ಮೋದಿ ‘ಮೇಕ್​ ಇನ್​ ಇಂಡಿಯಾ’ ಅಂದ್ರು.. ಇವನು ಬೆಂಗಳೂರಿನಲ್ಲಿ ಡ್ರಗ್ಸ್​ ಫ್ಯಾಕ್ಟರಿ ಮಾಡ್ಬಿಟ್ಟ..!!

ಪ್ರಧಾನಿ ನರೇಂದ್ರ ಮೋದಿ ಭಾರತ ಕೊಳ್ಳುವ ರಾಷ್ಟ್ರ ಆಗಿದ್ದ ಸಾಕು, ವಿಶ್ವಕ್ಕೆ ರಫ್ತು ಮಾಡಬೇಕು ಎಂದು ಕರೆ ಕೊಟ್ಟಿದ್ದರು. ಆದರೆ ಇಲ್ಲೋಬ್ಬ ವಿದೇಶಿ ಪ್ರಜೆ ಬೆಂಗಳೂರಿನಲ್ಲಿ ಡ್ರಗ್ಸ್​ ಫ್ಯಾಕ್ಟರಿಯನ್ನೇ ಶುರು ಮಾಡಿ ದೇಶ ವಿದೇಶಕ್ಕೆ ಹೈಹ್ಯಾಂಡ್​ ಡ್ರಗ್ಸ್​ ಸರಭರಾಜು ಮಾಡ್ತಿದ್ದಾನೆ. ಇಷ್ಟು ದಿನ ಲಕ್ಷಾಂತರ ರೂಪಾಯಿ ಮೌಲ್ಯದ ಸಿಂಥೆಟಿಕ್​ ಡ್ರಗ್ಸ್​ ಹಾಗೂ ಪಿಲ್ಸ್​ಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ಪೆಡ್ಲರ್​ಗಳು ಮಾದಕ ವ್ಯಸನಿಗಳಿಗೆ ರವಾನೆ ಮಾಡುತ್ತಿದ್ದರು. ಆದರೆ ವಿದೇಶಗಳಿಂದ ಆಮದು ಮಾಡಿಕೊಂಡು ಡ್ರಗ್ಸ್​ ಸರಭರಾಜು ಮಾಡುವುದು ಕಷ್ಟ ಆಗಿರುವ ಕಾರಣದಿಂದ ಬೆಂಗಳೂರಿನಲ್ಲೇ ಡ್ರಗ್ಸ್​ ತಯಾರಿಕ ಕಂಪನಿ ಶುರು ಆಗಿತ್ತು. ಸಿಸಿಬಿ ಪೊಲೀಸರು ನಿಖರ ಮಾಹಿತಿ ಆಧರಿಸಿ ದಾಳಿ ಮಾಡಿ ಜಪ್ತಿ ಮಾಡಿದ್ದಾರೆ. ಸಿಲಿಕಾನ್​ ಸಿಟಿ ಇದೀಗ ಸಿಂಥೆಟಿಕ್​ ಡ್ರಗ್ಸ್​ ಸಿಟಿಯೂ ಆಗ್ತಿದೆ ಎನ್ನುವುದು ಕನ್ನಡಿಗರಿಗೆ ಶಾಕಿಂಗ್​ ನ್ಯೂಸ್​.

ಮೇಡ್​ ಇನ್​ ಇಂಡಿಯಾ ಮಾದರಿ..!

ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡ್ರಗ್ಸ್​ ಫ್ಯಾಕ್ಟರಿ ಸೀಝ್​ ಮಾಡಲಾಗಿದೆ. ಇದುವರೆಗೆ ಡ್ರಗ್ಸ್ ಸೇವಿಸಿದ ಆರೋಪ ಅಥವಾ ಡ್ರಗ್ಸ್​ ಮಾರಾಟ ಮಾಡುವ ಮೂಲಕ ಪೆಡ್ಲರ್ ಆಗಿದ್ದಾರೆ ಎನ್ನುವ ಆರೋಪದ ಮೇಲೆ ಬಂಧನ ಮಾಡಲಾಗ್ತಿತ್ತು. ಅದ್ರೆ ಇದೇ ಮೊದಲ ಬಾರಿಗೆ ಸಿಂಥಟಿಕ್ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ. ವಿದೇಶದಲ್ಲಿ ತಯಾರಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಬರ್ತಿದ್ದ ಡ್ರಗ್ಸ್ ಬೆಂಗಳೂರಿನಲ್ಲೇ ತಯಾರು ಮಾಡಲಾಗ್ತಿದೆ. ಐದು ಮಾದರಿಯ ವಿವಿಧ ಕೆಮಿಕಲ್ ಬಳಸಿ ಡ್ರಗ್ಸ್ ತಯಾರು ಮಾಡುತ್ತಿದ್ದ ಆರೋಪಿಗಳು, ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳು ಹಾಗೂ ಬೇರೆ ದೇಶಕ್ಕೂ ರವಾನೆ ಮಾಡುತ್ತಿದ್ದರು ಎನ್ನುವುದು ತಿಳಿದುಬಂದಿದೆ.

