆ ಮಗಳು

PUC ಗೇ ಸೇರಿದ ಮಗಳು ಪ್ರೇಮಿಯ ಕೈಗೊಂಬೆ ಆದಳು..!

ಪಿರಿಯಾಪಟ್ಟಣ ತಾಲೂಕು ಕಗ್ಗುಂಡಿ ಗ್ರಾಮದ ನಿವಾಸಿ ಸುರೇಶ್ ಹಾಗೂ ಬೇಬಿ ಎಂಬುವರ ಏಕೈಕ ಪುತ್ರಿ ಶಾಲಿನಿ ಕೊಲೆ ಆಗಿರುವ ಹೆಣ್ಣು ಮಗಳು. ಇನ್ನು 18 ತುಂಬದ ಅಪ್ರಾಪ್ತ ಬಾಲಕಿ ಶಾಲಿನಿ, ಕಳೆದ ವರ್ಷ ಅಷ್ಟೇ ಎಸ್​ಎಸ್ಎಲ್​ಸಿ ಮುಗಿಸಿ ಪಿಯು ಶಿಕ್ಷಣಕ್ಕಾಗಿ ಪದವಿ ಪೂರ್ವ ಕಾಲೇಜು ಸೇರಿದ್ದಳು. ಈ ವೇಳೆ ಪಕ್ಕದ ಊರಾದ ಮೆಲ್ಲಹಳ್ಳಿ ಗ್ರಾಮದ ಯುವಕ ಮಂಜು ಎಂಬಾತನನ್ನು ಪ್ರೀತಿಸುತ್ತಿದ್ದಳು. ಕಾಲೇಜು ಮೆಟ್ಟಿಲು ಹತ್ತುತ್ತಿದ್ದ ಹಾಗೆ ಪ್ರೇಮಪಾಶದಲ್ಲಿ ಸಿಲುಕಿದ್ದ ಮಗಳ ಬಗ್ಗೆ ಸಂಪೂರ್ಣ ಮಾಹಿತಿ ಹೆತ್ತವರ ಕಿವಿಗೆ ಬಿದ್ದಿತ್ತು. ಮಗಳ ಮೇಲೆ ಕ್ರೋದಗೊಂಡ ಹೆತ್ತವರು, ಆತ ಬೇರೆ ಜಾತಿಯವನು, ನಮ್ಮ ಹಾಗೆ ಶ್ರೀಮಂತನಲ್ಲ ಎನ್ನುವ ಸಬೂಬು ಹೇಳಿದ್ದಾರೆ. ಆದರೆ ಪ್ರೀತಿಯನ್ನು ಬಿಡುವುದಕ್ಕೆ ಆಕೆ ಒಪ್ಪದಿದ್ದರೆ ಹಲ್ಲೆ ಮಾಡಿ, ಮನೆಯಲ್ಲೇ ಕೂಡಿ ಹಾಕಿದ್ದರು.

ಇದನ್ನೂ ಓದಿ:

ದೇವೇಗೌಡರ ಮರಿ ಮಗನಿಗೆ‘ಆವ್ಯಾನ್​ ದೇವ್​’ ಎಂದು ಹೆಸರು..!! ಏನಿದರೆ ವಿಶೇಷ

ಮಗಳ ಹೇಳಿಕ

ಮಗಳ ಮನವೊಲಿಕೆ ಮಾಡುವಲ್ಲಿ ವಿಫಲರಾದ ಪೋಷಕರು..!

ಅನ್ಯ ಜಾತಿಯ ಯುವಕನ ಪ್ರೀತಿ ಪಾಶದಲ್ಲಿ ಸಿಲುಕಿದ್ದ ಮಗಳು ಶಾಲಿಯನ್ನು ಸರಿ ದಾರಿಗೆ ತರುವ ಯತ್ನ ಮಾಡಿದ್ದರು. ಆದರೆ ಆಕೆಯ ಹಠದ ಮುಂದೆ ಹೆತ್ತವರು ಸೋತಿದ್ದರು. ಇದೇ ಕಾರಣದಿಂದ ಮನೆಯಿಂದ ಕೂಡಿ ಹಾಕಿದ್ದ ಪೋಷಕರ ಕಣ್ತಪ್ಪಿಸಿ, ಮನೆಯಿಂದ ಓಡಿ ಹೋಗುವ ಯತ್ನ ಕೂಡ ಮಾಡಿದ್ದಳು. ಅಂತಿಮವಾಗಿ ಪೋಷಕರ ಹಲ್ಲೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಮನೆಯನ್ನು ಬಿಟ್ಟು ಮೈಸೂರಿನ ಮಕ್ಕಳ‌ ಸಮಿತಿಗೆ ತೆರಳಿ ಆಶ್ರಯ ಪಡೆದಿದ್ದಳು. ಮಗಳ ಈ ನಡೆಯಿಂದ ಕಂಗಾಲಾದ ಪೋಷಕರು, ಒಬ್ಬಳೇ ಮಗಳನ್ನು ಮನೆಗೆ ವಾಪಸ್​ ಕರೆತರಲು ಸರ್ಕಸ್​ ಮಾಡಿದ್ದಾರೆ. ನೆಂಟರು, ಆತ್ಮೀಯರು, ಊರಿನವರ ಮೂಲಕ ಮನವೊಲಿಸಿ, ಆ ಹುಡುಗನ‌ ಜೊತೆಯಲ್ಲೇ ವಿವಾಹ ಮಾಡಿಕೊಡುವ ಭರವಸೆ ನೀಡಿ, ಯಾವುದೇ ಸಮಸ್ಯೆ ಮಾಡುವುದಿಲ್ಲ ಎಂದು ಮುಚ್ಚಳಿಗೆ ಬರೆದುಕೊಟ್ಟು ವಾಪಸ್​ ಮನೆಗೆ ಕರೆತಂದು ಕೊಂದೇ ಬಿಟ್ಟಿದ್ದಾರೆ.

