ಮಾಜಿ ಸಚಿವರ CD ಕೇಸ್‌ನಲ್ಲಿ ಪೊಲೀಸ್ರು ತಪ್ಪು ಮಾಡಿದ್ರಾ..? ಭಯ ಯಾಕೆ..?

ಬಿ.ಎಸ್ ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿ ಪ್ರಮುಖ ಖಾತೆಯನ್ನು ಪಡೆದಿದ್ದ ಸಚಿವರೊಬ್ಬರು ಸಿ.ಡಿ ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ಕೊಟ್ಟಿದ್ದರು. ಆದರೆ ಆ ಪ್ರಕರಣದಲ್ಲಿ ಮಾಜಿ ಸಚಿವರ ಪರವಾಗಿ ನಡೆದುಕೊಂಡರಾ..? ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟುಹಾಕಿತ್ತು. ಆದರೆ ಕೋರ್ಟ್ ಕೂಡ ಪೊಲೀಸರ ಕೆಲಸದ ಬಗ್ಗೆ ಅಸಮಾಧಾನ ಹೊರ ಹಾಕಿತ್ತು. ಆದರೆ ಹೈಕೋರ್ಟ್ ಪೊಲೀಸರ ಮಾನ ಉಳಿಸುವ ಕೆಲಸ ಮಾಡಿದೆ. ಆದರೆ ಪೊಲೀಸರು ತಪ್ಪು ಮಾಡಿದ್ದರೆ ಅದರ ಹೊಣೆಯನ್ನು ತಾವೇ ಹೊರುವುದರಲ್ಲಿ ತಪ್ಪೇನಿದೆ ಎನ್ನುವ ಪ್ರಶ್ನೆಯೂ ಎದುರಾಗಿದೆ.

ಪೊಲೀಸರ ಬಗ್ಗೆ ಕೋರ್ಟ್ ಏನು ಹೇಳಿತ್ತು..?

ಮಾಜಿ ಸಚಿವರೊಬ್ಬರ ಸಿಡಿ ಪ್ರಕರಣದ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಿ.ಡಿ ಪ್ರಕರಣದ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಆದ್ರೆ ಪೊಲೀಸ್ರು ಎಫ್ಐಆರ್ ದಾಖಲಿಸದೆ ನಿರ್ಭಯ ಗೈಡ್ ಲೈನ್ಸ್ ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್, ಡಿಸಿಪಿ ಎಂ‌.ಎನ್ ಅನುಚೇತ್ ಹಾಗೂ ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಮಾರುತಿ ವಿರುದ್ಧ ತನಿಖೆಯ ಅವಶ್ಯಕತೆ ಇದೆ ಎಂದು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇಷ್ಟು ಮಂದಿ ಅಧಿಕಾರಿಗಳ ವಿರುದ್ಧ ತನಿಖೆಗೂ ಆದೇಶ ಮಾಡಿತ್ತು.

Read this;

ತಪ್ಪು ಮಾಡಿದ್ಮೇಲೆ ಹೈಕೋರ್ಟ್ ತಡೆ ನೀಡಿದ್ಯಾಕೆ..?

ಜನಾಧಿಕಾರ ಸಂಘರ್ಷ ಪರಿಷತ್‌ನ  ಆದರ್ಶ ಅಯ್ಯರ್ ಕೋರ್ಟ್‌ನಲ್ಲಿ  ಪಿಸಿಆರ್ ದಾಖಲು ಮಾಡಿದ್ರು. ಪೊಲೀಸ್ ಅಧಿಕಾರಿಗಳು ಐಪಿಸಿ 166 A ಕಾನೂನನ್ನು ಉಲ್ಲಂಘಿಸಿದ್ದಾರೆ ಅಂತ ಆರೋಪಿಸಲಾಗಿತ್ತು. ಎಸಿಎಂಎಂ ಕೋರ್ಟ್ ಮೂವರು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಮಾಡಿ ತೀರ್ಪು ನೀಡುತ್ತಿದ್ದ ಹಾಗೆ ಕಂಗಾಲಾದ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ರು. 8ನೇ ಎಸಿಎಂಎಂ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಯ್ತು.  ಕೆಳ ನ್ಯಾಯಾಲಯದ ಆದೇಶವನ್ನ ರದ್ದುಪಡಿಸುವಂತೆ ಹೈಕೋರ್ಟ್‌ನಲ್ಲಿ ಮನವಿ ಮಾಡಿಕೊಳ್ಳಲಾಯ್ತು. ಈಗಾಗಲೇ ಪ್ರಕರಣದ ತನಿಖೆ ಮುಕ್ತಾಯವಾಗಿದೆ. ಅಂತಿಮ ವರದಿ ಸಲ್ಲಿಸಲು ಅನುಮತಿ ಕೋರಲಾಗಿದೆ. ಹೀಗಾಗಿ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕೆಂದು ಮನವಿ ಮಾಡಿದ್ದರು. ಮನವಿಯನ್ನು  ಮಾನ್ಯ ಮಾಡಿದ ಹೈಕೋರ್ಟ್ ತಡೆ ನೀಡಿ ಆದೇಶ ನೀಡಿತು.

ತಪ್ಪು ಮಾಡಿದ್ದರೆ ಭಯ ಪಡಬೇಕು.. ಇಲ್ಲದಿದ್ದರೆ ಯಾಕೆ ಭಯ..?

ಮಾಜಿ ಸಚಿವರ ಪ್ರಕರಣದ ತನಿಖೆ ಮುಕ್ತಾಯವಾಗಿದೆ. ಅಂತಿಮ ವರದಿ ಸಲ್ಲಿಕೆ ಮಾಡುವ ಸಮಯದಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್‌ಗೆ   ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದರು ಕೋರ್ಟ್ ಕೂಡ ಮಾನ್ಯ ಮಾಡಿದೆ. ಆದರೆ ಪೊಲೀಸರು ಕಾನೂನು ಉಲ್ಲಂಘನೆ ಮಾಡಿದ್ದರೆ, ಅದೂ ಕೂಡ ಸಂವಿಧಾನಕ್ಕೆ ಮಾಡಿದ ಅಪರಾಧ ಅಲ್ಲವೇ..? ನ್ಯಾಯಾಧೀಶರ ಕಣ್ಗಾವಲಿನಲ್ಲಿ ತನಿಖೆ ನಡೆದು, ತಪ್ಪು ಮಾಡಿದ್ದಾರೆ ಎನ್ನುವುದು ಸಾಬೀತಾಗಿದ್ದರೆ ಶಿಕ್ಷೆ ಬಗ್ಗೆ ಕೋರ್ಟ್ ತೀರ್ಮಾನ ಮಾಡಬಹುದಿತ್ತು. ಆದರೆ ತನಿಖೆಯನ್ನೇ ತಡೆಯುವ ಮೂಲಕ ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಂಡಂತೆ ಆಗುವುದಿಲ್ಲವೇ..? ಪೊಲೀಸರು ತಪ್ಪು ಮಾಡಿದ್ದಾರೆ ಎಂದಾದ ಮೇಲೆ ಸಿ.ಡಿ ಪ್ರಕರಣದ ಸಂತ್ರಸ್ತೆಗೆ ಅನ್ಯಾಯ ಆದಂತೆ ಅಲ್ಲವೇ..?

Related Posts

Don't Miss it !