Read this also;

ಎಲೆಕ್ಟ್ರಾನಿಕ್​ ಸಿಟಿಯಲ್ಲಿ ಡ್ರಗ್ಸ್​ ಫ್ಯಾಕ್ಟರಿ..!

ಬೆಂಗಳೂರಿನಲ್ಲಿ ಹೈಟೆಕ್​​ ಡ್ರಗ್ಸ್​ ಸೇವನೆ ಮಾಡುವ ಐಟಿ-ಬಿಟಿ ಹಾಗೂ ಶ್ರೀಮಂತರ ಮಕ್ಕಳು ಹೆಚ್ಚಿರುವ ಎಲೆಕ್ಟ್ರಾನಿಕ್​ ಸಿಟಿಯಲ್ಲೇ ಸಿಂಥಟಿಕ್ ಡ್ರಗ್ಸ್ ಹೈಹ್ಯಾಂಡ್ ಮಾದರಿ ತಯಾರು ಮಾಡುವ ಫ್ಯಾಕ್ಟರಿ ಸಿದ್ಧವಾಗಿತ್ತು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಮನೆಯೊಂದರಲ್ಲಿ ಎಂಡಿಎಂಎ ಕ್ರಿಸ್ಟಲ್ ಎಂಬ ಉತೃಷ್ಟ ಮಟ್ಟದ ಡ್ರಗ್ಸ್ ತಯಾರಾಗ್ತಿತ್ತು. ನೈಜೀರಿಯಾ ಮೂಲದ ಜಾನ್ ಎಂಬಾತ ಸಿಂಥಟಿಕ್ ಡ್ರಗ್ಸ್ ಫ್ಯಾಕ್ಟರಿ ಮಾಡಿಕೊಂಡಿದ್ದ ಎನ್ನಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆಗೆ ಮನೆ ಪಡೆದು ಸಿಂಥೆಟಿಕ್​ ಟ್ರಗ್ಸ್​ ತಯಾರಿ ಲ್ಯಾಬ್​ ಸೆಟಪ್​ ಮಾಡಿಕೊಂಡಿದ್ದ ಎನ್ನುವುದು ಗೊತ್ತಾಗಿದೆ. ಸಿಸಿಬಿ ಆಂಟಿ ನಾರ್ಕೊಟಿಕ್ಸ್ ತಂಡ ಮಾಹಿತಿ ಕಲೆ ಹಾಕಿ ದಾಳಿ ನಡೆದಿದ್ದು, ಐದು ಕೋಟಿಗೂ ಹೆಚ್ಚು ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಡ್ರಗ್ಸ್ ತಯಾರಿಕೆಗೆ ಬಳಸುತಿದ್ದ ಆ್ಯಸಿಡ್ ಹಾಗೂ ಕೆಮಿಕಲ್ಸ್​ ಕೂಡ ಸೀಝ್ ಮಾಡಲಾಗಿದೆ.

ಡ್ರಗ್ಸ್​ ತಯಾರಿಕಾ ಕೆಮಿಕಲ್ಸ್

ಬ್ರಾಂಡೆಡ್​ ಶೂ ಮೂಲಕ ವಿದೇಶಕ್ಕೆ ಸಪ್ಲೈ..!

