ಬೆಂಗಳೂರಲ್ಲಿ ಮಗು ಕಿಡ್ನ್ಯಾಪ್​ ಮಾಡಿಸಿದ್ಲು ಬಿಹಾರದ ಗರ್ಭಿಣಿ..!

ಬೆಂಗಳೂರಲ್ಲಿ ಜೂನ್​ 6ರಂದು 11 ವರ್ಷದ ಬಾಲಕನ ಕಿಡ್ನ್ಯಾಪ್​ ಆಗಿತ್ತು. ಹೊರಮಾವು ಸಮೀಪದ ಆಗರದಿಂದ ಬಾಲಕನನ್ನು ಅಪಹರಣ ಮಾಡಿ ಜಿಗಣಿ ಫಾರ್ಮ್ ಹೌಸ್​ನಲ್ಲಿ ಇರಿಸಿಸಲಾಗಿತ್ತು. ಮೊಬೈಲ್​ ಟ್ರೇಸ್​ ಮಾಡಿದ ಹೆಣ್ಣೂರು ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ 5ನೇ ತರಗತಿ ಬಾಲಕನನ್ನು ರಕ್ಷಣೆ ಮಾಡಿದ್ದರು. ಆದರೆ ಫಾರ್ಮ್​ಹೌಸ್​ಗೆ ಮಗುವನ್ನು ಕರೆದುಕೊಂಡು ಬಂದಿದ್ದ ಬಹಿಳೆಯನ್ನು ಪೊಲೀಸ್ರು ಬೆನ್ನು ಹತ್ತಿದ್ರು. ಆ ಬಳಿಕ ದುರ್ಗಾದೇವಿ ಎನ್ನುವ ಮಹಿಳೆಯನ್ನೂ ಅರೆಸ್ಟ್​ ಮಾಡಿದ್ದರು. ಆ ಬಳಿಕ ಈಗ ತಿಳಿದ ಅಸಲಿ ಕಹಾನಿ ಅಂದ್ರೆ ಬಾಲಕನ ಮನೆ ಪಕ್ಕದಲ್ಲೇ ಚೆನ್ನಾಗಿ ಪರಿಚಯ ಇದ್ದ ಮಹಿಳೆಯೇ ಈ ಕಿಡ್ನ್ಯಾಪ್​ ಕೇಸ್​ನ ಪ್ರಮುಖ ರೂವಾರಿ.

ದುರ್ಗಾದೇವಿ

ಬಿಹಾರದ ಮಂಗೀತಾ ಕಿಡ್ನ್ಯಾಪ್​ ಹಿಂದಿನ ಮಾಸ್ಟರ್​ ಮೈಂಡ್​..!

ಬಿಹಾರ ಮೂಲದ ಮಂಗೀತಾ, ಬೆಂಗಳೂರಿನ ಆರಗದಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಇತ್ತೀಚಿಗೆ ಸಾಲ ಮಾಡಿಕೊಂಡು ಜೀವನ ನಿರ್ವಹಣೆ ಕಷ್ಟವಾಗಿತ್ತು. ಆಸ್ಪತ್ರೆಗೆ ತೋರಿಸಿಕೊಳ್ಳುವುದಕ್ಕೂ ಆಕೆಯ ಬಳಿಯಲ್ಲಿ ಹಣವಿರಲಿಲ್ಲ. ಇದೇ ಕಾರಣದಿಂದ ಬಾಲಕನ್ನು ಕಿಡ್ನ್ಯಾಪ್​ ಮಾಡುವ ಯೋಜನೆ ರೂಪಿಸಿದ್ದಳು ಎನ್ನುವ ಅಂಶ ಬಯಲಾಗಿದೆ. ಬಾಲಕನ ಮನೆ ಪಕ್ಕದ ಮನೆಗೆ ಕೆಲಸಕ್ಕೆ ಬರ್ತಿದ್ದ ಮಂಗೀತಾ, ಬಾಲಕನ್ನು ಸಾಕಷ್ಟು ಬಾರಿ ಮಾತನಾಡಿಸಿದ್ದಳು. ಈತನನ್ನೇ ಕಿಡ್ನ್ಯಾಪ್​ ಮಾಡಿ ಹಣ ಮಾಡುವುದು ಸೂಕ್ತ ಎಂದು ಯೋಜನೆ ರೂಪಿಸಿದ್ದಳು. ಇದಕ್ಕಾಗಿ ಪರಿಚಯಸ್ಥ ಮಹಿಳೆ ದುರ್ಗಾ ದೇವಿ ಹಾಗೂ ಆಕೆಯ ಗಂಡ ಫಾರ್ಮ್​ ಹೌಸ್​ನಲ್ಲಿ ಕೆಲಸ ಮಾಡುವ ವಾಚ್​ಮೆನ್​ ಗೌರವ್​ ಸಿಂಗ್​ ಜೊತೆಗೆ ಡೀಲ್​ ಕುದುರಿಸಿದ್ದಳು. ಆದರೆ ಇಷ್ಟೆಲ್ಲಾ ಮಾಡಿದ್ದ ಮಂಗೀತಾ ಮಾಡಿದ್ದು ಒಂದೇ ಒಂದು ಎಡವಟ್ಟು.

