PU ರಿಸಲ್ಟ್​ಗೆ ದಿನಾಂಕ ಫಿಕ್ಸ್​..! ಫಲಿತಾಂಶಕ್ಕೆ ರಿಜಿಸ್ಟರ್​ ನಂಬರ್​ ಏನು..?

ಇತಿಹಾಸದಲ್ಲಿ ಮೊದಲ ಬಾರಿಗೆ ಪರೀಕ್ಷೆಯೇ ಇಲ್ಲದೆ ಪರೀಕ್ಷೆ ಫಲಿತಾಂಶ ಪ್ರಕಟವಾಗ್ತಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. SSLC ಮೊದಲ ಪರೀಕ್ಷೆ ನಡೆದ ಮರುದಿನ ಪಿಯುಸಿ ರಿಸಲ್ಟ್​ ಪ್ರಕಟವಾಗಲಿದೆ. ಜುಲೈ 20ರಂದು ಯಾವುದೇ ಗೊಂದಲವಾಗದಂತೆ ಫಲಿತಾಂಶ ಪ್ರಕಟ ಮಾಡಲು ಸಕಲ ತಯಾರಿ ನಡೆದಿದೆ.

ಪ್ರತಿ ವರ್ಷದಂತೆ ಈ ಬಾರಿ ಯಾವುದೇ ರೀತಿಯ ಱಂಕ್‌ ಪ್ರಕಟ ಮಾಡುವುದಿಲ್ಲ. ಈಗಾಗಲೇ CBSE ಪ್ರಕಟ ಮಾಡಿರುವ ಫಲಿತಾಂಶದ ಮಾದರಿಯಲ್ಲಿ SSLC ಹಾಗೂ ಪ್ರಥಮ PUC ಅಂಕ ಪರಿಗಣಿಸಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ. ಈ ಬಾರಿ ಗ್ರೇಡ್ ಬದಲು, ಅಂಕಗಳ ಆಧಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆ‌ ನಡೆಸದೆ ಫಲಿತಾಂಶ ಪ್ರಕಟ ಮಾಡಲು PU ಬೋರ್ಡ್ ಸಕಲ ಸಿದ್ದತೆ ಮಾಡಿಕೊಂಡಿದೆ. ಈ ಬಗ್ಗೆ ಪಿಯು ಬೋರ್ಡ್ ನಿರ್ದೇಶಕಿ ಆರ್‌ ಸ್ನೇಹಲ್ ಮಾಹಿತಿ ನೀಡಿದ್ದಾರೆ.

ದ್ವಿತೀಯ ಪಿಯು ಫಲಿತಾಂಶಕ್ಕೆ ಪಿಯು ಬೋರ್ಡ್ ಮುಂದೆ ಸವಾಲು ಸಾಕಷ್ಟಿವೆ. ಪ್ರತಿ ವರುಷ ಪರೀಕ್ಷೆ‌ಗಾಗಿ ರಿಜಿಸ್ಟರ್ ನಂಬರ್ ಮೊದಲೇ ಕೊಟ್ಟಿದ್ದು ಫಲಿತಾಂಶ ನೀಡಲು ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗ್ತಿತ್ತು. ಆದರೆ ಈ ಬಾರಿ ಪರೀಕ್ಷೆಯಾಗಿಲ್ಲ, ವಿದ್ಯಾರ್ಥಿಗಳಿಗೆ ರಿಜಿಸ್ಟರ್ ‌ನಂಬರ್ ಸಿಕ್ಕಿಲ್ಲ. ಇದೇ ಕಾರಣಕ್ಕಾಗಿ ಫಲಿತಾಂಶ ನೀಡುವ ಸಲುವಾಗಿ ವಿದ್ಯಾರ್ಥಿಗಳಿಗೆ ರಿಜಿಸ್ಟರ್‌ ನಂಬರ್ ಕ್ರಿಯೇಟ್​ ಮಾಡಲಾಗ್ತಿದೆ.

ಫಲಿತಾಂಶ ನೋಡುವುದು ಹೇಗೆ..?

ಎಲ್ಲಾ ವಿದ್ಯಾರ್ಥಿಗಳು ಪಿಯು ವೆಬ್​ಸೈಟ್​ನಲ್ಲಿ Know my register number ಎನ್ನುವ ಪೋರ್ಟಲ್​ನಲ್ಲಿ ರಿಜಿಸ್ಟರ್​ ನಂಬರ್​ ಲಭ್ಯವಾಗಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ SMS ಕಳುಹಿಸಲಾಗುತ್ತದೆ. ಒಂದು ವೇಳೆ ಮೊಬೈಲ್​ ಇಲ್ಲದಿದ್ದರೆ ಕಾಲೇಜಿಗೆ ರಿಜಿಸ್ಟರ್​ ನಂಬರ್​ನ ಮಾಹಿತಿ ಕಳುಹಿಸಿ ಕೊಡಲಾಗುತ್ತದೆ. ಫಲಿತಾಂಶ ಮುನ್ನ ತಮ್ಮ ರಿಜಿಸ್ಟರ್‌ ನಂಬರ್ ಖಚಿತ ಮಾಡಿಕೊಳ್ಳಬೇಕು, ಆ ಬಳಿಕ ಜುಲೈ 20ರಂದು ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದಿದ್ದಾರೆ

Related Posts

Don't Miss it !