ಪ್ರಧಾನಿ ಹುಟ್ಟುಹಬ್ಬದಲ್ಲಿ ಬಿಜೆಪಿ ಕಾರ್ಯಕರ್ತರು ಬ್ಯುಸಿ..! ಕಾರಣ ಗೊತ್ತಾ..?

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇಂದು 71ನೇ ಹುಟ್ಟುಹಬ್ಬ ಸಂಭ್ರಮ. ಈ ಕಾರ್ಯಕ್ರಮವನ್ನು ಬಿಜೆಪಿ ಸರಣಿ ಹಬ್ಬವನ್ನಾಗಿ ಆಚರಿಸಲು ನಿರ್ಧಾರ ಮಾಡಿದೆ. ಇಂದು ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ಲಸಿಕಾ ಅಭಿಯಾನ ಮಾಡಲಾಗ್ತಿದೆ. ಸೇವಾ ಮತ್ತು ಸಮರ್ಪಣ ದಿನವನ್ನಾಗಿ 20 ದಿನಗಳ ಕಾಲ ಆಚರಣೆ ಮಾಡುವ ಘೋಷಣೆ ಮಾಡಲಾಗಿದೆ. ಈ 20 ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ಕೇಂದ್ರ ಬಿಜೆಪಿ ಬಿಡುಗಡೆ ಮಾಡಿದೆ. ಈ 20 ದಿನಗಳ ಆಚರಣೆ ಯೋಜನೆಗೆ ಕಾರಣವೂ ಒಂದಿದೆ. ಅದೇನೆಂದರೆ ನರೇಂದ್ರ ಮೋದಿ ಗುಜರಾತ್​ ಸಿಎಂ ಆದಾಗಿನಿಂದ 20 ವರ್ಷಗಳ ಜನಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎನ್ನುವುದು. ಅದಕ್ಕೂ ಮಿಗಿಲಾದ ಮತ್ತೊಂದು ಕಾರಣವೂ ಇದೆ.

ಕೇಂದ್ರ ಆರೋಗ್ಯ ಸಚಿವ ಮನ್ಸೂಕ್​ ಮಾಂಡವೀಯ ಲಸಿಕಾ ಅಭಿಯಾನದ ಬಗ್ಗೆ ಟ್ವೀಟ್​ ಮೂಲಕ ಪ್ರಧಾನಿ ಮೋದಿ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದು, ಲಸಿಕೆ ಹಾಕಿಸಿಕೊಳ್ಳದ ಜನರನ್ನು ಲಸಿಕಾ ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸಿದ್ರೆ ಮೋದಿಗೆ ಗಿಫ್ಟ್​ ಕೊಟ್ಟಂತೆ ಎಂದು ಬಣ್ಣಿಸಿದ್ದಾರೆ. ಲಸಿಕೆ ಕೊಡಿಸುವ ಮೂಲಕ ಸೇವೆ ಮಾಡಿ ಕೇಂದ್ರ ಆರೋಗ್ಯ ಸಚಿವ ಟ್ವೀಟ್ ಮಾಡಿದ್ದಾರೆ. ಜೊತೆಗೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರೆ ನೀಡಿದ್ದು, ಮುಂದಿನ 20 ದಿನಗಳ ಕಾಲ ರಕ್ತದಾನ ಶಿಬಿರ, ನದಿ ಸ್ವಚ್ಛತೆಗೆ ಸೂಚನೆ, , ಆಹಾರ ಧಾನ್ಯ ವಿತರಣೆಗೆ ಕ್ರಮಕೈಗೊಂಡಿದ್ದು, ಮೋದಿ ಭಾವಚಿತ್ರದ ಜೊತೆ 14 ಕೋಟಿ ಆಹಾರ ಪೊಟ್ಟಣದ ಮೇಲೆ ಥ್ಯಾಂಕ್ಯೂ ಮೋದಿ ಜೀ ಎಂದು ಬರೆಸಲಾಗಿದೆ. 5 ಕೋಟಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಗೆ ಪತ್ರದ ಮೂಲಕ ತಮ್ಮ ಜನಸೇವೆಯನ್ನು ತಿಳಿಸುವಂತೆ ಬಿಜೆಪಿ ಸೂಚನೆ ಕೊಡಲಾಗಿದೆ.