ಇದನ್ನೂ ಓದಿ: ಅಕ್ರಮ ಸಂಬಂಧ -ಸಕ್ರಮ ಸಂಬಂಧ – ಆ್ಯಸಿಡ್ ದಾಳಿ

ಕಿಡ್ನ್ಯಾಪ್​ ಮಾಡಿದ್ದು ಕುಭೇರರ ಮಗುವನ್ನಲ್ಲ..! ಚಾಲನ ಪುತ್ರ..

ಮಂಗೀತಾ ಕಿಡ್ನ್ಯಾಪ್​ ಮಾಡಿ ಹಣ ಸಂಪಾದನೆ ಮಾಡಬಹುದು ಅನ್ನೋದನ್ನು ಲೆಕ್ಕಾಚಾರ ಮಾಡಿದ್ದ ಮಂಗೀತಾ, ತಾನು ಕೆಲಸ ಮಾಡುವ ಮನೆಯ ಪಕ್ಕದ ಮಗುವನ್ನೇ ಆಯ್ಕೆ ಮಾಡಿಕೊಂಡಿದ್ದಳು. ಬಿಎಂಟಿಸಿಯಲ್ಲಿ ಚಾಲಕನಾಗಿ ಕೆಲಸ ಮಾಡುವ ಸುಭಾಷ್​ ಹಾಗೂ ಅಶ್ವಿನಿ ದಂಪತಿ ಮಗನನ್ನು ಕಿಡ್ನ್ಯಾಪ್​ ಮಾಡಿದ್ದಳು. ಮೊದಲೇ ಸರಿಯಾಗಿ ಸಂಬಳ ಬಾರದೆ ಕಂಗಾಲಾಗಿರುವ ಬಿಎಂಟಿಸಿ ಚಾಲಕ ಸುಭಾಷ್​ ಒತ್ತೆ ಹಣ ಎಲ್ಲಿಂದ ತರಬೇಕು. ನೇರವಬಾಗಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಪೊಲೀಸ್ರು ಟ್ರೇಸ್​​ ಮಾಡಿ ಪತ್ತೆ ಹಚ್ಚಿದ್ದರು. 5ನೇ ತರಗತಿ ಓದುತ್ತಿದ್ದ ಬಾಲಕ ಪೊಲೀಸರು ಕರೆದುಕೊಂಡು ಬರ್ತಿದ್ದ ಹಾಗೆ ಪ್ರತಿಯೊಂದು ವಿಚಾರವನ್ನು ಬಯಲು ಮಾಡಿದ್ದ. ಮನೆಯ ಪಕ್ಕದಲ್ಲಿ ಕೆಲಸಕ್ಕೆ ಬರುವ ಆಂಟಿ, ಸ್ವಿಮ್ಮಿ ಪೂಲ್​ಗೆ ಕರೆದೊಯ್ಯುವ ಆಸೆ ತೋರಿಸಿ ಕಳುಹಿಸಿದ್ರು. ಆದರೆ ಆಟೋದಲ್ಲಿ ನನ್ನನ್ನು ಇಲ್ಲಿಗೆ ಕರೆ ತಂದರು ಅಂತಾ ಹೇಳಿದ್ದ. ಅಲ್ಲಿಗೆ ಗರ್ಭಿಣಿ ಮಾಡಿದ್ದ ಪ್ಲ್ಯಾನ್​ ಎಲ್ಲಾ ಉಲ್ಟಾಪಲ್ಟಾ ಆಗಿತ್ತು. ಪೊಲೀಸರು ಬೀಸಿದ್ದ ಬಲೆಯಲ್ಲಿ ಸರಳವಾಗಿ ಸಿಕ್ಕಿ ಬಿದ್ದಿದ್ದಳು.

