ಮಕ್ಕಳ ಅತ್ಯಾಚಾರಿ ಆರೋಪಿ ರಕ್ಷಣೆಗೆ ಹೈಡ್ರಾಮಾ ಮಾಡಿದ್ಯಾರು..? ಕೋರ್ಟ್ ಹೇಳಿದ್ದೇನು..?

ಚಿತ್ರದುರ್ಗ ಮುರುಘಾ ಮಠದ ಹಿರಿಯ ಸ್ವಾಮೀಜಿ ಮಾಡಿರುವ ಅನಾಚಾರದ ಬಗ್ಗೆ ರಾಜ್ಯ ಸರ್ಕಾರ ಬರೋಬ್ಬರಿ 5 ದಿನಗಳ ಬಳಿಕ ಕಾನೂನು ಕ್ರಮ ತೆಗೆದುಕೊಳ್ಳುವ ನಾಟಕ ಮಾಡುತ್ತಿದೆ. ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ದಾಖಲಾಗಿದ್ದರೂ ಪೊಲೀಸರು ಬಂಧಿಸದ ಕ್ರಮವನ್ನು ಸಾಮಾಜಿಕ ಹೋರಾಟಗಾರರು ಹಾಗು ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದವು. ಆ ಬಳಿಕ ಡಾ ಶಿವಾಚಾರ್ಯ ಮುರುಘಾ ಶರಣರನ್ನು ಪೊಲೀಸರು ವಾಶಕ್ಕೆ ಪಡೆಯುವ ಕೆಲ ಮಾಡಿದ್ದರು. ಆ ಬಳಿಕ ನಡೆದಿದ್ದೆಲ್ಲವೂ ಹೈಡ್ರಾಮಾ. ಆದರೆ ಎಲ್ಲದ್ದಕ್ಕೂ ಭಾರತ ದೇಶದ ಕಾನೂನು ಇತಿಶ್ರೀ ಹಾಡಿದೆ.

ಸ್ವಾಮೀಜಿಯನ್ನು ವಶಕ್ಕೆ ಪಡೆಯುತ್ತಿದ್ದ ಹಾಗೆ ಅನಾರೋಗ್ಯ..!

ಮುರುಘಾ ಮಠದ ಸ್ವಾಮೀಜಿಯನ್ನು ವಶಕ್ಕೆ ಪಡೆಯುವ ಮುನ್ನ ಮಫ್ತಿಯಲ್ಲಿ ಬಂದಿದ್ದ ಪೊಲೀಸರು ಸ್ವಾಮೀಜಿ ಜೊತೆಗೆ ಚರ್ಚೆ ನಡೆಸಿದರು. ಆ ಬಳಿಕ ಮುರುಘಾ ಮಠ ಸೇರಿದಂತೆ ಚಿತ್ರದುರ್ಗದಲ್ಲಿ ಖಾಕಿ ಸರ್ಪಗಾವಲು ಹಾಕಲಾಯ್ತು. ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವೈದ್ಯರು ಭೇಟಿ ನೀಡಿದ್ದ ಡೀನ್ ಡಾ.ಪ್ರಶಾಂತ್ ಹಾಗು ಸುಪರಿಂಟೆಂಡೆಂಟ್ ಡಾ.ಪಾಲಾಕ್ಷಪ್ಪ, ಮುರುಘಾ ಸ್ವಾಮೀಜಿ ಉಸಿರಾಟ, ಬ್ಲಡ್ ಪ್ರೆಷರ್ ಪರೀಕ್ಷೆ ಮಾಡಲಾಯ್ತು. ಆ ಬಳಿಕ ಖಾವಿ ಮೇಲೆ ಬಿಳಿ ವಸ್ತ್ರ ಹೊದ್ದು ಮಠದ ಹಿಂಬಾಗಿಲಿನ ಮೂಲಕ ಆರೋಪಿಯನ್ನ ಕರೆದೊಯ್ದಿದ್ದರು. ಚಳ್ಳಕೆರೆ ಡಿವೈಎಸ್​​ಪಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇದಕ್ಕೆ ಕಾರಣವಾಗಿದ್ದು ಶಿವಮೂರ್ತಿ ಮುರುಘಾ ಶರಣರಿಗೆ ಕಾಣಿಸಿಕೊಂಡ ಎದೆನೋವು.

ಪೊಲೀಸರಿಂದಲೇ ಖಾವಿ ಕಳ್ಳಾಟ, ಕೋರ್ಟ್​ ಬ್ರೇಕ್​..!

