ಪೊಲೀಸರೇ ನೀವ್ಯಾಕೆ ಹೀಗೆ..? ಸಮಾಜಕ್ಕೆ ಕೆಟ್ಟ ಸಂದೇಶ ಕೊಡೋದು ಸರೀನಾ..?

ಪೊಲೀಸರು ಸಮಾಜವನ್ನು ಸರಿ ದಾರಿಯಲ್ಲಿ ನಡೆಯುವಂತೆ ಮಾಡುವ ಕಾನೂನು ಪಾಲಕರು. ಸಮುದಾಯದಲ್ಲಿ ಆರಕ್ಷಕರು ಹಳಿ ತಪ್ಪಿದರೆ ಇಡೀ ಸಮಾಜವೇ ಅಲ್ಲೋಲ ಕಲ್ಲೋಲ ಆಗುವುದು ಶತಸಿದ್ಧ. ಅದೇ ಕಾರಣಕ್ಕೆ ಆರಕ್ಷಕ (Police) ಇಲಾಖೆ ಪ್ರಮುಖ ಪಾತ್ರ ಎನ್ನುತ್ತಾರೆ. ಇತ್ತೀಚಿನ ಬೆಳವಣಿಗೆಯನ್ನು ನೋಡಿದಾಗ ಪೊಲೀಸರು ಸಮಾಜದ ದಿಕ್ಕನ್ನು ಸರಿದಾರಿಗೆ ತರುವ ಬದಲು ತಾವೇ ದಾರಿ ಬಿಟ್ಟು ಹಳ್ಳದ ಕಡೆಗೆ ಇಳಿಯುತ್ತಿದ್ದಾರೆ ಎನಿಸುತ್ತದೆ. ಪಿಎಸ್​ಐ ನೇಮಕಾತಿ ವಿಚಾರದಲ್ಲಿ ರಾಜಕಾರಣಿಗಳು ಹಣದಾಸೆಗೆ ಉಳ್ಳವರಿಗೆ ಖಾಕಿ ತೊಡಿಸಲು ಮುಂದಾಗಿದ್ದಾರೆ ಎನ್ನುವುದು ಸರ್ವತಾ ಸತ್ಯ. ಇನ್ನು ಪೊಲೀಸರು ಕೂಡ ಕಳ್ಳರ ಹಾಗೆ ದುಷ್ಟರ ಹಾಗೆ ನಡೆದುಕೊಳ್ಳುತ್ತಿರುವುದು ಸಮಾಜಕ್ಕೆ ಮಾರಕ ಎನ್ನುವ ಸಂದೇಶ ರವಾನೆ ಆಗುತ್ತಿದೆ.

ಪೇದೆ ಮಂಜುನಾಥ್

ಕಳವು ಕಾರು ತೆಗೆದುಕೊಂಡು ಪೊಲೀಸಪ್ಪನ ದರ್ಬಾರ್​..!

ದಾವಣಗೆರೆಯಲ್ಲಿ ಕಾರು ಬಾಡಿಗೆ ಪಡೆದಿದ್ದ ವ್ಯಕ್ತಿ ಕಾರನ್ನು ವಾಪಸ್​ ಕೊಟ್ಟಿಲ್ಲ ಎಂದು ವಿದ್ಯಾನಗರ ಪೊಲೀಸ್​ ಠಾಣೆಗೆ ದೂರು ನೀಡಲಾಗಿತ್ತು. ಗಿರೀಶ್​ ಎಂಬುವರ ಕಾರನ್ನು ಹುಡುಕಿ ಕೊಟ್ಟಿರಲಿಲ್ಲ. ಆದರೆ ಹದಡಿ ಪೊಲೀಸ್​ ಠಾಣೆ ಪೊಲೀಸ್​ ಪೇದೆ ಮಂಜುನಾಥ್​, ಬ್ರಿಜಾ ಕಾರಿನಲ್ಲಿ ಸುತ್ತಾಡುತ್ತಾ ಮೋಜು ಮಸ್ತಿ ಮಾಡುತ್ತಿದ್ರು. ದಾವಣಗೆರೆಯಲ್ಲಿ ಕಾರು ಸಿಕ್ಕ ಕೂಡಲೇ ವೀಡಿಯೋ ಮಾಡುತ್ತಾ ಪ್ರಶ್ನೆ ಮಾಡಿದ್ದಕ್ಕೆ ಪೇದೆ ಮಂಜುನಾಥ್​, ಕಾರು ಮಾಲೀಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. PSI ರೂಪಾ ಕೂಡ ಅದೇ ಕಾರಿನಲ್ಲಿ ಸುತ್ತಾಡಿರುವ ಮಾಹಿತಿ ಸಿಕ್ಕಿದೆ. ಸದ್ಯಕ್ಕೆ ದಾವಣಗೆರೆ ಎಸ್​ಪಿ ರಿಷ್ಯಂತ್​ ಪೇದೆ ಮಂಜುನಾಥ್​ನನ್ನು ಸಸ್ಪೆಂಡ್​ ಮಾಡಿದ್ದಾರೆ. ಪಿಎಸ್​ಐ ರೂಪಾ ಸುತ್ತಾಟದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.

ಪಿಎಸ್‌ಐ ರೂಪಾ

ಅಮ್ಮ ಚುನಾವಣೆಯಲ್ಲಿ ಸೋತಿದ್ದಕ್ಕೆ ಪೇದೆಯಿಂದ ಸುಪಾರಿ​..!