ನಿಮ್ಮ ಮಕ್ಕಳ ಮೇಲೆ ಇರಲಿ ಜಾಗೃತಿ..! ಬೀ ಕೇರ್​ ಫುಲ್​..

ಬೆಂಗಳೂರು ದೊಡ್ಡದಾಗಿ ಬೆಳೆದಿದ್ದು ಸಾಕಷ್ಟು ಜನರು ಹಾದಿ ಬೀದಿಯಲ್ಲಿ ಸಿಗ್ತಾರೆ. ನಮಗೆ ಅವರು ಗೊತ್ತಿಲ್ಲದಿದ್ದರೂ ಅವರಿಗೆ ನಮ್ಮ ಬಗ್ಗೆ ಚನ್ನಾಗಿ ಗೊತ್ತಿರುತ್ತೆ. ಮಕ್ಕಳು ಹೊರಕ್ಕೆ ಹೋದಾಗ, ಅಂಗಡಿ ಬಳಿಗೆ ಕರೆದೋ ಅಥವಾ ಮನೆಯೊಳಕ್ಕೆ ಕರೆದೋ ನಿಮ್ಮ ಮಗುವನ್ನೂ ಕಿಡ್ನ್ಯಾಪ್​ ಮಾಡಬಹುದು. ಗ್ರಹಚಾರ ಕೆಟ್ಟಿದ್ದರೆ ಸಿಕ್ಕಿ ಬೀಳುವ ಭಯದಲ್ಲಿ ಮಗುವನ್ನು ಕೊಂದು ಬಿಡಬಹುದು. ಪೊಲೀಸರು ಮಗುವನ್ನು ಕಿಡ್ನ್ಯಾಪ್​ ಮಾಡಿದವರನ್ನು ಬಂಧಿಸಿ ಜೈಲಿಗೆ ಕಳುಹಿಸಬಹುದು. ಆರೋಪಿಗಳಿಗೆ ಕಾನೂನು ಶಿಕ್ಷೆಯನ್ನು ಕೊಡಬಹುದು. ಆದರೆ ಮಕ್ಕಳನ್ನು ಮತ್ತೆ ಕೊಡುವುದಕ್ಕೆ ಸಾಧ್ಯವೇ ಇಲ್ಲ. ಕನಿಷ್ಠ SSLC ದಾಟುವ ತನಕ ಆದರೂ ಮಕ್ಕಳನ್ನು ತುಂಬಾ ಕೇರ್​ ಆಗಿ ನೋಡಿಕೊಳ್ಳಬೇಕು. ಇಲ್ಲದಿದ್ರೆ ನಿಮ್ಮ ಬಳಿ ಹಣ ಇದ್ಯೋ ಇಲ್ವೋ ಅನ್ನೋದನ್ನೂ ನೋಡದೆ ಕಿಡ್ನ್ಯಾಪ್​ ಮಾಡಿದ್ರೂ ಮಾಡಬಹುದು ಅಲ್ಲವೇ..?

Related Posts

Don't Miss it !