ಮನೆಗೆ ಕರೆ ತಂದಿದ್ದ ಪೋಷಕರು

ಮನೆಗೆ ಕರೆತಂದು ಕೊಂದು ಜೈಲಿಗೆ ಸೇರಿದ್ದು ಸರೀನಾ..?

ಮಕ್ಕಳ ಸಮಿತಿ ಆಶ್ರಯಕ್ಕೆ ಹೋದಾಗಲೇ ಹೆತ್ತವರು ಮಗಳನ್ನು ಬಿಟ್ಟು ಮುಂದಿನ ಜೀವನ ಮಾಡುವುದು ಸೂಕ್ತವಿತ್ತು. ಆದರೆ ಮನೆಗೆ ಕರೆದುಕೊಂಡು ಬಂದು ಬೇರೊಂದು ಮದುವೆ ಮಾಡುವ ಯೋಚನೆ ಮಾಡಿದ್ದೇ ತಪ್ಪು. ಮಕ್ಕಳು ಕೆಲವೊಮ್ಮೆ ಚಿಂತನೆ ಮಾಡಲು ಸಾಧ್ಯವಾಗದಿದ್ದಾಗ ಹೆತ್ತವರು ಸರಿಯಾದ ಮಾರ್ಗಕ್ಕೆ ಕರೆತರುವ ಪ್ರಯತ್ನ ಮಾಡಬೇಕೇ ವಿನಃ ಕೊಂದುಬಿಡುವುದಲ್ಲ. ಅದರ ಬದಲು ಮದುವೆ ಆದರೆ ಮುಂದೆ ಆಗುವ ಅನಾಹುತಗಳ ಬಗ್ಗೆ ವಿವರಿಸಿ, ತಿಳಿ ಹೇಳಬೇಕು. ಪದವಿ ಮುಗಿಯುವ ತನಕ ನಿಮ್ಮ ಪ್ರೀತಿ ಹೀಗೆ ಇದ್ದರೆ ಮದುವೆ ಮಾಡುವುದಾಗಿ ತಿಳಿಸಿದ್ದರೆ ಯಾವುದೇ ಸಂಕಷ್ಟ ಎದುರಾಗುತ್ತಿರಲಿಲ್ಲ. ಪದವಿ ಮುಗಿಯುವ ಹೊತ್ತಿಗೆ ಯೋಚನೆ ಮಾಡಿ ನಿರ್ಧಾರ ಮಾಡುವಷ್ಟ ಶಕ್ತಿ ಮಗಳಿಗೆ ಬರುತ್ತಿತ್ತು. ಅಷ್ಟರಲ್ಲಿ ಆಕೆಯೇ ಪ್ರೀತಿಯನ್ನು ಬಿಟ್ಟಿರುತ್ತಿದ್ದಳು.

ಕೊಲೆಯಾದ ಬಾಲಕಿ

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪ್ರಾಣಿ ಪಕ್ಷಿಗಳು ಒಮ್ಮೆ ನೋಡ ಕಲಿಬೇಕಾದ್ದದ್ದು ಜಾಸ್ತಿ ಇದೆ. ಒಮ್ಮೆ ಮರಿಗಳು ದೊಡ್ಡದಾದ ಮೇಲೆ ಅವುಗಳನ್ನು ತಮ್ಮ ಗೂಡಿನಿಂದ ಮೊದಲು ಆಚೆ ಹಾಕುತ್ತವೆ. ಸಮಸ್ಯೆ ಇದ್ದಾಗ ಸಹಕಾರ ನೀಡಬಹುದು. ಆದರೆ ಮರಿಗಳ ಮೇಲೆ ಹಕ್ಕನ್ನು ಚಲಾಯಿಸುವುದಿಲ್ಲ. ಮಗಳನ್ನು ಸರಿ ದಾರಿಗೆ ತರುವ ಹಠದಲ್ಲಿ ಹೆತ್ತವರೇ ಜೈಲು ಸೇರುವಂತಾಗಿದ್ದು ದುರಂತ. ಅಪರಾಧ ಮಾಡುವ ಬದಲು ತಾವೇ ಆಕೆಯನ್ನು ದೂರ ಇಟ್ಟಿದ್ದರೆ ದಂಪತಿ ಸುಖ ಜೀವನ ನಡೆಸಬಹುದಿತ್ತು. ಆಥವಾ ಕೊಲೆ ಮಾಡುವ ಬದುಲು ಮದುವೆಯನ್ನು ಮಾಡಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

Related Posts

Don't Miss it !