Read this also;

ಚಿನ್ನದ ಹುಡುಗ ನೀರಜ್ ಛೋಪ್ರಾ ಜೊತೆ ಮೋದಿ

ಸಚಿವಾಲಯದಿಂದ ಉಡುಗೊರೆ ಹರಾಜು..!

ಪ್ರಧಾನಿ ನರೇಂದ್ರ ಮೋದಿಗೆ ಕಳೆದ 7 ವರ್ಷಗಳಿಂದ ಬಂದಿರುವ ಉಡುಗೊರೆ ಹರಾಜು ಹಾಕಲು ಸರ್ಕಾರ ನಿರ್ಧಾರ ಮಾಡಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್​ ಛೋಪ್ರಾ ಇತ್ತೀಚಿಗೆ ಕೊಟ್ಟಿದ್ದ ಚಾವೆಲಿನ್​ ಥ್ರೋ ಸೇರಿದಂತೆ 1300 ವಸ್ತುಗಳನ್ನು ಹರಾಜು ಹಾಕಲಾಗ್ತಿದೆ. ಈ ವೆಬ್​ಸೈಟ್​ ಮೂಲಕ ತಾವು pmmementoes.gov.in. https://pmmementos.gov.in/#/ ಹರಾಜಿನಲ್ಲಿ ಭಾಗಿಯಾಗಬಹುದು. ಈ ಬಗ್ಗೆಯೂ ಹೆಚ್ಚು ಪ್ರಚಾರ ಮಾಡುವಂತೆಯೂ ಜೆ.ಪಿ ನಡ್ಡಾ ಸೂಚನೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ 71ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ವಾರಣಸಿಯ (ಕಾಶಿ) ಭಾರತ ಮಾತಾ ದೇವಸ್ಥಾನದಲ್ಲಿ 71 ಸಾವಿರ ಮಣ್ಣಿನ ದೀಪಗಳನ್ನು ಹಚ್ಚುವ ಮೂಲಕ ಆಚರಣೆ ಮಾಡಲಾಗ್ತಿದೆ.

Read this also;

ಈ ಬರ್ತ್​ ಡೇ ಗೆ ಇಷ್ಟೊಂದು ಪ್ರಚಾರ ಯಾಕೆ..?

ಪ್ರಧಾನಿ ನರೇಂದ್ರ ಮೋದಿ ಏನನ್ನೇ ಮಾಡಿದರೂ ಅದರ ಹತ್ತು ಪಟ್ಟು ಪ್ರಚಾರ ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಕಳೆದ 2 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಕಡಿಮೆ ಆಗಿದೆ ಎನ್ನುವುದನ್ನು ಸಾಕಷ್ಟು ಸರ್ವೇಗಳು ಬಹಿರಂಗ ಮಾಡಿವೆ. ವರ್ಚಸ್ಸು ಕಡಿಮೆ ಆಗಲು ಕೋವಿಡ್​ ಸೋಂಕು ಕೂಡ ಕಾರಣ ಇರಬಹುದು. ಆದರೆ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವುದು ಈ ಕಾರ್ಯಕ್ರಮಗಳ ಹಿಂದಿನ ಪ್ರಮುಖ ಉದ್ದೇಶ. ಕಳೆದ 2 ವರ್ಷಗಳಿಂದ ವಿದೇಶ ಪ್ರವಾಸ ಸೇರಿದಂತೆ ಪ್ರಚಾರ ಪಡೆಯುವ ಕೆಲಸ ಮಾಡಲು ಕಷ್ಟವಾಗಿದೆ. ಇದೀಗ ಹುಟ್ಟುಹಬ್ಬ ಆಚರಣೆ ಮೂಲಕ ಜನರನ್ನು ತಲುಪಲು ಸದಾವಕಾಶ ಒದಗಿ ಬಂದಿದೆ. ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದ್ದು, ಕಾರ್ಯಕರ್ತ ಮೂಲಕ ಬೇರೆ ಬೇರೆ ಕಾರ್ಯಕ್ರಮ ಮಾಡಿದ್ರೆ ಜನರ ಮನಸ್ಸನ್ನು ಬದಲಾಯಿಸುವುದು ಮತ್ತೊಂದು ಉದ್ದೇಶವಾಗಿದೆ ಎನ್ನಲಾಗ್ತಿದೆ.

Related Posts

Don't Miss it !