ಡ್ರಗ್ಸ್​ ಫ್ಯಾಕ್ಟರಿ ಮಾಲೀಕ ಜಾನ್​ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈತ ಬ್ರಾಂಡೆಡ್​ ಕಂಪನಿಯ ಶೂಗಳ ಮೂಲಕ ವಿದೇಶಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎನ್ನುವುದು ಬಹಿರಂಗವಾಗಿದೆ. ನೈಕ್ ಕಂಪನಿ ಶೂನಿಂದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ಗೆ ಸರಬರಾಜು ಮಾಡುತ್ತಿದ್ದ ಆರೋಪಿ, ಒಂದು ಶೂನಲ್ಲಿ ಆರ್ಧ ಕೆಜಿಯಷ್ಟು ಡ್ರಗ್ಸ್ ಮುಚ್ಚಿಟ್ಟು ರಪ್ತು ಮಾಡುತ್ತಿದ್ದ ಎನ್ನಲಾಗಿದೆ. ಬೆಂಗಳೂರು ನಗರ ಪೋಲಿಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಆರೋಪಿ ಜಾನ್ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದ ಮನೆಯಲ್ಲಿ ತಯಾರು ಮಾಡ್ತಿದ್ದ. ಪೆಡ್ಲರ್ ಒಬ್ಬನಿಗೆ ಎಂಡಿಎಂಎ ತಯಾರು ಮಾಡಿಕೊಡ್ತೇನೆ ಅಂತ ವಿಡಿಯೋ ಕಳಿಸಿದ್ದ. 2017ರಲ್ಲಿ ಭಾರತಕ್ಕೆ ಬಂದು ವಾಸವಾಗಿದ್ದ ಎಂದಿದ್ದಾರೆ. ದೆಹಲಿಯಲ್ಲಿದ್ದ ನೈಜಿರಿಯಾ ಪ್ರಜೆಗೆ ಡ್ರಗ್ಸ್​ ಕಳುಹಿಸಿ ಶೂಗಳಲ್ಲಿ ಡ್ರಗ್ ತುಂಬಿ ವಿದೇಶಕ್ಕೆ ಸಾಗಾಣೆ ಮಾಡ್ತಿದ್ದ ಎಂದಿದ್ದಾರೆ.

Read this also;

ಡ್ರಗ್ಸ್​ ತಯಾರಿಕಾ ಕೊಠಡಿ

ಡ್ರಗ್ಸ್​ ಅಡ್ಡೆಯಾದ ಬೆಂಗಳೂರು ನಗರ..!

ಬೆಂಗಳೂರು ಹಲವು ವಿಭಾಗಗಳಲ್ಲಿ ವಿಶ್ವಮಾನ್ಯತೆ ಪಡೆದಿದೆ. ಇದೀಗ ಡ್ರಗ್ಸ್​ ವಿಚಾರದಲ್ಲಿ ವಿಶ್ವಾದ್ಯಂತ ಚರ್ಚೆ ಮಾಡುವ ಪರಿಸ್ಥಿತಿ ಬಂದಿದೆ. ಇದೀಗ ಒಂದು ಫ್ಯಾಕ್ಟರಿ ಪತ್ತೆಯಾಗಿದೆ. ಆದರೆ ಇನ್ನೂ ಅದೆಷ್ಟು ಫ್ಯಾಕ್ಟರಿಗಳು ಇವೆ ಎನ್ನುವ ಬಗ್ಗೆ ಪೊಲೀಸ್ ತನಿಖೆ ಬಳಿಕ ಗೊತ್ತಾಗಬೇಕಿದೆ. ಪೊಲೀಸ್​ ಆಯುಕ್ತರು ಹೇಳಿರುವಂತೆ 2017ರಲ್ಲೇ ಈ ಆರೋಪಿ ಬೆಂಗಳೂರಿಗೆ ಬಂದು ಕೆಲಸ ಶುರು ಮಾಡಿದ್ದಾನೆ ಎಂದಿದ್ದಾರೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ನಮ್ಮ ಪೊಲೀಸ್​ ವ್ಯವಸ್ಥೆ ನಿದ್ರೆಗೆ ಜಾರಿತ್ತಾ..? ಡ್ರಗ್ಸ್​ ತಯಾರಿಕಾ ಫ್ಯಾಕ್ಟರಿ ಎಂದರೆ ಸಾಮಾನ್ಯವಾದ ಸಂಗತಿಯೇ..? ಗುಪ್ತಚರ ಇಲಾಖೆ ನಿಷ್ಕ್ರಿಯವಾಗಿದೆಯಾ..? ಅಥವಾ ಕೇವಲ ರಾಜಕೀಯ ಸಂಬಂಧಿಸಿದ ವಿಚಾರಗಳಿಗೆ ಮಾತ್ರ ಸೀಮಿತವಾ..? ಎನ್ನುವ ಪ್ರಶ್ನೆ ಉದ್ಬವ ಆಗ್ತಿದೆ.

Related Posts

Don't Miss it !