ಚುನಾವಣೆಯಲ್ಲಿ ಸಹೋದರ ಹಾಗೂ ತಾಯಿ ಸೋಲನ್ನಪ್ಪಿದ್ದಕ್ಕೆ ಪೇದೆಯೊಬ್ಬ ವ್ಯಾಘ್ರನಾಗಿದ್ದಾನೆ. ಗೆಲುವು ಕಂಡ ಎದುರಾಳಿ ಅಭ್ಯರ್ಥಿಯನ್ನು ಕೊಂದು ಮುಗಿಸಲು ಸುಪಾರಿ ಕೊಟ್ಟ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ. ಹೊಸಪೇಟೆ ಸಂಚಾರಿ ಠಾಣೆಯಲ್ಲಿ ಕಾನ್ಸ್​ಟೇಬಲ್​ ಆಗಿ ಕೆಲಸ ಮಾಡುತ್ತಿರುವ ಪರಶುರಾಮ್ ನಾಯ್ಕ್​​ ಈ ಘನಕಾರ್ಯ ಮಾಡಿರುವ ಪೊಲೀಸ್​ ಪೇದೆ. ಸಹೋದರ ದೇವೇಂದ್ರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸೋಲನ್ನಪ್ಪಿದ್ರು. ಇನ್ನೂ ತಾಯಿ ಯಮುನಾಬಾಯಿ ಸೊಸೈಟಿ ಚುನಾವಣೆಯಲ್ಲಿ ಸೋಲುಂಡಿದ್ದರು. ಈ ಸೋಲಿಗೆ ಕಾರಣನಾದ ಪಾಂಡುನಾಯ್ಕ್​ನನ್ನು ಕೊಲ್ಲಲು ರವಿನಾಯ್ಕ್ ಎಂಬಾತನಿಗೆ 10 ಲಕ್ಷ ಹಣದ ಸುಪಾರಿ ನೀಡಿದ್ದು ಬಯಲಾಗಿದೆ. ಜೊತೆಗೆ ಮನೆ ಕಟ್ಟಿಸಿಕೊಡುವ ಭರವಸೆಯನ್ನೂ ನೀಡಿದ್ನಂತೆ. vಇಷಯ ಏನಪ್ಪ ಅಂದ್ರೆ ಸುಪಾರಿ ಪಡೆದ ವ್ಯಕ್ತಿ ನೇರವಾಗಿ ಪಾಂಡುನಾಯ್ಕ್​​ಗೆ ಮmಾಹಿತಿ ನೀಡಿದ್ದಾನೆ. ಈ ಬಗ್ಗೆ ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ​ ದೂರು ದಾಖಲಾಗಿದ್ದು, ಸುಪಾರಿ ಕೊಟ್ಟ ಪೇದೆ ಪರಶುರಾಮ್​ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಸ್ವಂತ ಮಗಳನ್ನು ಕೊಂದಿದ್ಯಾಕೆ ಹೆತ್ತವರು..?

ಪಿಎಸ್‌ಐ ಪರೀಕ್ಷೆಯಲ್ಲಿ ಫಸ್ಟ್​​ ಬಂದಿದ್ದ ಅಭ್ಯರ್ಥಿಯೇ ಅರೆಸ್ಟ್​..!

545 ಜನ ಪಿಎಸ್​ಐ ನೇಮಕಾತಿ ಹಗರಣದಲ್ಲಿ ಫಸ್ಟ್​ ಱಂಕ್​ ಬಂದಿದ್ದ ಕುಶಾಲ್​ ಕುಮಾರ್​ ಬಂಧನವಾಗಿದೆ. ತನಗೆ ಗೊತ್ತಿದ್ದಷ್ಟು ಮಾಹಿತಿ ಭರ್ತಿ ಮಾಡಿದ್ದ ಕುಶಾಲ್​ ಕುಮಾರ್​​ ಪೇಪರ್​, ಆ ಬಳಿಕ ಸಂಪೂರ್ಣವಾಗಿ ಭರ್ತಿ ಆಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಆದರೆ ಕಲಬುರಗಿಯಲ್ಲಿ ಪೊಲೀಸ್​ ಅಧಿಕಾರಿಗಳೇ ಈ ಅಕ್ರಮದ ರೂವಾರಿಗಳು ಅನ್ನೋದು ಗೊತ್ತಾಗಿತ್ತು. ಆದರೆ ಕುಶಾಲ್​ ಕುಮಾರ್​ ಪರೀಕ್ಷೆ ಬರೆದಿದ್ದು, ಬೆಂಗಳೂರಿನಲ್ಲಿ ಅಂದರೆ ಬೆಂಗಳೂರಿನಲ್ಲೂ ಪೊಲೀಸರು ಅಕ್ರಮದಲ್ಲಿ ಪಾಲುದಾರರು ಆಗಿದ್ದಾರೆ ಎನ್ನುವುದು ಸಾಬೀತಾದಂತಾಯ್ತು. ಪೊಲೀಸರು ದಿಕ್ಕು ತಪ್ಪುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ರಾಜಕಾರಣಿಗಳು ಎನ್ನುವುದು ನಿಜ. ಸರಿ ದಾರಿಗೆ ತರಬೇಕಾದ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ಮತವನ್ನು ಮಾರಿಕೊಳ್ಳುವುದನ್ನು ನಿಲ್ಲಿಸಿದ್ರೆ ಇದಕ್ಕೆ ಪರಿಹಾರ ಸಿಗುವ ಸಾಧ್ಯತೆ ಇದೆ.

Related Posts

Don't Miss it !