ರಾತ್ರೋರಾತ್ರಿ ಪಿಯು ಬೋರ್ಡ್ ಹೊಸ ಆದೇಶ.. PU ಪರೀಕ್ಷೆಗೆ ದಿನಾಂಕ ಪ್ರಕಟ..!

ಕೋವಿಡ್ 19 ಸಾಂಕ್ರಾಮಿಕ ರೋಗಕ್ಕೆ ಸಿಲುಕಿದ ಶಿಕ್ಷಣ ಕ್ಷೇತ್ರ ಕಳೆದ ಎರಡು ವರ್ಷಗಳಿಂದ ಭಾರೀ ಹೊಡೆತ ಅನುಭವಿಸಿದೆ. ಶಿಕ್ಷಣ ಉದ್ಯಮ ನಷ್ಟ ಅನುಭವಿಸಿದೆ ಎನ್ನುವುದಕ್ಕಿಂತಲೂ ಮಕ್ಕಳ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದೇ ಹೇಳಬಹುದು. ಶಿಕ್ಷಣ ಇಲಾಖೆ ಕೂಡ ಪರೀಕ್ಷೆ ನಡೆಸುವುದಕ್ಕೆ ಭಾರೀ ಹರಸಾಹಸ ಪಟ್ಟಿದ್ದು, ಒಂದೆರಡು ವರ್ಷದಲ್ಲಿ ಹಲವಾರು ತರಗತಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಿರುವ ಸಂಗತಿಗಳೂ ನಮ್ಮ ನಡುವೆ ಇದೆ. ಇದೇ ಕಾರಣದಿಂದ ಪಿಯು ಬೋರ್ಡ್ ಹೊಸ ಆದೇಶ ಜಾರಿ ಮಾಡಿದೆ. ಆದರೆ ಯಾವುದೇ ಮುನ್ಸೂಚನೆ ನೀಡದೆ ರಾತ್ರೋರಾತ್ರಿ ಆದೇಶ ಜಾರಿ ಮಾಡಿರುವುದು ವಿದ್ಯಾರ್ಥಿಗಳ ಆತಂಕವನ್ನು ಹೆಚ್ಚು ಮಾಡಿದೆ.

ನವೆಂಬರ್ 29 ರಿಂದ PU ಪರೀಕ್ಷೆ ಆರಂಭ..!?

ನವೆಂಬರ್ 29 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ನಿರ್ಧಾರ ಮಾಡಿದ್ದು, ಪರೀಕ್ಷಾ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ. ಮಧ್ಯವಾರ್ಷಿಕ ಪರೀಕ್ಷೆಗೆ ತಯಾರಿ ಮಾಡಿಕೊಳ್ತಿದ್ದ ವಿದ್ಯಾರ್ಥಿಗಳು ಏಕಾಏಕಿ ರಾಜ್ಯಮಟ್ಟದ ಪರೀಕ್ಷೆಗೆ ತಯಾರಿ ನಡೆಸಬೇಕಿದೆ. ಈ ಮೊದಲು ಜಿಲ್ಲಾ ಮಟ್ಟದಲ್ಲಿ ಪ್ರಶ್ನೆ ಪತ್ರಿಕೆ ತಯಾರಿ ನಡೆಯುತ್ತಿತ್ತು. ಇದೀಗ ಪ್ರಶ್ನೆ ಪತ್ರಿಕೆ ತಯಾರಿ ರಾಜ್ಯಮಟ್ಟದಲ್ಲಿ ನಡೆಯಬೇಕಿದೆ. ಅಂತಿಮ ಪರೀಕ್ಷೆ ನಡೆಸುವ ರೀತಿಯಲ್ಲೇ ಮಧ್ಯವಾರ್ಷಿಕ ಪರೀಕ್ಷೆ ನಡೆಯಲಿದೆ. ಸಿಬಿಎಸ್‌ಸಿ, ಐಸಿಎಸ್‌ಇ ರೀತಿಯಲ್ಲಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಯೋಜನೆ ರೂಪಿಸಿದೆ. ನವೆಂಬರ್ 29ರಿಂದ ಡಿಸೆಂಬರ್ 10ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಬಾರಿ ಮೌಲ್ಯಮಾಪನವೂ ಕೇಂದ್ರೀಕೃತ ವ್ಯವಸ್ಥೆ ಅಡಿಯಲ್ಲೇ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

Read This:

ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಾ..!?

ವಾರ್ಷಿಕ ಪರೀಕ್ಷೆಗೆ ತಯಾರಿ ನಡೆಸುವಾಗ ವಿದ್ಯಾರ್ಥಿಗಳ ಮೇಲೆ ಒತ್ತಡ ಉಂಟಾಗುತ್ತಿತ್ತು. ಒಂದೇ ಬಾರಿ ಸಂಪೂರ್ಣ ಪಠ್ಯದ ಅಭ್ಯಾಸ ನಡೆಸಬೇಕಾಗಿತ್ತು. ಆದರೆ ಇದೀಗ ಮಧ್ಯವಾರ್ಷಿಕರಾಜ್ಯಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಡೆಸುವ ಕಾರಣ ಪಠ್ಯಗಳ ವಿಭಾಗ ಆಗಲಿದೆ. ಈಗ ಮಧ್ಯವಾರ್ಷಿಕ ವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗೆ ಪಠ್ಯಗಳ ವಿಂಗಡಿಸುವ ಕಾರಣ ಮಕ್ಕಳ ಮೇಲಿನ ಒತ್ತಡ ಕಡಿಮೆ ಆಗಲಿದೆ ಎನ್ನುವುದು ಶಿಕ್ಷಣ ತಜ್ಞರ ಮಾತು.

Also Read:

ಶಿಕ್ಷಣ ಇಲಾಖೆ ನಿರ್ಧಾರದಿಂದ ಆಗಿರುವ ಸಮಸ್ಯೆ ಏನು..!?

ಈಗಾಗಲೇ ಕೇಂದ್ರೀಯ ಸಂಸ್ಥೆಗಳು ಈ ವ್ಯವಸ್ಥೆ ಜಾರಿ ಮಾಡಿ ಯಶಸ್ವಿ ಆಗಿರುವ ಕಾರಣ, ಈ ಯೋಜನೆ ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿದೆ. ಆದರೆ ಇದೇ ಮೊದಲ ಬಾರಿಗೆ ಕರ್ನಾಟಕ ಪಿಯು ಬೋರ್ಡ್ ಈ ಯೋಜನೆಗೆ ಅಣಿಯಾಗುತ್ತಿದೆ. ಆದರೆ ಈ ಬಾರಿ ಇನ್ನೂ ಕೂಡ ಪಠ್ಯಗಳು ಪೂರ್ಣವಾಗಿಲ್ಲ, ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲದ ಕಾರಣಕ್ಕೆ ಇನ್ನು ಮಾನಸಿಕವಾಗಿ ಸಜ್ಜಾಗಿಲ್ಲ. ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ನೀಡಬೇಕಿತ್ತು. ವಿದ್ಯಾರ್ಥಿಗಳು ಪರೀಕ್ಷೆಗೆ ಮಾನಸಿಕವಾಗಿ ತಯಾರಿ ನಡೆಸುವುದಕ್ಕೆ ಅನುಕೂಲ ಆಗುತ್ತಿತ್ತು. ಆದರೆ ಇದೀಗ ಕಡಿಮೆ ಅವಧಿಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕಿದೆ. ಇದು ವಿದ್ಯಾರ್ಥಿಗಳಿಗೆ ಸವಾಲಿನ ಕೆಲಸವಾಗಿದೆ.

Related Posts

Don't Miss it !