ಚಳ್ಳಕೆರೆ ಡಿವೈಎಸ್​ಪಿ ಕಚೇರಿಯಲ್ಲಿ ಎದೆನೋವು ಎಂದು ನಾಟಕ ಮಾಡಿಕೊಂಡು ಜಿಲ್ಲಾಸ್ಪತ್ರೆಗೆ ತೆರಳಿ ಅಲ್ಲಿಂದ ಕೋರ್ಟ್​ಗೆ ಕರೆದೊಯ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅಲ್ಲಿಂದ ನಡೆದಿದ್ದೆಲ್ಲವೂ ರಾಜಕಾರಣಿಗಳ ಕೈವಾಡ ಎನ್ನುವಂತಿತ್ತು ನಾಟಕ. ತೀವ್ರ ಹೃದಯಾಘಾತ ಅನ್ನೋ ಕಾರಣಕ್ಕೆ ಆಸ್ಪತ್ರೆಯ ಐಸಿಯು ಘಟಕಕ್ಕೆ ಶಿಫ್ಟ್​ ಮಾಡಿ, ಅಲ್ಲಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್​ ಮಾಡುವುದಕ್ಕೆ ಸಕಲ ತಯಾರಿಗಳೂ ನಡೆದಿದ್ದವು. ಜಯದೇವ ಆಸ್ಪತ್ರೆಯಲ್ಲಿ ಸೂಟ್​ ರೂಂಗಳನ್ನು ಬುಕ್​ ಕೂಡ ಮಾಡಲಾಗಿತ್ತು. ಇನ್ನೇನು (ಏರ್​ಲಿಫ್ಟ್​ ) ಹೆಲಿಕಾಪ್ಟರ್​ ಮೂಲಕ ಶಿಫ್ಟ್​ ಮಾಡಬೇಕು ಅನ್ನೋ ಅಷ್ಟರಲ್ಲಿ ಎಲ್ಲದಕ್ಕೂ ಕೋರ್ಟ್​ ಫುಲ್​ ಸ್ಟಾಪ್​ ಇಟ್ಟಿದ್ದು, ಸ್ವಾಮೀಜಿ ಕಳ್ಳಾಟಕ್ಕೆ ಬ್ರೇಕ್​ ಹಾಕಲಾಗಿದೆ.

ಕಳ್ಳ ಕಾವಿ, ಖಾದಿ ಜೊತೆಗೆ ವೈದ್ಯರು ಶಾಮೀಲು ನಾಚಿಕೇಡು ಅಲ್ಲವೇ..!?

ಕಾವಿಧಾರಿಗಳು ಅಥವಾ ಖಾದಿಧಾರಿಗಳು ಹಾಗೂ ಹಣವಂತರ ಬಂಧನ ಆಗ್ತಿದ್ದ ಹಾಗೆ ಅನಾರೋಗ್ಯ ಥಟ್ಟನೆ ಎದ್ದು ಕುಳಿತುಬಿಡುತ್ತದೆ. ನ್ಯಾಯಾಂಗ ಬಂಧನ ಎನ್ನುವ ನೆಪದಲ್ಲಿ ಆಸ್ಪತ್ರೆ ಸೇರಿಕೊಂಡು ಐಶಾರಾಮಿ ಜೀವನ ನಡೆಸುತ್ತಾರೆ. ಇದೀಗ ಮುರುಘಾ ಮಠದ ಶಿವಾಚಾರ್ಯ ಮುರುಘ ಶರಣರು ಮಾಡಿದ್ದ ನಾಟಕಕ್ಕೆ ಕೋರ್ಟ್​ ತೆರೆ ಎಳೆದಿದೆ. ಬಂಧಿಸುವಲ್ಲಿಲ, ನ್ಯಾಯಾಂಗ ಬಂಧನ ಎನ್ನುವ ಮೂಲಕ ಜಯದೇವ ಆಸ್ಪತ್ರೆ ಸೇರಿಸುವ ಎಲ್ಲಾ ಆಟಗಳನ್ನು ಆಡಿಸಿದ್ದ ಸರ್ಕಾರಕ್ಕೆ ಮುಖಭಂಗ ಆದಂತಾಗಿದೆ. ಇನ್ನು ಈ ಈ ಎಲ್ಲಾ ನಾಟಕದಲ್ಲೂ ಸೂತ್ರಧಾರಿ ರೀತಿ ಪಾತ್ರ ನಿರ್ವಹಣೆ ಮಾಡಿದ್ದು, ತಜ್ಞ ವೈದ್ಯರು ಎನ್ನುವುದು ಗಮನಿಸಬೇಕಾದ ಅಂಶ. ಆದರೆ ಇದೀಗ ಕೋರ್ಟ್​ ಆದೇಶದ ಬಳಿಕ ಯಾವುದೇ ಚಿಕಿತ್ಸೆ ಇಲ್ಲದೆ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಈಗ ಯಾವುದೇ ಹೃದಯಾಘಾತ ಸಂಭವಿಸಿಲ್ಲ..? ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ಅಂದ್ರೆ ಯಾವ ವೈದ್ಯರು ನೀಡಿದ ವರದಿ ಸತ್ಯ..? ಎನ್ನುವುದು ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ ಅಲ್ಲವೇ..?

Related Posts

Don't Miss it !